Connect with us

    LATEST NEWS

    ಉಡುಪಿ ಪರ್ಯಾಯ ಸಂಭ್ರಮೋತ್ಸವಕ್ಕೆ ಕೃಷ್ಣಾಪುರ ಮಠದಿಂದ  ಬಾಳೆ ಮುಹೂರ್ತ ..!

    Published

    on

    ಉಡುಪಿ ಪರ್ಯಾಯ ಸಂಭ್ರಮೋತ್ಸವಕ್ಕೆ ಕೃಷ್ಣಾಪುರ ಮಠದಿಂದ  ಬಾಳೆ ಮುಹೂರ್ತ 

    ಉಡುಪಿ:   ಉಡುಪಿಯ ಕೃಷ್ಣಮಠದಲ್ಲಿ ಪರ್ಯಾಯ ಅನ್ನೋದು ಒಂದು ಅದ್ಬುತ ಆಡಳಿತ ವ್ಯವಸ್ಥೆ. ಸದ್ಯ ಅದಮಾರು ಸ್ವಾಮೀಜಿಗಳ ಪರ್ಯಾಯ ಮಹೋತ್ಸವ ನಡೆಯುತ್ತಿದೆ.ಮುಂದಿನ ಸರದಿ ಕೃಷ್ಣಾಪುರ ಮಠದ್ದು, 2022 ಜನವರಿಯಲ್ಲಿ ನಡೆಯುವ ಕೃಷ್ಣಾಪುರ ಪರ್ಯಾಯಕ್ಕೆ ಬಾಳೆ ಮುಹೂರ್ತ ನಡೆಯಿತು. ಸಂಪ್ರದಾಯಕ್ಕೆ ಒತ್ತು ನೀಡುವ ಕೃಷ್ಣಾಪುರ ಮಠದ ಬಾಳೆ ಮುಹೂರ್ತ ಸಾಂಪ್ರದಾಯಿಕವಾಗಿವೇ ಸಂಪನ್ನಗೊಂಡಿತು.ಅಧಿಕಾರಕ್ಕಾಗಿ ನಡೆಯುವ ನಾನಾ ಕಚ್ಚಾಟಗಳನ್ನು ನೋಡ್ತೇವೆ. ಆದರೆ ಇಲ್ಲೊಂದು ಧಾರ್ಮಿಕ ವ್ಯವಸ್ಥೆಯಲ್ಲಿ ಶಿಸ್ತುಬದ್ಧ ಅಧಿಕಾರ ಹಸ್ತಾಂತರ ನಡೆಯುತ್ತಾ ಬಂದಿದೆ. ಒಂದಲ್ಲ ಎರಡಲ್ಲ ಎಂಟ್ನೂರು ವರ್ಷಗಳಿಂದ ಈ ಶಿಸ್ತು ಪಾಲನೆಯಾಗುತ್ತಿದೆ.ಉಡುಪಿಯ ಕೃಷ್ಣಮಠದಲ್ಲಿ ಕಳೆದ ಎಂಟು ಶತಮಾನಗಳಿಂದ ಒಬ್ಬ ಯತಿಯೂ ಅಧಿಕಾರ ಬಿಟ್ಟು ಕೊಡೋದಿಲ್ಲ ಎಂದು ಬಂಡಾಯವೆದ್ದಿಲ್ಲ. ನಿಯಮಿತ ಕಾಲಕ್ಕೆ ಸರಿಯಾಗಿ ಕೃಷ್ಣಮಠದ ಆಡಳಿತ, ಅಷ್ಟಮಠಗಳ ನಡುವೆ ಅಧಿಕಾರ ಹಸ್ತಾಂತರವಾಗುತ್ತದೆ.ಪರ್ಯಾಯ ಮಹೋತ್ಸವ ಎಂದು ಕರೆಯಲಾಗುವ ಈ ಆಡಳಿತ ಹಸ್ತಾಂತರ ಒಂದು ಸಾಂಪ್ರದಾಯಿಕ ಮಾದರಿ ಆಚರಣೆ. 2022 ರಿಂದ ಕೃಷ್ಣಾಪುರ ಮಠದ ಪರ್ಯಾಯ ಆರಂಭವಾಗಲಿದೆ.ಸರಿ ಸುಮಾರು ಒಂದು ವರ್ಷ ಮುಂಚಿತವಾಗಿ ಈ ಮಹೋತ್ಸವಕ್ಕೆ ಪೂರಕವಾಗಿ ಬಾಳೆ ಮುಹೂರ್ತ ನಡೆಯಿತು. ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು 16 ವರ್ಷಗಳ ನಂತರ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಮುಂದಿನ ಒಂದು ವರ್ಷಗಳ ಕಾಲ ದೇಶದ ನಾನಾ ತೀರ್ಥಕ್ಷೇತ್ರಗಳನ್ನು ಅವರು ಸಂದರ್ಶಿಸಲಿದ್ದಾರೆ.ದೇವರ ಪೂಜೆಗೂ ಬಾಳೆ ಮುಹೂರ್ತಕ್ಕೂ ಅವಿನಾಭಾವ ಸಂಬಂಧವಿದೆ.    ಉಡುಪಿಯ ಕೃಷ್ಣನನ್ನು ಅನ್ನಬ್ರಹ್ಮ ಎಂದು ಕರೆಯುತ್ತಾರೆ. ಇಲ್ಲಿ ದಿನವೂ ನಡೆಯುವ ಅನ್ನ ದಾಸೋಹಕ್ಕೆ ವಿಶೇಷ ಮಹತ್ವ. ಬಾಳೆಯ ಗಿಡಗಳನ್ನು ನೆಟ್ಟು ಮುಂದಿನ ವರ್ಷಕ್ಕೆ ಬೇಕಾದ ಬಾಳೆ ಎಲೆಗಳನ್ನು ಸಂಗ್ರಹಿಸುವುದು ಉದ್ದೇಶ.

