Connect with us

    LATEST NEWS

    6ನೇ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌: ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರ ಗೌರವಧನ ಹೆಚ್ಚಳ

    Published

    on

    ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣಾ ಕಾವು ತಾರಕಕ್ಕೇರಿದೆ. ಕಾಂಗ್ರೆಸ್ ಪ್ರಚಾರದ ಮಧ್ಯೆ ಮಧ್ಯೆ​​​ ಗ್ಯಾರಂಟಿ ಮೇಲೆ ಗ್ಯಾರಂಟಿ ಘೋಷಿಸುತ್ತಿದೆ. ಈಗಾಗಲೇ ಐದು ಗ್ಯಾರಂಟಿ ಘೋಷಣೆ ಮಾಡಿರುವ ಕಾಂಗ್ರೆಸ್ ಇದೀಗ 6ನೇ ಗ್ಯಾರಂಟಿ ಬಿಡುಗಡೆ ಮಾಡಿದೆ.

    ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ರಾಹುಲ್‌ ಗಾಂಧಿ 5ನೇ ಗ್ಯಾರಂಟಿ ಘೋಷಿಸಿದ್ದರು. ಇದೀಗ ಪ್ರಿಯಾಂಕ ಗಾಂಧಿ ಬೆಳಗಾವಿಯಲ್ಲಿ ಆರನೇ ಗ್ಯಾರಂಟಿ ಘೋಷಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಿನ್ನೆ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಿಯಾಂಗಾ ಗಾಂಧಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಲಿ 11,500ರೂ.ಗಳಿಂದ 15,000 ಸಾವಿರ ರೂ., ಸಹಾಯಕಿಯರಿಗೆ ಹಾಲಿ 7,500 ರೂ.ದಿಂದ 10,000 ಸಾವಿರ ರೂ., ಆಶಾ ಕಾರ್ಯಕರ್ತೆಯರಿಗೆ ಈಗ ಇರುವ 5,000 ರೂ.ಗಳಿಂದ 8,000 ರೂ. ಹಾಗೂ ಬಿಸಿಯೂಟ ಅಡುಗೆ ಕಾರ್ಯಕರ್ತೆಯರಿಗೆ ಹಾಲಿ 3,700 ರೂ.ದಿಂದ 5,000 ರೂ.ಗಳಿಗೆ ಗೌರವಧನ ಪರಿಷ್ಕರಣೆ ಮಾಡುವುದಾಗಿ ಘೋಷಿಸಿದರು.

    ಪ್ರತಿ ಮನೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್, ಪದವೀಧರರಿಗೆ ಮಾಸಿಕ 3 ಸಾವಿರ ರೂ, ನಿರುದ್ಯೋಗ ಭತ್ಯೆ ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ. ಸಹಾಯಧನ, ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇರಿದಂತೆ ಕಾಂಗ್ರೆಸ್ ಈಗಾಗಲೇ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಇದೀಗ ಆರನೇ ಗ್ಯಾರಂಟಿ ಘೋಷಿಸಿದ್ದಾರೆ.

     

    Baindooru

    ಬಾಗಲಕೋಟೆ ಹೇರ್​ ಡ್ರೈಯರ್​​ ಸ್ಫೋಟಕ್ಕೆ ಬಿಗ್​ ಟ್ವಿಸ್ಟ್​: ಪ್ರಕರಣದ ಹಿಂದಿದೆ ಪ್ರೇಮ ಪುರಾಣ

    Published

    on

    ಬಾಗಲಕೋಟೆ: ಪಾರ್ಸೆಲ್ ಮೂಲಕ ತರಿಸಲಾಗಿದ್ದ ಹೇರ್ ಡ್ರೈಯರ್ ಸ್ಫೋಟಗೊಂಡು ಮಹಿಳೆಯ ಎರಡು ಕೈಗಳು ಛಿದ್ರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೆರಡು ಟ್ವಿಸ್ಟ್‌ಗಳು ಲಭ್ಯವಾಗಿದ್ದು, ಪೊಲೀಸ್ ತನಿಖೆಯಲ್ಲಿ ಅಸಲಿ ಸತ್ಯ ಹೊರಬಿದ್ದಿದೆ.

