Connect with us

    DAKSHINA KANNADA

    ಯಮ*ರೂಪದಲ್ಲಿ ರಸ್ತೆಗೆ ಅಡ್ಡ ಬಂದ ಶ್ವಾನ; ನವವಿವಾಹಿತೆ ಸಾ*ವು

    Published

    on

    ಕಾರ್ಕಳ: ಯಮರೂಪದಲ್ಲಿ ರಸ್ತೆಗೆ ಅಡ್ಡ ಬಂದ ಶ್ವಾನದ ಅವಾಂತರಕ್ಕೆ ಬೈಕ್ ಪಲ್ಟಿ ಹೊಡೆದಿದ್ದು, ನವವಿವಾಹಿತೆಯೊಬ್ಬಳು ರಸ್ತೆಗೆ ಎಸೆಯಲಟ್ಟು ಜೀವ*ತೆತ್ತ ಘಟನೆ ಕಾರ್ಕಳ ತಾಲೂಕಿನ ಈದು ಗ್ರಾಮದ ಹೊಸ್ಮಾರು ಸೇತುವೆ ಬಳಿ ಸಂಭವಿಸಿದೆ.

    ಕಾರ್ಕಳ ತೆಳ್ಳಾರು ರಸ್ತೆಯ ನಿವಾಸಿ ನಿಕ್ಷಾ ಎಂಬಾತ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ನತದೃಷ್ಠೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ವಿಶಾಲ್ ಎಂಬವರೊಂದಿಗೆ ದಾಂಪತ್ಯ ಬದುಕಿಗೆ ಕಾಲಿಟ್ಟ ನಿಕ್ಷಾ, ಈದು ದ್ವಾರ ಬಳಿಯ ಒಳರಸ್ತೆಯ ಮನೆಯೊಂದರಲ್ಲಿ ಪತಿಯೊಂದಿಗೆ ಸಂಸಾರ ನಡೆಸುತ್ತಿದ್ದರೆಂಬ ಮಾಹಿತಿ ತಿಳಿದುಬಂದಿದೆ.

    ಶುಕ್ರವಾರ ಮಧ್ಯಾಹ್ನದ ವೇಳೆಗೆ ಇವರು ಮಂಗಳೂರಿಗೆ ಹೊರಟಿದ್ದು, ಹೊಸ್ಮಾರು, ಶಿರ್ತಾಡಿ ಮಾರ್ಗವಾಗಿ ಮಂಗಳೂರಿಗೆ ತೆರಳುವ ಖಾಸಗಿ ಬಸ್ಸು ಏರಲೆಂದು ಪತಿಯೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದರು. ಆ ವೇಳೆಗೆ ಈದು ಕ್ರಾಸ್ ಬಳಿಯಲ್ಲಿ ಬಸ್ಸು ಹೊರಟು ಹೋದುದರಿಂದ ಹೊಸ್ಮಾರು ಜಂಕ್ಷನ್‌ನಲ್ಲಿ ಬಸ್ಸು ಏರಲು ಸಲುವಾಗಿ ಬೈಕ್‌ನಲ್ಲಿ ಹೊಸ್ಮಾರು ಕಡೆಗೆ ಬರುತ್ತಿದ್ದರು.

    ಹೊಸ್ಮಾರು ಸೇತುವೆ ಸಮೀಪ ಸ್ಮಶಾನ ಬಳಿ ರಸ್ತೆಗೆ ಅಡ್ಡವಾಗಿ ಶ್ವಾನ ಹಾದು ಹೋಗಿದ್ದು, ವೇಗವಾಗಿ ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಒಂದು ಬದಿಗೆ ಮಗುಚಿ ಬಿತ್ತು. ಆ ವೇಳೆಗೆ ಬೈಕ್‌ನ ಸಹಸವಾರಿ ನಿಕ್ಷಾ ರಸ್ತೆಗೆ ಎಸೆಯಲ್ಪಟ್ಟು ತಲೆ ಭಾಗಕ್ಕೆ ತೀವ್ರ ತರದಲ್ಲಿ ಗಾಯಗೊಂಡಿದ್ದರು. ಡಾಂಬರೀನ ಏಟಿಗೆ ಸ್ಥಳದಲ್ಲಿಯೇ ಅವರ ಪ್ರಾಣ*ಪಕ್ಷಿ ಹಾರಿ ಹೋಗಿತ್ತು.

    ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ನಿವೃತ್ತಿಗೊಂಡ ಪೊಲೀಸ್ ಅಧಿಕಾರಿಗೆ ವಿಶೇಷ ಗೌರವ..! ಪುಷ್ಪಾರ್ಚಣೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು..!

    Published

    on

    ಮೂಡುಬಿದಿರೆ: ಪೊಲೀಸ್‌ ಅಧಿಕಾರಿಯಾದವರು ದಕ್ಷತೆ, ಪ್ರಮಾಣಿಕತೆಯಿಂದ ಕೆಲಸ ಮಾಡಿದರೆ ಎಂತಹ ಗೌರವ ಸಿಗುತ್ತದೆ ಅನ್ನೋದಕ್ಕೆ ಮೂಡಬಿದಿರೆಯ ಈ ಪೊಲೀಸ್‌ ಅಧಿಕಾರಿಯೇ ಸಾಕ್ಷಿ. ಹೌದು, ಪೊಲೀಸ್‌ ಅಧಿಕಾರಿಯಾಗಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿದ್ದ ಪೊಲೀಸ್ ಉಪನಿರೀಕ್ಷಕ ದಿವಾಕರ್‌ ರೈ ಅವರಿಗೆ ಸಹೋದ್ಯೋಗಿಗಳು ಪುಷ್ಪಾರ್ಚನೆಯ ಗೌರವ ಸಲ್ಲಿಸಿದ್ದಾರೆ.

    ದಿವಾಕರ ರೈ ಅವರು ಸೇವೆಯಿಂದ ನಿವೃತ್ತರಾಗಿದ್ದರು. ಮೂಡಬಿದಿರೆಯ ಪೊಲೀಸ್‌ ಠಾಣೆಯಿಂದ ಅವರು ಸೇವೆಯನ್ನು ಮುಗಿಸಿ ಮನೆಗೆ ತೆರಳುವ ವೇಳೆಯಲ್ಲಿ ಅವರು ಠಾಣೆಯಿಂದ ಪೊಲೀಸ್‌ ಜೀಪ್‌ ಏರುವವರೆಗೂ ಮೂಡಬಿದಿರೆಯ ವೃತ್ತ ನಿರೀಕ್ಷಕರಾದ ಸಂದೇಶ್‌ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪುಷ್ಪಾರ್ಚನೆಯನ್ನು ಮಾಡಿದ್ದಾರೆ. ಪೊಲೀಸ್‌ ಜೀಪ್‌ನಲ್ಲೇ ಪೊಲೀಸ್‌ ಅಧಿಕಾರಿಯಾಗಿಯೇ ದಿವಾಕರ ರೈ ಮನೆಗೆ ತೆರಳಿದ್ದಾರೆ. ಸಹೋದ್ಯೋಗಿಗಳು ನೀಡಿದ ಗೌರವಕ್ಕೆ ದಿವಾಕರ ರೈ ಅವರು ಆನಂದ ಬಾಷ್ಪ ಸುರಿಸಿದ್ದಾರೆ. ಸದಾ ಒಂದೊಲ್ಲೊಂದು ಅಪರಾಧ ಪ್ರಕರಣಗಳಿಂದಲೇ ಬ್ಯುಸಿಯಾಗಿರುತ್ತಿದ್ದ ಮೂಡಬಿದಿರೆಯ ಪೊಲೀಸ್‌ ಠಾಣೆ ಇಂದು ವಿನೂತನ ಸಂದರ್ಭಕ್ಕೆ ಸಾಕ್ಷಿಯಾಗಿತ್ತು.

    ಈ ಪುಣ್ಯಕ್ಷೇತ್ರಕ್ಕೆ ಹೋಗಲು ರಾಜ್ಯ ಸರ್ಕಾರದಿಂದ ಸಹಾಯಧನ ಸಿಗಲಿದೆ..!

