Connect with us

International news

ಮಗು ದತ್ತು ಪಡೆದ ಪ್ರಕರಣ : ಭಾರತೀಯ ದಂಪತಿ ನೆರವಿಗೆ ಧಾವಿಸಿದ ಹೈಕೋರ್ಟ್!

Published

on

ಕೀನ್ಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ದಂಪತಿಯ ನೆರವಿಗೆ ಕರ್ನಾಟಕ ಹೈಕೋರ್ಟ್ ಧಾವಿಸಿದೆ. ಉಗಾಂಡದ ಮಗುವನ್ನು ದತ್ತು ಪಡೆದಿರುವ ಅನಿವಾಸಿ ಭಾರತೀಯ ದಂಪತಿಗಳ ಮನವಿ ಪರಿಗಣಿಸಿದ ನ್ಯಾಯಾಲಯ, ಆ ದತ್ತು ಕ್ರಮವನ್ನು ಅಧಿಕೃತಗೊಳಿಸುವಂತೆ ಕೇಂದ್ರೀಯ ದತ್ತು ಸ್ವೀಕಾರ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.

ರವಿಕುಮಾರ್‌ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ನೀಡಿದೆ. ”ಅರ್ಜಿದಾರರು ಭಾರತದ ಪ್ರಜೆಗಳು, ಹಾಗಾಗಿ ಸರ್ಕಾರ ಅವರ ನೆರವಿಗೆ ಧಾವಿಸಬೇಕು. ಅರ್ಜಿದಾರರು 2023 ರ ಜೂ.8ರಂದು ಸಲ್ಲಿಸಿರುವ ಮನವಿ ಪರಿಗಣಿಸಿ ಆರು ವಾರಗಳಲ್ಲಿ ಎನ್‌ಒಸಿ ಪತ್ರವನ್ನು ವಿತರಿಸಬೇಕು, ಮಗು ದತ್ತಕ ಕಾನೂನು ಬದ್ಧಗೊಳಿಸಬೇಕು” ಎಂದು ಆದೇಶ ಹೊರಡಿಸಿದೆ.

ಏನಿದು ಪ್ರಕರಣ?

ಭಾರತೀಯ ಮೂಲದ ದಂಪತಿ 2011 ರಿಂದ 2018ರ ವರೆಗೆ ಉಗಾಂಡ ನಿವಾಸಿಗಳಾಗಿದ್ದರು. ನಂತರ 2019ರಲ್ಲಿ ಕೀನ್ಯಾಕ್ಕೆ ಸ್ಥಳಾಂತರಗೊಂಡರು. ಅವರು ಭಾರತೀಯ ಪೌರತ್ವ ತೊರೆಯದ ಕಾರಣ ಅವರು ಭಾರತೀಯ ಪಾಸ್‌ ಪೋರ್ಟ್‌ ಹೊಂದಿದ್ದರು. ಅವರು ಉಗಾಂಡದಲ್ಲಿದ್ದಾಗ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನಿಯಮದಂತೆ ಅಲ್ಲಿ ತಮಗೆ ಹೊಂದುವಂತಹ ಮಗುವೊಂದನ್ನು ದತ್ತು ಪಡೆಯಲು ಮುಂದಾಗಿದ್ದರು. 2014ರಲ್ಲಿ ಆ ದತ್ತು ಪ್ರಕ್ರಿಯೆ ನಡೆಯಿತು.