    ಬಾಗಲಕೋಟೆಯಲ್ಲಿ ಸ್ನೇಹಿತೆಯ ಹೆಸರಿಗೆ ಬಂದಿದ್ದ ಪಾರ್ಸಲ್ ಬಾಕ್ಸ್‌ನಲ್ಲಿದ್ದ ಹೇರ್ ಡ್ರೈಯರ್ ತೆರದು ಆನ್ ಮಾಡಿದ್ದ ಮಹಿಳೆ ಬಸವರಾಜೇಶ್ವರಿ ಯರನಾಳ (35) ಅವರ ಕೈಗಳು ತುಂಡಾಗಿದ್ದವು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಎರಡೆರಡು ಟ್ವಿಸ್ಟ್ ಲಭ್ಯವಾಗಿದ್ದು, ಅನೈತಿಕ ಸಂಬಂಧವೇ ಮುಖ್ಯ ಕಾರಣ ಎಂದು ತಿಳಿದು ಬಂದಿದೆ.

    ಮೃತ ಯೋಧ ಪಾಪಣ್ಣ ಅವರ ಪತ್ನಿ ಬಸವರಾಜೇಶ್ವರಿ ಹಾಗೂ ಸಿದ್ಧಪ್ಪ ಶೀಲವಂತರ ಮಧ್ಯೆ ಪ್ರೀತಿ ಇತ್ತು. ಇದಕ್ಕೆ ಬಸವರಾಜೇಶ್ವರಿ ಸ್ನೇಹಿತೆ ಶಶಿಕಲಾ ಅಡ್ಡಿಯಾಗಿದ್ದಳು. ಇದು ಸರಿಯಲ್ಲ ಎಂದು ಹೇಳಿದ್ದಳು. ನಂತರ ಬಸವರಾಜೇಶ್ವರಿ ಸಿದ್ದಪ್ಪ ಜೊತೆ ಮಾತಾಡೋದನ್ನು ಬಿಟ್ಟಿದ್ದಳು. ಇದಕ್ಕೆಲ್ಲ ಕಾರಣ ಶಶಿಕಲಾ, ಆಕೆಯನ್ನೇ ಮುಗಿಸೋಣ ಎಂದ ಸಿದ್ದಪ್ಪ ಹೇರ್ ಡ್ರೈಯರ್‌ನಲ್ಲಿ ಗ್ರಾನೈಟ್ ಡೆಟೊನೇಟರ್ ಇಟ್ಟು ಶಶಿಕಲಾ ಅವರಿಗೆ ಕೊರಿಯ‌ರ್ ಮಾಡಿದ್ದ. ಆದರೆ ಅದನ್ನು ರಿಸೀವ್ ಮಾಡಿದ ಬಸವರಾಜೇಶ್ವರಿಯ ಕೈಗಳು ಛಿದ್ರವಾಗಿದೆ.

    ಗ್ರಾನೈಟ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಪ್ಪ ಡೆಟೋನೇಟರ್ ಬಗ್ಗೆ ಮಾಹಿತಿ ಪಡೆದಿದ್ದ. ನವೆಂಬರ್ 10 ರಂದು 500 ರೂ. ಕೊಟ್ಟು ಹೇರ್ ಡ್ರೈಯರ್ ಖರೀದಿಸಿದ್ದ. ಅದರಲ್ಲಿ ಡೆಟೊನೇಟರ್ ಅಳವಡಿಸಿ ನ.13 ರಂದು ಬಾಗಲಕೋಟೆ ಡಿಟಿಡಿಸಿಯಿಂದ ಇಳಕಲ್‌ಗೆ ಕೊರಿಯರ್ ಮಾಡಿದ್ದ. ಕೊರಿಯರ್‌ಗೆ ಶಶಿಕಲಾ ಹಾಗೂ ಆಕೆಯ ನಂಬರ್ ಹಾಕಿ ಕಳಿಸಿದ್ದ. ಕವರ್ ಮೇಲೆ ವಿಶಾಖಪಟ್ಟಣ ಎಂದು ಬರೆದಿದ್ದ. ಆದರೆ, ಸಿದ್ದಪ್ಪನ ಲೆಕ್ಕಾಚಾರವೆಲ್ಲವೂ ಉಲ್ಟಾ ಆಗಿದ್ದು, ಪ್ರೇಯಸಿಯ ಕೈ ಛಿದ್ರವಾಗಿದೆ. ಪ್ರಕರಣದ ಗಂಭೀರತೆ ಅರಿತ ಇಳಕಲ್ ನಗರ ಠಾಣೆ ಪೊಲೀಸರು ಎರಡೇ ದಿನದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

    Continue Reading

    Baindooru

    ಪತಿ ಮೇಲೆ ಅನುಮಾನ; ಇಬ್ಬರು ಮಕ್ಕಳನ್ನು ಕೊಂ*ದ ಪಾಪಿ ತಾಯಿ!

