Sunday, November 27, 2022

ಬೊಮ್ಮಾಯಿ ಸರಕಾರದಿಂದ ಗಡಿ ಬಂದ್ ನಡೆಸಿ ಬಿಕ್ಕಟ್ಟು ಸೃಷ್ಟಿ : ಹರ್ಷಾದ್ ವರ್ಕಾಡಿ

ಮಂಗಳೂರು: ಕೇಂದ್ರ ಸರಕಾರ ಮತ್ತು ಸುಪ್ರೀಂ ಕೋರ್ಟ್ ಅಂತಾರಾಜ್ಯ ಸಂಚಾರವನ್ನು ಯಾವುದೇ ಕಾರಣಕ್ಕೂ ನಿರ್ಬಂಧಿಸುವಂತಿಲ್ಲ ಎಂದು ಸೂಚನೆ ನೀಡಿದ್ದರೂ, ಕರ್ನಾಟಕದ ಬೊಮ್ಮಾಯಿ ಸರಕಾರ ಕೋವಿಡ್ ಹೆಸರಲ್ಲಿ ಗಡಿ ಬಂದ್ ಮಾಡಿ ಬಿಕ್ಕಟ್ಟು ಸೃಷ್ಟಿಸಿದೆ ಎಂದು ಕಾಂಗ್ರೆಸ್ ಮುಖಂಡ ಹರ್ಷಾದ್ ವರ್ಕಾಡಿ ಹೇಳಿದರು.

ಕೇರಳ ನಿವಾಸಿಗಳನ್ನು ಕೋವಿಡ್ ನೆಪದಲ್ಲಿ ನಿರ್ಬಂಧಿಸಿರುವ ಕರ್ನಾಟಕ ಸರಕಾರದ ಕ್ರಮವನ್ನು ಖಂಡಿಸಿ ಗಡಿಭಾಗ ತಲಪಾಡಿಯಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಇಂದು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕರ್ನಾಟಕದ ಗಡಿಭಾಗ ಬಂದ್ ನಡೆಸಿರುವ ನೀತಿ ಜನಸಾಮಾನ್ಯರನ್ನು ಬೀದಿಗೆ ತಳ್ಳಿದೆ. ಈ ಬಗ್ಗೆ ಕೇರಳದ ಸಿಎಂ ಪಿಣರಾಯಿ ವಿಜಯನ್ ಮಧ್ಯ ಪ್ರವೇಶ ಮಾಡಿ, ಗಡಿ ಸಮಸ್ಯೆ ಇತ್ಯರ್ಥ ಪಡಿಸಬೇಕಾಗಿದೆ.

ಹಿಂದೆಯೂ ಗಡಿ ಬಂದ್ ಮಾಡಿದಾಗ ನಾವು ಸಹಕಾರ ನೀಡಿದ್ದೇವೆ. ಆದರೆ, ಈಗ ನಾವು ಒಪ್ಪಲ್ಲ. ಕೇಂದ್ರ ಸರಕಾರವೇ ಎರಡು ಡೋಸ್ ಲಸಿಕೆ ಪಡೆದವರಿಗೆ ನಿರ್ಬಂಧ ವಿಧಿಸುವಂತಿಲ್ಲ ಎಂದು ಹೇಳಿದೆ. ಎರಡು ಡೋಸ್ ಕೋವಿಡ್ ವ್ಯಾಕ್ಸಿನ್ ಪಡೆದ ಕೇರಳದ ಗಡಿ ನಿವಾಸಿಗಳನ್ನು ಕರ್ನಾಟಕ ಪ್ರವೇಶಕ್ಕೆ ಅವಕಾಶ ನೀಡಲೇಬೇಕು ಎಂದು ಒತ್ತಾಯಿಸಿದರು. ‌

ಕರ್ನಾಟಕ ಮತ್ತು ಕೇರಳದ ಉಭಯ ಸರಕಾರಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಯುಡಿವೈಎಫ್ ಮಂಜೇಶ್ವರ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಪ್ರತಿಭಟನಾಕಾರರು ಕೋವಿಡ್ ಲಸಿಕೆಯ ವರದಿಯನ್ನ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕೋವಿಡ್ ಲಸಿಕೆ ಪಡೆದರೂ ಅದಕ್ಕೆ ಬೆಲೆಯಿಲ್ಲ ಎಂದಾದ್ರೆ ಈ ಲಸಿಕೆ ಯಾಕೆ ಇರಬೇಕು. ಈ ವರದಿ ಯಾಕೆ ಬೇಕು ಎಂದು ಪ್ರಶ್ನೆ ಮಾಡಿದರು. ‌