ಉಗಾಂಡ ಹೈಕೋರ್ಟ್‌, 2015ರಲ್ಲಿ ಮಗುವಿನ ಪೋಷಕತ್ವವನ್ನು ದಂಪತಿಗೆ ವರ್ಗಾಯಿಸಿತ್ತು. ದಂಪತಿ ಆ ದತ್ತು ಪ್ರಕ್ರಿಯೆಯನ್ನು ಭಾರತದಲ್ಲಿ ಅಧಿಕೃತ ಮಾಡಿಕೊಳ್ಳಲು ಬಯಸಿ, ಅದರಂತೆ ಸಿಎಆರ್‌ಎಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಾಧಿಕಾರ ಅವರ ಮನವಿಯನ್ನು ಅಂಗೀಕರಿಸಲಿಲ್ಲ, ಬದಲಿಗೆ ತಿರಸ್ಕರಿಸಲಿಲ್ಲ. ಪದೇ ಪದೇ ಮೇಲ್‌ ಮಾಡಿದರೂ ಉತ್ತರ ನೀಡಿರಲಿಲ್ಲ. ಹಾಗಾಗಿ ದಂಪತಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಅರ್ಜಿದಾರರು, ಅಂತರ್‌ ರಾಷ್ಟ್ರ ದತ್ತು ಪ್ರಕ್ರಿಯೆಗೆ 1995ರ ಒಪ್ಪಂದದಲ್ಲಿ ಮಾನ್ಯತೆ ಇದೆ. ಆದರೆ ಆ ಒಪ್ಪಂದಕ್ಕೆ ಉಗಾಂಡ ಸಹಿ ಹಾಕದ್ದರಿಂದ ಸಿಎಆರ್‌ಎ ನಿಯಮ ಮತ್ತು ಬಾಲ ನ್ಯಾಯ ಕಾಯಿದೆ ಭಾರತದಲ್ಲಿ ಮಗು ದತ್ತುವನ್ನು ಕಾನೂನು ಬದ್ಧಗೊಳಿಸಲಾಗದು. ಆದರೆ ಇಂತಹ ಸಂದರ್ಭಗಳಲ್ಲಿ ಭಾರತ ಸರ್ಕಾರ ನೆರವಿಗೆ ಧಾವಿಸಬಹುದು. ಅದರಂತೆ ಸರ್ಕಾರಕ್ಕೆ ಮಗು ದತ್ತು ಪ್ರಕ್ರಿಯೆಯನ್ನು ಅಧಿಕೃತಗೊಳಿಸಲು ನಿರ್ದೇಶನ ನೀಡಬೇಕೆಂದು ಕೋರಿದ್ದರು.

ಆದರೆ ಕೇಂದ್ರ ಸರ್ಕಾರ, ಅರ್ಜಿದಾರರ ಹಕ್ಕುಗಳನ್ನು ಮೊಟಕುಗೊಳಿಸಲು ಬಯಸುವುದಿಲ್ಲ. ಆದರೆ ಆ ದಂಪತಿಗೆ ನೆರವಿನ ಪತ್ರ ನೀಡಲಾಗುವುದು. ಇದು ದಂಪತಿಗೆ ಮಗುವನ್ನು ಕರೆದುಕೊಂಡು ದೇಶಕ್ಕೆ ಬರಲು ಮತ್ತು ಹೋಗಲು ಅನುಕೂಲವಾಗುತ್ತದೆ ಎಂದು ವಾದಿಸಿತ್ತು.

ಇದನ್ನೂ ಓದಿ..! ನಿನ್ನೆ ಮಗುವಿನ ಹುಟ್ಟುಹಬ್ಬ; ಇಂದು ತಾಯಿ ಮಗು ಜೀವಾಂತ್ಯ..!

ಕೋರ್ಟ್ ಆದೇಶ ಏನು?

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯವು, ಉಗಾಂಡ 1995ರ ಹೇಗ್‌ ಒಪ್ಪಂದಕ್ಕೆ ಸಹಿ ಹಾಕಿಲ್ಲದ ಕಾರಣ, ಕೇಂದ್ರ ಸರಕಾರ ಸೆಂಟ್ರಲ್‌ ಅಡಾಪ್ಷನ್‌ ರಿಸೋರ್ಸ್‌ ಅಥಾರಿಟಿ(ಸಿಎಆರ್‌ಎ) ನಿಯಮ 2022 ಹಾಗೂ ಬಾಲ ನ್ಯಾಯ ಕಾಯಿದೆ (ಆರೈಕೆ ಮತ್ತು ರಕ್ಷಣೆ) 2015ರ ಅನ್ವಯ ದತ್ತು ಪಡೆದಿರುವುದನ್ನು ಕಾನೂನು ಬದ್ಧಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ.