    ಕೃಷ್ಣಾಪುರ ಮಠದಲ್ಲಿ ಪೂಜೆ ಮಾಡಿ, ರಥಬೀದಿಯಲ್ಲಿರುವ ಅನಂತೇಶ್ವರ, ಚಂದ್ರೇಶ್ವರ ದೇವಸ್ಥಾನ ಸಂದರ್ಶಿಸಿ, ಕೃಷ್ಣ ದೇವರಿಗೂ ಪೂಜೆ ಸಲ್ಲಿಸಲಾಗುತ್ತೆ. ಬಳಿಕ ಮೆರವಣಿಗೆಯಲ್ಲಿ ತೆರಳಿ ಬಾಳೆಯ ಗಿಡಗಳನ್ನು ನೆಡುವುದು ಸಂಪ್ರದಾಯ. ಅಷ್ಟಮಠಗಳ ಪ್ರಮುಖರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.ಊಟೋಪಚಾರಕ್ಕೆ ಬೇಕಾದ ಅಕ್ಕಿ ಸಂಗ್ರಹಕ್ಕೆ ಅಕ್ಕಿ ಮುಹೂರ್ತ, ಧಾನ್ಯ ಸಂಗ್ರಹಕ್ಕೆ ಧಾನ್ಯ ಮುಹೂರ್ತ, ಕಟ್ಟಿಗೆ ಸಂಗ್ರಹಕ್ಕೆ ಕಟ್ಟಿಗೆ ಮುಹೂರ್ತ ಮುಂದಿನ ದಿನಗಳಲ್ಲಿ ನಡೆಯಲಿದೆ. 2022ರ ಜನವರಿಯಲ್ಲಿ ಅದಮಾರು ಸ್ವಾಮಿಜಿಯವರು ಕೃಷ್ಣಾಪುರ ಸ್ವಾಮೀಜಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಮೊದಲ ಮಳೆಗೆ ಸೋರುತ್ತಿದೆ ರಾಮ ಮಂದಿರದ ಗರ್ಭಗೃಹ!

    Published

    on

    ಅಯೋಧ್ಯೆ: ಮೊದಲ ಮಳೆಗೆ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರ ಮಾಳಿಗೆ ಸೋರುತಿದೆ ಎಂದು ವರದಿಯಾಗಿದೆ. ಆರು ತಿಂಗಳ ಹಿಂದೆ 22ನೇ ಜನವರಿ 2024ರಂದು ರಾಮಮಂದಿರ ಉದ್ಘಾಟನೆ ಮಾಡಲಾಗಿತ್ತು. ಇದೀಗ ಉತ್ತರ ಪ್ರದೇಶದ ಭಾಗದಲ್ಲಿ ಮಳೆ ಆರಂಭವಾಗಿದ್ದು, ರಾಮಮಂದಿರದ ಮೇಲ್ಛಾವಣೆಯಿಂದ ನೀರು ಸೋರಿಕೆಯಾಗುತ್ತಿದೆ. ಗರ್ಭಗುಡಿಯಲ್ಲಿಯೂ ಸೋರಿಕೆಯಾಗಿದೆ ಎಂದು ಸುದ್ದಿಸಂಸ್ಥೆ ಎಎನ್ ಐ ವರದಿ ಮಾಡಿದೆ.

    ಈ ಕುರಿತು ಸುದ್ದಿಸಂಸ್ಥೆ ಜೊತೆ ಮಾತನಾಡಿರುವ ರಾಮಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್, ಬಾಲರಾಮನನ್ನು ಪ್ರತಿಷ್ಠಾಪನೆ ಮಾಡಲಾಗಿರುವ ಗರ್ಭಗುಡಿಯಲ್ಲಿ ಮಳೆ ನೀರು ಸೋರಿಕೆಯಾಗಿದೆ. ಅಲ್ಲದೇ ಇಲ್ಲಿ ಒಳಚರಂಡಿಯ ವ್ಯವಸ್ಥೆಯನ್ನು ಸಹ ಮಾಡಿಲ್ಲ ಎಂದು ಹೇಳಿದ್ದಾರೆ.

