Connect with us

LATEST NEWS

ಭಾರತದಲ್ಲಿ ಕೋವಿಡ್ ಹೆಚ್ಚಳ : ವಕೀಲರು ಕೋರ್ಟ್​​ಗೆ ಬರುವ ಅವಶ್ಯಕತೆ ಇಲ್ಲ – ನ್ಯಾ. ಡಿ.ವೈ ಚಂದ್ರಚೂಡ

Published

on

ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ವಕೀಲರು ನ್ಯಾಯಾಲಯಕ್ಕೆ ಹಾಜರಾಗುವ ಅವಶ್ಯಕತೆ ಇಲ್ಲ, ಆನ್​​ಲೈನ್ ಮೂಲಕ ಪ್ರಕರಣಗಳ ಬಗ್ಗೆ ವಾದ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ತಿಳಿಸಿದ್ದಾರೆ.

ನವದೆಹಲಿ: ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ವಕೀಲರು ನ್ಯಾಯಾಲಯಕ್ಕೆ ಹಾಜರಾಗುವ ಅವಶ್ಯಕತೆ ಇಲ್ಲ, ಆನ್​​ಲೈನ್ ಮೂಲಕ ಪ್ರಕರಣಗಳ ಬಗ್ಗೆ ವಾದ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ತಿಳಿಸಿದ್ದಾರೆ.

ಕೋವಿಡ್​​ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಅನೇಕ ಮಾಧ್ಯಮಗಳ ವರದಿ ಮಾಡಿದೆ. ಈ ಕಾರಣದಿಂದ ವಕೀಲರು ಯಾರು ಕೋರ್ಟ್​ಗೆ ಬರುವ ಅವಶ್ಯಕತೆ ಇಲ್ಲ ನೀವು ಎಲ್ಲಿದ್ದೀರಾ ಅಲ್ಲಿಂದಲೇ ಕಾರ್ಯನಿರ್ವಹಿಸಿ ಎಂದು ಹೇಳಿದ್ದಾರೆ.ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ವರದಿಯನ್ನು ನಾವು ಪತ್ರಿಕೆಗಳಲ್ಲಿ ನೋಡುತ್ತಿದ್ದೇವೆ ಆ ಕಾರಣಕ್ಕೆ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ವಕೀಲರು ಆನ್‌ಲೈನ್‌ ಮೂಲಕವೇ ಕೆಲಸ ಮಾಡಲಿ ಎಂದು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆನ್​​ಲೈನ್ ಮೂಲಕವೇ ನಿಮ್ಮ ವಾದಗಳನ್ನು ನಾವು ಕೇಳುತ್ತೇವೆ ಎಂದು ಹೇಳಿದ್ದಾರೆ.

ದೆಹಲಿ ಮತ್ತು ದೇಶಾದ್ಯಂತ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನಿಸಿದಾಗ, ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿದೆ.

ಈಗಾಗಲೇ ಅನೇಕ ನ್ಯಾಯಾಲಯಗಳು ಆನ್​​ಲೈನ್ ಮೂಲಕವೇ ವಿಚಾರಣೆಯನ್ನು ಮಾಡುತ್ತಿದೆ. ಹಾಗಾಗಿ ಇನ್ನೂ ಮುಂದಕ್ಕೆ ವರ್ಚುವಲ್ ವಿಚಾರಣೆಗಳನ್ನು ಮಾಡಬಹುದು ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಆ್ಯಪ್ ಮತ್ತು ಯೂಟ್ಯೂಬ್ ಮೂಲಕ ಸಂವಿಧಾನ ಪೀಠದ ಪ್ರಕ್ರಿಯೆಗಳನ್ನು ಲೈವ್-ಸ್ಟ್ರೀಮ್ ಮಾಡಲು ಪ್ರಾರಂಭಿಸಿದೆ.

ಭಾರತದಲ್ಲಿ ಬುಧವಾರ 4435 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳು 23,091 ಪತ್ತೆಯಾಗಿದೆ.