ಕೇಂದ್ರ ಸರಕಾರ ಈ ವಿಚಾರದಲ್ಲಿ ಬೆಂಬಲ ಪತ್ರ ನೀಡುವುದಕ್ಕೆ ತನ್ನನ್ನು ಸೀಮಿತಗೊಳಿಸಿಕೊಂಡರೆ ಸಾಲದು, ಭಾರತ ಒಪ್ಪಂದಕ್ಕೆ ಸಹಿ ಹಾಕಿರುವ ಹಿನ್ನೆಲೆಯಲ್ಲಿ ಅದು ನಿಯಮದಂತೆ ಅನುಮೋದನೆ ಪತ್ರ ಅಥವಾ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಬೇಕು. ಹಿಂದೂ ದತ್ತಕ ಮತ್ತು ನಿರ್ವಹಣಾ ಕಾಯಿದೆ ಅಡಿ ದತ್ತು ಪ್ರಕ್ರಿಯೆ ನಡೆದಿಲ್ಲವಾದರೂ ಸಹ ದಂಪತಿ ಭಾರತೀಯ ಪೌರತ್ವ ಹೊಂದಿರುವ ಮಗುವನ್ನು ದತ್ತು ಪಡೆದಿರುವುದರಿಂದ ಆ ದಂಪತಿಯನ್ನು ಅರ್ಧಕ್ಕೆ ಕೈಬಿಡುವುದು ಸರಿಯಲ್ಲ ಎಂದು ಹೇಳಿದೆ.

Click to comment

Leave a Reply

Your email address will not be published. Required fields are marked *

International news

ನೀರಿಲ್ಲ..ನೀರಿಲ್ಲ…ಗಂಡ – ಹೆಂಡತಿ ಒಟ್ಟಿಗೆ ಸ್ನಾನ ಮಾಡಿ ಎಂದು ಆದೇಶಿಸಿದ ಪಾಲಿಕೆ

Published

on

ಮಂಗಳೂರು : ನೀರಿಲ್ಲ ನೀರಿಲ್ಲ…ಎಲ್ಲಿ ಕೇಳಿದ್ರೂ ನೀರಿಲ್ಲ…ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದಾರೆ ಜನರು. ನಗರಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಕುಡಿಯಲೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಕೇವಲ ಕರ್ನಾಟಕ ಅಥವಾ ಭಾರತದ್ದಲ್ಲ. ವಿದೇಶಗಳಲ್ಲೂ ನೀರಿನ ಸಮಸ್ಯೆ ಎದುರಾಗಿದೆ. ಕೊಲಂಬಿಯಾದಲ್ಲಿ ಬರದ ಪರಿಸ್ಥಿತಿ ಇದೆ. ಹಾಗಾಗಿ ಅಲ್ಲಿನ ಮಹಾನಗರ ಪಾಲಿಕೆ, ನೀರನ್ನು ಉಳಿತಾಯ ಮಾಡಲು ಇನ್ಮುಂದೆ ಗಂಡ – ಹೆಂಡತಿ ಒಟ್ಟಿಗೆ ಸ್ನಾನ ಮಾಡಿ ಎಂದು ಆದೇಶ ಹೊರಡಿಸಿದೆ.

ಕರುನಾಡು ಮಾತ್ರವಲ್ಲದೇ, ದೇಶ, ವಿದೇಶಗಳಲ್ಲೂ ನೀರಿನ ಸಮಸ್ಯೆಕಾಡುತ್ತಿದೆ. ಕೊಲಂಬಿಯಾದ ಬಗೋಟಾ ಕೂಡಾ ನೀರಿನ ಬರ ಎದುರಿಸುತ್ತಿದೆ. ಜನರಿಗೆ ನೀರು ಪೂರೈಕೆ ಮಾಡಲು ಅಲ್ಲಿನ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ : ಇರಲಾರದೆ ಇರುವೆ ಬಿಟ್ಟುಕೊಂಡ ನಿರಂಜನ್ ದೇಶಪಾಂಡೆ; ಕನ್ನಡ ಪರ ಹೋರಾಟಗಾರರ ಕ್ಷಮೆಯಾಚಿಸಿದ ನಿರೂಪಕ

ವಿಚಿತ್ರ ಆದೇಶ ನೀಡಿದ ಮೇಯರ್ :

