Connect with us

FILM

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನೋಡಿ ‘ಕತ್ತೆ’ ಎಂದ ಕಿಚ್ಚ ಸುದೀಪ

Published

on

ಬೆಂಗಳೂರು : ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಕುರಿತು ಸಾಕಷ್ಟು ಜನರು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಿತ್‌ ಶೆಟ್ಟಿ-ರುಕ್ಮಿಣಿ ನಟನೆಯ ಪ್ರೇಮಕಾವ್ಯ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಚಿತ್ರವನ್ನು ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನೋಡಿದ್ದು, ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ನಿಜಕ್ಕೂ ಇದೊಂದು ಮಾಸ್ಟರ್‌ಪೀಸ್‌ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಆ ಮೂಲಕ ಅವರು ಇಡೀ ತಂಡವನ್ನು ಹುರಿದುಂಬಿಸಿದ್ದಾರೆ.


ರಕ್ಷಿತ್​ ಶೆಟ್ಟಿ, ಹೇಮಂತ್​ ಎಂ.ರಾವ್​, ರುಕ್ಮಿಣಿ ವಸಂತ್​, ಚೈತ್ರಾ ಜೆ.ಆಚಾರ್​, ಅದ್ವೈತ್​ ಗುರುಮೂರ್ತಿ ಮುಂತಾದವರ ಕೆಲಸವನ್ನು ಸುದೀಪ್​ ಮನಸಾರೆ ಹೊಗಳಿದ್ದಾರೆ.
ಧನ್ಯವಾದಗಳು ರಕ್ಷಿತ್‌ ಶೆಟ್ಟಿ, ಈ ಚಿತ್ರ ನೋಡಿದೆ. ಇದೊಂದು ಮೇರುಕೃತಿ. ಇಂತಹ ಒಂದು ಗಮನಾರ್ಹ ಸಿನಿಮಾ ಅನುಭವಿಸಲು ಅವಕಾಶ ದೊರಕಿರುವುದರಿಂದ ನಿಜಕ್ಕೂ ತುಂಬಾ ಸಂತೋಷವಾಗಿದೆ.

ನಿಮಗೆಲ್ಲರಿಗೂ ಚಿಯರ್ಸ್‌ ಎಂದು ಟಿಪ್ಪಣಿ ಬರೆದಿರುವ ಕಿಚ್ಚ ಸುದೀಪ್‌ ಈ ಚಿತ್ರದ ವಿಮರ್ಶೆ ಅಥವಾ ತಮ್ಮ ಅಭಿಪ್ರಾಯವನ್ನು ಈ ಮುಂದಿನಂತೆ ನೀಡಿದ್ದಾರೆ.
‘ಅತ್ಯುತ್ತಮ ನಟನೆ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಛಾಯಾಗ್ರಹಣ. ಇಂಥ ಸಿನಿಮಾ ಮಾಡಲು ಧೈರ್ಯ ತೋರಿಸಿದ ನಿಮ್ಮನ್ನು ನಾನು ಬಹಳ ಗೌರವಿಸುತ್ತೇನೆ.
ಹೇಮಂತ್​ ರಾವ್​ ಅವರು ಅದ್ಭುತ ವಿಷನ್​ ಇರುವಂತಹ ನಿರ್ದೇಶಕ. ಕ್ಯಾಪ್ಟನ್​ ಸ್ಥಾನದಲ್ಲಿ ಅವರ ಕೆಲಸ ಪರ್ಫೆಕ್ಟ್​ ಆಗಿದೆ.
ನಿಮ್ಮ ಮತ್ತು ನಿಮ್ಮ ತಂಡದ ಬಗ್ಗೆ ಹೆಮ್ಮೆ ಮೂಡಿದೆ. ಕತ್ತೆ’ ಎಂದು ಸುದೀಪ್​ ಅವರು ಪೋಸ್ಟ್​ ಮಾಡಿದ್ದಾರೆ. ಸಿನಿಮಾ ತೋರಿಸಿದ ರಕ್ಷಿತ್​ ಶೆಟ್ಟಿಗೆ ಸುದೀಪ್​ ಅವರು ಧನ್ಯವಾದ ತಿಳಿಸಿದ್ದಾರೆ.

 

FILM

ಕನ್ನಡದ ಖ್ಯಾತ ನಟ ಕೆ. ಶಿವರಾಮ್ ಗೆ ಹೃದಯಾಘಾತ- ಆಸ್ಪತ್ರೆಗೆ ದಾಖಲು

Published

on

ಬೆಂಗಳೂರು: ಖ್ಯಾತ ನಟ ಕೆ. ಶಿವರಾಮ್ ಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಎಚ್.ಸಿ.ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಹಿತಿ ಪ್ರಕಾರ ಕಾರ್ಡಿಯಕ್ ಅರೆಸ್ಟ್ ಹಾಗೂ ಬ್ರೈನ್ ಡೆಡ್ ಆಗಿದೆ ಎಂದು ತಿಳಿದು ಬಂದಿದೆ. ಶಿವರಾಮ್ ಅವರಿಗೆ 71 ವರ್ಷ ವಯಸ್ಸಾಗಿದೆ.