    ಜುಲೈ 2025ರೊಳಗೆ ರಾಮಮಂದಿರದ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಆದರೆ ಅದು ಅಸಾಧ್ಯ ಎಂಬುವುದು ನನ್ನ ಅನಿಸಿಕೆಯಾಗಿದೆ. ಈಗಾಗಲೇ ಬಂದ ಮೊದಲ ಮಳೆಗೆ ರಾಮಲಲ್ಲಾನ ಜಾಗಕ್ಕೆ ನೀರು ಬಂದಿದೆ. ಹೇಗೆ ಸೋರಿಕೆ ಆಯ್ತು? ಮಳೆನೀರು ಒಳಗೆ ಬರಲು ಕಾರಣ ಏನು ಎಂಬ ಪ್ರಶ್ನೆಗೆ ಸಂಬಂಧಿಸಿದವರು ಉತ್ತರ ನೀಡಬೇಕು. ಹಾಗೆ ಕಾಮಗಾರಿಯ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಪ್ರಧಾನ ಅರ್ಚಕರಾದ ಸತ್ಯೇಂದ್ರ ದಾಸ್ ಆಗ್ರಹಿಸಿದ್ದಾರೆ.

    ಮಂದಿರ ನಿರ್ಮಾಣದಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಎರಡ್ಮೂರು ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಪರಿಶೀಲಿಸಿ ಪರಿಹಾರ ರೂಪಿಸಬೇಕು. ಒಂದು ವೇಳೆ ಮಳೆ ಹೆಚ್ಚಾದ್ರೆ ಸೋರಿಕೆ ಹೆಚ್ಚಾಗಬಹುದು ಎಂದು ಸತ್ಯೇಂದ್ರ ದಾಸ್ ಆತಂಕ ವ್ಯಕ್ತಪಡಿಸಿದ್ದಾರೆ.

    Continue Reading

    LATEST NEWS

    ವಿದ್ಯಾರ್ಥಿನಿ ಪ್ರಬುದ್ದ ಕೊ*ಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಸಿಎಂ ಆದೇಶ

    Published

    on

    ಮಂಗಳೂರು/ಬೆಂಗಳೂರು: ವಿದ್ಯಾರ್ಥಿನಿ ಪ್ರಬುದ್ದ ಕೊ*ಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.


    ಸಾಮಾಜಿಕ ಹೋರಾಟಗಾರ್ತಿ ಕೆ.ಆರ್.ಸೌಮ್ಯ ಎಂಬುವವರು ತಮ್ಮ ಪುತ್ರಿ ಪ್ರಬುದ್ದ ಕೊ*ಲೆ ವಿಚಾರದಲ್ಲಿ ಪೊಲೀಸರಿಂದ ನ್ಯಾಯ ಸಿಗುತ್ತಿಲ್ಲ. ಅದೆಷ್ಟೋ ಜನರ ಪರವಾಗಿ ಹೋರಾಟ ಮಾಡಿದ ನಾನೀಗ ನನ್ನ ಮಗಳ ಕೊ*ಲೆ ಪ್ರಕರಣದಲ್ಲಿ ನ್ಯಾಯ ಪಡೆಯಲು ಆಗುತ್ತಿಲ್ಲ. ಸುಬ್ರಹ್ಮಣ್ಯಪುರ ಪೊಲೀಸರು ನನಗೆ ನ್ಯಾಯ ಕೊಡುವ ಬದಲು ಆರೋಪಿಗಳೊಂದಿಗೆ ಸೇರಿಕೊಂಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಿ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿ ಸಿಎಂ ಸಿಐಡಿ ತನಿಖೆ ವಹಿಸಿದ್ದಾರೆ.
    ಪ್ರಬುದ್ದ ಸಾ*ವಿನ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಸಾಮಾಜಿಕ ಕಾರ್ಯಕರ್ತೆ ಆಗಿರುವ ಕೆ.ಆರ್.ಸೌಮ್ಯ ಅವರು ತಮ್ಮ ಪುತ್ರಿ ಸಾವಿನ ಪ್ರಕರಣದ ತನಿಖೆಗೆ ಒಪ್ಪಿಸಲು ಸಾಮಾಜಿಕ ಕಾರ್ಯಕರ್ತರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿದರು.

