Connect with us

    BANTWAL

    ಭೂಕಬಳಿಕೆ ಪ್ರಕರಣ: ಬೆಳ್ತಂಗಡಿ ತಹಶೀಲ್ದಾರ್ ಸಹಿತ 7 ಮಂದಿ ವಿರುದ್ಧ FIR ದಾಖಲು

    Published

    on

    ಉಪ್ಪಿನಂಗಡಿ: ವಂಚನೆ ಮಾಡಿ ಭೂ ಕಬಳಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ನೋಂದಣಾಧಿಕಾರಿ, ವಕೀಲರೊಬ್ಬರ ಸಹಿತ 7 ಮಂದಿ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


    ಕರಾಯ ಗ್ರಾಮದ ಕೆರೆಕೋಡಿ ನಿವಾಸಿ ನಾರಾಯಣ ನಾಯ್ಕ ಎಂಬವರ ಪತ್ನಿ ವಾರಿಜಾ ಎಂಬವರು ಈ ದೂರು ನೀಡಿದ್ದು, ವಕೀಲರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಬೆಳ್ತಂಗಡಿ ತಹಶೀಲ್ದಾರರು, ಕರಾಯ ಧನಲಕ್ಷ್ಮೀ ನಿಲಯದ ಗಿರೀಶ, ಸುರೇಶ, ಶೇಖರ ಹಾಗೂ ತಣ್ಣೀರುಪಂಥ ಗ್ರಾಮದ ನಝೀರ್ , ಬೆಳ್ತಂಗಡಿಯ ನೋಂದಣಾಧಿಕಾರಿ, ನಾಗರಾಜ್ ಎಂಬವರು ತನಗೆ ವಂಚಿಸಿ, ತನ್ನ ಭೂಮಿ ಕಬಳಿಸಿದ್ದಾರೆ ಎಂದು ದೂರು ನೀಡಿದ್ದಾರೆ.

    ತನಗೆ ಎಲ್‌ಆರ್‌ವೈ 9/74-75ರಂತೆ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಸರ್ವೆ ನಂ. 13/4ರಲ್ಲಿ 1,01 ಎಕರೆ, ಸ.ನಂ.: 13/3ರಲ್ಲಿ 1.56 ಎಕರೆ, ಸ.ನಂ.11/4ರಲ್ಲಿ 0.37 ಎಕರೆ, ಸ.ನಂ.: 11/2ರಲ್ಲಿ 0.34 ಎಕರೆ, ಸ.ನಂ. 13/5 0.20 ಎಕರೆ ಜಮೀನು ಮಂಜೂರಾಗಿದ್ದು,

    ತಂದೆ ಹಾಗೂ ತಾಯಿ ಮೃತಪಟ್ಟ ಬಳಿಕ ತಂದೆಗೆ ಮಂಜೂರಾದ ಜಮೀನನ್ನು ವಿಭಜನೆ ಮಾಡಿಕೊಡಬೇಕೆಂದು ಬೆಳ್ತಂಗಡಿ ಸಿವಿಲ್ ನ್ಯಾಯಾಲಯದಲ್ಲಿ ಮೂಲ ದಾವೆ ನಂ: 156/2016ರಂತ ದಾವೆ ಹೂಡಿ ಮಧ್ಯಂತರ ನಿರ್ಬಂಧಾಜ್ಞೆಯನ್ನು ನ್ಯಾಯಾಲಯದ ಮೂಲಕ ಪಡೆದಿದ್ದೇನೆ.

    ಇಲ್ಲಿ ಒಂದನೇ ಆರೋಪಿಯಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ ಅವರು ಮೂರನೇ ಆರೋಪಿಯಾಗಿರುವ ಸುರೇಶ್ ಅವರ ಪಹಣಿ ವ್ಯತ್ಯಾಸವಾಗಿದೆ ಎಂದು ನಂಬಿಸಿ, ಬೆಳ್ತಂಗಡಿ ನೋಂದಣಿ ಕಚೇರಿಯಲ್ಲಿ ಆರನೇ ಆರೋಪಿಯಾದ ನಝೀರ್ ಅವರ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ.