ನೀರಿನ ಸಂಕಷ್ಟದ ನಡುವೆ, ಬೊಗೋಟಾ ಮೇಯರ್‌ ಕಾರ್ಲೋಸ್ ಫೆರ್ನಾಂಡೊ ಗ್ಯಾಲನ್ ನಗರದ ಜನರಿಗೆ ವಿಚಿತ್ರ ಸಲಹೆಗಳನ್ನು ನೀಡಿದ್ದಾರೆ. ನೀರು ಉಳಿತಾಯ ಮಾಡಲು ನಗರದಲ್ಲಿರುವ ದಂಪತಿ ಇನ್ಮುಂದೆ ಒಟ್ಟಿಗೆ ಸ್ನಾನ ಮಾಡಬೇಕು ಆದೇಶ ಹೊರಡಿಸಿದ್ದಾರೆ.ಅಲ್ಲದೇ, ಭಾನುವಾರ ಹಾಗೂ ಮನೆಯಿಂದ ಹೊರಗೆ ಹೋಗುವ ಅಗತ್ಯವಿಲ್ಲದ ದಿನದಂದು ಸ್ನಾನವನ್ನೇ ಮಾಡಬೇಡಿ ಎಂದಿದ್ದಾರೆ.

ಬೊಗೋಟಾದಲ್ಲಿ ನೀರು ಸಂಗ್ರಹಣೆ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಅಂತರ್ಜಲ ಮಟ್ಟ ದಾಖಲೆ ಪ್ರಮಾಣದಲ್ಲಿ ಕುಸಿದಿದ್ದು, ನೀರು ಪೋಲಾಗದಂತೆ ಎಚ್ಚರಿಕೆ ವಹಿಸುತ್ತಿದೆ.

ಕೊಲಂಬಿಯಾ ದೇಶದಲ್ಲಿ ಬೇಸಿಗೆ ಎಷ್ಟು ಭೀಕರವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ದೇಶದ ಜಲಾಶಯಗಳ ನೀರು ಸಂಪೂರ್ಣವಾಗಿ ಬರಿದಾಗಿದೆ. ನಗರಕ್ಕೆ ಅಗತ್ಯವಾದ ಶೇ. 70ರಷ್ಟು ನೀರನ್ನು ಮೂರು ಜಲಾಶಯಗಳು ಪೂರೈಕೆ ಮಾಡುತ್ತಿವೆ.

Continue Reading

International news

ನಿರ್ಮಾಪಕರಾಗುತ್ತಿದ್ದಾರಂತೆ ರಾಕಿಂಗ್ ಸ್ಟಾರ್ ಯಶ್..!? ಯಾವ ಸಿನೆಮಾ.. ಇಲ್ಲಿದೆ ಡೀಟೈಲ್ಸ್

Published

on

ಬಾಲಿವುಡ್: ಪಾನ್ ಇಂಡಿಯಾ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರ ಬಗ್ಗೆ ನಿತ್ಯ ಹೊಸ ಹೊಸ ಸುದ್ದಿಗಳು ಹರಿದಾಡುತ್ತಾ ಇವೆ. ‘ಕೆಜಿಎಫ್ 2’ ಸಿನಿಮಾ ಬಳಿಕ ಅವರು ‘ಟಾಕ್ಸಿಕ್’ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದು ಕುಳಿತಿದ್ದಾರೆ. ಮುಂದಿನ ವರ್ಷ ಏಪ್ರಿಲ್​ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈ ಮಧ್ಯೆ ಅವರ ನಟನೆಯ ‘ರಾಮಾಯಣ’ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್ ಒಂದು ಕೇಳಿ ಬಂದಿದೆ. ಈ ಚಿತ್ರಕ್ಕಾಗಿ ಅವರು ಸಂಭಾವನೆ ಪಡೆಯದೇ ಇರಲು ನಿರ್ಧರಿಸಿದ್ದಾರಂತೆ. ಇದರ ಬದಲು ಅವರು ನಿರ್ಮಾಪಕರಾಗುತ್ತಿದ್ದಾರೆ!