ಸದ್ಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆ. ಶಿವರಾಮ್ ಅವರು ಐ.ಎ.ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಕನ್ನಡದಲ್ಲೇ ಪರೀಕ್ಷೆ ಬರೆದು ಐಎಎಸ್​ ಪಾಸ್​ ಮಾಡಿದ್ದಾರೆ. ಬಾನಲ್ಲೆ ಮಧುಚಂದ್ರಕ್ಕೆ ವಸಂತಕಾವ್ಯ’ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು. ಬಳಿಕ ರಾಜಕೀಯ ಪ್ರವೇಶ ಮಾಡಿದ್ದರು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೇಗ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

Continue Reading

FILM

ಬಿಗ್ ಬಾಸ್ ನಮ್ರತಾ ಜೊತೆ ಕಿಶನ್ ರೊಮ್ಯಾಂಟಿಕ್ ಡ್ಯಾನ್ಸ್

Published

on

ಕನ್ನಡದ ಬಿಗ್ ಬಾಸ್ 10ರ ಸ್ಪರ್ಧಿಯಾಗಿದ್ದ ನ್ರಮತಾ ಗೌಡ ಕಲರ್ಸ್​ ಕನ್ನಡ ವಾಹಿನಿಯ ತಕಧಿಮಿತ ರಿಯಾಲಿಟಿ ಶೋನಲ್ಲಿದ್ದ ಕಿಶನ್ ಇಬ್ಬರು ಡ್ಯಾನ್ಸ್ ಮಾಡಿರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಲರ್ಸ್​ ಕನ್ನಡ ವಾಹಿನಿಯ ತಕಧಿಮಿತ ರಿಯಾಲಿಟಿ ಶೋನಲ್ಲಿ ಕಿಶನ್ ಹಾಗೂ ನಮ್ರತಾ ಜೋಡಿ. ತಕಧಿಮಿತ ಶೋನಲ್ಲಿ ಶುರುವಾದ ನಮ್ರತಾ ಹಾಗೂ ಕಿಶನ್ ಗೆಳೆತನ ಇಂದಿಗೂ ಹಾಗೇ ಇದೆ. ಈಗಲೂ ಇಬ್ಬರು ಒಟ್ಟಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ಕಿಶನ್ ಒಬ್ಬರು ಪ್ರೋಫೆಷನಲ್ ಡ್ಯಾನ್ಸರ್ ಆಗಿದ್ದಾರೆ. ಅದರಲ್ಲೂ ನಮ್ರತಾ ಕೂಡ ಅದ್ಭುತವಾಗಿ ಡ್ಯಾನ್ಸ್ ಮಾಡ್ತಾರೆ. ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿರು ಕಿಶನ್ ಹಾಗೂ ನಮ್ರತಾ ಇಬ್ಬರ ನೃತ್ಯಕ್ಕೆ ಎಲ್ಲರು ಫಿದಾ ಆಗಿದ್ದಾರೆ.

Continue Reading

DAKSHINA KANNADA

ಕಾಗೆ ರಾಷ್ಟ್ರೀಯ ಪಕ್ಷಿಯಾಗಬೇಕಿತ್ತು, ಹಸು ರಾಷ್ಟ್ರೀಯ ಪ್ರಾಣಿಯಾಗಬೇಕಿತ್ತು- ನಟ ಪ್ರಕಾಶ್ ರಾಜ್

Published

on

ಉಳ್ಳಾಲ: ತೊಕ್ಕೊಟ್ಟಿನಲ್ಲಿ ನಡೆದ ಡಿವೈಎಫ್‌ಐನ 12ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾವೇಶಕ್ಕೆ ಅತಿಥಿಯಾಗಿ ಆಗಮಿಸಿದ ಬಹುಬಾಷಾ ನಟ ಪ್ರಕಾಶ್ ರಾಜ್‌ ಭಾಷಣದ ಉದ್ದಕ್ಕೂ ಪ್ರಧಾನಿ ಮೋದಿಯವರನ್ನು ಏಕವಚನದಲ್ಲೇ ಸಂಭೋದಿಸಿ ಟೀಕೆ ಮಾಡಿದ್ದಾರೆ.

ಅಲ್ಲದೇ  ಬಹುಮತ ಎಲ್ಲ ದೇಶದಲ್ಲಿ ನಡೆಯಲ್ಲ, ಪ್ರಕೃತಿಗೆ ಬಹುಮತ ಸರಿಯಲ್ಲ, ಬಹುಮತನೇ ಆಗಬೇಕಾದ್ರೆ ಕಾಗೆ ರಾಷ್ಟ್ರೀಯ ಪಕ್ಷಿಯಾಗಬೇಕಿತ್ತು. ಹಸು ರಾಷ್ಟ್ರೀಯ ಪ್ರಾಣಿಯಾಗಬೇಕಿತ್ತು ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

Continue Reading

LATEST NEWS

Trending