Connect with us

LATEST NEWS

ಸೌದಿ ರಸ್ತೆ ಅಪಘಾತದಲ್ಲಿ ಮೃತ ಹೊಂದಿದ ನೌಶೀದ್ ಕುಟುಂಬಕ್ಕೆ ಪರಿಹಾರ ಧನ ವಿತರಿಸಿದ ಕೆ.ಸಿ.ಎಫ್

Published

on

ರಿಯಾದ್: 2019ರ ನವೆಂಬರ್‌ನಲ್ಲಿ ಸೌದಿ ಅರೇಬಿಯಾದ ಅಲ್-ಖೋಬಾರ್‌ ನ ದಹ್’ರಾನ್ ಎಂಬಲ್ಲಿ ಕೃಷ್ಣಾಪುರದ ಮುಹಮ್ಮದ್ ನೌಶೀದ್ ರವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು.

ಮರಣ ಹೊಂದಿದ ಮೂರು ದಿನಗಳಲ್ಲಿ ಅದಕ್ಕೆ ಬೇಕಾದ ದಾಖಲೆಗಳನ್ನು ಸರಿಪಡಿಸಿ ಜುಬೈಲ್‌ನಲ್ಲಿ ಅವರ ದಫನ ಮಾಡಲಾಗಿದೆ.

ಈ ಅಫಘಾತದಲ್ಲಿ ಸಿಗುವ ಪರಿಹಾರ ಧನಕ್ಕೆ ಬೇಕಾದ ದಾಖಲೆಗಳು ಹಾಗೂ ಇನ್ನಿತರ ಆಧಾರಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ನೌಶೀದ್ ರವರ ಕುಟುಂಬದವರು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯಾ ಸಾಂತ್ವನ ಇಲಾಖೆಯ ಅಧ್ಯಕ್ಷ ಮುಹಮ್ಮದ್ ಮಲೆಬೆಟ್ಟು ರವರಿಗೆ ವಹಿಸಿಕೊಟ್ಟಿದ್ದರು.

ಅದರಂತೆ ಮುಹಮ್ಮದ್ ಮಲೆಬೆಟ್ಟುರವರ ಕಳೆದ ಎರಡು ವರ್ಷಗಳ ಸತತ ಪ್ರಯತ್ನದ ಫಲವಾಗಿ ನೌಶೀದ್‌ರವರ ಕುಟುಂಬಕ್ಕೆ ಪರಿಹಾರವಾಗಿ 3 ಲಕ್ಷ ಸೌದಿ ಅರೇಬಿಯಾ ರಿಯಾಲ್ (58,56,200 ರೂಪಾಯಿ)ಸಿಕ್ಕಿದೆ.

ಈ ಮೊತ್ತವನ್ನು 2022 ಫೆಬ್ರವರಿ 04 ರಂದು ಕೃಷ್ಣಾಪುರದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಅಲ್ಲಿನ ಅಧ್ಯಕ್ಷ ಮುಮ್ತಾಝ್ ಅಲಿ, ಇಮಾಮ್ ಫಾರೂಕ್ ಸಖಾಫಿ ಉಸ್ತಾದರು ಜಮಾಅತಿನವರ ಸಮ್ಮುಖದಲ್ಲಿ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

ಕರ್ನಾಟಕ ಕಲ್ಚರಲ್ ಫೌಂಡೇಶನ್ ಅನಿವಾಸಿ ಕನ್ನಡಿಗರಿಗೆ ನೆರಳಾಗಿ ವಿದೇಶದಲ್ಲಿ ಕಾರ್ಯಾಚರಿಸುತ್ತಿದೆ.

ಇದರ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಸತತ ಪ್ರಯತ್ನದಿಂದಾಗಿ ಇಂದು ಈ ಪರಿಹಾರ ಧನ ನೌಶೀದ್ ರವರ ಕುಟುಂಬಕ್ಕೆ ಸಿಗುವಂತಾಗಿದೆ ಎಂದು ಹಸ್ತಾಂತರ ಸಮಯದಲ್ಲಿ ಮುಮ್ತಾಝ್ ಅಲಿಯವರು ಹೇಳಿದರು.

ಈ ಪರಿಹಾರ ಧನ ಸಿಗಲು ಎರಡು ವರ್ಷಗಳಿಂದ ಪ್ರsಯತ್ನಿಸಿದ ಸೌದಿ ರಾಷ್ಟ್ರೀಯ ಸಮಿತಿ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಮುಹಮ್ಮದ್ ಮಲೆಬೆಟ್ಟುರವರನ್ನು ದಮ್ಮಾಮ್ ಝೋನ್ ಹಾಗೂ ಸೌದಿ ರಾಷ್ಟ್ರೀಯ ಸಮಿತಿ ನೇತಾರರು ಅಭಿನಂದಿಸಿದರು.

LATEST NEWS

ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರು ಪಲ್ಟಿ; ಯುವತಿ ಸಾವು!

