ಮಂಗಳೂರು: ಭೂಮಾಲೀಕರಿಗೆ ಸಮಾಧಾನಕರ ಪರಿಹಾರ ಕೊಡಿಸುವ ಜವಾಬ್ದಾರಿ ಒಬ್ಬ ಸಂಸದನಾಗಿ ನನ್ನ ಮತ್ತು ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ಮೇಲೆ ಇದೆ. ಇದಕ್ಕೆ ನಾವು ಬದ್ಧರಾಗಿದ್ದು ಕೂಡಲೇ ಹೆದ್ದಾರಿ ಕೆಲಸ ಪ್ರಾರಂಭಿಸಿ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ದಿಲೀಪ್ ಬಿಲ್ಡ್ಯಾನ್ ಕಂಪೆನಿಯವರಿಗೆ ಸೂಚಿಸಿದರು.
ದ.ಕ ಜಿಲ್ಲಾಧಿಕಾರಿ ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 169ರ ಭೂಮಾಲೀಕರ ಹೋರಾಟ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಇದಕ್ಕೆ ದಿಲೀಪ್ ಕಂಪೆನಿ ಪ್ರತಿಕ್ರಿಯೆ ನೀಡಿ, ‘ಸಂಸದರ ಅಪೇಕ್ಷೆ ಮೇರೆಗೆ ಆದಷ್ಟು ಬೇಗನೆ ಮರಗಳನ್ನು ಮತ್ತು ತಂತಿ ಕಂಬಗಳನ್ನು ತೆರವುಗೊಳಿಸಿ ಹೆದ್ದಾರಿ ಅಭಿವೃದ್ಧಿಯ ಕೆಲಸ ಪ್ರಾರಂಭಿಸುತ್ತೇವೆ ‘ ಎಂದು ಹೇಳಿದರು.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಶಾಸಕ ಡಾ. ವೈ ಭರತ್ ಶೆಟ್ಟಿ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲಲ್ಇ ಸಭೆ ನಡೆಯಿತು.
30 ಹೆಕ್ಟೇರ್ ಜಮೀನಿಗೆ ತಡೆಯಾಜ್ಞೆ
ಸಾಣೂರು ಗ್ರಾಮದಿಂದ ಪ್ರಾರಂಭಿಸಿ ಕುಲಶೇಖರ ತನಕ 92 ಹೆಕ್ಟೇರ್ ಖಾಸಗಿ ಜಮೀನಿಗೆ ನೋಟಿಫಿಕೇಶನ್ ಆಗಿದ್ದು ಇದರಲ್ಲಿ 65 ಹೆಕ್ಟೇರ್‌ನಲ್ಲಿ 30 ಹೆಕ್ಟೇರ್ ಕೃಷಿ ಜಮೀನಿಗೆ ತಡೆಯಾಜ್ಞೆಯಿದೆ ಎಂಬ ಮಾಹಿತಿ ನೀಡಿದರು.
ತಡೆಯಾಜ್ಞೆ ತೆರವುಗೊಳಿಸುವ ಬಗ್ಗೆ ಹೆದ್ದಾರಿ ಇಲಾಖೆಯು ಕಳೆದ ಒಂದು ವರ್ಷದಿಂದ ಯಾವುದೇ ಕ್ರಮ ಕೈಗೊಳ್ಳದಿರುವ ವಿಷಯ ತಿಳಿಸಿದಾಗ ಜೂ. 16ರೊಳಗೆ ತಾರೀಕಿನ ಒಳಗೆ ಎಲ್ಲ 16 ತಡೆಯಾಜ್ಞೆಗಳಿಗೆ ಕೋರ್ಟಿನಲ್ಲಿ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ಯೋಜನಾಧಿಕಾರಿ ತಿಳಿಸಿದರು.