Connect with us

LATEST NEWS

ಉಡುಪಿಯಲ್ಲಿ ಕಾಲಿಗೆ ಮೊಬೈಲ್‌ ಕಟ್ಟಿ ಎಣಿಕೆ ಕೇಂದ್ರಕ್ಕೆ ಒಳನುಗ್ಗಲು ಯತ್ನಿಸಿದ ಯುವಕ: ಅಂಚೆ ಮತ ಎಣಿಕೆ ಪ್ರಾರಂಭ

Published

on

ಉಡುಪಿ: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದ್ದು ಎಣಿಕೆ ಕಾರ್ಯ ಆರಂಭವಾಗಿದೆ. ಇಲ್ಲಿನ ಸೈಂಟ್ ಸಿಸಿಲಿ ಕಾನ್ವೆಂಟ್‌ನಲ್ಲಿ ಮತ ಎಣಿಕೆ ನಡಿತಾ ಆರಂಭವಾಗಿದೆ.

ಅಂಚೆ ಮತದಾನ ಎಣಿಕೆ ನಡೆಯುತ್ತಿದೆ. ಈ ಮಧ್ಯೆ ಎಣಿಕಾ ಕೇಂದ್ರದ ಮೊಬೈಲ್‌ ನಿಷೇಧಿಸಲಾಗಿದೆ. ಈ ಮಧ್ಯೆ ಓರ್ವ ಕೇಸರಿ ಶಾಲುಧಾರಿ ಯುವಕ ಕಾಲಿಗೆ ಫೋನ್‌ ಕಟ್ಟಿಕೊಂಡು ಒಳನುಗ್ಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆತನನ್ನು ದ್ವಾರದಲ್ಲೇ ತಡೆಹಿಡಿದು ವಾಪಸ್ ಕಳುಹಿಸಿದ್ದಾರೆ. ಈತ ಬೈಂದೂರು ವಿಧಾನಸಭಾ ಕ್ಷೇತ್ರದ ಏಜೆಂಟ್ ಎಂದು ಗುರುತಿಸಲಾಗಿದೆ.

LATEST NEWS

ವರ್ತೂರು ಸಂತೋಷ್​​ ತೋಟದಲ್ಲಿ ಮತ್ತೆ ಸೇರಿದ ಬಿಗ್​​ಬಾಸ್​ ಸ್ಪರ್ಧಿಗಳು

Published

on

ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ದೊಡ್ಮನೆಯಿಂದ ಹೊರ ಬಂದ ಕೂಡಲೇ ಸಖತ್​ ಬ್ಯುಸಿಯಾಗಿದ್ದಾರೆ. ಜೊತೆಗೆ ಆ ಬ್ಯುಸಿಯ ನಡುವೆಯೂ ಆಗಾಗ ಒಬ್ಬರಿಗೊಬ್ಬರು ಭೇಟಿಯಾಗುತ್ತಲೇ ಇರುತ್ತಾರೆ.

ಅಲ್ಲದೇ ಪಾರ್ಟಿ, ಫ್ಯಾಮಿಲಿ ಫಂಕ್ಷನ್‌ ಅಂತ ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಸೇರುತ್ತಾರೆ. ಇದೀಗ ಹಳ್ಳಿಕಾರ್​ ಒಡೆಯ ವರ್ತೂರು ಸಂತೋಷ್, ಸಿರಿ, ಅವಿನಾಶ್ ಶೆಟ್ಟಿ ಹಾಗೂ ತನಿಷಾ ಕುಪ್ಪಂಡ ಬಹುದಿನಗಳ ನಂತರ ಭೇಟಿಯಾಗಿದ್ದಾರೆ. ವರ್ತೂರಿನಲ್ಲಿ ಒನ್ ಡೇ ಔಟಿಂಗ್ ಹೋಗಿದ್ದಾರೆ ಈ ನಾಲ್ಕು ಸ್ಪರ್ಧಿಗಳು. ಸದ್ಯ ಮೀಟ್ ಆಗಿರುವ ಫೋಟೋಗಳನ್ನು ನಟಿ ಸಿರಿ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇನ್ನು, ಒನ್ ಡೇ ಔಟಿಂಗ್​ನಲ್ಲಿ ವರ್ತೂರು ಸಂತೋಷ್​ ಅವರ ತೋಟಕ್ಕೆ ಭೇಟಿ ನೀಡಿದ ಬಿಗ್​ಬಾಸ್​ ಸ್ಪರ್ಧಿಗಳು ಪ್ರಾಣಿ-ಪಕ್ಷಿಗಳ ಜೊತೆ ಸಮಯ ಕಳೆದಿದ್ದಾರೆ. ತೋಟದಲ್ಲಿದ್ದ ಹಣ್ಣುಗಳನ್ನು ಸವಿದು ಖುಷಿಪಟ್ಟಿದ್ದಾರೆ. ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

Continue Reading

DAKSHINA KANNADA

ಪುತ್ತೂರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕ!

