LATEST NEWS
ಬದುಕಿ ಬರಲಿಲ್ಲ ಕಂದಮ್ಮ; ಫಲ ಕೊಡದ 9 ದಿನದ ಕಾರ್ಯಾಚರಣೆ
Published
4 days agoon
By
NEWS DESK3ಮಂಗಳೂರು/ಜೈಪುರ: ರಾಜಸ್ಥಾನದಲ್ಲಿ ಡಿಸೆಂಬರ್ 23ರಂದು ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕಿಯನ್ನು ಕೊನೆಗೂ ಸತತ 10 ದಿನಗಳ ಕಾರ್ಯಾಚರಣೆಯಲ್ಲಿ ಜೀವಂತವಾಗಿ ಹೊರತೆರೆಯಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬಾಲಕಿ ಮೃತಳಾಗಿದ್ದಾಳೆ.
ಮೂರು ವರ್ಷದ ಬಾಲಕಿ ಚೇತನಾ 700 ಅಡಿ ಆಳದ ಬೋರ್ ವೆಲ್ ಗೆ ಬಿದ್ದಿದ್ದಳು. ಚೇತನಾ ಬದುಕಿ ಬರಲಿ ಅಂತಾ ಕೈ ಮುಗಿಯದ ದೇವರಿಲ್ಲ. ಹರಕೆ ಹೊರದ ದಿನವಿಲ್ಲ. ಮಗುವಿಗಾಗಿ ಲಕ್ಷಾಂತರ ಜನರು ಮಾಡಿದ್ದ ಪ್ರಾರ್ಥನೆ ಕೊನೆಗೂ ಫಲಿಸಲಿಲ್ಲ.
ಡಿಸೆಂಬರ್ 23 ರಂದು ರಾಜಸ್ಥಾನದ ಕೊಟ್‌ಪುಟ್ಲಿ-ಬೆಹ್ರೋರ್ ಜಿಲ್ಲೆಯ ಸರುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಿಯಾಲಿ ಧನಿಯಲ್ಲಿ ತನ್ನ ತಂದೆಯ ಕೃಷಿ ಜಮೀನಿನಲ್ಲಿ ಆಟವಾಡುತ್ತಿದ್ದಾಗ ಚೇತನಾ ಬೋರ್‌ವೆಲ್‌ಗೆ ಬಿದ್ದಿದ್ದಾಳೆ. ಅವಳನ್ನ ಹೊರತೆಗೆಯಲು ಬಳಸಿದ ಆರಂಭಿಕ ರಕ್ಷಣಾ ಪ್ರಯತ್ನಗಳು ವಿಫಲವಾದ್ವು. ಎರಡು ದಿನಗಳ ವಿಫಲ ಯತ್ನಗಳ ನಂತರ, ಪೈಲಿಂಗ್ ಯಂತ್ರವನ್ನು ತರಲಾಗಿತ್ತು. ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಪಕ್ಕದಲ್ಲೇ ಹೊಂಡ ಕೂಡ ಅಗೆಯಲಾಗಿತ್ತು. ವಿಧಿಯಾಟ ಬೇರೆಯೇ ಇತ್ತು.
ಇದನ್ನೂ ಓದಿ: ಕೇರಳದ ನರ್ಸ್ ಗೆ ಯೆಮೆನ್ ನಲ್ಲಿ ಮರಣದಂಡನೆ; ಏನಿದು ಪ್ರಕರಣ ?
ಅಧಿಕಾರಿಗಳು 160 ಗಂಟೆಗಳ ಕಾಲ ಹಗಲಿರುಳು ಕೆಲಸ ಮಾಡಿ, 100 ಟನ್ ಸಾಮರ್ಥ್ಯದ ಕ್ರೇನ್ ಬಳಸಿ ಸುರಂಗ ಅಗೆದ್ರು. ಮಳೆ ನಡುವೆ ಅಡ್ಡ ಸಿಕ್ಕ ಬೃಹತ್ ಬಂಡೆಯನ್ನ ಸೀಳಿ, ತುಂಬಾ ಸವಾಲುಗಳನ್ನ ಎದುರಿಸಿದ ಎನ್‌ಡಿಆರ್‌ಎಫ್ ತಂಡ ಕೊನೆಗೆ ನಿನ್ನೆ ಮಗುವನ್ನ ರಕ್ಷಣೆ ಮಾಡ್ತು. ಬಾಲಕಿಯನ್ನ ಬೋರ್‌ವೆಲ್‌ನಿಂದ ಹೊರತೆಗೆದು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟುಹೊತ್ತಿಗಾಗಲೇ ಬಾಲಕಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮಗು ಜೀವಬಿಟ್ಟ ಬಗ್ಗೆ ವೈದ್ಯರು ಖಚಿತಪಡಿಸಿದ್ರು.
ಬಾಲಕಿಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಾಲಕಿಗೆ ಆಹಾರ ಮತ್ತು ಆಮ್ಲಜನಕವನ್ನು ಒದಗಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಆಕೆಯ ಸ್ಥಿತಿ ಹದಗೆಟ್ಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೇನೆ ಇರಲಿ, ಕಣ್ಣ ಮುಂದೆ ಆಟವಾಡೋ ಮಗು ಅಸುನೀಗಿದೆ ಅನ್ನೊದು ಕುಟುಂಬಕ್ಕೆ ನುಂಗಲಾರಾದ ತುತ್ತಾಗಿದೆ.
LATEST NEWS
ಬಾಯ್ ಫ್ರೆಂಡ್ ಗಾಗಿ ಹುಡುಗಿಯರಿಬ್ಬರ ಬೀದಿ ಜಗಳ
Published
49 minutes agoon
06/01/2025By
NEWS DESK3ಮಂಗಳೂರು/ಉತ್ತರಪ್ರದೇಶ : ‘ಪ್ರೀತಿಸುವ ಹುಡುಗಿಗೆ ಬುದ್ದಿ ಬಂತು ಎಂದರೆ ಯಮರಾಜನ ಜೊತೆಗೂ ಜಗಳವಾಡುತ್ತಾಳೆ’ ಎಂಬ ಆಡು ಭಾಷೆಯಂತೆ ಇಬ್ಬರು ಸಹೋದರಿಯರು ತಮ್ಮ ತಂದೆಯ ಎದುರೇ, ನಡುರಸ್ತೆಯಲ್ಲಿ ಬಟ್ಟೆ ಹರಿದಾಡಿಕೊಂಡು ಬಾಯ್ ಫ್ರೆಂಡ್ ಗಾಗಿ ಜಗಳವಾಡಿದ್ದಾರೆ.
ಇದು ಉತ್ತರಪ್ರದೇಶದ ಬಾಗ್ ಪತ್ ನಲ್ಲಿ ಎರಡು ಹುಡುಗಿಯರ ಗುಂಪುಗಳ ನಡುವೆ ನಡೆದ ಜಗಳ. ಅಷ್ಟಕ್ಕೂ ವಿಷಯ ಏನೂ ಅಂದರೆ, ಇಬ್ಬರೂ ಹುಡುಗಿಯರು ಒಬ್ಬ ಹುಡುಗನೊಂದಿಗೆ ಮಾತನಾಡಿದಕ್ಕೆ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದೆ.
ಒಬ್ಬ ಹುಡುಗನನ್ನು ಇಬ್ಬರೂ ಹುಡುಗಿಯರು ಪ್ರೀತಿಸುತ್ತಿದ್ದರು. ಇವರ ನಡುವೆ ಮೆಸೇಜ್ ಚಾಟ್ ಕೂಡ ನಡೆಯುತ್ತಿತ್ತು. ಇದೀಗ ಇದು, ಪರಸ್ಪರ ಜಗಳಕ್ಕೆ ಕಾರಣವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ಪ್ರಕಾರ, ರಸ್ತೆಯಲ್ಲಿ ಗುಂಪಾಗಿ ಹೋಗುತ್ತಿದ್ದ ಹುಡುಗಿಯರ ಗುಂಪನ್ನು ತಡೆದು ತನ್ನ ಗೆಳತಿಗೆ ಹುಡುಗ ಕಪಾಳಮೋಕ್ಷ ಮಾಡಿದ್ದಾನೆ.
ಇದನ್ನೂ ಓದಿ: ಸುದೀಪ್ ಮಗಳು ಸಾನ್ವಿ ಬಗ್ಗೆ ಯಾಕಿಷ್ಟು ಟ್ರೋಲ್? ಅವರು ಮಾಡಿದ ತಪ್ಪೇನು?
