Thursday, August 11, 2022

ಇಂದು ಕೋಲಾರ ಬಂದ್‌: ಪ್ರಮೋದ್‌ ಮುತಾಲಿಕ್‌ಗೆ ಜಿಲ್ಲಾ ಪ್ರವೇಶಕ್ಕೆ ನಿಷೇಧ ಹೇರಿದ DC

ಕೋಲಾರ: ಚಿಕ್ಕಮಗಳೂರು ಬಾಬಾಬುಡನ್​ ಗಿರಿಯ ದತ್ತಪೀಠಕ್ಕೆ ಹೊರಟಿದ್ದ ಬಸ್‌ ಮೇಲೆ ಕಿಡಿಗೇಡಿಗೆಳು ಕಲ್ಲು ತೂರಾಟ ನಡೆಸಿದ ಘಟನೆಯನ್ನ ಖಂಡಿಸಿ ಇಂದು ಕೋಲಾರ ಬಂದ್​ಗೆ ಕರೆ ನೀಡಲಾಗಿದೆ.


ಇಂದು ನಡೆಯಲಿರುವ ಬಂದ್​​ನಲ್ಲಿ ಪ್ರಮೋದ್ ಮುತಾಲಿಕ್ ಭಾಗವಹಿಸುವ ಸಾಧ್ಯತೆಯಿದ್ದು, ಈ ಹಿನ್ನೆಲೆ ಮುತಾಲಿಕ್ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಇಂತಹ ಘಟನೆ ಸಂಭವಿಸಿದಾಗ ಪ್ರಮೋದ್ ಮುತಾಲಿಕ್ ಕೋಮು ಪ್ರಚೋದನಾಕಾರಿ ಭಾಷಣ ಮಾಡಿರುವ ಉದಾಹರಣೆಗಳಿವೆ.

ಈ ಕಾರಣದಿಂದ ಪ್ರಮೋದ್ ಮುತಾಲಿಕ್​ಗೆ ನವೆಂಬರ್-18 ರಿಂದ ನ.24ರವರೆಗೆ ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.

ಜೊತೆಗೆ ಆಡಿಯೋ, ವಿಡಿಯೋ ಭಾಷಣ ಮಾಡದಂತೆ ಸಹ ನಿರ್ಬಂಧ ಹೇರಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ದತ್ತ ಪೀಠಕ್ಕೆ ಹೊರಟಿದ್ದ ಬಸ್​ ಮೇಲೆ ದುಷ್ಕರ್ಮಿಗಳು ನಡೆಸಿದ ದಾಳಿ ಖಂಡನೀಯವಾಗಿದ್ದು, ಸಮುದಾಯದಲ್ಲಿ ಶಾಂತಿ ಕದಡುವ ಕೆಲಸ ನಡೆಯುತ್ತಿದೆ.

ಇಂತಹ ಕೃತ್ಯ ನಡೆಸಿದವರನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ

LEAVE A REPLY

Please enter your comment!
Please enter your name here

Hot Topics

ಹಂತಕರನ್ನು ಬಂಧಿಸಿದ ಪೊಲೀಸರಿಗೆ ಧನ್ಯವಾದ ತಿಳಿಸಿದ ಪ್ರವೀಣ್ ಕುಟುಂಬ

ಪುತ್ತೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿನ್ನೆಲೆ ಪ್ರವೀಣ್ ನೆಟ್ಟಾರು ಕುಟುಂಬಸ್ಥರು ಪೋಲೀಸ್ ಇಲಾಖೆಗೆ ಧನ್ಯವಾದ ಹೇಳಿದ್ದಾರೆ.ಈ ಬಗ್ಗೆ...

ACBಯನ್ನು ಕಿತ್ತೆಸೆದ ಹೈಕೋರ್ಟ್‌

ಬೆಂಗಳೂರು: ಸಿದ್ಧರಾಮಯ್ಯ ಅವರ ಅವಧಿಯಲ್ಲಿ ಸರ್ಕಾರ ಹುಟ್ಟುಹಾಕಿದ್ದ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಕರ್ನಾಟಕ ಹೈಕೋರ್ಟ್‌ ರದ್ದುಪಡಿಸಿ ಆದೇಶ ಹೊರಡಿಸಿದೆ.ಅಲ್ಲದೇ ಎಸಿಬಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್...

ಮಂತ್ರಾಲಯದಲ್ಲಿ ರಾಯರಿಗೆ ಪೂಜೆ ಸಲ್ಲಿಸಿದ ಮಾಜಿ CM ಬಿ.ಎಸ್ ವೈ & ಕುಟುಂಬ

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಅಂಗವಾಗಿ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪನವರೊಂದಿಗೆ ಸಂಸದರಾದ ಬಿ. ವೈ ರಾಘವೇಂದ್ರ ಅವರು ಹಾಗೂ ಸಹೋದರ ಬಿ. ವೈ ವಿಜಯೇಂದ್ರ ಅವರು...