Connect with us

    LATEST NEWS

    ಫೆ. 19ರಂದು ಸಚಿವ ಕೋಟ ಮಂಗಳೂರಿನಲ್ಲಿ ಸಾರ್ವಜನಿಕರಿಗೆ ಲಭ್ಯ

    Published

    on

    ಮಂಗಳೂರು: ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಇದೇ ಫೆ.19ರ ಶನಿವಾರ ಮಧ್ಯಾಹ್ನ 3 ರಿಂದ 5 ಗಂಟೆಯ ವರೆಗೆ ನಗರದ ಕೊಟ್ಟಾರದಲ್ಲಿರುವ ಜಿಲ್ಲಾ ಪಂಚಾಯತ್‍ನ ಸಚಿವರ ಕಚೇರಿಯಲ್ಲಿ ಸಾರ್ವಜನಿಕರನ್ನು ಹಾಗೂ ಸ್ಥಳೀಯಾಡಳಿತದ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಅಹವಾಲುಗಳನ್ನು ಸ್ವೀಕರಿಸುವರು ಎಂದು ಸಚಿವರ ಆಪ್ತ ಸಹಾಯಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    DAKSHINA KANNADA

    ಆತಂಕದಲ್ಲಿ ಕಾಂತಾರ 2 ಚಿತ್ರ ತಂಡ..! ಇಲ್ಲಿದೆ ಕಾರಣ..!

    Published

    on

    ಮಂಗಳೂರು : ಸಿನೆಮಾ, ನಾಟಕಗಳಲ್ಲಿ ದೈವಾರಾಧನೆ ಪ್ರದರ್ಶಿಸಲು ವಿರೋಧ ವ್ಯಕ್ತಪಡಿಸಿರುವ ದೈವ ನರ್ತಕರ ಸಮುದಾಯದ ಎಚ್ಚರಿಕೆಯಿಂದ ಕಾಂತಾರ 2 ಗೂ ಸಂಚಕಾರ ಎದುರಾಗಿದೆ. ದೇಶಾದ್ಯಂತ ಭರ್ಜರಿ ಯಶಸ್ಸು ಕಂಡಿದ್ದ ಕಾಂತಾರ ಸಿನೆಮಾದ ಪಾರ್ಟ್‌ 2 ಶೂಟಿಂಗ್ ಈಗಾಗಲೇ ಆರಂಭಗೊಂಡಿದೆ. ನಿರ್ದೇಶಕ ಮತ್ತು ನಾಯಕ ನಟ ರಿಷಭ್ ಶೆಟ್ಟಿ ಸಿನೆಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ, ಈ ನಡುವೆ ದೈವಾರಾಧಕರು ಸಿನಿಮಾ ಹಾಗೂ ನಾಟಕದಲ್ಲಿ ದೈವಾರಾಧನೆ ಪ್ರದರ್ಶನ ಮಾಡಿದ್ರೆ ಚಿತ್ರ ಮಂದಿರಕ್ಕೆ ನುಗ್ಗಿ ತಡೆಯುವುದಾಗಿ ಎಚ್ಚರಿಕೆ ನೀಡಿದೆ.