ಹೌದು, ರಾಮಾಯಣ ಸಿನಿಮಾಗಾಗಿ 80 ಕೋಟಿ ರೂಪಾಯಿ ಸಂಭಾವನೆ ಡಿಮ್ಯಾಂಡ್ ಮಾಡಿದ ಯಶ್, ಸಂಭಾವನೆ ತೆಗೆದುಕೊಂಡಿಲ್ಲ. ಬದಲಿಗೆ ಆ ಹಣವನ್ನು ಸಿನಿಮಾ ಮೇಲೆ ಹೂಡಿಕೆ ಮಾಡುವಂತೆ ಕೋರಿದ್ದಾರಂತೆ. ಸಿನಿಮಾ ಲಾಭದಲ್ಲಿ ಯಶ್ ಅವರಿಗೂ ಪಾಲು ಸಿಗಲಿದ್ದು, ಈ ಮೂಲಕ ನಿರ್ಮಾಪಕರಾಗುತ್ತಿದ್ದಾರೆ ಎನ್ನಲಾಗಿದೆ.

ಅಂದಹಾಗೆ, ‘ರಾಮಾಯಣ’ ಸಿನಿಮಾಗೆ ಈಗಾಗಲೇ ಶೂಟಿಂಗ್ ಆರಂಭ ಆಗಿದೆ. ಮುಂಬೈನ ಸ್ಟುಡಿಯೋ ಒಂದರಲ್ಲಿ ದೊಡ್ಡ ಸೆಟ್ ಹಾಕಿ ಶೂಟ್ ಮಾಡಲಾಗುತ್ತಿದೆ. ಸೆಟ್​ನ ಫೊಟೋಗಳು ಲೀಕ್ ಆಗಿದ್ದು ಚಿತ್ರತಂಡ ಬೇಸರ ಹೊರಹಾಕಿದ್ದಾರೆ. ಈ ಸಿನೆಮಾಗೆ ನಿತೇಶ್ ತಿವಾರಿ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

Continue Reading

International news

ದುಬೈನಲ್ಲಿ ಕೈಬೀಸಿ ಕರೆಯುತ್ತಿದೆ ಕಡಲ ಮೇಲೆ ತೇಲಾಡುವ ‘ಕ್ವೀನ್ ಎಲಿಜಬೆತ್ 2’ ಅರಮನೆ; ಹೇಗಿದೆ ವೈಭವ?

Published

on

ದುಬೈನ ಕಡಲತೀರ ಪೋರ್ಟ್ ರಾಶೀದ್ ನಲ್ಲಿ ತೇಲಾಡುವ ಬೃಹತ್ ಐಶಾರಾಮಿ ಹಡಗೊಂದು ಗಮನಸೆಳೆಯುತ್ತಿದೆ. ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಈ ಹಡಗು ಅರಮನೆಯಂತೆ ಕಂಗೊಳಿಸುತ್ತಿದೆ. ಅದುವೇ ಕ್ವೀನ್‌ ಎಲಿಝಬೆತ್‌-2.

ದಾಖಲೆ ಬರೆದಿದ್ದ ಹಡಗು :

2008ರಲ್ಲಿ ಕ್ವೀನ್‌ ಎಲಿಝಬೆತ್‌-2 ತನ್ನ ಪ್ರಯಾಣಿಕರ ಕೊನೆಯ ಪ್ರಯಾಣದ ಅನಂತರ ಡಿ ಕಮಿಷನ್‌x ಎಂದು ಘೋಷಣೆ ಮಾಡಿತ್ತು. ಕೊನೆಯ ಪ್ರಯಾಣ ದುಬೈಗೆ ಪ್ರಯಾಣಿಸುವ ಸಲುವಾಗಿ ಮುಂಗಡ ಕಾಯ್ದಿರಿಸುವ ಟಿಕೆಟ್‌ ಕೇವಲ 20 ನಿಮಿಷದಲ್ಲಿಯೇ ಭರ್ತಿಯಾಗಿತ್ತು. ಇದು ದಾಖಲೆಯನ್ನೇ ಬರೆದಿತ್ತು.
ರಾಯಲ್‌ ನೇವಿ, ಎಚ್‌.ಎಂ.ಎಸ್‌. ಲಾಂಚೆಸ್ಟರ್‌ ಡ್ನೂಕ್‌ ಕ್ಲಾಸ್‌ ಬೋಟ್‌ಗಳು ಕ್ವೀನ್‌ ಎಲಿಝಬೆತ್‌-2ನ್ನು ಬೆಂಗಾವಲು ಪಡೆಗಳಾಗಿ ಎಸ್ಕಾರ್ಟ್‌ ಮಾಡಿಕೊಂಡು ದುಬೈಯ ಪೋರ್ಟ್‌ ರಾಶೀದ್‌ನಲ್ಲಿ ಗೌರವ ಪೂರ್ವಕವಾಗಿ ಬೀಳ್ಕೊಡಲಾಗಿತ್ತು.

