Connect with us

    LATEST NEWS

    ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯಂದೇ ಮೂರು ಕರುಗಳಿಗೆ ಜನ್ಮ ನೀಡಿದ ಗೋಮಾತೆ..!

    Published

    on

    ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯಂದೇ ಮೂರು ಕರುಗಳಿಗೆ ಜನ್ಮ ನೀಡಿದ ಗೋಮಾತೆ..!

    ಉಡುಪಿ : ಉಡುಪಿ ಜಿಲ್ಲೆಯ ಕಾಪು ತಾಲೂಕುವಿನ ಮಜೂರು ಎಂಬಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ದನವೊಂದು ಮೂರು ಕರುಗಳಿಗೆ ಜನ್ಮ ನೀಡಿದ ಅಪರೂಪದ ಘಟನೆ ಸಂಭವಿಸಿದೆ.


    ಶ್ರೀಕೃಷ್ಣ ಜನ್ಮಾಷ್ಟಮಿ ಅಂದರೆ ರೋಹಿಣಿ ನಕ್ಷತ್ರ ವೃಷಭ ರಾಶಿಯ ಪವಿತ್ರವಾದ ಅಷ್ಪಮಿಯ ದಿನದಂದು ಶ್ರೀ ಕೃಷ್ಣನ ಜನನವಾಗಿತ್ತು.

    ಕೃಷ್ಣನಿಗೆ ಗೋವುಗಳೆಂದರೆ ಅಚ್ಚು ಮೆಚ್ಚು. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಜೂರಿನ ಜಾರಂದಾಯ ಸಾನದ ಮನೆಯಲ್ಲಿ ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿದ್ದು. ಮಜೂರು ಪರಿಸರದ ಗ್ರಾಮಸ್ಥರು ಕರುಗಳನ್ನು ಮತ್ತು ದನವನ್ನು ನೋಡಲು ಉದಯರ ಮನೆಗೆ ಬರುತ್ತಿದ್ದಾರೆ.


    ಅಷ್ಟಮಿ ದಿನವಾದ ಗುರುವಾರ ಬೆಳಿಗ್ಗೆ ಮನೆಯ ಹಸು ಬಲು ಅಪರೂಪ ಎಂಬಂತೆ 3 ಕರುಗಳಿಗೆ ಜನ್ಮ ನೀಡಿದೆ.

    ಎರಡು ಗಂಡು ಮತ್ತು ಒಂದು ಹೆಣ್ಣು ಕರುಗಳು ಜನ್ಮ ತಾಳಿಗೆ ಕರುಗಳಿಗೆ ಕೃಷ್ಣ, ಬಲರಾಮ, ಸುಭದ್ರ ಎಂದು ಹೆಸರಿಡಲಾಗಿದೆ.

    DAKSHINA KANNADA

    ಮೀನು ವ್ಯಾಪಾರಿಯ ಸ್ಕೂಟರ್‌ಗೆ ಅಟೋ ಡಿಕ್ಕಿ

    Published

    on

    ಮಂಗಳೂರು : ಬಂದರಿನಿಂದ ಮೀನು ಖರೀದಿಸಿ ವ್ಯಾಪಾರಕ್ಕೆಂದು ತೆರಳುತ್ತಿದ್ದ ಮೀನು ವ್ಯಾಪಾರಿಯೊಬ್ಬರ ಸ್ಕೂಟರ್‌ಗೆ ಅಟೋ ಒಂದು ಡಿಕ್ಕಿ ಹೊಡೆದಿದೆ.

    ಮಂಗಳೂರು ಹೊರ ವಲಯದ ಅಡ್ಯಾರ್‌ಬಳಿ ಈ ಅಪಘಾತ ನಡೆದಿದ್ದು, ಎರಡೂ ವಾಹನಗಳು ರಸ್ತೆಗೆ ಉರುಳಿ ಬಿದ್ದಿದೆ. ಈ ವೇಳೆ ಮೀನು ವ್ಯಾಪಾರಿಯ ಸ್ಕೂಟರ್ ರಸ್ತೆಗೆ ಉರುಳಿದ ಕಾರಣ ಮಾರಟಕ್ಕೆಂದ ಕೊಂಡೊಯ್ಯುತ್ತಿದ್ದ ಅಪಾರ ಪ್ರಮಾಣದ ಮೀನುಗಳು ರಸ್ತೆಗೆ ಬಿದ್ದಿದೆ.