ಭಾರತದಲ್ಲಿ ಕೋವಿಡ್ ಪ್ರಕರಣಗಳು ಕಳೆದ ಕೆಲವು ದಿನಗಳಲ್ಲಿ ಏರಿಕೆಯ ಕಂಡಿವೆ, ಏಪ್ರಿಲ್ 1ರಂದು 2,994 ರಿಂದ ಏಪ್ರಿಲ್ 2 ರಂದು 3,824 ಮತ್ತು ಏಪ್ರಿಲ್ 3 ರಂದು 3,641 ಇದರ ನಡುವೆ ಮಂಗಳವಾರ 3038 ಕ್ಕೆ ಕಡಿಮೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 2,069 ಚೇತರಿಕೆ ಕಂಡಿದೆ, ಮಂಗಳವಾರ ಒಟ್ಟು ಚೇತರಿಕೆ 4,41,77,204 ಕ್ಕೆ ಏರಿದೆ. ಒಟ್ಟಾರೆ ಚೇತರಿಕೆ ದರವನ್ನು 98.76 ಪ್ರತಿಶತದಷ್ಟು ಹೆಚ್ಚಾಗಿದೆ.

1 Comment

1 Comment

  1. Naminatha

    08/04/2023 at 7:48 PM

    Correct common sense news good .
    Well wisher of poor advocates🙏🙏🙏

Leave a Reply

Your email address will not be published. Required fields are marked *

FILM

ಕ್ಲಿಕ್ ಆಯ್ತು ‘ಪುಷ್ಪ ಪುಷ್ಪ’…ಅಲ್ಲು ಅರ್ಜುನ್ ಮಾಸ್ ಲುಕ್; ಸಕತ್  ಸ್ಟೆಪ್ಸ್ ಗೆ ಫ್ಯಾನ್ಸ್ ಫಿದಾ

Published

on

ಟಾಲಿವುಡ್ : ಸದ್ಯ ಟಾಲಿವುಡ್ ಅಂಗಳದಲ್ಲಿ ‘ಪುಷ್ಪ 2 : ದಿ ರೂಲ್‌’ ಸೌಂಡ್ ಜೋರಾಗಿದೆ. ಅಲ್ಲು ಅರ್ಜುನ್ ಸಿನಿಮಾ ಅಂದ್ರೆ ಹೇಳ್ಬೇಕಾ..ಮೊದಲೇ ಕ್ರೇಜ್ ಹೆಚ್ಚಿಸಿರುತ್ತೆ. ಪುಷ್ಪ ಈಗಾಗಲೇ ಫಸ್ಟ್ ಲುಕ್, ಟೀಸರ್ ಎಲ್ಲದರ ಮೂಲಕಾನೂ ನಿರೀಕ್ಷೆ ಹೆಚ್ಚಿಸುತ್ತಿದೆ. ಇದೀಗ ಹಾಡಿನ ಸರದಿ.


ಅಲ್ಲು ಅರ್ಜುನ್ ಮಾಸ್ ಲುಕ್; ಸಕತ್  ಸ್ಟೆಪ್ಸ್ :

‘ಪುಷ್ಪ 2 : ದಿ ರೂಲ್‌’ ಸಿನಿಮಾದ ಕುರಿತು ಯಾವ ಅಪ್ಡೇಟ್ ಕೊಡುತ್ತದೆ ಎಂದು ಅಲ್ಲು ಅರ್ಜುನ್ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇದೀಗ ಮೇ 1 ರಂದು ಸಿನೆಮಾದ ಹಾಡೊಂದನ್ನು ರಿಲೀಸ್ ಮಾಡಲಾಗಿದೆ. ಪುಷ್ಪ ಪುಷ್ಪ ಅನ್ನೋ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಡಿನಲ್ಲಿ ಅಲ್ಲು ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಮಾಸ್ ಲುಕ್ ನಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಈ ಲುಕ್ ಗೆ ಫ್ಯಾನ್ಸ್ ಫಿದಾ ಆಗಿರೋದಂತೂ ಸುಳ್ಳಲ್ಲ. ಎಂದಿನಂತೆ ಅಲ್ಲು ಡ್ಯಾನ್ಸ್ ಸಕತ್ತಾಗಿಯೇ ಇದೆ. ಟೀ ಗ್ಲಾಸ್ ಹಿಡಿದು ಅಲ್ಲು ಅರ್ಜುನ್ ವ್ಹಾವ್ ಎಂದೆನಿಸುವಂತೆ ಸ್ಟೆಪ್ ಹಾಕಿದ್ದಾರೆ.

