ಉಡುಪಿ: ಬಹುಕೋಟಿ ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿ ಗಣೇಶ್ ಶೆಟ್ಟಿ ಮೊಳಹಳ್ಳಿ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಲಾಗಿದೆ.
ಕಟ್ಟೆ ಭೋಜಣ್ಣ
ಕಟ್ಟೆ ಭೋಜಣ್ಣ ಅವರ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಗಣೇಶ್ ಶೆಟ್ಟಿಯನ್ನು ಬಂಧಿಸಿಲಾಗಿತ್ತು. ಮೇ 30 ಕ್ಕೆ ಆರೋಪಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಅದನ್ನು ಜೂನ್ 2 ಕ್ಕೆ ಜಾಮೀನು ಅರ್ಜಿ ಮುಂದೂಡಲಾಗಿತ್ತು.
ಆರೋಪಿ ಗಣೇಶ್ ಶೆಟ್ಟಿ
ಇದೀಗ ಕಟ್ಟೆ ಭೋಜಣ್ಣ ಅವರ ಮರಣೋತ್ತರ ಪರೀಕ್ಷೆ ವರದಿ ಕೈ ಸೇರದ ಹಿನ್ನೆಲೆ ಜಾಮೀನು ಅರ್ಜಿಯ ವಿಚಾರಣೆಯನ್ನು ಜೂನ್ 7 ಕ್ಕೆ ಮತ್ತೆ ಮುಂದೂಡಿದ ನ್ಯಾ. ಅಬ್ದುಲ್ ರಹೀಂ ಹುಸೈನ್ ಶೇಖ್ ಆದೇಶ ಹೊರಡಿಸಿದ್ದಾರೆ.
ಕಟ್ಟೆ ಭೋಜಣ್ಣ ಮೇ 26 ರಂದು ಆರೋಪಿ ಗಣೇಶ್ ಶೆಟ್ಟಿಯ ಸಿಟೌಟ್‌ನಲ್ಲಿ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೈದಿದ್ದರು.