Wednesday, October 20, 2021

ಅಫ್ಘಾನ್‌ನಿಂದ ಹೊರನಡೆದ ಕೊನೆಯ ಅಮೇರಿಕಾ ಯೋಧನ ಫೋಟೋ ವೈರಲ್‌: ತಾಲಿಬಾನ್‌ನಿಂದ ಗುಂಡು ಹಾರಿಸಿ ಸಂಭ್ರಮ

ಕಾಬೂಲ್‌: ಅಫ್ಘಾನಿಸ್ತಾನದಿಂದ ಅಮೇರಿಕಾ ಸೇನೆ ನಿನ್ನೆ ರಾತ್ರಿ ಸಂಪೂರ್ಣವಾಗಿ ಹೊರನಡೆದಿದೆ. ಕಳೆದ 20ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿದ್ದ ಅಮೆರಿಕ ಯೋಧರು ಅಲ್ಲೀಗ ಒಬ್ಬರೂ ಇಲ್ಲ. ತಾಲಿಬಾನ್ ನೀಡಿದ್ದ ಗಡುವಿಗೂ 24ಗಂಟೆಗೂ ಮೊದಲೇ, ಅಂದರೆ ಸೋಮವಾರ ರಾತ್ರಿ ಮೂರು ವಿಮಾನಗಳ ಮೂಲಕ ಅಮೆರಿಕ ಯೋಧರು ವಾಪಸ್​ ತೆರಳಿದ್ದಾರೆ. ತನ್ಮೂಲಕ ಕಾಬೂಲ್​ ವಿಮಾನ ನಿಲ್ದಾಣ ಕೂಡ ಸಂಪೂರ್ಣವಾಗಿ ಉಗ್ರರ ಕೈವಶವಾಗಿದೆ.


ಈ ನಡುವೆ ಅಫ್ಘಾನಿಸ್ತಾನದಿಂದ ಕೊನೇದಾಗಿ ಹೊರಬಿದ್ದ ಯೋಧನ ಫೋಟೋವನ್ನು ಅಮೆರಿಕ ರಕ್ಷಣಾ ಇಲಾಖೆ ಶೇರ್​ ಮಾಡಿಕೊಂಡಿದೆ.

ಅಫ್ಘಾನಿಸ್ತಾನದಿಂದ ಕೊನೇದಾಗಿ ಹೊರನಡೆದ ಅಮೆರಿಕ ಯೋಧ ಮೇಜರ್​ ಜನರಲ್​ ಕ್ರಿಸ್​ ಡೊನಾಹು. ಅವರು ಅಲ್ಲಿಂದ ವಿಮಾನ ಹತ್ತುವ ಮೂಲಕ ಕಾಬೂಲ್​​ನಲ್ಲಿ ಯುಎಸ್​ ಮಿಷನ್​ ಮುಕ್ತಾಯವಾಯಿತು.

ನಮ್ಮ ಸಂಪೂರ್ಣ ಸೇನೆ ವಾಪಸ್​ ಬಂತು ಎಂದು ಟ್ವೀಟ್ ಮಾಡಿದೆ.


ಆಗಸ್ಟ್​ 15ರಂದು ಅಫ್ಘಾನಿಸ್ತಾನವನ್ನು ತಾಲಿಬಾನ್​ ವಶಪಡಿಸಿಕೊಂಡ ನಂತರ ಅಲ್ಲಿದ್ದ ಯುಎಸ್​ ನಾಗರಿಕರು, ಅಮೆರಿಕಕ್ಕೆ ಹೋಗಲು ಇಚ್ಛಿಸುವ ನಾಗರಿಕರನ್ನು ಸ್ಥಳಾಂತರ ಮಾಡುವ ಕಾರ್ಯದಲ್ಲಿ ಅಮೆರಿಕ ಸೇನೆ ತೊಡಗಿಕೊಂಡಿತ್ತು.

ಯುಎಸ್​ ಎಂದರೆ ಸದಾ ಕಿಡಿಕಾರುವ ತಾಲಿಬಾನಿಗಳು, ಸ್ಥಳಾಂತರ ಪ್ರಕ್ರಿಯೆಗೆ ಆಗಸ್ಟ್​ 31ರವರೆಗೆ ಡೆಡ್​​ಲೈನ್​ ನೀಡಿದ್ದರು.

ಅಮೆರಿಕ ಕೂಡ, ಆಗಸ್ಟ್​ 31ರೊಳಗೆ ಎಲ್ಲ ನಾಗರಿಕರನ್ನೂ ವಾಪಸ್ ಕರೆಸಿಕೊಳ್ಳುತ್ತೇವೆ ಎಂದೇ ಹೇಳಿತ್ತು.

ಆದರೆ ಅದಕ್ಕೂ ಒಂದು ದಿನ ಮೊದಲೇ ಅಂದರೆ, ಆಗಸ್ಟ್​ 30ರ ರಾತ್ರಿಯೇ ಸ್ಥಳಾಂತರ ಕಾರ್ಯ ಮುಕ್ತಾಯಗೊಂಡಿದೆ.

ಅಮೆರಿಕ ಸೇನೆ ವಾಪಸ್​ ಹೋಗುತ್ತಿದ್ದಂತೆ ಇತ್ತ ಕಾಬೂಲ್​​ನ್ನು ವಶಪಡಿಸಿಕೊಂಡ ತಾಲಿಬಾನಿಗಳು ಗುಂಡು ಹಾರಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...