ಕೆಎಂಸಿಸಿ ಮುಖಂಡ ಬಾಬಾ ಉದ್ಯಾವರ, ಮುಸ್ಲಿಂ ಲೀಗ್ ಮಂಜೇಶ್ವರ ಪಂಚಾಯತ್ ಸಮಿತಿ ಅಧ್ಯಕ್ಷ ಸೈಫುಲ್ಲಾ ತಂಙಳ್, ಯೂತ್ ಕಾಂಗ್ರೆಸ್ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಇರ್ಷಾದ್ ಮಂಜೇಶ್ವರ, ಮಂಜೇಶ್ವರ ಗ್ರಾ.ಪಂ ಸದಸ್ಯರಾದ ಮುಸ್ತಫಾ ಉದ್ಯಾವರ, ಪ್ರಮುಖರಾದ ಸಿದ್ದೀಕ್ ಮಂಜೇಶ್ವರ,ಡೆರಿಕ್ ಮೊಂತೇರೊ, ಹನೀಫ್ ಪಡಿನ್ಯಾರ್, ಎಂ.ಪಿ ಬದ್ರುದ್ದೀನ್ ತುಮಿನಾಡ್ ಮೊದಲಾದವರು ಉಪಸ್ಥಿತರಿದ್ದರು.

ಎಲ್ ಡಿಎಫ್ ಪಕ್ಷದ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲೂ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಸಿಪಿಐ ಕಾಸರಗೋಡು ಜಿಲ್ಲಾ ನಿರ್ವಾಹಕ ಸಮಿತಿ ಸದಸ್ಯ ಬಿ.ವಿ ರಾಜನ್ ಪ್ರತಿಭಟನೆಯಲ್ಲಿ ಮಾತನಾಡಿದರು. ಇದೇ ವೇಳೆ, ಕಾಸರಗೋಡು ಜಿಲ್ಲಾಧಿಕಾರಿ ಬಂಧಾರಿ ಸ್ವಾಗತ್ ರಣವೀರ್ ಚಂದ್ ಗಡಿಭಾಗ ತಲಪಾಡಿಗೆ ಭೇಟಿ ನೀಡಿದರು.

LEAVE A REPLY

Please enter your comment!
Please enter your name here

Hot Topics

ನಂತೂರಿನಲ್ಲಿ ಜೋಡಿ ಮೇಲೆ ದಾಳಿ-ಮೂವರು ಹಿಂದೂ ಕಾರ್ಯಕರ್ತರು ಅರೆಸ್ಟ್

ಮಂಗಳೂರು:ಮಂಗಳೂರಿನ ನಂತೂರು ಸರ್ಕಲ್‌ ಬಳಿ ಗುರುವಾರ ಸಂಜೆ ಭಿನ್ನ ಕೋಮಿನ ಜೋಡಿ ಮೇಲೆ ದಾಳಿ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ ಕದ್ರಿ ಠಾಣಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.ಸುರತ್ಕಲ್‌ ನಿವಾಸಿ ಮುತ್ತು(18), ಪ್ರಕಾಶ್‌(21) ಮತ್ತು ಅಸೈಗೋಳಿ...

ಉಡುಪಿಯ ಮಂದಾರ್ತಿಯಲ್ಲೂ ಸ್ಯಾಟ್‌ಲೈಟ್ ಫೋನ್ ಸಕ್ರಿಯ-ಉಗ್ರ ಕೃತ್ಯಕ್ಕೆ ಸಂಚು ಶಂಕೆ..?

ಉಡುಪಿ: ಇದುವರೆಗೆ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಷ್ಟೇ ಕೇಳಿ ಬರುತ್ತಿದ್ದ ಸ್ಯಾಟಲೈಟ್‌ ಫೋನ್‌ ಕರೆ ಈಗ ದೇವಾಲಯಗಳ ನಗರಿ ಉಡುಪಿ ಜಿಲ್ಲೆಯಲ್ಲೂ ಮೊಳಗಿದೆ. ಉಡುಪಿಯಲ್ಲೂ ಉಗ್ರರ ಕರಿನೆರಳು ಕಾಣಿಸಿದೆ.ಉಡುಪಿಯ ಮಂದಾರ್ತಿ ಸಮೀಪದ ಅರಣ್ಯ...

ಮಂಗಳೂರು: ಬೆಳ್ಮ ಬೋಲ್ದನ್‌ ಕುಟುಂಬಿಕರ ನಿವಾಸದಲ್ಲಿ ಕೋಲೋತ್ಸವ

ಮಂಗಳೂರು: ಮಂಗಳೂರು ನಗರ ಹೊರವಲಯದ ದೇರಳಕಟ್ಟೆ ಅಡ್ಕರಮಜಲು ಬೆಳ್ಮದ ಬೋಲ್ದನ್‌ ಕುಟುಂಬಿಕರ ತರವಾಡಿನ ಮನೆಯಲ್ಲಿ ಪಂಜುರ್ಲಿ, ಕಲ್ಲುರ್ಟಿ , ಗುಳಿಗ ದೈವಗಳ ನರ್ತನ ಸೇವೆ ವೈಭವದಿಂದ ಜರುಗಿತು.ನವೆಂಬರ್‌ 24ರಂದು ಬೆಳಿಗ್ಗೆ ತರವಾಡು ಮನೆಯಲ್ಲಿ...