ಬೆಂಗಳೂರು: ರಾಜ್ಯದಲ್ಲಿ ಹಿಜಾಬ್- ಬಜರಂಗದಳದ ಕಾರ್ಯಕರ್ತನ ಕೊಲೆ ನಡೆದಿದ್ದು, ರಾಜಕೀಯ ಗದ್ದಲವೇರ್ಪಟ್ಟಿದೆ. ಈ ಮಧ್ಯೆ ಕಳೆದ ಐದು ದಿನಗಳಿಂದ ವಿಧಾನ ಸಭೆಯು ಗದ್ದಲದಲ್ಲೇ ಕಳೆಯುತ್ತಿದೆ. ಇದೆಲ್ಲದರ ಮಧ್ಯೆ ಸದನದಲ್ಲಿ ಇಂದು ಶಾಸಕರ ಸಂಬಳ-ಭತ್ಯೆ ಹೆಚ್ಚಳ ಮಾಡಲಾಗಿದೆ. ಈ ವಿಧೇಯಕವನ್ನು ಅಂಗೀಕಾರ ಮಾಡಲಾಗಿದೆ.
ಏನೆಲ್ಲಾ ಹೆಚ್ಚಾಗಿದೆ
ಮುಖ್ಯಮಂತ್ರಿ, ಮಂತ್ರಿಗಳ ಸಂಬಳ ಶೇಕಡಾ 50 ರಷ್ಟು ಹೆಚ್ಚಳ.
ಸಿಎಂಗೆ ಪ್ರತಿ ತಿಂಗಳು ಇದ್ದ 50 ಸಾವಿರ ಸಂಬಳ ಶೇಕಡಾ 75 ಸಾವಿರಕ್ಕೆ ಹೆಚ್ಚಳ.
ಕ್ಯಾಬಿನೆಟ್ ದರ್ಜೆ ಮಂತ್ರಿಗಳಿಗೆ ಪ್ರತಿ ತಿಂಗಳಿಗೆ ಶೇಕಡಾ 40 ಸಾವಿರ ಇದ್ದ ಸಂಬಳ 60 ಸಾವಿರ ರೂಪಾಯಿಗಳಿಗೆ ಹೆಚ್ಚಳ.
ಕ್ಯಾಬಿನೆಟ್ ದರ್ಜೆ ಪ್ರತಿ ವರ್ಷಕ್ಕೆ ಅತಿಥ್ಯ ಭತ್ಯೆ ಶೇಕಡಾ 3 ಲಕ್ಷದಿಂದ ನಾಲ್ಕೂವರೆ ಲಕ್ಷಕ್ಕೆ ಹೆಚ್ಚಳ.
ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಮನೆ ಬಾಡಿಗೆ ಶೇಕಡಾ 80 ಸಾವಿರದಿಂದ 1ಲಕ್ಷದ 20 ಸಾವಿರ ರೂಪಾಯಿಗೆ ಹೆಚ್ಚಳ.
ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಮನೆ ನಿರ್ವಹಣೆ ವೆಚ್ಚ ಶೇಕಡಾ 20 ಸಾವಿರದಿಂದ 30 ಸಾವಿರಕ್ಕೆ ಹೆಚ್ಚಳ.
ಕ್ಯಾಬಿನೆಟ್ ದರ್ಜೆ ಮಂತ್ರಿಗಳ ವಾಹನ ಸೌಲಭ್ಯಕ್ಕಾಗಿ ಪ್ರತಿ ತಿಂಗಳಿಗೆ ಒಂದು ಸಾವಿರ ಲೀಟರ್ ಪೆಟ್ರೋಲ್ನಿಂದ 2 ಸಾವಿರ ಪೆಟ್ರೋಲ್ಗೆ ಹೆಚ್ಚಳ ಮಾಡಲಾಗಿದೆ.
ಮುಖ್ಯಮಂತ್ರಿ ಯವರ ಸಂಬಳ 50 ಸಾವಿರ ದಿಂದ 75 ಸಾವಿರಕ್ಕೂ, ಸಚಿವರ ವೇತನ 40 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪ್ರತಿ ವರ್ಷ ನೀಡುವ ಆತಿಥ್ಯ ಭತ್ಯೆ 3 ಲಕ್ಷದಿಂದ 4.50 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಮನೆ ಬಾಡಿಗೆಯನ್ನು 90 ಸಾವಿರದಿಂದ 1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ತೋಟಗಳ ನಿರ್ವಹಣೆ ಮತ್ತು ವಿನ್ಯಾಸಕ್ಕೆ 20 ಸಾವಿರದಿಂದ 30 ಸಾವಿರಕ್ಕೆ ಹೆಚ್ಚಿಸಲಾಗಿದೆ.