Published

on

ಕುಂದಾಪುರ: ಇನೋವಾ ಕಾರೊಂದು ಮರಕ್ಕೆ ಡಿಕ್ಕಿಯಾಗಿ ಹೊಂಡಕ್ಕೆ ಬಿದ್ದ ಪರಿಣಾಮ ಯುವತಿಯೊಬ್ಬಳು ಸ್ಥಳದಲ್ಲೇ ಸಾವಿಗೀಡಾದ ಘಟನೆ ಕುಂದಾಪುರ ಸಮೀಪದ ಹುಣ್ಸೆಮಕ್ಕಿ ಬಳಿಯ ಗುಡ್ಡೆಯಂಗಡಿಯಲ್ಲಿ ನಡೆದಿದೆ. ಬೆಂಗಳೂರಿನ ಫೋನ್ ಪೇ ಖಾಸಗಿ ಕಂಪೆನಿಯ ಉದ್ಯೋಗಿ 25 ವರ್ಷದ ಕೀರ್ತಿ ಮೃತ ಯುವತಿ. ಘಟನೆಯಲ್ಲಿ ಬೆಂಗಳೂರು ಮೂಲದ ವಿಘ್ನೇಶ್ (28), ಚೇತನ್ (28), ಐಶ್ವರ್ಯಾ (27), ಲತಾ (26) ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಂದೆ ಓದಿ..; ಅಮೇರಿಕಾದಲ್ಲಿ ಕಾರು ಅಪಘಾತ…! ಮೂವರು ಭಾರತೀಯ ಮಹಿಳೆಯರ ಸಾ*ವು…!

ಧರ್ಮಸ್ಥಳದಿಂದ ಮುರುಡೇಶ್ವರಕ್ಕೆ ಹೊರಟಿದ್ದ ಇನೋವಾ ಕಾರು ಕುಂದಾಪುರ ಸಮೀಪದ ಹುಣ್ಸೆಮಕ್ಕಿ ಬಳಿಯ ಗುಡ್ಡೆಯಂಗಡಿಯಲ್ಲಿ ನಿಯಂತ್ರಣ ತಪ್ಪಿ ಮರದ ದಿಮ್ಮಿಗೆ ಡಿಕ್ಕಿ ಹೊಡೆದಿದೆ. ಬಳಿಕ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಸ್ನೇಹಿತರು ಖಾಸಗಿ ಕಂಪೆನಿಯ ಉದ್ಯೋಗಿಗಳಾಗಿದ್ದು, ಎಲ್ಲರೂ ಒಟ್ಟಾಗಿ ಮುರ್ಡೇಶ್ವರ, ಗೋಕರ್ಣಕ್ಕೆ ವೀಕೆಂಡ್ ಪ್ರವಾಸಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

accident

Continue Reading

DAKSHINA KANNADA

ದೊಡ್ಡವರ ಜಗಳದಲ್ಲಿ ಇಹಲೋಕ ತಜ್ಯಿಸಿದ 3 ರ ಕಂದಮ್ಮ…

Published

on

ಮಂಗಳೂರು (ಬೆಳಗಾವಿ): ಅದು ಎರಡು ಕುಟುಂಬಗಳ ನಡುವೆ ನಡೆದಿರೋ ಜಗಳ . ಆದ್ರೆ ಆ ಜಗಳಕ್ಕೆ ಏನೂ ಅರಿಯದ ಮೂರು ವರ್ಷದ ಪುಟ್ಟ ಮಗು ಬಲಿಯಾಗಿದೆ. ಪಾಪಿಯೊಬ್ಬ ಮಗುವಿನ ಎದೆಗೆ ಕಾಲಿಟ್ಟು ಮಗುವಿನ ಉಸಿರು ನಿಲ್ಲಿಸಿದ್ದಾನೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿ ಎಂಬ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ದೊಡ್ಡವರ ಜಗಳದಲ್ಲಿ ಶ್ರೀನಿಧಿ ಕಾಡಪ್ಪ ಕಾಳಾಪಾಟೀಲ್ ಎಂಬ ಮೂರು ವರ್ಷದ ಮಗು ಹತವಾಗಿದೆ. ಜೋತಿಭಾ ತುಕಾರಾಮ ಬಾಬಬರ ಎಂಬಾತ ಮಗುವಿನ ಜೀವಕ್ಕೆ ಕುತ್ತು ತಂದ ಆರೋಪಿಯಾಗಿದ್ದಾನೆ.
ಹಣಕಾಸಿನ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿತ್ತು. ಈ ವೇಳೆ ಜಗಳ ತಾರಕ್ಕೇರಿದಾಗ ಸಿಟ್ಟಿನಲ್ಲಿ ಜೋತಿಬಾ ತುಕಾರಾಮ ಬಾಬಾಬರ ಮಗುವಿನ ಎದೆ ಮೇಲೆ ಕಾಲಿಟ್ಟು ನಿಂತಿದ್ದಾನೆ. ಈ ವೇಳೆ ಮಗುವನ್ನು ಆತನ ಕಾಲಿನ ಅಡಿಯಿಂದ ತೆಗೆಯಲು ಮಗುವಿನ ತಾಯಿ ಯತ್ನಿಸಿದ್ದಾಳೆ . ಆ ವೇಳಗೆ ಇನ್ನಷ್ಟು ಗಟ್ಟಿಯಾಗಿ ಕಾಲಿನಿಂದ ಮಗುವಿನ ಎದೆಗೆ ಕಾಲಿನಿಂದ ಒತ್ತಿದ ಕಾರಣ ಮಗು ಉಸಿರು ನಿಲ್ಲಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

Continue Reading

DAKSHINA KANNADA

ಅಮೇರಿಕಾದಲ್ಲಿ ಕಾರು ಅಪಘಾತ…! ಮೂವರು ಭಾರತೀಯ ಮಹಿಳೆಯರ ಸಾ*ವು…!