Published

on

ಪುತ್ತೂರು : ಪುತ್ತೂರಿನ ಬೆಟ್ಟಂಪ್ಪಾಡಿಯಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾ*ವನ್ನಪ್ಪಿದ್ದು, ಈ ಬಗ್ಗೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಮೃ*ತ ಯುವಕನ ತಾಯಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 ಪಕ್ಕದ ಮನೆ ಕದ ತಟ್ಟಿದ ಮಗ; ಸಂಕೋಲೆ ಹಾಕಿ ಎಳೆತಂದ ತಾಯಿ :  

ಬೆಟ್ಟಂಪ್ಪಾಡಿಯ ನಿವಾಸಿ ಚೇತನ್ (33) ಮೃ*ತ ಪಟ್ಟಿರುವ ಯುವಕ. ನಿನ್ನೆ ರಾತ್ರಿ ಕುಡಿದು ಮನೆಗೆ ಬಂದಿದ್ದ ಚೇತನ್ ತಾಯಿ ಜತೆ ಜಗಳವಾಡಿದ್ದ.  ಬಳಿಕ ಪಕ್ಕದ ಯೂಸುಫ್ ಎನ್ನುವವರ ಮನೆ ಬಾಗಿಲು ಬಡಿದಿದ್ದ. ಈ ಬಗ್ಗೆ ಯೂಸುಫ್ ಅವರು ಚೇತನ್ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ಕೂಡಲೇ ಯೂಸುಫ್ ಮನೆಗೆ ಬಂದ ಚೇತನ್ ತಾಯಿ ನಾಯಿಯನ್ನು ಕಟ್ಟುವ ಸಂಕೊಲೆಯನ್ನು ಚೇತನ್ ಸೊಂಟಕ್ಕೆ ಕಟ್ಟಿ ಮನೆಗೆ ಎಳೆದೊಯ್ದಿದ್ದರು. ಇದಕ್ಕೆ ಯೂಸುಫ್ ಸೇರಿದಂತೆ ಸ್ಥಳೀಯ ನಿವಾಸಿಗಳು ಸಾಥ್‌ ನೀಡಿದ್ದರು. ಎಳೆದೊಯ್ಯುವ ಸಂದರ್ಭದಲ್ಲಿ ಚೇತನ್‌ನ ಕುತ್ತಿಗೆಗೆ ಸಂಕೋಲೆ ಸುತ್ತಿಕೊಂಡಿದೆ ಎನ್ನಲಾಗಿದೆ.  ಇದರಿಂದಾಗಿ ಚೇತನ್‌ ಸಾ*ವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ ಚೇತನ್ ನೇಣು ಬಿಗಿದು ಸಾ*ವನ್ನಪ್ಪಿದ್ದಾನೆ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪ್ರಕರಣ; ವೀಡಿಯೋ, ಫೋಟೋ ಅಪ್ಲೋಡ್ ಮಾಡಿದ್ದಾತ ಅರೆಸ್ಟ್

ಮೃ*ತ ದೇಹ ನೋಡಿ ಅನುಮಾನಗೊಂಡ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕೊಂಡಿದ್ದರು. ಘಟನೆಗೆ ಸಂಬಂಧಿಸಿ ತಾಯಿ ಉಮಾವತಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿರುವ ಪೋಲೀಸರು ಮೃ*ತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿಗೆ ರವಾನಿಸಿದ್ದಾರೆ. ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ.

Continue Reading

DAKSHINA KANNADA

ಹೊಸ ಮನೆಗೆ ಸ್ಥಳಾಂತರಿಸುವಾಗ ಈ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ

Published

on

ಮಂಗಳೂರು: ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಂತ ಮನೆಯನ್ನು ಹೊಂದಿರಬೇಕು ಎನ್ನುವ ಕನಸು, ಆಸೆ ಇದ್ದೇ ಇರುತ್ತದೆ. ಮನೆ ಕಟ್ಟುವುದು ಆಗಲಿ ಅಥವಾ ಕೊಂಡುಕೊಳ್ಳುವುದಾಗಲಿ ಅದೇನು ಸುಲಭದ ಮಾತಲ್ಲ. ಬ್ಯಾಂಕ್‌ನಲ್ಲಿ, ಸ್ನೇಹಿತರಲ್ಲಿ, ಕುಟುಂಬದವರಲ್ಲಿ ಸಾಲ ಮಾಡಿ ಹೇಗೊ ಮನೆ ಖರೀದಿಸುತ್ತೇವೆ. ಆದರೆ ಕನಸಿನ ಮನೆ ವಾಸ್ತವಕ್ಕೆ ಬಂದಾಗ ಅದರಲ್ಲಿ ಆಗುವ ಖುಷಿಯೇ ಬೇರೆ.