    ಇತ್ತೀಚೆಗೆ ಸಿನೆಮಾ ಹಾಗೂ ನಾಟಕದಲ್ಲಿ ದೈವಾರಾಧನೆಯ ಬಳಕೆ ಜಾಸ್ತಿಯಾಗಿದ್ದು, ಈ ಬಗ್ಗೆ ದೈವ ನರ್ತಕರ ಸಮುದಾಯ ಆಕ್ರೋಶಗೊಂಡಿದೆ. ನಮ್ಮ ಕಾನೂನಾತ್ಮಕ ಹೋರಾಟಕ್ಕೆ ನ್ಯಾಯ ಸಿಗುತ್ತಿಲ್ಲ ಎಂದು ಅಸಹಾಯಕತೆಯನ್ನೂ ತೋಡಿಕೊಂಡಿದೆ. ಈ ನಡುವೆ ಪೊಲೀಸರಿಗೂ ದೂರು ನೀಡಿ ಇದನ್ನು ತಡೆಯುವಂತೆ ಮನವಿ ಮಾಡಿದೆ. ಆದ್ರೆ, ಇದ್ಯಾವುದಕ್ಕೂ ಬೆಲೆ ಸಿಗದೇ ಇರುವ ಕಾರಣ ಇದೀಗ ಸಿನೆಮಾ ಪ್ರದರ್ಶನವಾದ್ರೆ ತಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದೆ. ನ್ಯಾಯಯುತವಾಗಿ ನಾವು ಕೇಳಿರುವ ಬೇಡಿಕೆಗೆ ಯಾವುದೇ ಸ್ಪಂದನೆ ಸಿಗದ ಕಾರಣ ಇಂತಹ ನಿರ್ಧಾರ ಅನಿವಾರ್ಯ ಎಂದು ದೈವ ನರ್ತಕ ಸಮುದಾಯದವರು ಹೇಳಿದ್ದಾರೆ.


    ಕಾಂತಾರ ಸಿನೆಮಾ ರಿಲೀಸ್ ಆಗಿ ಅಪಾರ ಜನ ಮನ್ನಣೆ ಪಡೆದುಕೊಂಡ ಬಳಿಕ ಅದು ಹಲವು ಭಾಷೆಗಳಲ್ಲಿ ಡಬ್ ಆಗಿತ್ತು. ಈ ಸಿನೆಮಾ ರಿಷಭ್ ಶೆಟ್ಟಿ ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನೂ ತಂದು ಕೊಟ್ಟಿತ್ತು. ಇದೀಗ ಕಾಂತಾರ ಸಿನೆಮಾದ ಪ್ರೀಕ್ವೆಲ್‌ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಆದ್ರೆ ದೈವಾರಾಧಕರು ನೀಡಿರುವ ಎಚ್ಚರಿಕೆಯಿಂದ ಚಿತ್ರ ಬಿಡುಗಡೆಯ ಬಗ್ಗೆ ಕೊಂಚ ಆತಂಕ ಕಾಡಿದೆ.

    Continue Reading

    LATEST NEWS

    ಪರಿಷತ್ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಆಯ್ಕೆ

    Published

    on

    ಮಂಗಳೂರು: ಅಕ್ಟೋಬರ್ 24 ರಂದು ನಡೆಯಲಿರುವ ಪರಿಷತ್ ಉಪ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮ ಗೊಳಿಸಿದೆ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಬೊಟ್ಯಾಡಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.

    ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷನಾಗಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದರು. ಬಳಿಕ ಪಕ್ಷದಲ್ಲಿ ವಿವಿಧ ಜವಾಬ್ದಾರಿ ವಹಿಸಿಕೊಂಡಿದ್ದ ಕಿಶೋರ್ ಕುಮಾರ್ ಪಕ್ಷ ಕಟ್ಟುವಲ್ಲಿ ಶ್ರಮ ವಹಿಸಿದ್ದರು.

    ಇತ್ತೀಚೆಗೆ ವಿಧಾನಸಭಾ ಚುನಾವಣಾ ಸಮಯದಲ್ಲೂ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕಿಶೋರ್ ಕುಮಾರ್‌ಗೆ ಸಿಗಲಿದೆ ಎಂಬ ಸುದ್ದಿ ಹರಡಿತ್ತು. ಆದ್ರೆ ಇದೀಗ ಇವರ ಪರಿಶ್ರಮವನ್ನು ಗುರುತಿಸಿದ ಪಕ್ಷ ವಿಧಾನ ಪರಿಷತ್ ಉಪ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಹೆಸರು ಘೋಷಣೆ ಮಾಡಿದೆ.