ಬಿಡುಗಡೆಯಾದ ಕೆಲವೇ ಘಂಟೆಯಲ್ಲಿ ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದಾರೆ. ಸದ್ಯ 9.7 ಮಿಲಿಯನ್ ವೀಕ್ಷಣೆ ಪಡೆದಿದೆ. ಈ ಮೂಲಕ ಭಾರತದಲ್ಲಿನ ಸಂಗೀತ ಪಟ್ಟಿಯಲ್ಲಿ ಈ ಹಾಡು ಅಗ್ರಸ್ಥಾನ ಪಡೆದುಕೊಂಡಿದೆ.

ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಅಲ್ಲು ಅರ್ಜುನ್ ಪಾತ್ರದ ಮೇಲೆ ಚಿತ್ರಿಸಲಾಗಿದೆ. ತೆಲುಗು ಹಾಡಿಗೆ ಚಂದ್ರಬೋಸ್ ಸಾಹಿತ್ಯ ಬರೆದಿದ್ದು ,ನಕಾಶ್ ಅಜೀಜ್, ದೀಪಕ್ ಬ್ಲೂ ದನಿಯಾಗಿದ್ದಾರೆ.  ‘ಪುಷ್ಪ ಪುಷ್ಪ’ ಹಾಡು ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ ಮತ್ತು ಬೆಂಗಾಲಿ ಎಂಬ ಆರು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ : 123 ವರ್ಷಗಳಲ್ಲಿ 2ನೇ ಬಾರಿಗೆ ಅತ್ಯಧಿಕ ತಾಪಮಾನ..! ಇನ್ನೂ 11 ದಿನ ಮುಂದುವರಿಯಲಿದೆ ಬಿಸಿ ಶಾಖ..!

ತೆರೆಗೆ ಯಾವಾಗ?

ಅಲ್ಲು ಅರ್ಜುನ್ ಜೊತೆ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹಾದ್ ಫಾಸಿಲ್ , ಡಾಲಿ ಧನಂಜಯ್, ಜಗದೀಶ್ ಪ್ರತಾಪ್ ಭಂಡಾರಿ, ರಾವ್ ರಮೇಶ್, ಜಗಪತಿ ಬಾಬು, ಅಜಯ್, ಸುನಿಲ್, ಮೈಮ್ ಗೋಪಿ, ಅನಸೂಯಾ ಭಾರದ್ವಾಜ್, ಶ್ರೀತೇಜ್, ಬ್ರಹ್ಮಾಜಿ ಮೊದಲಾದವರು ಪಾತ್ರವಾಗಿದ್ದಾರೆ.

‘ಪುಷ್ಪ 2: ದಿ ರೂಲ್’ ಆಗಸ್ಟ್ 15, 2024 ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಪುಷ್ಪಾದಲ್ಲಿದ್ದ ಆಕ್ಷನ್‌ ಗಿಂತ ಹೆಚ್ಚಿನ ಆಕ್ಷನ್ ಪುಷ್ಪಾ 2 ನಲ್ಲಿ ಇರಲಿದೆಯಂತೆ. ಪುಷ್ಪಾದಲ್ಲಿ ಮರಗಳ್ಳತನದ ಕಥೆ ಇದ್ರೆ, ಪುಷ್ಪಾ2 ನಲ್ಲಿ ಕೆಂಪು ಮರಳು ಕಳ್ಳಸಾಗಾಟದ ಬಗ್ಗೆ ಹೇಳಲಾಗಿದೆ.

Continue Reading

LATEST NEWS

ಹೊಸ ಅಪ್​ಡೇಟ್ ನೊಂದಿಗೆ ಬರುತ್ತಿದೆ ವಾಟ್ಸ್ಆ್ಯಪ್; ಏನದು ಗೊತ್ತಾ!?

Published

on

ಮಂಗಳೂರು : ಆ್ಯಪ್ ಗಳು ಅಂದ್ರೆ ಹೊಸ ಹೊಸ ಫೀಚರ್ ಗಳ ಅನಾವರಣ ಮಾಡುತ್ತಿರುತ್ತವೆ. ಬಳಕೆದಾರರಿಗೆ ಅನುಕೂಲತೆಯನ್ನು ಸೃಷ್ಟಿಸಲು ನವೀನ ಫೀಚರ್ ಗಳನ್ನು ಅಳವಡಿಸಲಾಗುತ್ತದೆ. ವಾಟ್ಸ್ ಆ್ಯಪ್ ಕೂಡ ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಿರುತ್ತದೆ. ಇದೀಗ ಮತ್ತೊಂದು ಹೊಸ ಫೀಚರ್ ಪರಿಚಯಿಸುತ್ತಿದೆ.


