Connect with us

    LATEST NEWS

    ಮಾಜಿ ಮುಖ್ಯಮಂತ್ರಿ ಎಸ್​ಎಮ್​ ಕೃಷ್ಣ ಮಣಿಪಾಲ್​ ಆಸ್ಪತ್ರೆಗೆ ದಾಖಲು

    Published

    on

    ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್​​ಎಮ್​ ಕೃಷ್ಣ ವಯೋಸಹಜ ಅನಾರೋಗ್ಯದಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು (ಅ.19) ಮಣಿಪಾಲ್ ಆಸ್ಪತ್ರೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ಎಸ್​ಎಂ ಕೃಷ್ಣ ಅವರ ಆರೋಗ್ಯ ವಿಚಾರಿಸಿದರು.

    92 ವರ್ಷದ ಎಸ್​ಎಮ್​​ ಕೃಷ್ಣ ಅವರಿಗೆ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಾ. ಸತ್ಯನಾರಾಯಣ ಹಾಗೂ ಸನಿಲ್​ ಕಾರಂತ್​ ನೇತೃತ್ವದಲ್ಲಿ ಮಾಜಿ ವಿದೇಶಾಂಗ ಸಚಿವ ಎಸ್​ಎಂ ಕೃಷ್ಣ ಅವರಿಗೆ ಚಿಕಿತ್ಸೆ ಮುಂದುವರೆದಿದೆ.

    ಹಿರಿಯ ರಾಜಕಾರಣಿ ಎಸ್ಎಮ್​ ಕೃಷ್ಣ ಅವರು​ ಈ ಹಿಂದೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಮಣಿಪಾಲ್​ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    DAKSHINA KANNADA

    ವಿದ್ಯುತ್ ತಂತಿಯೊಂದಿಗೆ ಸಾ*ಹಸ : ಸಾ*ವಿಗೀಡಾದ ವ್ಯಕ್ತಿ

    Published

    on

    ಬೆಳ್ತಂಗಡಿ : ನಾರವಿ ಗ್ರಾಮದ ನಜೋಡಿ ಎಂಬಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ, ವ್ಯಕ್ತಿಯೋರ್ವರು ಮೃ*ತಪಟ್ಟ ಘಟನೆ ಅ.19 ರಂದು ನಡೆದಿದೆ.


    ಮೃ*ತಪಟ್ಟ ವ್ಯಕ್ತಿ ಮೋಂಟ ಮಲೆಕುಡಿಯ (76) ಎಂದು ಗುರುತಿಸಲಾಗಿದೆ.

    ಮನೆ ಸಮೀಪವಿರುವ ಎಲ್‌.ಟಿ ವಿದ್ಯುತ್ ಲೈನ್‌ನ ಮೇಲೆ ಬಿದ್ದ ತೆಂಗಿನ ಗರಿಯನ್ನು ದೋಂಟಿಯ ಮೂಲಕ ತೆಗೆಯಲು ಹೋದ ಸಂದರ್ಭ ಲೈನ್ ಶಾರ್ಟ್ ಆಗಿ ತಂತಿ ತುಂಡಾಗಿ ನೆಲಕ್ಕೆ ಬಿದ್ದು ಅದನ್ನು ಬೇರ್ಪಡಿಸಲು ಹೋದ ಸಂದರ್ಭದಲ್ಲಿ ವಿದ್ಯುತ್ ತಗಲಿದೆ ಎಂದು ಶಂಕಿಸಲಾಗಿದೆ.

     

     

    ಇದನ್ನೂ ಓದಿ: ಸುಳ್ಯ: ಶಂಕಿತ ಇಲಿ ಜ್ವರಕ್ಕೆ ಯುವಕ ಮೃತ್ಯು

     

    ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    ಕಾರಿನಲ್ಲಿ ಪತ್ತೆಯಾದ 2.73 ಕೋಟಿ ರೂ..!