    ಆರೋಪಿಗಳಾದ ಸುರೇಶ್, ಗಿರೀಶ್ ಹಾಗೂ ಶೇಖರ ಎಂಬವರು ಜಮೀನು ಖರೀದಿಸುವ ನಾಟಕ ಮಾಡಿದ್ದು, ಇದಕ್ಕೆ ಒಂದನೇ ಆರೋಪಿಯ ಪ್ರಮುಖ ಪಾತ್ರಧಾರಿಯಾಗಿದ್ದಾರೆ. ಎರಡನೇ ಆರೋಪಿಯಾದ ತಹಸೀಲ್ದಾರ್ ಅವರು ಎ ಆರ್‌ವೈ 9/74-75ಯನ್ನು ಪಹಣಿಯಲ್ಲಿ ತಿರುಚಿ ಎಲ್‌ಆರ್‌ವೈ 12/74-75ರಂತೆ ಸುಳ್ಳು ದಾಖಲೆ ಮಾಡಿಕೊಟ್ಟು ಸಹಕರಿಸಿದ್ದಾರೆ.

    ಈ ಎಲ್ಲ ದಾಖಲೆಗಳನ್ನು ಪರಿಶೀಲಿಸದೇ ನೋಂದಣಾಧಿಕಾರಿಯಾಗಿರುವ ನಾಗರಾಜ್‌ ಜಾಗ ನೋಂದಣಿ ಮಾಡಿ ಸಹಕರಿಸಿದ್ದಾರೆ ಎಂದು ವಾರಿಜಾ ದೂರಿನಲ್ಲಿ ತಿಳಿಸಿದ್ದಾರೆ. ಜು.2ರಂದು ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    BANTWAL

    ಕಲ್ಲಡ್ಕದಲ್ಲಿ ಸರ್ವೀಸ್ ರಸ್ತೆಗೆ ಡಾಮರು

    Published

    on

    ಬಂಟ್ವಾಳ: ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದ ಟೀಕೆಗೆ ಗುರಿಯಾಗಿದ್ದ ಕಲ್ಲಡ್ಕದಲ್ಲಿ ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.

    ಮಳೆ ದೂರವಾದ ಹಿನ್ನೆಲೆಯಲ್ಲಿ ಕಲ್ಲಡ್ಕದ ಪೂರ್ಲಿಪ್ಪಾಡಿ ಭಾಗದಿಂದ ಒಂದು ಬದಿಯಲ್ಲಿ ಡಾಮರು ಹಾಕಲಾಗುತ್ತಿದೆ.

    ಕಳೆದ 2-3 ವರ್ಷಗಳಿಂದ ಹೆದ್ದಾರಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದು, ಈ ಬಾರಿಯ ಮಳೆಗಾಲದಲ್ಲಿ ಕಲ್ಲಡ್ಕ ಪೇಟೆಯನ್ನು ಎಲ್ಲ ರೀತಿಯಿಂದಲೂ ಹಿಂಡಿ ಹಿಪ್ಪೆ ಮಾಡಲಾಗಿತ್ತು. ಮಳೆ ಬಂದರೆ ಕೆಸರು, ಬಿಸಿಲಾದರೆ ಧೂಳು ಎಂಬ ಸ್ಥಿತಿ ಇತ್ತು. ಹೆದ್ದಾರಿ ತುಂಬಾ ಕೆಸರು ತುಂಬಿ ನಡೆದಾಡುವುದು ಕಷ್ಟವಾಗಿರುವ ಜತೆಗೆ ಹೊಂಡಗಳು ಸೃಷ್ಟಿಯಾಗಿ ವಾಹನ ಸಾಗುವುದು ತೀರಾ ತ್ರಾಸದಾಯಕವಾಗಿತ್ತು. ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.