ನವೀಕರಣಗೊಂಡ ಕ್ವೀನ್‌ ಎಲಿಝಬೆತ್‌-2 :

2018ರಲ್ಲಿ ದುಬೈಯ ಪೋರ್ಟ್‌ ರಾಶೀದ್‌ನಲ್ಲಿ ನಿಲುಗಡೆಯಾಗಿದ್ದ ಕ್ವೀನ್‌ ಎಲಿಝಬೆತ್‌-2 ಹಡಗನ್ನು ನವೀಕರಣಗೊಳಿಸಲಾಯಿತು. ಅತ್ಯಾಧುನಿಕವಾಗಿ ಹಾಗೂ ಆಕರ್ಷಣೀಯವಾಗಿ ತೇಲಾಡುವ ಐಶಾರಾಮಿ ವಿಲಾಸಿ ಹೊಟೇಲ್‌ನ್ನಾಗಿ ಪರಿವರ್ತಿಸಲಾಯಿತು.
ಅರಮನೆಯಂತೆ ಕಂಗೊಳಿಸಿದ ಐಷಾರಾಮಿ ಕ್ವೀನ್‌ ಎಲಿಝಬೆತ್‌-2 ಹಡಗು ವಿಶ್ವದಾದ್ಯಂತ ಪ್ರವಾಸಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಇನ್ನು ಇದರ ಒಳಾಂಗಣ ಪ್ರವೇಶಿಸುವಾಗ ಭವ್ಯ ವಾಸ್ತುಶಿಲ್ಪಗಳ ವೈಭವ ಕಣ್ಣಿಗೆ ಹಬ್ಬದಂತೆ ಭಾಸವಾಗುತ್ತದೆ.

ಹೇಗಿದೆ ಹಡಗು?

ವೀಕ್ಷಿಸಲು ಬರುವ ವೀಕ್ಷಕರು ಮತ್ತು ಹೆರಿಟೆಜ್‌ ಟೂರ್‌ ಪ್ಯಾಕೇಜ್‌ನಲ್ಲಿ ಬರುವ ಪ್ರವಾಸಿಗರು ನಿಗದಿತ ದರದಲ್ಲಿ ಒಳಾಂಗಣ ಪ್ರವೇಶ ಪಡೆದು ಒಂದೆರಡು ಗಂಟೆಯಲ್ಲಿ ಸಂಪೂರ್ಣವಾಗಿ ವೀಕ್ಷಿಸಬಹುದಾಗಿದೆ. ರಾತ್ರಿ ಉಳಿದುಕೊಳ್ಳಲು ಹೆಚ್ಚಿನ ದರ ಪಾವತಿಸಿ ಕೊಠಡಿಯನ್ನು ಪಡೆದುಕೊಳ್ಳಬಹುದಾಗಿದೆ. ರಾತ್ರಿಯ ಭೋಜನ ಮತ್ತು ಬೆಳಗಿನ ಉಪಹಾರ ಉಚಿತವಾಗಿ ದೊರೆಯುತ್ತದೆ.