    Published

    on

    ಮಂಗಳೂರು/ಬೆಳಗಾವಿ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಮೂಲಕ ಗೂಡ್ಸ್ ವಾಹನ ಮಹಾರಾಷ್ಟ್ರದಿಂದ ಕೇರಳಕ್ಕೆ ಹೋಗುತ್ತಿದ್ದ ಕೋಟ್ಯಾಂತರ ಹಣ ಜಪ್ತಿ ಮಾಡಲಾಗಿದೆ. ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸುತ್ತಿದ್ದಾರೆ.

     

    ಬೆಳಗಾವಿ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ವೇಳೆ ಅಕ್ರಮವಾಗಿ ಸಾಗಿಸುತ್ತಿದ್ದ 2.73 ಕೋಟಿ ರು. ಪತ್ತೆಯಾಗಿದೆ.

    ಗೂಡ್ಸ್ ವಾಹನದಲ್ಲಿ ಮಾರ್ಪಾಡು ಮಾಡಿ ಹಣ ಸಾಗಾಟ ಮಾಡುತ್ತಿದ್ದ ಸಾಂಗ್ಲಿ ಮೂಲದ ಸಚಿನ್ ಮೆನಕುದಳೆ ಮತ್ತು ಮಾರುತಿ ಮಾರಗುಡೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

     

    ಇದನ್ನೂ ಓದಿ : ಬೆಳ್ತಂಗಡಿ:‌ ವೈನ್ ಶಾಪ್‌ ನ ಬೀಗ ಒಡೆದು ನಗದು, ಮದ್ಯ ಕಳ್ಳತನ

     

    ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಣದ ಮೂಲದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

    Continue Reading

    LATEST NEWS

    ಊಟದ ನಂತರ ಸಣ್ಣ ನಿದ್ದೆ ಮಾಡುವುದು ಒಳ್ಳೆಯದೇ?

    Published

    on

    ಮಂಗಳೂರು: ಸಾಮಾನ್ಯವಾಗಿ ಸಾಕಷ್ಟು ಜನ ಮಧ್ಯಾಹ್ನದ ಊಟದ ನಂತರ ಮಲಗುವ ಅಥವಾ ಸ್ವಲ್ಪ ಸಮಯದ ವರೆಗೆ ಕಿರು ನಿದ್ದೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಊಟದ ನಂತರ ಜೀರ್ಣಾಂಗ ವ್ಯವಸ್ಥೆಯಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದು ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಿಮಗೆ ಏಕಕಾಲದಲ್ಲಿ ಮಂಪರು ಮತ್ತು ದಣಿವನ್ನು ಉಂಟುಮಾಡುತ್ತದೆ. ಆದರೆ ಹಗಲಿನಲ್ಲಿ ಮಲಗುವುದು ಆರೋಗ್ಯಕ್ಕೆ ಒಳ್ಳೆಯದೇ? ಮಧ್ಯಾಹ್ನದ ನಿದ್ರೆ ದೇಹಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ? ನಿಮಗೂ ಈ ರೀತಿಯ ಪ್ರಶ್ನೆಗಳಿದ್ದರೆ ಅವುಗಳಿಗೆ ಇಲ್ಲಿದೆ ಉತ್ತರ.

    ವೈದ್ಯರು ಸಾಮಾನ್ಯವಾಗಿ 7 ರಿಂದ 8 ಗಂಟೆಗಳ ನಿದ್ರೆ ಒಳ್ಳೆಯದು ಎಂದು ಹೇಳುತ್ತಾರೆ. ಹೆಚ್ಚಿನ ಸಮಯದಲ್ಲಿ ನೀವು ಕೆಲಸ, ಕುಟುಂಬದ ಜವಾಬ್ದಾರಿಗಳು ಮತ್ತು ಇತರ ಕಾರಣಗಳಿಂದಾಗಿ ಬೆಳಿಗ್ಗೆ ಬೇಗನೆ ಎದ್ದೇಳಬೇಕಾಗುತ್ತದೆ. ಅಂತಹ ಸಮಯದಲ್ಲಿ ಮಧ್ಯಾಹ್ನ ಮಲಗಬೇಕು. ಹೆಚ್ಚುತ್ತಿರುವ ಕೆಲಸದ ಹೊರೆ, ಬಿಡುವಿಲ್ಲದ ಜೀವನಶೈಲಿ ಮತ್ತು ಒತ್ತಡದ ಸಂದರ್ಭಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ, ಮಧ್ಯಾಹ್ನದ ನಿದ್ರೆ ಉಲ್ಲಾಸ ನೀಡುತ್ತದೆ ಜೊತೆಗೆ ದಣಿವನ್ನು ಕಡಿಮೆ ಮಾಡುತ್ತದೆ.