ಏನಿದು ಫೀಚರ್ ?

ವಾಟ್ಸ್ ಆ್ಯಪ್ ಗೆ ಅತ್ಯಂತ ಹೆಚ್ಚಿನ ಬಳಕೆದಾರರಿದ್ದಾರೆ. ಈಗಾಗಲೇ ನೂತನ ಫೀಚರ್ ಗಳನ್ನು ವಾಟ್ಸ್ ಆ್ಯಪ್ ಪರಿಚಯಿಸುತ್ತಿರುತ್ತದೆ. ಇದೀಗ ಹೊಸ ಫೀಚರ್​ವೊಂದನ್ನು ಪರಿಶೀಲಿಸುತ್ತಿದೆ. ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್​ನಲ್ಲಿ ಫೋಟೋ, ವೀಡಿಯೋ ಇತ್ಯಾದಿ ಫೈಲ್ ಶೇರಿಂಗ್ ಮಾಡಲು ಅವಕಾಶ ಕೊಡುವ ಫೀಚರ್ ಇದಾಗಿದೆ. ಬೀಟಾ ಆವೃತ್ತಿಯಲ್ಲಿ ಇದನ್ನು ಪರೀಕ್ಷಿಸಲಾಗುತ್ತಿದೆ. ಶೀಘ್ರದಲ್ಲಿ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ : 123 ವರ್ಷಗಳಲ್ಲಿ 2ನೇ ಬಾರಿಗೆ ಅತ್ಯಧಿಕ ತಾಪಮಾನ..! ಇನ್ನೂ 11 ದಿನ ಮುಂದುವರಿಯಲಿದೆ ಬಿಸಿ ಶಾಖ..!

ನಿಯರ್ ​ಬೈ ಡಿವೈಸ್, ಕ್ವಿಕ್ ಶೇರಿಂಗ್ ಇತ್ಯಾದಿ ಫೀಚರ್ ರೀತಿಯಲ್ಲಿ ಇದು ಇರಬಹುದು ಎನ್ನಲಾಗಿದೆ.
ಭಾರತ ಸೇರಿದಂತೆ ಜಗತ್ತಿನಾದ್ಯಂತ ವಾಟ್ಸ್ ಆ್ಯಪ್ ಜನಪ್ರಿಯ. ಜನರಿಗೆ ಹೆಚ್ಚಿನ ಖಾಸಗಿತನ ಮತ್ತು ಭದ್ರತೆಯನ್ನು ಒದಗಿಸಲು ಕೂಡ ವಾಟ್ಸ್​​ಆ್ಯಪ್ ಸಹಾಯ ಮಾಡುತ್ತದೆ.

Continue Reading

LATEST NEWS

123 ವರ್ಷಗಳಲ್ಲಿ 2ನೇ ಬಾರಿಗೆ ಅತ್ಯಧಿಕ ತಾಪಮಾನ..! ಇನ್ನೂ 11 ದಿನ ಮುಂದುವರಿಯಲಿದೆ ಬಿಸಿ ಶಾಖ..!

Published

on

ದೆಹಲಿ: ಭಾರತೀಯ ಹವಾಮಾನ ಇಲಾಖೆ ಮೇ ತಿಂಗಳ ಹವಾಮಾನ ಮುನ್ಸೂಚನೆ ಬಿಡುಗಡೆ ಮಾಡಿದ್ದು ಇದೀಗ ಅಚ್ಚರಿ ಮೂಡಿಸಿದೆ. 1901ರ ನಂತರ ಏಪ್ರಿಲ್‌ನಲ್ಲಿ ಇಷ್ಟೊಂದು ತಾಪಮಾನವನ್ನು ದಾಖಲಿಸಿರುವುದು ಇದೇ ಮೊದಲು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.

