ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯಂದೇ ಮೂರು ಕರುಗಳಿಗೆ ಜನ್ಮ ನೀಡಿದ ಗೋಮಾತೆ..!
ಉಡುಪಿ : ಉಡುಪಿ ಜಿಲ್ಲೆಯ ಕಾಪು ತಾಲೂಕುವಿನ ಮಜೂರು ಎಂಬಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ದನವೊಂದು ಮೂರು ಕರುಗಳಿಗೆ ಜನ್ಮ ನೀಡಿದ ಅಪರೂಪದ ಘಟನೆ ಸಂಭವಿಸಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಅಂದರೆ ರೋಹಿಣಿ ನಕ್ಷತ್ರ ವೃಷಭ ರಾಶಿಯ ಪವಿತ್ರವಾದ ಅಷ್ಪಮಿಯ ದಿನದಂದು ಶ್ರೀ ಕೃಷ್ಣನ ಜನನವಾಗಿತ್ತು.
ಕೃಷ್ಣನಿಗೆ ಗೋವುಗಳೆಂದರೆ ಅಚ್ಚು ಮೆಚ್ಚು. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಜೂರಿನ ಜಾರಂದಾಯ ಸಾನದ ಮನೆಯಲ್ಲಿ ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿದ್ದು. ಮಜೂರು ಪರಿಸರದ ಗ್ರಾಮಸ್ಥರು ಕರುಗಳನ್ನು ಮತ್ತು ದನವನ್ನು ನೋಡಲು ಉದಯರ ಮನೆಗೆ ಬರುತ್ತಿದ್ದಾರೆ.
ಅಷ್ಟಮಿ ದಿನವಾದ ಗುರುವಾರ ಬೆಳಿಗ್ಗೆ ಮನೆಯ ಹಸು ಬಲು ಅಪರೂಪ ಎಂಬಂತೆ 3 ಕರುಗಳಿಗೆ ಜನ್ಮ ನೀಡಿದೆ.
ಎರಡು ಗಂಡು ಮತ್ತು ಒಂದು ಹೆಣ್ಣು ಕರುಗಳು ಜನ್ಮ ತಾಳಿಗೆ ಕರುಗಳಿಗೆ ಕೃಷ್ಣ, ಬಲರಾಮ, ಸುಭದ್ರ ಎಂದು ಹೆಸರಿಡಲಾಗಿದೆ.