    Continue Reading

    BANTWAL

    ಮಂಗಳೂರು: ಯುವತಿ ವಿಚಾರದಲ್ಲಿ ಯುವಕನಿಗೆ ಥಳಿತ; ಆರೋಪಿಗಳು ಅರೆಸ್ಟ್

    Published

    on

    ಮಂಗಳೂರು: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಮಹಮ್ಮದ್ ಮುಸ್ತಾಫ(21) ಎಂಬಾತನನ್ನು ಕಂಬಕ್ಕೆ ಕಟ್ಟಿ ಹಾಕಿದ ಥಳಿಸಿದ ಆರು ಮಂದಿ ಆರೋಪಿಗಳನ್ನು ಬಂಟ್ವಾಳ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಹಲ್ಲೆ ಮಾಡಿ, ಕೊಲೆ ಬೆದರಿಕೆಯೊಡ್ಡಿದ ಆರೋಪಿಗಳಾದ ಕಂಚಿನಡ್ಕದ ನಿವಾಸಿಗಳಾಗಿರುವ ಮಹಮ್ಮದ್‌ ಸಪ್ವಾನ್( 25), ಮಹಮ್ಮದ್‌ ರಿಜ್ವಾನ್‌ (25), ಇರ್ಪಾನ್‍(27), ಅನೀಸ್‍ ಅಹಮ್ಮದ್‍ (19), ನಾಸೀರ್‍ (27), ಇಬ್ರಾಹಿಂ, ಶಾಕೀರ್‍ (18)ನನ್ನು ಬಂಧಿಸಲಾಗಿದೆ.

    ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನವೆಂಬರ್ 7ರಂದು ರಾತ್ರಿ 10 ಗಂಟೆ ಸುಮಾರಿಗೆ ಕಂಚಿನಡ್ಕ ಪದವು ನಿವಾಸಿಯಾಗಿರುವ ಯುವತಿಯೊಬ್ಬಳು ಮಹಮ್ಮದ್ ಮುಸ್ತಾಫಾನನ್ನು ಮನೆಗೆ ಬರಲು ಹೇಳಿದ್ದು, ಆಕೆ ಸೂಚನೆಯಂತೆ ಮಹಮ್ಮದ್ ಮುಸ್ತಾಫಾ ಅಲ್ಲಿಗೆ ಹೋಗಿದ್ದ. ಈ ವೇಳೆ ಅಲ್ಲಿದ್ದ ಆರೋಪಿಗಳು ಮಹಮ್ಮದ್‍ ಮುಸ್ತಾಫ್‍ ನ ಬಗ್ಗೆ ಸಂಶಯ ವ್ಯಕ್ತಪಡಿಸಿ ಗುಂಪು ಸೇರಿಕೊಂಡು ಆತನನ್ನು ಹಿಡಿದು ರಕ್ತ ಒಸರುವಂತೆ ಥಳಿಸಿದ್ದಲ್ಲದೇ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ.

     

    ಇದನ್ನೂ ಓದಿ : ಬಂಟ್ವಾಳ : ಮನೆಗೆ ಬಂದಿದ್ದ ಪ್ರಿಯಕರನ್ನು ಅ*ರೆಬೆತ್ತಲು ಮಾಡಿ ಹ*ಲ್ಲೆ

     

    ಮಹಮ್ಮದ್‍ ಮುಸ್ತಾಫ್‍ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಬಳಿಕ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಪೊಲೀಸರು ವಿಚಾರಣೆ ಮಾಡಲು ತೆರಳಿದಾದ ಮಹಮ್ಮದ್‍ ಮುಸ್ತಾಫ್‍ ಆರೋಪಿಗಳು ತನ್ನನ್ನು ಕೊಲೆ ನಡೆಸುವ ಉದ್ದೇಶದಿಂದ ಗುಂಪು ಸೇರಿ ಕಂಬಕ್ಕೆ ಕಟ್ಟಿ ಹಾಕಿ ಕೊಲೆಯತ್ನ ನಡೆಸಿದ್ದಾನೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ.

    Continue Reading

    BANTWAL

    ಬಂಟ್ವಾಳ: ವಿಷಪದಾರ್ಥ ಸೇವಿಸಿ ಯುವಕ ಆತ್ಮಹ*ತ್ಯೆ

    Published

    on

    ಬಂಟ್ವಾಳ: ವಿಷಪದಾರ್ಥ ಸೇವಿಸಿ ಯುವಕನೋರ್ವ ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಕಡೇಶಿವಾಲಯದಲ್ಲಿ ನಡೆದಿದೆ.

    ಬಂಟ್ವಾಳ ತಾಲೂಕಿನ ಕಡೇಶಿವಾಲಯದ ಕಂಡಿಗ ನಿವಾಸಿ ಗಣೇಶ್(25) ಆತ್ಮಹ*ತ್ಯೆ ಮಾಡಿಕೊಂಡ ಯುವಕ. ಗಣೇಶ್ ಅವರು ಸೋಮವಾರ ಮನೆಯಲ್ಲಿಯೇ ಸಂಜೆ ಹುಲ್ಲಿಗೆ ಬಿಡುವ ವಿಷವನ್ನು ಸೇವಿಸಿದ್ದರು.

    ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    Continue Reading

    LATEST NEWS

    Trending