    ಮೇ 15 ರಂದು ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಪ್ರಬುದ್ಧ ಹತ್ಯೆ ನಡೆದಿತ್ತು. ಆರಂಭದಲ್ಲಿ ಆತ್ಮಹ*ತ್ಯೆ ಎಂದು ಶಂಕಿಸಲಾಗಿತ್ತಾದರೂ, ಮರಣೋ*ತ್ತರ ಪರೀಕ್ಷೆಯಿಂದ ಆಕೆಯ ತಲೆಗೆ ಹೊಡೆದು ಕೊ*ಲೆ ಮಾಡಿ ನಂತರ ಆತ್ಮಹ*ತ್ಯೆ ಮಾಡಿಕೊಂಡ ಹಾಗೆ ದೇಹವನ್ನು ಇರಿಸಲಾಗಿದೆ ಎಂಬುದು ಬಯಲಾಗಿತ್ತು.

    ಇದನ್ನೂ ಓದಿ : ಗೋಬಿ ಮಂಚೂರಿ ಆಯ್ತು..! ಈಗ ಚಿಕನ್‌ ಕಬಾಬ್‌, ಫಿಶ್‌ ಫುಡ್‌ ಮೇಲೆ ಕಣ್ಣು…!

    ಆರೋಪಿಗಳನ್ನು ಬಂಧಿಸಿದರೂ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆರೋಪಿ ಕಡೆಯವರು ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿಯೇ ಬಾರ್‌ ನಡೆಸಿಕೊಂಡು ಪೊಲೀಸರೊಂದಿಗೆ ಶಾಮೀಲಾಗಿ ಪ್ರಕರಣ ಮುಚ್ಚಿ ಹಾಕಲು ಮುಂದಾಗಿದ್ಧಾರೆ. ಈ ಪ್ರಕರಣದಲ್ಲಿ ಮಗಳನ್ನು ಕಳೆದುಕೊಂಡಿದ್ದೇನೆ. ನನಗೆ ಹಾಗೂ ನನ್ನ ತಾಯಿಗೂ ಜೀವ ಬೆದರಿಕೆಯಿದೆ. ಒಂಟಿ ಪೋಷಕಳಾದ ನನಗೆ ನ್ಯಾಯ ಕೊಡಿಸಿ ಎಂದು ಸೌಮ್ಯ ಮನವಿ ಸಲ್ಲಿಸಿದ್ದರು.

    Continue Reading

    bangalore

    ಗೋಬಿ ಮಂಚೂರಿ ಆಯ್ತು..! ಈಗ ಚಿಕನ್‌ ಕಬಾಬ್‌, ಫಿಶ್‌ ಫುಡ್‌ ಮೇಲೆ ಕಣ್ಣು…!

    Published

    on

    ಮಂಗಳೂರು : ಫಿಶ್ ಸೇರಿದಂತೆ ಚಿಕನ್ ಕಬಾಬ್ ಆಹಾರದಲ್ಲಿ ಕೃತಕ ಬಣ್ಣ ಬೆರಸುವುದನ್ನ ನಿಷೇಧಿಸಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ. ಕೆಲವು ಆಹಾರಗಳಲ್ಲಿ ಕೃತಕ ಬಣ್ಣದ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದೆ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನ ನಿಷೇಧಿಸಲಾಗಿತ್ತು.


    ಇದೀಗ ಆರೋಗ್ಯ ಸಚಿವರ ಸೂಚನೆಯಂತೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಚಿಕನ್ ಕಬಾಬ್ ಮತ್ತು ಫಿಶ್ ಫುಡ್ ನಲ್ಲಿ ಕಲರಿಂಗ್ ಇರುವುದು ಪತ್ತೆಯಾಗಿದೆ. ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಚಿಕನ್ ಕಬಾಬ್ ಕಳಪೆಯಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಹಿನ್ನೆಲೆಯಲ್ಲಿ ಚಿಕನ್ ಕಬಾಬ್, ಫಿಶ್ ಆಹಾರಗಳಲ್ಲಿ ಕೃತಕ ಬಣ್ಣ ಬೆರಸುವಿಕೆಯನ್ನ ನಿಷೇಧಿಸಿ ಆಹಾರ ಸುರಕ್ಷತಾ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಕಾನೂನು ಉಲ್ಲಂಘಿಸಿದ್ರೆ 7 ವರ್ಷದಿಂದ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ವರೆಗಿನ ದಂಡ ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಲಾಗಿದೆ.

    ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ 39 ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ. 08 ಕಬಾಬ್‌ನ ಮಾದರಿಗಳು ಕೃತಕ ಬಣ್ಣದಿಂದ ಕೂಡಿರುವುದರಿಂದ ಅಸುರಕ್ಷಿತ ಎಂದು ವಿಶ್ಲೇಷಣಾ ವರದಿಗಳಲ್ಲಿ ಕಂಡುಬಂದಿದೆ.

    Continue Reading

    LATEST NEWS

    Trending