Sunday, November 27, 2022

ಕಣ್ಣೂರು: ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆಫ್ರಿಕನ್‌ ಹೆಬ್ಬಾವು ಮರಿ ಸಾಗಾಟ

ಕಣ್ಣೂರು: ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನ ಎ.ಸಿ. ಕೋಚ್‌ನ ಪ್ರಯಾಣಿಕರ ಬೋಗಿಯಲ್ಲಿ 4 ಆಫ್ರಿಕನ್‌ ಹೆಬ್ಬಾವಿನ ಮರಿಗಳನ್ನು ಸಾಗಿಸಿದ ಪ್ರಕರಣವನ್ನು ರೈಲ್ವೇ ಅಧಿಕಾರಿಗಳು ಪತ್ತೆ ಮಾಡಿ ಅದನ್ನು ಸಾಗಿಸಿದ ವ್ಯಕ್ತಿಗೆ ಪ್ರತಿ ಹಾವಿನ ಮರಿಗೆ ತಲಾ 500 ರೂ. ನಂತೆ ದಂಡ ವಿಧಿಸಿದ ಪ್ರಕರಣ ಕೇರಳದಲ್ಲಿ ನಡೆದಿದೆ.

ಕೇರಳದ ಕಣ್ಣೂರು ಪಯಂಗಾಡಿ ನಿವಾಸಿ ಎಂ. ಮುಹಮ್ಮದ್‌ ಇಶಾಮ್‌ಗಾಗಿ ಏಜೆನ್ಸಿ ಮೂಲಕ ಆಫ್ರಿಕಾದಿಂದ ದಿಲ್ಲಿಗೆ ತರಲಾದ ನಾಲ್ಕು ಹೆಬ್ಬಾವು ಮರಿಗಳ ಬೆಲೆ ಲಕ್ಷಾಂತರ ಮೌಲ್ಯ ಅಂದಾಜಿಸಲಾಗಿದ್ದು ಅವುಗಳನ್ನು ಮುಂಬಯಿನಿಂದ ಕೇರಳಕ್ಕೆ ರೈಲಿನ ಮೂಲಕ ಸಾಗಿಸಲಾಗುತ್ತಿತ್ತು.

ಇದು ವನ್ಯಜೀವಿ ಕಾಯಿದೆಯಡಿ ಬರದ ಕಾರಣ ಅರಣ್ಯ ಇಲಾಖೆಯು ಪ್ರಕರಣ ದಾಖಲಿಸಿಲ್ಲ. ಆದರೆ ಪ್ರಯಾಣಿಕರ ಬೋಗಿಯಲ್ಲಿ ಹಾವಿನ ಮರಿಗಳನ್ನು ಸಾಗಿಸಿದ್ದಕ್ಕಾಗಿ ರೈಲ್ವೆ ಅಲ್ಪ ಮೊತ್ತದ ದಂಡ ವಿಧಿಸಿದೆ. ರೈಲ್ವೆ ಕಾಯಿದೆಯ ಸೆಕ್ಷನ್‌ 145 (ಬಿ) ಅಡಿಯಲ್ಲಿ 500 ದಂಡ ವಿಧಿಸಲಾಗಿದೆ.


ಮುಂಬಯಿಯ ವಸಾಯಿ ರೋಡ್‌ ನಿಲ್ದಾಣದಿಂದ ಕಣ್ಣೂರಿಗೆ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನ ಎ-2 (ನಂ. 12432) ಎ.ಸಿ.ಕೋಚ್‌ನಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ನಾಲ್ಕು ಹಾವಿನ ಮರಿಗಳನ್ನು ತರಲಾಗಿತ್ತು.

ರೈಲಿನ ಬೆಡ್‌ರೋಲ್‌ ಉದ್ಯೋಗಿ ಕಮಲ್ಕಾಂತ್‌ ಶರ್ಮಾ ಅವರು ಎಂ. ಮುಹಮ್ಮದ್‌ ಇಶಾಮ್‌ ಪರವಾಗಿ ದಂಡ ಪಾವತಿಸಿದ ಹಿನ್ನೆಲೆಯಲ್ಲಿ ಹಾವಿನ ಮರಿಗಳನ್ನು ಮಹಮ್ಮದ್‌ ಇಶಾಮ್‌ಗೆ ಬಿಟ್ಟು ಕೊಡಲಾಗಿದೆ.