    ಮಧ್ಯಾಹ್ನದ ನಿದ್ರೆಯು ದೇಹವನ್ನು ಮಾತ್ರವಲ್ಲದೆ ಮನಸ್ಸನ್ನೂ ವಿಶ್ರಾಂತಿಗೊಳಿಸುತ್ತದೆ. ದಿನಕ್ಕೆ ಸುಮಾರು 1 ಗಂಟೆ ಮಲಗುವುದು ಇಡೀ ದೇಹದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಅಲ್ಲದೆ, ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ಅದಕ್ಕಿಂತ ಹೆಚ್ಚಿನ ನಿದ್ದೆ ಮಧ್ಯಾಹ್ನದ ಸಮಯದಲ್ಲಿ ಒಳ್ಳೆಯದಲ್ಲ.

    ಆದರೆ, ಮಧ್ಯಾಹ್ನ ಅರ್ಧ ಗಂಟೆ ಅಥವಾ 1 ಗಂಟೆಗಿಂತ ಹೆಚ್ಚು ನಿದ್ರೆ ಮಾಡಬೇಡಿ. ಇದಕ್ಕಿಂತ ಹೆಚ್ಚು ಸಮಯ ಮಲಗುವುದು ನಿಮ್ಮ ದೇಹದ ಜೈವಿಕ ಗಡಿಯಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ರಾತ್ರಿ ನೈಸರ್ಗಿಕವಾಗಿ ಬರುವ ನಿದ್ರೆಗೆ ಇದು ಅಡ್ಡಿಯಾಗುತ್ತದೆ. ಆದ್ದರಿಂದ ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಮಾಡುವವರು ಹಗಲಿನಲ್ಲಿ ಅರ್ಧ ಗಂಟೆಗಿಂತ ಹೆಚ್ಚು ನಿದ್ರೆ ಮಾಡಬಾರದು ಎಂದು ವೈದ್ಯರು ಹೇಳುತ್ತಾರೆ.

    ಮಕ್ಕಳಿಗೆ ಮಧ್ಯಾಹ್ನದ ನಿದ್ರೆ ಒಳ್ಳೆಯದಲ್ಲ

    ಶಾಲಾ ವಿದ್ಯಾರ್ಥಿಗಳು ಮನೆಗೆ ಬಂದ ಮೇಲೆ ಅಂದರೆ ಸಾಮಾನ್ಯವಾಗಿ 3 ಗಂಟೆಯ ನಂತರ ಶಾಲೆಯಿಂದ ಮನೆಗೆ ಬಂದರೆ ಅವರನ್ನು ಆಡಲು ಬಿಡಿ. ಈ ರೀತಿ ಮಾಡಿದರೆ, ಮಕ್ಕಳು ರಾತ್ರಿ ಬೇಗನೆ ಮಲಗಲು ಒಗ್ಗಿಕೊಳ್ಳುತ್ತಾರೆ. ಮಧ್ಯಾಹ್ನ 3 ಗಂಟೆಯ ನಂತರ ಮಲಗುವುದರಿಂದ ರಾತ್ರಿಯಲ್ಲಿ ಮಕ್ಕಳ ನಿದ್ರೆಗೆ ಭಂಗವಾಗುತ್ತದೆ. ಹಾಗಾಗಿ ಮಕ್ಕಳು ಮಧ್ಯಾಹ್ನದ ಸಮಯದಲ್ಲಿ ಮಲಗುವುದು ಒಳ್ಳೆಯದಲ್ಲ.

    Continue Reading

    LATEST NEWS

    Trending