havamana

ಎಲ್ಲಾ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಎಪ್ರಿಲ್‌ ತಿಂಗಳಿನಲ್ಲಿ ಹೆಚ್ಚು ತಾಪಮಾನ ದಾಖಲಾಗಿದೆ. ದೇಶದಲ್ಲಿ 1901ರ ನಂತರ ಇದೇ ಮೊದಲ ಬಾರಿಗೆ ಹೆಚ್ಚು ತಾಪಮಾನ ಏರಿಕೆಯಾಗಿರುವುದು. ಎಪ್ರಿಲ್ ತಿಂಗಳಿನಲ್ಲಿ ಕೆಲವು ಕಡೆ ಆಲಿಕಲ್ಲು ಸಹಿತೆ ಮಳೆ ಬಂದಿದ್ದು, ಮೇ ತಿಂಗಳಿನಲ್ಲಿ ಹೆಚ್ಚಿನ ಉರಿಬಿಸಿಲು, ಶಾಖ ಮತ್ತು ಆಲಿಕಲ್ಲು ಮುಂದವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ. ಇನ್ನು ಮೇ ತಿಂಗಳಿನಲ್ಲಿ ಬಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದ್ದು, ಇನ್ನು 11 ದಿನಗಳ ಕಾಲ ಬಿಸಿಗಾಳಿ ಮುಂದುವರಿಯಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಮುಂದೆ ಓದಿ..; ನಾಯಿಗಳಿಗೂ ಬಂತು ಆಧಾರ್‌ ಕಾರ್ಡ್‌.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?

ಏಪ್ರಿಲ್ 5 ರಿಂದ 7 ರವರೆಗೆ, ನಂತರ 15 ರಿಂದ 30 ರವರೆಗೆ ಹೆಚ್ಚಿನ ತಾಪಮಾನ ಮತ್ತು ಆಲಿಕಲ್ಲು ಮಳೆಯಾಗಿದೆ. ಸರಾಸರಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಏಪ್ರಿಲ್ ತಿಂಗಳಲ್ಲಿ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಸರಾಸರಿ ಕನಿಷ್ಠ ತಾಪಮಾನ 28.12 ಡಿಗ್ರಿ ಸೆಲ್ಸಿಯಸ್ ಎಂದು ಮೊಹಾಪಾತ್ರ ಹೇಳಿದ್ದಾರೆ. ದಕ್ಷಿಣ ಪರ್ಯಾಯ ದ್ವೀಪದ ಭಾರತದಲ್ಲಿ 1980 ರ ದಶಕದಿಂದಲೂ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನವು ಸಾಮಾನ್ಯವಾಗಿದೆ ಎಂದು ಅವರು ವರದಿ ಮಾಡಿದ್ದಾರೆ.

ಮುಂದಿನ 11 ದಿನದ ಶಾಖದ ಅಲೆ, ಆಲಿಕಲ್ಲು ಮಳೆ:

ದಕ್ಷಿಣ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ಮರಾಠವಾಡ ಮತ್ತು ಗುಜರಾತ್‌ನಲ್ಲಿ ಮೇ ತಿಂಗಳಲ್ಲಿ 8-11 ದಿನಗಳವರೆಗೆ ಶಾಖದ ಅಲೆಗಳು ಇರಬಹುದೆಂದು ಮಹಾಪಾತ್ರ ಹೇಳಿದ್ದಾರೆ. ರಾಜಸ್ಥಾನ, ಪೂರ್ವ ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಛತ್ತೀಸ್‌ಗಢ, ಆಂತರಿಕ ಒಡಿಶಾ, ಗಂಗಾನದಿ ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಒಳಭಾಗ ಕರ್ನಾಟಕ, ತೆಲಂಗಾಣದಲ್ಲಿ 5-5 ವರೆಗೆ ಬಿಸಿ ಗಾಳಿ ಬೀಸುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಉತ್ತರ ಭಾರತ, ಮಧ್ಯ ಭಾರತ ಮತ್ತು ಪೆನಿನ್ಸುಲಾರ್ ಭಾರತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ಮೂರು ದಿನಗಳ ಕಾಲ ಆಲಿಕಲ್ಲು ಮಳೆಯಾಗುತ್ತದೆ ಎಂದು ಹೇಳಿದ್ದಾರೆ.

Continue Reading

LATEST NEWS

Trending