‘ಆಫ್ರಿಕನ್‌ ಬಾಲ್‌ ಪೈಥಾನ್‌ ಶ್ರೇಣಿಯ ಈ ಹೆಬ್ಬಾವಿನ ಮರಿಗಳಾಗಿದ್ದು ಮನೆಗಳಲ್ಲಿ ಬೆಳೆಸಿ ಮಾರಾಟ ಮಾಡಲಾಗುತ್ತದೆ. ಎಲ್ಲ ದಾಖಲೆಗಳು ಇವೆ. ದಿಲ್ಲಿ ಏಜೆನ್ಸಿ ಮೂಲಕ ಬುಕ್‌ ಮಾಡಲಾಗಿದೆ.

ಕೊರಿಯರ್‌ ಮೂಲಕ ಕಳುಹಿಸಲು ಹೇಳಿದ್ದರೂ ರಾಜಧಾನಿ ಎಕ್ಸ್‌ ಪ್ರೆಸ್‌ನ ಗುತ್ತಿಗೆ ಕಾರ್ಮಿಕರು ಹಣ ಪಾವತಿಸಿ ಹಾವಿನ ಮರಿಗಳನ್ನು ಕಳುಹಿಸಿದ್ದಾರೆ. ಇದು ನನ್ನ ಅರಿವಿಗೆ ಬಂದಿರಲಿಲ್ಲ’ ಎಂದು ಮಹಮ್ಮದ್‌ ಇಶಾಮ್‌ ತಿಳಿಸಿದ್ದಾರೆ.


ಈ ಹಾವುಗಳು 20 ವರ್ಷಗಳಿಗಿಂತ ಹೆಚ್ಚು ಜೀವಿತಾವಧಿಯನ್ನು ಹೊಂದಿದ್ದು, ಅವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ, ಪರಿಸರ ವ್ಯವಸ್ಥೆಗೆ ಹಾನಿಯಾಗುತ್ತದೆ.

ಅವುಗಳನ್ನು ಕುತೂಹಲದಿಂದ ಬೆಳೆಸಿ ಬಳಿಕ ಹೊರ ಬಿಟ್ಟರೆ ಇತರ ಜೀವಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಪುಣೆ ಝೂಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ ವಿಜ್ಞಾನಿ ಡಾ. ಜಾಫರ್‌ ಪಾಲೋಟ್‌ ಹೇಳುತ್ತಾರೆ.

 

LEAVE A REPLY

Please enter your comment!
Please enter your name here

Hot Topics

ಬಾಂಬ್ ಸ್ಫೋಟ ಆರೋಪಿ ಶಾರೀಕ್‌ಗೆ ಆಸ್ಪತ್ರೆಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್‌-ಸ್ಪೋಟದ ಬೆನ್ನಲ್ಲೇ ಟ್ವೀಟ್‌ ಮಾಡಿದ ಝಾಕೀರ್‌…

ಮಂಗಳೂರು: ಮಂಗಳೂರಿನಲ್ಲಿ ರಿಕ್ಷಾದಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಇದೀಗ ಶಾರೀಕ್‌ ಜೀವಕ್ಕೂ ಆಪತ್ತು ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಬಳಿ ಪೊಲೀಸರು ಬಿಗು...

ಸುಳ್ಯ: ಸಚಿವ ಅಂಗಾರ ಅವರಿಗೆ ಡೆಂಗ್ಯೂ ದೃಢ-ಆಸ್ಪತ್ರೆಗೆ ದಾಖಲು

ಸುಳ್ಯ: ಶಾಸಕ, ಬಂದರು, ಮೀನುಗಾರಿಕೆ ಹಾಗೂ ಒಳ ನಾಡು ಜಲ ಸಾರಿಗೆ ಸಚಿವ ಎಸ್‌. ಅಂಗಾರ ಅವರಿಗೆ ಡೆಂಗ್ಯೂ ದೃಢಪಟ್ಟ ಕಾರಣ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.  ಈ ಹಿನ್ನೆಲೆ ಅವರು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಾಗಿರುವುದಾಗಿ...

ಕುಕ್ಕೆ ಕ್ಷೇತ್ರದಲ್ಲಿ 116 ಮಂದಿ ಭಕ್ತರಿಂದ ಎಡೆಮಡೆ ಸ್ನಾನ..

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಉತ್ಸವದ ಪ್ರಯುಕ್ತ 116 ಮಂದಿ ಭಕ್ತರಿಂದ ಇಂದು ಎಡೆಮಡೆ ಸ್ನಾನ ನಡೆಯಿತು.ದೇವರ ನೈವೇದ್ಯದ ಮೇಲೆ...