    Continue Reading

    DAKSHINA KANNADA

    ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಭೇಟಿ ಮಾಡಿದ ಸಂಸದ ಚೌಟ

    Published

    on

    ಮಂಗಳೂರು : ಕರಾವಳಿ ಕಂಡ ಹಿರಿಯ ಮುತ್ಸದ್ದಿ, ನೇರ ನುಡಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ತೆರಳಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಶೀರ್ವಾದ ಪಡೆದು ಪಡೆದು ವಿದ್ಯಮಾನಗಳ ಕುರಿತು ಮಾತನಾಡಿದರು.

    ಬಂಟ್ವಾಳ ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ, ಗೋವಿಂದ ಪ್ರಭು, ಜಿಲ್ಲಾ ಉಪಾಧ್ಯಕ್ಷ ದಿನೇಶ್ ಅಮ್ಟೂರು ಮತ್ತು ಜಿಲ್ಲಾ ಮಾಧ್ಯಮ ಸಂಚಾಲಕ ವಸಂತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

    Continue Reading

    DAKSHINA KANNADA

    ವೀರಪ್ಪ ಮೊಯ್ಲಿ ಪುತ್ರಿ ವಿಧಿವಶ..!

    Published

    on

    ಬೆಂಗಳೂರು : ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪುತ್ರಿ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಪುತ್ರಿ ಹಂಸ ಮೊಯ್ಲಿ ಸಾವಿನ ಸುದ್ದಿ ತಿಳಿದು ಛತ್ತೀಸ್‌ಘಡದಲ್ಲಿದ್ದ ವೀರಪ್ಪ ಮೊಯ್ಲಿ ರಾತ್ರಿಯೇ ವಾಪಾಸ್ ಆಗಿದ್ದಾರೆ.


    ಹಂಸ ಮೊಯ್ಲಿ ಅವರು ಭರತನಾಟ್ಯ ನೃತ್ಯಗಾರ್ತಿ ಮತ್ತು ಪ್ರಾಯೋಗಿಕ ನೃತ್ಯ ಸಂಯೋಜಕಿಯಾಗಿದ್ದರು. ಹಲವಾರು ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ವೇದಿಕೆಯಲ್ಲಿ ತಮ್ಮ ನೃತ್ಯ ಪ್ರದರ್ಶನ ನೀಡಿದ್ದರು. ದೇವದಾಸಿಯರ ಜೀವನವನ್ನು ಆಧರಿಸಿದ ತಮಿಳು ಸಿನಿಮಾʻ ಶೃಂಗಾರಂʼನಲ್ಲಿ ನಟಿಸಿದ್ದರು. ಇತ್ತೀಚೆಗೆ ಮಕ್ಕಳಿಗಾಗಿ ಹಿಂದಿ ನಾಟಕ, ಕ್ಯುನ್ ಕ್ಯುನ್ ಲಡ್ಕಿ, ಅದೇ ಹೆಸರಿನ ಮಹಾಶ್ವೇತಾ ದೇವಿಯವರ ಪುಸ್ತಕದಿಂದ ಸ್ಫೂರ್ತಿ ಪಡೆದಿದ್ದಾರೆ ಮತ್ತು ರವೀಂದ್ರನಾಥ ಟ್ಯಾಗೋರ್ ಅವರು ಮಕ್ಕಳಿಗಾಗಿ ಬರೆದ ಇಂಗ್ಲಿಷ್ ನಾಟಕಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಮಾಜ ಸೇವೆಯಲ್ಲೂ ಮುಂಚೂಣಿಯಲ್ಲಿದ್ದ ಅವರು ಜನಾನುರಾಗಿ ಎಂದು ಹೆಸರು ಪಡೆದುಕೊಂಡಿದ್ದರು. 46 ವರ್ಷ ಪ್ರಾಯದ ಹಂಸ ಮೊಯ್ಲಿ ಅವರಿಗೆ ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡು ನಿನ್ನೆ ಸಂಜೆ ತೀವೃ ಅಸ್ವಸ್ಥರಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

    Continue Reading

    LATEST NEWS

    Trending