Connect with us

    LATEST NEWS

    ಕೋಟ: ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ – ಸವಾರ ಸ್ಥಳದಲ್ಲೇ ಸಾ*ವು

    Published

    on

    ಉಡುಪಿ: ಕೆಎಸ್‌ಆರ್‌ಟಿಸಿ ಬಸ್ಸೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಸರ್ಕಲ್‌ನಲ್ಲಿ ನಡೆದಿದೆ. ಮೃತ ಬೈಕ್‌ ಸವಾರನನ್ನು ಕೋಟತಟ್ಟು ಕಲ್ಮಾಡಿ ರಸ್ತೆಯ ವಾಸುದೇವ ಗಾಣಿಗ (33) ಎಂದು ಗುರುತಿಸಲಾಗಿದೆ.

    ವಾಸುದೇವ ರಾತ್ರಿ ಸುಮಾರು 12 ಗಂಟೆಗೆ ತೆಕ್ಕಟ್ಟೆ ಸಾಯಿಗ್ರಾಂಡ್ ಹೋಟೆಲ್ ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು. ಅವರು ಕೋಟ ಸರ್ಕಲ್ ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಮಂಗಳೂರಿನಿಂದ ಶಿರಸಿ ಕಡೆ ಹೋಗುವ ಕೆಎಸ್‌ಆರ್ ಟಿಸಿ ಬಸ್‌ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ವಾಸುದೇವ ಅವರ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

    LATEST NEWS

    ತಾಯಿ-ಮಗಳ ಡಬಲ್ ಮ*ರ್ಡರ್..! ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಶಾಕ್..!

    Published

    on

    ಮಂಗಳೂರು ( ಅಂಕೋಲ ) : ತನ್ನ ಪತ್ನಿ ಹಾಗೂ ಮಗಳನ್ನು ಯಾರೋ ಹ*ತ್ಯೆ ಮಾಡಿದ್ದಾರೆ ಎಂಬ ಕರೆ ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ಹೋದಾಗ ಶಾಕ್‌ಗೆ ಒಳಗಾಗಿದ್ದಾರೆ. 112 ಗೆ ಕರೆ ಮಾಡಿದ್ದ ವ್ಯಕ್ತಿ ಭೀಕ*ರ ಹ*ತ್ಯೆಯ ಬಗ್ಗೆ ತಿಳಿಸಿ ತನಗೆ ಭಯವಾಗುತ್ತಿದೆ ಬೇಗ ಬನ್ನಿ ಎಂದಿದ್ದ.
    ಅಂಕೋಲದ ಹಿಲ್ಲೂರಿನ ಬಿಲ್ಲನ ಬೈಲ್‌ನ ಮಂಜುನಾಥ ಬೊಮ್ಮಯ್ಯ ನಾಯಕ ಎಂಬಾತ ಈ ಕರೆ ಮಾಡಿದ್ದ. ಮಾಹಿತಿ ಪಡೆದ 112 ಸಿಬ್ಬಂಧಿ ಕಾರವಾರದಿಂದ ವೈರ್‌ಲೆಸ್ ಮೂಲಕ ತಕ್ಷಣ ಘಟನಾ ಸ್ಥಳಕ್ಕೆ ತೆರಳುವಂತೆ ಅಂಕೋಲ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಕರೆ ಸ್ವೀಕರಿಸಿದ ಪಿಎಸೈ ಉದ್ಧಪ್ಪ ಧರೆಪ್ಪನವರ್, ಎಎಸೈ ಲಲಿತಾ ರಜಪೂತ್ ಹಾಗೂ ಸಿಬ್ಬಂದಿ ಪ್ರವೀಣ ಪೂಜಾರ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ, ಜೀಪನ್ನೇರಿ ತಾಲೂಕು ಕೇಂದ್ರದಿಂದ 37 ಕಿಲೋ ಮೀಟರ್ ದೂರದ ಹಿಲ್ಲೂರಿಗೆ ಬಂದಿದ್ದಾರೆ.

    ಘಟನಾ ಸ್ಥಳಕ್ಕೆ ಬಂದು ವಿಚಾರಿಸಿದ ಪೊಲೀಸರಿಗೆ ಶಾಕ್‌..!