    ಇದನ್ನೂ ಓದಿ: ಉಡುಪಿ : ಡಿವೈಡರ್ ಹಾರಿ ಟೆಂಪೋಗೆ ಡಿ*ಕ್ಕಿ ಹೊಡೆದ ಕಾರು; ಚಾಲಕರಿಗೆ ಗಂಭೀ*ರ ಗಾ*ಯ

    ಅಪಘಾತ ನಡೆದಿದ್ದು, ಸಣ್ಣ ಪುಟ್ಟ ಗಾಯಗಳಿಂದ ಮೀನು ವ್ಯಾಪಾರಿ ಸುದಾರಿಸುವಷ್ಟರಲ್ಲೇ ಹಲವು ವಾಹನಗಳು ರಸ್ತೆಯಲ್ಲಿ ಬಿದ್ದಿದ್ದ ಮೀನುಗಳ ಮೇಲೆ ಹರಿದು ಹೋಗಿದೆ.

    ತಕ್ಷಣ ಸ್ಥಳೀಯ ಕೆಲವರು ಮೀನುಗಳನ್ನು ಹೆಕ್ಕಿ ಮೀನು ವ್ಯಾಪಾರಿಯ ಬುಟ್ಟಿಗೆ ತುಂಬಿಸಿ ಸಹಕರಿಸಿದ್ದಾರೆ.

    Continue Reading

    LATEST NEWS

    ಸಚಿವರು ತೆರಳುತ್ತಿದ್ದ ಕಾರು ಅ*ಪಘಾ*ತ ; ಆಸ್ಪತ್ರೆಗೆ ದಾಖಲು

    Published

    on

    ಮಂಗಳೂರು/ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಚಿವ ಚನ್ನರಾಜ ಹಟ್ಟಿಹೊಳಿ ತೆರಳುತ್ತಿದ್ದ ಕಾರು ಅ*ಪಘಾತ*ವಾಗಿದ್ದು, ಸದ್ಯ ಸಚಿವರು ಅ*ಪಾಯದಿಂದ ಪಾರಾಗಿದ್ದಾರೆ.

    ಸಚಿವರು ಕಾರ್ ನಲ್ಲಿ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಸಮೀಪ ತೆರಳುತ್ತಿದ್ದ ವೇಳೆ ನಾಯಿ ಅಡ್ಡ ಬಂದಿತ್ತು. ಅದನ್ನು ತಪ್ಪಿಸಲು ಹೋದ ಸಂದರ್ಭ ಕಾರು ಅ*ಪಘಾ*ತಕ್ಕೀಡಾಗಿದೆ. ನಿ*ಯಂತ್ರಣ ತಪ್ಪಿದ ಕಾರು ಮರಕ್ಕೆ ಡಿ*ಕ್ಕಿ ಹೊಡೆದಿದೆ. ಅದೃಷ್ಟವಶಾತ್ ಕಾರ್‌ನಲ್ಲಿ ಇದ್ದಂತಹ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಸೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಪ್ರಾ*ಣಾಪಾ*ಯದಿಂದ ಪಾರಾಗಿದ್ದಾರೆ.

     

    ಇದನ್ನೂ ಓದಿ : ಯಾರದ್ದೋ ಕೊ*ಲೆಗೆ ಸಂಚು; ಬ*ಲಿಯಾದವರು ಮತ್ಯಾರೋ!!