ಮನೆ ಬದಲು ಮಾಡುವಾಗ ಈ ವಿಷಯ ನೆನಪಿಡಿ

ತಮ್ಮ ಹೊಸ ಮನೆಗೆ ಹೋಗುವ ಖುಷಿಯಲ್ಲಿ ಜನರು ಸಾಮಾನ್ಯವಾಗಿ ಕೆಲವು ವಿಷಯಗಳನ್ನು ಮರೆತು ಬಿಡುತ್ತಾರೆ. ಇದರಿಂದಾಗಿ ಅವರಿಗೆ ನಂತರದ ದಿನಗಳಲ್ಲಿ ಸಮಸ್ಯೆ ಆಗಬಹುದು. ನೀವು ಮನೆ ಬದಲು ಮಾಡುವಾಗ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ.

ಮನೆಯ ಪ್ರತಿಯೊಂದು ಮೂಲೆಯನ್ನು ಪರಿಶೀಲಿಸಿ

ನೀವು ಹೊಸ ಮನೆಗೆ ಸ್ಥಳಾಂತರಗೊಳ್ಳುತ್ತಿದ್ದರೆ ಮೊದಲು ನೀವು ದಿನ ಬಳಕೆಯ ವಿಷಯಗಳತ್ತ ಗಮನ ಕೊಡಬೇಕು. ಆದುದರಿಂದ ನಿಮ್ಮ ಮನೆಯ ಪ್ರತಿಯೊಂದು ನಳ್ಳಿಯಲ್ಲಿ ನೀರು ಬರುತ್ತಿದ್ದೇಯೋ, ವಾಶ್ ರೂಂ ಅನ್ನು ಚೆನ್ನಾಗಿ ಪರಿಶೀಲಿಸಿ, ಮನೆಯ ಫ್ಯಾನ್, ಲೈಟ್ ಸರಿಯಾಗಿ ಇದೆಯೋ ಎಂದು ಗಮನಿಸಿ. ಇದರಿಂದ ಹೊಸ ಮನೆಗೆ ಬಂದ ತಕ್ಷಣ ಯಾವೂದೇ ಸಮಸ್ಯೆ ಎದುರಾಗುವುದಿಲ್ಲ.

ಶುಚಿಗೊಳಿಸುವಿಕೆಯನ್ನು ಮುಂಚಿತವಾಗಿ ಮಾಡಿ

ಹೊಸ ಮನೆಗೆ ಸ್ಥಳಾಂತರಗೊಳ್ಳುವ ಮೊದಲು ಒಮ್ಮೆ ಸ್ವಚ್ಛಗೊಳಿಸಬೇಕು. ಏಕೆಂದರೆ ವಸ್ತುಗಳನ್ನು ಸ್ಥಳಾಂತರಿಸಿದ ನಂತರ ನಿಮಗೆ ಸ್ವಚ್ಛಗೊಳಿಸಲು ಕಷ್ಟವಾಗಬಹುದು. ಮನೆಯನ್ನು ಬದಲಾಯಿಸಿದ ನಂತರವೂ ಕೊಳಕು ಕಾಣುತ್ತದೆ. ಹೀಗಾಗಿ ಹೊಸ ಮನೆಗೆ ಬಂದ ನಂತರ ಮೊದಲ ದಿನದಿಂದಲೇ ಮನೆಯನ್ನು ಶುಚಿಯಾಗಿಡಿ.

ಪ್ಯಾಕಿಂಗ್ ವಿಧಾನ

ಹೊಸ ಮನೆಗೆ ಬದಲಾಯಿಸುವ ಮೊದಲು ಹಳೆಯ ವಸ್ತುಗಳನ್ನು ಪ್ಯಾಕಿಂಗ್ ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಆದ್ಧರಿಂದ ಸರಕುಗಳನ್ನು ಪ್ಯಾಕ್ ಮಾಡುವಾಗ ಪೆಟ್ಟಿಗೆಯಲ್ಲಿ ಹೆಸರನ್ನು ಬರೆಯಿರಿ. ಇದರಿಂದಾಗಿ ಬಾಕ್ಸ್ ತೆರೆಯುವಾಗ ಯಾವೂದೇ ಗೊಂದಲ ಉಂಟಾಗುವುದಿಲ್ಲ.

ಪೀಠೋಪಕರಣಗಳ ಬಗ್ಗೆಯೂ ಕಾಳಜಿ ವಹಿಸಿ​

ಸ್ಥಳಾಂತರಗೊಳ್ಳುವ ಮೊದಲು, ಮನೆಯ ಪೀಠೋಪಕರಣಗಳು ನಿಮ್ಮ ಅಗತ್ಯಗಳಿಗೆ ಸರಿಹೊಂದುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ನೀವು ಪರಿಶೀಲಿಸಬೇಕು. ನಿಮಗೆ ಸರಿಹೊಂದುವ ಸ್ಥಳದಲ್ಲಿ ಹಾಗೂ ಕೆಲವೊಂದು ವಸ್ತುಗಳನ್ನು ವಾಸ್ತು ಪ್ರಕಾರವೇ ಇಡಬೇಕಾಗುತ್ತದೆ. ಆದ್ದರಿಂದ ಅದರ ಬಗ್ಗೆ ಕಾಳಜಿ ವಹಿಸಿ.

Continue Reading

LATEST NEWS

Trending