    Continue Reading

    LATEST NEWS

    ಐಫೋನ್​ಗೆ ಹಣ ಕೊಡಬೇಕಲ್ಲಾ ಎಂದು ಡೆಲಿವರಿ ಏಜೆಂಟ್​ನನ್ನೇ ಕೊಂ*ದ ವ್ಯಕ್ತಿ

    Published

    on

    ಉತ್ತರ ಪ್ರದೇಶ: ಐಫೋನ್​ಗೆ ಹಣ ಕೊಡಬೇಕಲ್ಲಾ ಎಂದು ಡೆಲಿವರಿ ಏಜೆಂಟ್​ನನ್ನೇ ಹ*ತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


    ವ್ಯಕ್ತಿ ಫ್ಲಿಪ್​ಕಾರ್ಟ್​ ಮೂಲಕ 1.5 ಲಕ್ಷ ರೂಪಾಯಿ ಬೆಲೆ ಬಾಳುವ ಐಫೋನ್​ನ್ನು ಕ್ಯಾಶ್​ ಆನ್ ಡೆಲಿವರಿಯಲ್ಲಿ ಆರ್ಡರ್ ಮಾಡಿದ್ದ, ಡೆಲಿವರಿ ಏಜೆಂಟ್​ ಅವರ ಮನೆಗೆ ಬಂದು ಐಫೋನ್ ಕೊಟ್ಟಿದ್ದಾರೆ ಆದರೆ ಆತನಿಗೆ ಹಣಕೊಡಬೇಕಲ್ಲಾ ಎಂದು ಚಿಂತಿಸಿ ಡೆಲಿವರಿ ಏಜೆಂಟ್​ನನ್ನೇ ಹ*ತ್ಯೆ ಮಾಡಿ ಕಾಲುವೆಗೆ ಎಸೆದಿದ್ದಾನೆ.

    ನಿಶಾತ್‌ಗಂಜ್ ನಿವಾಸಿಯಾದ ಡೆಲಿವರಿ ಬಾಯ್ ಭರತ್ ಸಾಹು ಫೋನ್ ಡೆಲಿವರಿ ಮಾಡಲು ಅವರ ಮನೆಗೆ ಹೋಗಿದ್ದರು. ಅಲ್ಲಿ ಗಜಾನನ ಮತ್ತು ಅವನ ಸಹಚರರು ಅವರನ್ನು ಕೊ*ಲೆ ಮಾಡಿದ್ದಾರೆ. ಸಾಹುವನ್ನು ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ಮೃ*ತದೇಹವನ್ನು ಗೋಣಿಚೀಲದಲ್ಲಿ ತುಂಬಿ ಇಂದಿರಾ ಕಾಲುವೆಗೆ ಎಸೆದಿದ್ದಾರೆ.

    ಎರಡು ದಿನಗಳ ಕಾಲ ಸಾಹು ಮನೆಗೆ ಬಾರದಿದ್ದಾಗ, ಆತನ ಕುಟುಂಬದವರು ಚಿನ್ಹಾಟ್ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಸಾಹುವಿನ ಕಾಲ್ ಡಿಟೇಲ್ಸ್ ಸ್ಕ್ಯಾನ್ ಮಾಡಿ ಆತನ ಲೊಕೇಶನ್ ಹುಡುಕಿ ಪೊಲೀಸರು ಗಜಾನನ ನಂಬರ್ ಪತ್ತೆ ಮಾಡಿ ಆತನ ಸ್ನೇಹಿತ ಆಕಾಶ್​ನನ್ನು ತಲುಪಿದ್ದಾರೆ.

    ವಿಚಾರಣೆ ವೇಳೆ ಆಕಾಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಅಧಿಕಾರಿ ತಿಳಿಸಿದ್ದಾರೆ. ಹತ್ಯೆಯ ನಂತರ ಆಕಾಶ್ ಕೂಡ ಮುಂಬೈಗೆ ಪರಾರಿಯಾಗಿದ್ದ. ಆದರೆ, ಪೊಲೀಸರಿಗೆ ಇನ್ನೂ ಶ*ವ ಪತ್ತೆಯಾಗಿಲ್ಲ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡವು ಕಾಲುವೆಯಲ್ಲಿ ದೇಹವನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ.

    Continue Reading

    LATEST NEWS

    Trending