ಇಂದೋರ್: ಭಾರತ್ ಜೋಡೋ ಯಾತ್ರೆಯಲ್ಲಿ ಮುಗಿಬಿದ್ದ ಜನರ ನಡುವೆ ಸಿಲುಕಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಕೆಳಗೆ ಬಿದ್ದು ಕೈ ಮುರಿದುಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಮಧ್ಯಪ್ರದೇಶದ ಇಂದೋರ್‌ನಲ್ಲಿ ಯಾತ್ರೆ ಸಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಈ ವೇಳೆ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸ್ ಸಿಬ್ಬಂದಿಗಳು ವಿಫಲವಾಗಿದ್ದು, ವೇಣುಗೋಪಾಲ್‍ರನ್ನು ತಳ್ಳಿಕೊಂಡು ಅಭಿಮಾನಿಗಳು ನುಗ್ಗಿದ್ದಾರೆ.
ಕೆಳಕ್ಕೆ ಬಿದ್ದ ವೇಣುಗೋಪಾಲ್ ಮೊಣಕಾಲು ಮತ್ತು ಕೈಗೆ ಕಾಲ್ತುಳಿತದಿಂದ ಗಾಯವಾಗಿದೆ. ಬಳಿಕ ವೈದ್ಯರು ಪರೀಕ್ಷಿಸಿದಾಗ ಕೈ ಮೂಳೆ ಫ್ಯಾಕ್ಚರ್ ಆಗಿರುವ ಬಗ್ಗೆ ತಿಳಿದುಬಂದಿದೆ.
ಕೂಡಲೇ ವೈದ್ಯರ ತಂಡ ನಿಗಾ ವಹಿಸಿದ್ದು, ಚಿಕಿತ್ಸೆ ನೀಡಿದೆ.