    ಪೊಲೀಸರು ಹಿಲ್ಲೂರು ಗ್ರಾಮಕ್ಕೆ ತಲುಪುವ ಸಮಯಕ್ಕೆ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದಾರೆ. ಇದನ್ನು ನೋಡಿದ ಪೊಲೀಸರು ಡಬ್ಬಲ್ ಮ*ರ್ಡರ್‌ ವಿಚಾರವಾಗಿ ತಲೆ ಕೆಡಿಸಿಕೊಂಡು ಮನೆಯತ್ತ ಬಂದಿದ್ದಾರೆ. ಆದ್ರೆ ಅಲ್ಲಿ ಸೇರಿದ್ದ ಅಷ್ಟೂ ಜನರು ಪೊಲೀಸರು ಬರುತ್ತಿದ್ದಂತೆ ಮುಸಿಮುಸಿ ನಗಲು ಆರಂಭಿಸಿದ್ದಾರೆ. ಇದನ್ನು ನೋಡಿದ ಪೊಲೀಸರೂ ಕೂಡಾ ಒಂದು ಕ್ಷಣ ಅನುಮಾನಿಸಿದ್ದಾರೆ. ಆದ್ರೆ ಅಸಲಿ ವಿಚಾರ ತಿಳಿಯುತ್ತಿದ್ದಂತೆ ಶಾಕ್ ಆಗಿದ್ದು ಮಾತ್ರವಲ್ಲದೆ ಪಿತ್ತ ನೆತ್ತಿಗೇರಿ ಕರೆ ಮಾಡಿದ್ದ ವ್ಯಕ್ತಿಯನ್ನು ಹಿಡಿದು ನಾಲ್ಕು ತದುಕಿದ್ದಾರೆ.

    ಮಾನಸಿಕ ಅಸ್ವಸ್ಥನಿಂದ ಪೊಲೀಸರಿಗೆ ಹುಸಿ ಕರೆ..!

    ಹೌದು 112 ಗೆ ಕರೆ ಮಾಡಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಕಳೆದೊಂದು ವರ್ಷದಿಂದ ಈ ರೀತಿ ಮಾಡುತ್ತಿದ್ದಾನೆ. ಈತನ ಈ ಕೃತ್ಯದಿಂದ ಬೇಸತ್ತ ಪತ್ನಿ ಹಾಗೂ ಮಕ್ಕಳು ಬೇರೆಯವರ ಮನೆಯಲ್ಲಿ ವಾಸಮಾಡುತ್ತಿದ್ದಾರೆ. ಇದೀಗ ಪತ್ನಿ ಮತ್ತು ಮಗಳನ್ನು ಯಾರೋ ಕೊಲೆ ಮಾಡಿದ್ದಾರೆ ಅಂತ ಊರವರನ್ನು ಸೇರಿಸಿದ್ದು ಮಾತ್ರವಲ್ಲದೆ ಪೊಲೀಸರೂ ಮನೆ ಬಾಗಿಲಿಗೆ ಬರುವಂತೆ ಮಾಡಿದ್ದಾನೆ.

    Continue Reading

    LATEST NEWS

    ಕಿತ್ತೋದ ಕಾಮಾಗಾರಿ..! ಸ್ಮಾರ್ಟ್‌ ಸಿಟಿಗೆ ಎಷ್ಟು ವರ್ಷ ಗ್ಯಾರೆಂಟಿ..?

    Published

    on

    ಮಂಗಳೂರು : ಮಂಗಳೂರು ನಗರದಲ್ಲಿ ಸ್ಮಾರ್ಟ್‌ ಸಿಟಿ ಕಾಮಾಗಾರಿಯ ಒಂದೊಂದೆ ಕರ್ಮಾಕಾಂಡ ಈಗ ಹೊರ ಬರುತ್ತಿದೆ. ಹಂಪನಕಟ್ಟೆಯ ಕಾರ್ ಪಾರ್ಕಿಂಗ್ ಕಟ್ಟಡ ಕಾಮಾಗಾರಿ ನೆನೆಗುದಿಗೆ ಬಿದ್ದಿದ್ರೆ, ಮುಳಿಹಿತ್ಲಿನ ರಿವರ್ ಫ್ರಂಟ್‌ ತಡೆಗೋಡೆ ಕುಸಿತವಾಗಿದೆ. ಇದೀಗ ನೆಲ್ಲಿಕಾಯಿ ರಸ್ತೆಯಲ್ಲಿ ಪಾದಾಚಾರಿ ರಸ್ತೆಯಲ್ಲಿ ಚರಂಡಿಯ ಮುಚ್ಚಳವೊಂದು ಜನರನ್ನು ಬಲಿ ಪಡೆಯಲು ಕಾದು ನಿಂತಿದೆ.