ಕ್ವೀನ್‌ ಎಲಿಝಬೆತ್‌-2 ಹಡಗಿನಲ್ಲಿ 447 ಐಷಾರಾಮಿ ಕೊಠಡಿಗಳಿದ್ದು, ಕ್ಲಾಸಿಕ್‌, ಸುಪಿರಿಯರ್‌ ಮತ್ತು ಡಿಲಕ್ಸ್‌ ಹೀಗೆ ವರ್ಗೀಕರಣಗೊಂಡಿದೆ. ಡಿಕಮಿಷನ್ಡ್ ಆಗುವ ಮೊದಲು 515 ಮಂದಿ ಆಸೀನರಾಗಲು ವ್ಯವಸ್ಥೆ ಇದ್ದ ಸಿನೆಮಾ ಹಾಲ್‌ ಇದೀಗ ಯಾವುದೇ ಸಭೆ ಸಮಾರಂಭಗಳನ್ನು, ಕಂಪೆನಿ ಮೀಟಿಂಗ್‌, ಕಾನ್ಫರೆನ್ಸ್‌ ನಡೆಸಬಹುದಾಗಿದೆ.‌

ಅಲ್ಲದೇ ಇಲ್ಲಿ ಹೆಸರಿಗೆ ತಕ್ಕಂತೆ ಕ್ವೀನ್‌ ಹಾಲ್‌ ಸಹ ಇದೆ. ಈ ಹಾಲ್‌ನಲ್ಲಿ ವಿವಾಹ ಸಮಾರಂಭ, ರಾಯಲ್‌ ವೆಡ್ಡಿಂಗ್‌ ಸಹ ನಡೆಯುತ್ತಿರುತ್ತದೆ. ಈ ಕ್ವೀನ್‌ ಹಾಲ್‌ನಲ್ಲಿ ಕೆಲವು ಭಾರತೀಯರ ವಿವಾಹ ಸಹ ನಡೆದಿದೆ. ವಿಶ್ವ ದರ್ಜೆಯ ಭೋಜನ ಹಾಲ್‌ ಮತ್ತು ವೈವಿಧ್ಯಮಯ ಭಕ್ಷ್ಯ ಭೋಜನಗಳು ದೊರೆಯುತ್ತದೆ. ಅತ್ಯಂತ ದುಬಾರಿ ಮದ್ಯಪಾನೀಯಗಳ ಕೌಂಟರ್‌ ಸಹ ಇಲ್ಲಿದೆ.

ಹಡಗಿನ ಸನ್‌ ಡೆಕ್‌ನಲ್ಲಿ ಕ್ಯಾಪ್ಟನ್‌ ಕೊಠಡಿ, ವಿಶಾಲವಾದ ಬಾಲ್ಕನಿ, ಹಡಗಿನ ನೌಕಾ ಅಧಿಕಾರಿಗಳ ಕೊಠಡಿಗಳನ್ನು ವೀಕ್ಷಿಸಬಹುದು. ಹಡಗಿನ ಅಮೂಲ್ಯ ವಸ್ತುಗಳ ಸಂಗ್ರಹಾಲಯ ವಿಭಾಗವಂತೂ ನಿಮಗೆ ಇಷ್ಟವಾಗಲಿದೆ. ಮೊದಲು ಪ್ರಯಾಣಿಸುವ ಸಂದರ್ಭದಲ್ಲಿ ಉಪಯೋಗಿಸಿದ್ದ ಕ್ಯಾಪ್ಟನ್‌ರವರ ಯೂನಿಫಾರ್ಮ್ ನ್ನು ಇಲ್ಲಿ ನೋಡಿ ಖುಷಿಪಡಬಹುದಾಗಿದೆ. ಹಡಗಿನ ಬೃಹತ್‌ ಎಂಜಿನ್‌ ರೂಮ್‌ ಇನ್ನಿತರ ಹಡಗಿಗೆ ಸಂಬಧಿಸಿದ ಸ್ಟೋರ್‌ ರೂಮ್‌ ಇದ್ದು, ಅದನ್ನೂ ವೀಕ್ಷಿಸಬಹುದಾಗಿದೆ.

ಹಲವು ದಾಖಲೆಗಳನ್ನು ನಿರ್ಮಿಸಿರುವ ದುಬೈ, ಕ್ವೀನ್‌ ಎಲಿಝಬೆತ್‌-2 ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದುಬರುತ್ತದೆ, ಅಂತಹ ಅದ್ಭುತ ಸಂಭ್ರಮವನ್ನು ನೀಡುವಲ್ಲಿ ಹಡಗು ಯಶಸ್ವಿಯಾಗಿರೋದು ಸುಳ್ಳಲ್ಲ.

Continue Reading

LATEST NEWS

Trending