DAKSHINA KANNADA
ರಾಜ್ಯದ 7 ಜಿಲ್ಲೆಗಳಲ್ಲಿ ಭಾರೀ ಮಳೆ; ರೆಡ್ ಅಲರ್ಟ್ ಘೋಷಣೆ
ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದ್ದು, ಹಲವೆಡೆ ವರುಣಾರ್ಭಟ ಜೋರಾಗಿದೆ. ರಾಜ್ಯದ 7 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಸುರಿಯಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹಾವೇರಿ, ಶಿವಮೊಗ್ಗಕ್ಕೆ ಆರೆಂಜ್ ಅಲರ್ಟ್, ಕಲಬುರಗಿ, ರಾಯಚೂರು, ಯಾದಗಿರಿ, ದಾವಣಗೆರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ನಗರ, ಚಾಮರಾಜನಗರ ಹೀಗೆ ಕೆಲ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ. ಇನ್ನು ಕೆಲವೆಡೆ ಸುರಿದ ಭಾರೀ ಮಳೆಗೆ ರಸ್ತೆ ಕೊಚ್ಚಿ ಹೋಗಿದೆ. ರೈತರ ಬೆಳೆ ಕೂಡ ನಾಶವಾಗಿದೆ. ವಿಜಯಪುರದ ಬಸವನಬಾಗೇವಾಡಿಯಲ್ಲಿ ಭಾರೀ ಮಳೆ ಆಗಿದ್ದು, ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಪರಿಣಾಮ ಬೇರೆ ದಾರಿ ಕಾಣದೇ ಜನ, ಜೆಸಿಬಿ ಮೂಲಕ ಹಳ್ಳ ದಾಟಿದ್ದಾರೆ.
DAKSHINA KANNADA
ಅತ್ತಾವರ: ಮಳೆಗೆ ಧರೆಗುರುಳಿದ ಬೃಹತ್ ಮರ
ಮಂಗಳೂರು: ಭಾರೀ ಮಳೆಯ ಹಿನ್ನೆಲೆಯಲ್ಲಿ ಅತ್ತಾವರ ಕಾಪ್ರಿಗುಡ್ಡದ ಬ್ರಿಟ್ಟೋಲೇನ್ ಬಳಿ ವಾಣಿಜ್ಯ ಸಂಕೀರ್ಣದ ತಳಪಾಯದ ಕಾಮಗಾರಿ ನಡೆಯುತ್ತಿದ್ದ ಜಾಗಕ್ಕೆ ಮೇಲ್ಭಾಗದಲ್ಲಿದ್ದ ಬೃಹತ್ ಮರವೊಂದು ಬುಡ ಸಹಿತ ಉರುಳಿ ಬಿದ್ದಿದೆ.
ಮಳೆಯ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಕಾಮಗಾರಿ ನಿಲ್ಲಿಸಲಾಗಿದ್ದ ಕಾರಣ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
DAKSHINA KANNADA
ಮಕ್ಕಳಿಗೆ ಯಾವ ವಯಸ್ಸಿನಿಂದ ಚಹಾ, ಕಾಫಿ ಕೊಡಬಹುದು?
ಮಂಗಳೂರು: ಪೋಷಕರು ಅಥವಾ ಮನೆಯವರು ಚಹಾ, ಕಾಫಿ ಕುಡಿಯುವುದು ನೋಡಿ ಮಕ್ಕಳು ತಮಗೂ ಕೊಡಿ ಎಂದು ಹಟ ಮಾಡುತ್ತಾರೆ. ಮಕ್ಕಳಿಗೆ ಯಾವ ವಯಸ್ಸಿನಿಂದ ಚಹಾ, ಕಾಫಿ ಕೊಡಬಹುದು ಎಂದು ಸಂದಿಗ್ಧತೆ ಪೋಷಕರಲ್ಲಿ ಇರುವುದು ಸಹಜ. ಮಕ್ಕಳಿಗೆ ಈ ಪಾನೀಯವನ್ನು ಕೊಡುವ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡೋಣ.
ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಾರ 12 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಚಹಾ, ಕಾಫಿ ಕೊಡಬಾರದು ಹಾಗೂ ಎನರ್ಜಿ ಡ್ರಿಂಕ್ ಕೂಡ ನೀಡುವಂತಿಲ್ಲ. 12 ರಿಂದ 18 ವರ್ಷ ಮಕ್ಕಳು 100 ಮಿಲಿ ಗ್ರಾಂ ನಷ್ಟು ಕೆಫಿನ್ ಹೊಂದಬಹುದು.
12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಫಿನ್ ನೀಡುವುದರಿಂದ ಅವರ ಹೃದಯ, ಮೆದುಳು, ಮೂತ್ರಪಿಂಡ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಕೆಫಿನ್ ಅಂಶ ಇರುವ ಚಹಾ ಮತ್ತು ಕಾಫಿ ಮಾತ್ರವಲ್ಲು ಚಾಕೊಲೇಟ್ ಪಾನೀಯಗಳು, ಬೇಕರಿ ಐಟಂಗಳು, ಕುಕ್ಕೀಸ್ ಇತ್ಯಾದಿಗಳು ಕೂಡ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೊಡುವಂತಿಲ್ಲ.
12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಫಿನ್ ನೀಡುವುದರಿಂದ ಇದು ಅವರ ಒಟ್ಟಾರೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
DAKSHINA KANNADA
ಮುಳುಗಿದ ಪಡೀಲ್ ಅಂಡರ್ಪಾಸ್ – ಸಂಚಾರ ಸ್ಥಗಿತ
ಮಂಗಳೂರು: ಕರಾವಳಿಯಾದ್ಯಂತ ಸುರಿಯುತ್ತಿರುವ ಮಳೆ ಜನತೆಯನ್ನು ಚಂಡಿ ಹಿಡಿಸಿ ಬಿಟ್ಟಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಎರಡು ದಿನಗಳಿಂದ ಬಿರುಸು ಪಡೆದುಕೊಂಡಿದ್ದು ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ನಗರದ ಹಲವು ಕಡೆಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿದ್ದು, ಜನರು ಪರದಾಡುವಂತಾಗಿದೆ. ನಗರದ ಪಡೀಲ್ – ಬಜಾಲ್ ಸಂಪರ್ಕಿಸುವ ರಸ್ತೆಯ ಅಂಡರ್ಪಾಸ್ ನೀರಿನಿಂದ ತುಂಬಿ ಮುಳುಗಿ ಹೋಗಿದೆ. ಇಂದು ಬೆಳಿಗ್ಗೆ ಅಂಡರ್ಪಾಸ್ ಕೆಳಭಾಗದಲ್ಲಿ ನೀರು ತುಂಬಿಕೊಂಡಿದ್ದು ಜನ ಸಂಚರಿಸಲಾಗದೇ ತೊಂದರೆ ಅನುಭವಿಸಿದರು.
ಕಾರೊಂದು ನೀರಿನಲ್ಲಿ ಬರಲಾಗದ ಸ್ಥಿತಿಯಲ್ಲಿದ್ದು ಬಳಿಕ ಸ್ಥಳೀಯರು ವಾಹನವನ್ನು ದೂಡಿಕೊಂಡು ಬಂದು ಮೇಲೆ ತಂದಿದ್ದಾರೆ. ಪಡೀಲ್ – ಬಜಾಲ್ ಸಂಪರ್ಕಿಸುವ ಈ ಅಂಡರ್ಪಾಸ್ ಪ್ರತೀ ಮಳೆಗಾಲದ ಸಂದರ್ಭದಲ್ಲೂ ಜನ ಕಂಗೆಡುತ್ತಿದ್ದಾರೆ.
- LATEST NEWS4 days ago
ಮುಂದಿನ ಐದು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ
- FILM7 days ago
ದರ್ಶನ್ ಭೇಟಿ ಮಾಡಲು ಸ್ಟೇಷನ್ಗೆ ಬಂದ ಪತ್ನಿ..!
- LATEST NEWS5 days ago
ನಟ ದರ್ಶನ್ ಅಭಿಮಾನಿಯ ವಿರುದ್ಧ ಬಿತ್ತು ಕೇಸ್
- DAKSHINA KANNADA6 days ago
ಇನ್ಮುಂದೆ ಶಾಲೆಗಳಲ್ಲಿ ಹುಟ್ಟುಹಬ್ಬ ಆಚರಿಸುವಂತಿಲ್ಲ; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