    ಕುಟುಂತ್ತಾ ಸಾಗಿದ್ದ ಸ್ಮಾರ್ಟ್‌ ಸಿಟಿ ಕಾಮಾಗಾರಿಯಿಂದ ಮಂಗಳೂರು ಅಂದವಾಗುವುದು ಬಿಟ್ಟು ಅಂದಗೆಟ್ಟು ಹೋಗಿದೆ ಎನ್ನಬಹುದು. ಕೇವಲ ನಾಲ್ಕೈದು ಸರ್ಕಲ್‌, ಮೂರ್ನಾಲ್ಕು ಕೆರೆ ಹಾಗೂ ಒಂದೆರಡು ಪಾರ್ಕ್‌ಗಳನ್ನು ಅಭಿವೃದ್ದಿ ಮಾಡಿ ಇದೇ ಸ್ಮಾರ್ಟ್‌ ಸಿಟಿ ಅಂತ ಜನರನ್ನು ನಂಬಿಸುವ ಕೆಲಸ ಆಗಿದೆ. ಆದ್ರೆ ಅಸಲಿಗೆ ಆಗಬೇಕಾದ ಅಗತ್ಯ ಕೆಲಸಗಳು ಹಳ್ಳ ಹಿಡಿದಿದೆ ಅನ್ನೋದು ಸುಳ್ಳಲ್ಲ. ಇನ್ನು ಪೂರ್ಣಗೊಂಡಿರುವ ಕದ್ರಿ ಪಾರ್ಕ್‌ ಅಂಗಡಿ ಮಳಿಗೆಗಳು ಪಾಳು ಬೀಳುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.
    ಇದರ ನಡುವೆ ಅಲ್ಲಲ್ಲಿ ಅಗೆದು ಹಾಕಲಾದ ಜಲ ಸಿರಿ ಯೋಜನೆಯ ಕಾಮಾಗಾರಿಗಳು ದ್ವಿಚಕ್ರವಾಹನ ಸವಾರರನ್ನು ಯಾವಾಗ ಬಲಿ ಪಡೆಯಲಿದೆಯೋ ಗೊತ್ತಿಲ್ಲ. ಇದೆಲ್ಲದರ ನಡುವೆ ಪಾದಾಚಾರಿಗಳು ನಡೆದಾಡುವ ಫುಟ್‌ಪಾತ್‌ ಕೂಡಾ ಕಳಪೆ ದರ್ಜೆಯಲ್ಲಿ ಮಾಡಿದ್ದಾರೆ ಅನ್ನೋದು ನೆಲ್ಲಿಕಾಯಿ ರಸ್ತೆಯಲ್ಲಿ ಸಂಚರಿಸಿದ್ರೆ ಗೊತ್ತಾಗುತ್ತದೆ. ಇಲ್ಲಿನ ಇಂಟರ್‌ ಲಾಕ್ ಕಿತ್ತು ಹೋಗುತ್ತಿರುವುದು ಮಾತ್ರವಲ್ಲದೆ ದುಬಾರಿ ಬೆಲೆಯ ಚರಂಡಿ ಮುಚ್ಚಳ ತುಂಡಾಗಿ ಜನರ ಜೀವ ಬಲಿಗೆ ಕಾದು ನಿಂತಿದೆ.

    ಇದು ಯಾವ ರೀತಿಯ ಸ್ಮಾರ್ಟ್‌ ಸಿಟಿ ಕಾಮಾಗಾರಿ ಅನ್ನೋದನ್ನು ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಹೇಳಬೇಕಾಗಿದೆ. ಕೋಟ್ಯಾಂತರ ರೂಪಾಯಿ ಜನರ ತೆರಿಗೆ ಹಣವನ್ನು ಬೇಕಾಬಿಟ್ಟಿ ಕೆಲಸದ ಮೂಲಕ ಪೂಲು ಮಾಡುವ ಈ ಸ್ಮಾರ್ಟ್‌ ಸಿಟಿ ಬೇಕಿತ್ತಾ ಅಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ. ತಕ್ಷಣ ನೆಲ್ಲಿಕಾಯಿ ರಸ್ತೆಯ ಫುಟ್‌ ಪಾತ್ ದುರಸ್ಥಿ ಮಾಡದೇ ಇದ್ರೆ ಕತ್ತಲಿನಲ್ಲಿ ಯಾರಾದ್ರೂ ಬಿದ್ದು ಅಪಾಯ ಸಂಭವಿಸುವುದು ಗ್ಯಾರೆಂಟಿ ಅಂತ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    Continue Reading

    LATEST NEWS

    ಅಯೋಧ್ಯೆ ಸೋಲಿಗೆ ಪ್ರತಿಕಾರ..? ಸಂತನಿಗೆ ನೀಡಿದ್ದ ಗನ್‌ ಮ್ಯಾನ್ ವಾಪಾಸ್‌..!