    Published

    on

    ಮಂಗಳೂರು/ಬೆಂಗಳೂರು : ರಾಜ್ಯವೇ ಬೆಚ್ಚಿ ಬೀಳುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  ಕ್ರೂ*ರಿ ತಾಯಿಯೊಬ್ಬಳು ತನ್ನ ಪುಟ್ಟ ಕಂದಮ್ಮಗಳನ್ನು ಕೊಂ*ದಿರುವ ಅಮಾನವೀಯ ಘಟನೆ ನಡೆದಿದೆ. ಅಲ್ಲದೇ ಬಳಿಕ ಆಕೆ ಆತ್ಮಹ*ತ್ಯೆಗೂ ಯತ್ನಿಸಿದ್ದಾಳೆ .

    ಎಲ್ಲವೂ ಚೆನ್ನಾಗಿತ್ತು…ಅನುಮಾನ ಶುರುವಾಯ್ತು :

    ಆ ಕುಟುಂಬ ಕಳೆದ ತಿಂಗಳಷ್ಟೇ ಜಾರ್ಖಂಡ್ ನಿಂದ ಬಂದು ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ವಾಸವಾಗಿತ್ತು.  ಪತಿ ಸುನೀಲ್ ಸಾಹೋ, ಪತ್ನಿ ಮಮತಾ ಸಾಹೋ, ಮಕ್ಕಳಾದ ಶಂಭು ಸಾಹೋ, ಶಿಯಾ ಸಾಹೋ…ಪುಟ್ಟ ಸಂಸಾರ…ಸಣ್ಣದೊಂದು ಬಾಡಿಗೆ ಮನೆಯಲ್ಲಿ ವಾಸ…ಆಟೋ ಚಾಲಕನಾಗಿ ದುಡಿಯುತ್ತಿದ್ದ ಸುನೀಲ್ ಸಾಹೋ..ಹೀಗೆ ಸಂಸಾರ ಸಾಗುತ್ತಿತ್ತು. ಎಲ್ಲವೂ ಸರಿಯಾಗಿತ್ತು. ಅದ್ಯಾವಾಗ ಗಂಡನ ಬಗ್ಗೆ ಅ*ನೈತಿಕ ಸಂಬಂಧದ ಅನುಮಾನ ಹುಟ್ಟಿಕೊಂತೋ ಎಲ್ಲವೂ ಎಕ್ಕುಟ್ಹೋಗಿತ್ತು. ಪತಿ ಬೇರೊಂದು ಯುವತಿಯೊಂದಿಗೆ ಮಾತಾಡುತ್ತಿರುವುದನ್ನು ಮಮತಾ ಕೇಳಿಸಿಕೊಂಡಿದ್ದಳಂತೆ. ಇದೇ ದಂಪತಿ ನಡುವೆ ನಿತ್ಯ ಜಗಳಕ್ಕೆ ಬುನಾದಿ ಹಾಕಿತ್ತಂತೆ. ನಿನ್ನೆಯೂ(ನ.21) ಜಗಳ ಮುಂದುವರಿದಾಗ ಸುನೀಲ್ ಆಟೋ ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ.