Published

on

ನ್ಯೂಯಾರ್ಕ್‌ : ಅಮೇರಿಕಾದಲ್ಲಿ ನಡೆದ ಕಾರು ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮಹಿಳೆಯರು ಇಹಲೋಕ ತ್ಯಜಿಸಿದ್ದಾರೆ. ಕೌಂಟಿಯ ಹೆದ್ದಾರಿಯ ಸೇತುವೆಯೊಂದರ ಮೇಲೆ ವೇಗವಾಗಿ ಕಾರು ಚಲಾಯಿಸಿದ ಕಾರಣ ಈ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಉತ್ತರದ ಕಡೆಗೆ ಕಾರು ಪ್ರಯಾಣಿಸುತ್ತಿದ್ದು, ಎಲ್ಲಾ ಲೇನ್‌ಗಳನ್ನು ದಾಟಿ, ಹಂಪ್‌ ಮೇಲೆ ವೇಗವಾಗಿ ಏರಿತ್ತು. ಈ ಕಾರಣದಿಂದ ಕನಿಷ್ಟ 20 ಅಡಿಗಳಷ್ಟು ಮೇಲಕ್ಕೆ ಹಾರಿ ಸೇತುವೆಯ ಮುಂದೆ ಇದ್ದ ಮರಗಳಿಗೆ ಕಾರು ಅಪ್ಪಳಿಸಿದೆ. ಗುಜಾರಾತ್ ಮೂಲದ ಮೂವರು ಮಹಿಳೆಯರು ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಗುಜರಾತ್‌ನ ಆನಂದ್ ಜಿಲ್ಲೆಯ ರೇಖಾಬೆನ್‌ ಪಟೇಲ್ , ಸಂಗೀತಾಬೆನ್ ಪಟೇಲ್ ಹಾಗೂ ಮನೀಶಾಬೆನ್ ಪಟೇಲ್‌ ಅವರು ಇಹಲೋಕ ತ್ಯಜಿಸಿದವರಾಗಿದ್ದಾರೆ.

 

ಕಾರು ನಿಗದಿಪಡಿಸಿದ ವೇಗದ ಮಿತಿಗಿಂತ ಹೆಚ್ಚು ವೇಗದಲ್ಲಿತ್ತು ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಪಘಾತದ ಪ್ರಮಾಣ ಎಷ್ಟಿತ್ತು ಮತ್ತು ಕಾರು ಎಷ್ಟು ಎತ್ತರಕ್ಕೆ ಹಾರಿತ್ತು ಅನ್ನೋದಿಕ್ಕೆ ಮರದ ಮೇಲಿರುವ ಕಾರಿನ ಅವಶೇಷಗಳು ಸಾಕ್ಷಿ ಎಂದು ಅವರು ಹೇಳಿದ್ದಾರೆ. ಮರದ ಮೇಲೆ ಬಿದ್ದ ಕಾರು ಛಿದ್ರಗೊಂಡು ಕಾರಿನ ಅವಶೇಷಗಳು ಚೆಲ್ಲಾಪಿಲ್ಲಿಯಾಗಿತ್ತು.


ದಕ್ಷಿಣ ಕೆರೊಲಿನಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಕ್ಷಣ ಸ್ಥಳಕ್ಕೆ ರಕ್ಷಣಾ ತಂಡಗಳು, ಪೊಲೀಸರು ಆಗಮಿಸಿದ್ದಾರೆ. ಅಪಘಾತದಲ್ಲಿ ಓರ್ವ ಬದುಕಿ ಉಳಿದಿದ್ದು, ಆತನ ಸ್ಥಿತಿ ಗಂಭೀರವಾಗಿದ್ದು ಈಗಲೇ ಏನೂ ಹೇಳಲು ಆಗದ ಪರಿಸ್ಥಿತಿಯಲ್ಲಿದ್ದಾನೆ. ವಾಹನ ಅಪಘಾತವಾದ ತಕ್ಷಣ ಅದರಲ್ಲಿದ್ದ ತಾಂತ್ರಿಕ ವ್ಯವಸ್ಥೆಯ ಕಾರಣ ತಕ್ಷಣ ಕುಟುಂಬ ಸದಸ್ಯರಿಗೆ ಅಲರ್ಟ್‌ ಮೆಸೆಜ್ ರವಾನೆಯಾಗಿತ್ತು. ಹೀಗಾಗಿ ತಕ್ಷಣ ಕುಟುಂಬಸ್ಥರು ಕೂಡಾ ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ.

Continue Reading

LATEST NEWS

Trending