    Published

    on

    ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಆಗಿರುವ ಸೋಲಿಗೆ ಬಿಜೆಪಿ ನಾಯಕರು ಪರಾಮರ್ಶೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಅಯೋಧ್ಯೆಯ ಹನುಮಾನ್‌ಘಡಿಯ ಸಂತ ಮಹಂತ್ ರಾಜ್‌ ದಾಸ್‌ ಅವರಿಗೆ ನೀಡಲಾದ ಭದ್ರತೆಯನ್ನು ಕಿತ್ತು ಹಾಕಲಾಗಿದೆ. ಇದು ಉತ್ತರ ಪ್ರದೇಶದ ರಾಜಕೀಯ ವಲಯದಲ್ಲಿ ಚರ್ಚಗೆ ಗ್ರಾಸವಾಗಿದ್ದು, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್‌ ಈ ನಡೆಯನ್ನು ಖಂಡಿಸಿದ್ದಾರೆ.

    ಈ ವಿಚಾರದ ಬಗ್ಗೆ ರಾಜ್ಯ ಸಂಘಟನೆ ಮಾಹಿತಿ ಕೇಳಿದ್ದು, ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೂ ವಿಚಾರ ಹೋಗಿದೆ. ಆದ್ರೆ ಮಹಂತ್ ರಾಜ್‌ ದಾಸ್ ಅವರಿಗೆ ನೀಡಲಾದ ಭದ್ರತೆ ಹಿಂಪಡೆದ ವಿಚಾರದಲ್ಲಿ ಅಖಿಲೇಶ್ ಯಾದವ್ ಟ್ವಿಟ್ ಮಾಡಿದ್ದಾರೆ. ಅಯೋಧ್ಯೆಯ ಸಂತರ ವಿರುದ್ಧ ಬಿಜೆಪಿ ಸೇಡು ತೀರಿಸಿಕೊಳ್ಳಬಾರದು. ಸಜ್ಜನರಿಗೆ ಭದ್ರತೆಯನ್ನು ಒದಗಿಸಬೇಕು ಎಂದು ಟ್ವಿಟ್ ಮಾಡಿದ್ದಾರೆ.

    ಅಯೋಧ್ಯೆಯಲ್ಲಿನ ಸೋಲಿನ ಪರಾಮರ್ಶೆ ನಡೆಸುತ್ತಿದ್ದ ಉತ್ತರ ಪ್ರದೇಶ ಬಿಜೆಪಿ ನಾಯಕರು ಕರೆದಿದ್ದ ಸಭೆಯಲ್ಲಿ ಅಯೋಧ್ಯೆಯ ಜಿಲ್ಲಾಧಿಕಾರಿ ನಿತೀಶ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದನ್ನೇ ವಿಷಯವಾಗಿಟ್ಟುಕೊಂಡ ಜಿಲ್ಲಾಧಿಕಾರಿ ಮಹಾಂತ್ ಅವರಿಗಿದ್ದ ಗನ್ ಮ್ಯಾನ್‌ ಕಿತ್ತು ಹಾಕಿದ್ದಾರೆ. ಈ ವೇಳೆ ಯೋಗಿ ಸರ್ಕಾರದ ಇಬ್ಬರು ಸಚಿವರಾದ ಸೂರ್ಯ ಪ್ರತಾಪ್ ಶಾಹಿ ಮತ್ತು ಜೈವೀರ್ ಸಿಂಗ್ ಉಪಸ್ಥಿತರಿದ್ದರು. ಅಯೋಧ್ಯೆ ಉಸ್ತುವಾರಿ ಸಚಿವ ಸೂರ್ಯ ಪ್ರತಾಪ್ ಶಾಹಿ ಅವರ ಕರೆಯ ಮೇರೆಗೆ ಮಹಂತ್ ರಾಜು ದಾಸ್ ಅವರು ಪರಿಶೀಲನಾ ಸಭೆಗೆ ತೆರಳಿದ್ದರು. ಈ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮಹಂತ್ ರಾಜು ದಾಸ್ ನಡುವೆ ಚಕಮಕಿ ನಡೆದಿದ್ದು, ಸಂಪುಟ ಸಚಿವ ಜೈವೀರ್ ಸಿಂಗ್ ಅವರು ಇದಕ್ಕೆ ಸಾಕ್ಷಿಯಾಗಿದ್ದರು.

     

     

     

    Continue Reading

    LATEST NEWS

    Trending