    ಗಂಡ ಹೊರಹೋದ ಮೇಲೆ ಬಾಗಿಲು ಹಾಕಿ, ಇತ್ತ ಮಕ್ಕಳಿಬ್ಬರನ್ನೂ ಕತ್ತು ಹಿಸುಕಿ ಮಮತಾ ಕೊಂ*ದಿದ್ದಾಳೆ. ಬಳಿಕ ತಾನೂ ಚಾ*ಕುವಿನಿಂದ ಕತ್ತು ಕೊ*ಯ್ದುಕೊಂಡಿದ್ದಾಳೆ. ಎಲ್ಲ ಆದ ಮೇಲೆ ತಪ್ಪಿನ ಅರಿವಾಗಿ ಪತಿಗೆ ಸೆಲ್ಫಿ ಫೋಟೋ ಕಳುಹಿಸಿದ್ದಾಳೆ. ಅಷ್ಟೇ ಅಲ್ಲ,  ‘ಗಲತ್ ಹೋಗಯಾ…ಮಾಫ್ ಕರೋ’ ಅಂತ ಮೆಸೇಜ್ ಬೇರೆ ಹಾಕಿದ್ದಾಳೆ.

    ಇದನ್ನೂ ಓದಿ : ತಮಾಷೆಗಾಗಿ ಕ*ಪಾಳಮೋಕ್ಷ; ಸೋದರ ಮಾವನಿಂದ 3 ವರ್ಷದ ಮಗುವಿನ ಜೀ*ವಾಂತ್ಯ

    ಮೆಸೇಜ್ ನೋಡಿದ ತಕ್ಷಣ ಮನೆಯತ್ತ ದೌಡಾಯಿಸಿದ ಪತಿ ಬಾಗಿಲು ಒಡೆದು ಒಳ ಹೋಗಿ ಹೆಂಡತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಸುಬ್ರಹ್ಮಣ್ಯ ಠಾಣೆಗೆ ಮಾಹಿತಿ ನೀಡಿದ್ದಾನೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಮಮತಾ ಸಾಹೋ ಪ್ರಾ*ಣಾ*ಪಾಯದಿಂದ ಪಾರಾಗಿದ್ದಾಳೆ. ಆದರೆ, ಏನೂ ಅರಿಯದ ಕಂದಮ್ಮಗಳು ಪತಿ – ಪತ್ನಿ ಜಗಳಕ್ಕೆ ಬ*ಲಿಯಾಗಿವೆ.

    Continue Reading

    LATEST NEWS

    ನೀರಸ ಪ್ರದರ್ಶನ ಮುಂದುವರಿಸಿದ ಭಾರತ: ವಿವದಾತ್ಮಕ ತೀರ್ಪಿಗೆ ರಾಹುಲ್ ಬಲಿ !

    Published

    on

    ಮಂಗಳೂರು/ಆಸ್ಟ್ರೇಲಿಯಾ: ಪರ್ತ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ನಲ್ಲಿ ಪ್ರವಾಸಿ ಭಾರತ ತಂಡ ತನ್ನ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದೆ.


    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಕೆ ಎಲ್ ರಾಹುಲ್, ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ ಸ್ವಲ್ಪ ಹೊತ್ತು ಕ್ರೀಸ್ ನಲ್ಲಿ ನಿಂತಿದ್ದು ಬಿಟ್ಟರೆ, ಉಳಿದವರಿಂದ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ನೀಡಿದ್ದ ಅದೇ ನೀರಸ ಪ್ರದರ್ಶನ ಮುಂದುವರಿಯಿತು.
    ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಜೊತೆಯಾಟ ಮುಂದುವರಿಸಲು ಸಾಧ್ಯವಾಗಲಿಲ್ಲ. 5 ರನ್ ಅಷ್ಟೇ ಜೊತೆಯಾಟವಾಡಿದ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್ ರಾಹುಲ್ ಜೋಡಿ, ಜೈಸ್ವಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸುವುದರ ಮೂಲಕ ಆರಂಭಿಕ ನಿರಾಸೆ ಮೂಡಿಸಿದರು. ನಂತರ ಬಂದ ದೇವದತ್ ಪಡಿಕ್ಕಲ್, ಜೋಶ್ ಹೇಜಲ್ ವುಡ್ ಮಾರಕ ದಾಳಿಗೆ ಖಾತೆ ತೆರೆಯಲು ಕೂಡ ಸಾಧ್ಯವಾಗದೇ ಪೆವಿಲಿಯನ್ ಗೆ ಮರಳಿದರು.