     

    ಕಾರಿನ ಮುಂಭಾಗ ಡಿ*ಕ್ಕಿಯ ರಭಸಕ್ಕೆ ಪೂರ್ತಿ ನ*ಜ್ಜುಗುಜ್ಜಾಗಿದೆ. ತಕ್ಷಣವೇ ಸ್ಥಳೀಯರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಚನ್ನರಾಜ ಹಟ್ಟಿಹೊಳಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿಗಿದ್ದು, ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

    Continue Reading

    LATEST NEWS

    ತಮಿಳಿನ 10 ಸಾಹಿತಿಗಳಿಗೆ ತಮಿಳುನಾಡು ಸರ್ಕಾರದಿಂದ ಭರ್ಜರಿ ಗಿಫ್ಟ್ !

    Published

    on

    ಮಂಗಳೂರು/ಚೆನ್ನೈ : ಅನುವಾದದ ಕ್ಷೇತ್ರದಲ್ಲಿನ ಸಾಧನೆಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ತಮಿಳಿನ 10 ಸಾಹಿತಿಗಳಿಗೆ ತಮಿಳುನಾಡು ಸರ್ಕಾರದಿಂದ ಭರ್ಜರಿ ಗಿಫ್ಟ್ ನೀಡಲಾಗಿದೆ.

    ತಮಿಳುನಾಡು ಹೌಸಿಂಗ್ ಬೋರ್ಡ್ ನಿಂದ ಈ ಫ್ಲಾಟ್ ಗಳನ್ನು ಚೆನ್ನೈನಲ್ಲಿ ನಿರ್ಮಿಸಲಾಗಿದೆ.

    ಸಾಹಿತಿಯೂ ಆಗಿದ್ದ ದಿವಂಗತ ಮಾಜಿ ಮುಖ್ಯಮಂತ್ರಿ ಕೆ.ಕರುಣಾನಿಧಿ ಅವರ ಹೆಸರಿನಲ್ಲಿ ಅನುವಾದ ಕ್ಷೇತ್ರದಲ್ಲಿ ಸಾಧನೆ ಮಾಡಿದ 10 ಸಾಹಿತಿಗಳಿಗೆ ಈ ಉಡುಗೊರೆ ನೀಡಲಾಗಿದೆ. ಒಂದು ಫ್ಲಾಟ್ ನ ಮಾರುಕಟ್ಟೆ ಮೌಲ್ಯ 40 ಲಕ್ಷ ರೂ. ಎನ್ನಲಾಗಿದೆ.

    ಇದನ್ನೂ ಓದಿ: ತಿರುಪತಿಯಲ್ಲಿ ಮತ್ತೊಂದು ಅವಘಡ; ಲಡ್ಡು ಕೌಂಟರ್ ನಲ್ಲಿ ಕಾಣಿಸಿಕೊಂಡ ಬೆಂಕಿ !

    ಸಚಿವಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಫ್ಲಾಟ್ ಗಳನ್ನು ಸಿಎಂ ಎಂ.ಕೆ. ಸ್ಟಾಲಿನ್ ಅವರು ಉದ್ಘಾಟಿಸಿದರು. ಈ ವೇಳೆ ಫಲಾನುಭವಿಗಳಿಗೆ ಫ್ಲಾಟ್ ದಾಖಲೆಗಳನ್ನು ಹಸ್ತಾಂತರಿಸಲಾಯಿತು.

    ಉಡುಗೊರೆ ಪಡೆದ ಈ ಸಾಹಿತಿಗಳು ವಿವಿಧ ಅವಧಿಯಲ್ಲಿ ಕನ್ನಡ, ಹಿಂದಿ, ತೆಲುಗು, ಮಲಯಾಳಂ ಸೇರಿದಂತೆ ವಿಶ್ವದ ಅನೇಕ ಭಾಷೆಗಳಲ್ಲಿನ ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ತಮಿಳಿಗೆ ಅನುವಾದಿಸಿದ್ದರು. ಅವರಿಗೆ ವಿವಿಧ ಅವಧಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗಳು ಸಿಕ್ಕಿದ್ದವು.

    Continue Reading

    LATEST NEWS

    Trending