    ಇದನ್ನೂ ಓದಿ:ನ್ಯೂ ಇಯರ್ ನಶೆಗೆ ಸಿಸಿಬಿ ಬ್ರೇಕ್‌..! 6 ಕೋಟಿ ಮೌಲ್ಯದ ಡ್ರ*ಗ್ಸ್‌ ಜಪ್ತಿ..!
    ಅಪಾರ ನಿರೀಕ್ಷೆಗಳ ಸಾಗರವೇ ಹೊತ್ತು ಬ್ಯಾಟಿಂಗ್ ಗೆ ಇಳಿದಿದ್ದ ವಿರಾಟ್ ಕೊಹ್ಲಿ ಮತ್ತೆ ನಿರಾಸೆ ಮೂಡಿಸಿದ್ದಾರೆ, ಕೇವಲ 5 ರನ್ ಗಳಸಿ ಔಟಾದರು. ನಂತರ ಬಂದ ಪಂತ್ ಆಟ ಲಯಕ್ಕೆ ತಂದರಾದರೂ ಇವರಿಗೆ ಯಾರೂ ಕೂಡ ಜೋಡಿಯಾಗಿ ನಿಲ್ಲಲೇ ಇಲ್ಲ. ಧ್ರುವ್ ಜುರೆಲ್ 11 ರನ್ ಗಳಿಗೆ ಔಟಾದರೆ, ವಾಷಿಂಗ್ಟನ್ ಸುಂದರ್ ಕೂಡ ನಾಲ್ಕು ರನ್ ಗೆ ಸುಸ್ತಾದರು. ಆದರೆ 7 ನೇ ವಿಕೆಟ್ ಗೆ ಪಂತ್‌ ಮತ್ತು ನಿತೀಶ್ 48 ರನ್ ಗಳ ಜೊತೆಯಾಟ ನೀಡಿದರು.
    ನಂತರ ಬಂದ ಹರ್ಷಿತ್ ರಾಣಾ 7 ರನ್ ಗಳಿಸಿ ಔಟಾದರು. ಇನ್ನೂ ಬುಮ್ರಾ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಭಾರತದ ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರಿಯಿತು.

    ಅಂಪೈರ್ ತೀರ್ಪು ವಿರುದ್ದ ರಾಹುಲ್ ಅಸಮಾಧಾನ:

    ಮಿಚೆಲ್ ಸ್ಟಾರ್ಕ್ ಎಸೆತವನ್ನು ರಾಹುಲ್ ಹೊಡೆಯಲು ಮುಂದಾದಾಗ, ಅದು ರಾಹುಲ್ ಅವರ ಬ್ಯಾಟ್ ನ ಸಮೀಪ ಹಾದು ಹೋಗಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಕ್ಯಾಚ್ ಹಿಡಿದರು. ತಕ್ಷಣವೇ ಫೀಲ್ಡ್ ಅಂಪೈರ್ ಬಳಿ ಮನವಿ ಮಾಡಿದರು. ನಂತರ ಆಸೀಸ್ ತಂಡ ಥರ್ಡ್ ಅಂಪೈರ್ ಮೊರೆ ಹೋದರು. ಇದನ್ನು ಪುರಸ್ಕರಿಸಿದ ಮೂರನೇ ಅಂಪೈರ್ ರಾಹುಲ್ ಔಟ್ ಎಂದು ಘೋಷಿಸಿದರು.
    ಸ್ಟಾರ್ಕ್ ಎಸೆದ ಚೆಂಡು ರಾಹುಲ್ ಬ್ಯಾಟ್ ತಾಗಿದೆಯೇ ಅಥವಾ ಪ್ಯಾಡ್ ಗೆ ತಾಗಿದೆಯೇ ಎಂಬುದು ಸ್ಪಷ್ಟವಾಗಿರಲಿಲ್ಲ. ರೀಪ್ಲೇಯಲ್ಲಿ ವಿವಿಧ ಆಯಾಮಗಳಿಂದ ಪರಿಶೀಲಿಸಿದ ನಂತರ, ಸ್ನಿಕ್ಕೋಮೀಟರ್ ಏರಿಳಿತವನ್ನು ಆಧರಿಸಿ ರಾಹುಲ್ ಔಟ್ ಎಂದು ತೀರ್ಪು ನೀಡಲಾಯಿತು. ಇದರಿಂದ ರಾಹುಲ್ ಅಸಮಾಧಾನದಿಂದಲೇ ಹೊರ ನಡೆದರು.

    Continue Reading

    LATEST NEWS

    Trending