ಇದರಿಂದ ಗೆಳತಿ, ಪಕ್ಕದಲ್ಲೇ ಬರುತ್ತಿದ್ದ ಇನ್ನೊಂದು ಗುಂಪಿನಲ್ಲಿದ್ದ ತನ್ನ ಪ್ರೇಮಿಯೊಂದಿಗೆ ನಂಟು ಹೊಂದಿರುವ ಸಹೋದರಿಗೆ ಹೊಡೆದಿದ್ದಾಳೆ. ಇದರಿಂದ ಇಬ್ಬರ ನಡುವೆ ತೀವ್ರ ಹೊಡೆದಾಟ ನಡೆದಿದೆ. ಪರಸ್ಪರ ಕೂದಲನ್ನು ಎಳೆದಾಡಿಕೊಂಡು, ಬಟ್ಟೆಗಳನ್ನು ಹರಿದು ಹಾಕುವ ಹಂತಕ್ಕೆ ಈ ಜಗಳ ತಲುಪಿತ್ತು. ಇದನ್ನು ತಡೆಯಲು ಬಂದ ತಂದೆಯ ಮಾತುಗಳನ್ನು ಕೇಳದೆ ಸಹೋದರಿಯರು ಜಗಳವಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಸ್ಥಳೀಯರು, ಈ ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಜಗಳವನ್ನು ನಿಲ್ಲಿಸಿದ್ದಾರೆ.
LATEST NEWS
ಸೆಂಟ್ರಿಂಗ್ ಮರದ ತುಂಡು ಬಿದ್ದು ಬಾಲಕಿ ಸಾವು ಕೇಸ್: ಎಂಜಿನಿಯರ್ ಪೊಲೀಸ್ ವಶಕ್ಕೆ
Published
2 hours agoon
06/01/2025By
NEWS DESK2ಬೆಂಗಳೂರಲ್ಲಿ ಶಾಲೆ ಮುಗಿಸಿಕೊಂಡು ಮನೆಗೆ ತೆರಳುವ ವೇಳೆ ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್ ಮರದ ತುಂಡು ಬಿದ್ದು 15 ವರ್ಷದ ಬಾಲಕಿ ತೇಜಸ್ವಿನಿ ಸಾವನಪ್ಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇದೀಗ ಕಟ್ಟಡದ ಇಂಜಿನಿಯರ್ ಚಂದ್ರಶೇಖರ್ ಎನ್ನುವವರನ್ನು ವಿವಿ ಪುರಂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೌದು ಕಟ್ಟಡ ನಿರ್ಮಾಣ ಮಾಡುತ್ತಿರುವ ಇಂಜಿನಿಯರ್ ಅನ್ನು ವಿವಿ ಪುರಂ ಠಾಣೆ ಪೋಲಿಸಿರುವ ಅವಶ್ಯಕತೆ ಪಡೆದುಕೊಂಡು ಸದ್ಯ ವಿಚಾರಣೆ ನಡೆಸುತ್ತಿದ್ದಾರೆ.ಘಟನೆ ಸಂಬಂಧ ತೇಜಸ್ವಿನಿ ತಂದೆ ಸುಧಾಕರ್ ರಾವ್ ಅವರು ನೀಡಿದ ದೂರಿನ ಮೇರೆಗೆ ಕಟ್ಟಡ ಮಾಲಿಕ, ಗುತ್ತಿಗೆದಾರ, ಎಂಜಿನಿಯರ್, ಬಿಬಿಎಂಪಿ ಅಧಿಕಾರಿಗಳು ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇನ್ನು ಕಟ್ಟಡ ಮಾಲಿಕ, ಗುತ್ತಿಗೆದಾರ ಹಾಗೂ ಘಟನೆ ವೇಳೆ ಕೆಲಸ ಮಾಡುತ್ತಿದ್ದ ಕಟ್ಟಡ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಇನ್ನು ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಿದ ಬಿಬಿಎಂಪಿ ಅಧಿಕಾರಿಗಳು ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸಿಲ್ಲ ಎಂಬುದು ಗೊತ್ತಾಗಿದೆ. ಎಲ್ಲಾ ಆರೋಪಿಗಳನ್ನು ಸದ್ಯದಲ್ಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು.
LATEST NEWS
ಬರ್ತ್‌ಡೇ ದಿನದಂದೇ ಹಾಸ್ಟೆಲ್ ಕಟ್ಟಡದಿಂದ ಬಿದ್ದು ‘IIM’ ವಿದ್ಯಾರ್ಥಿ ಸಾವು
Published
2 hours agoon
06/01/2025By
NEWS DESK2ಬೆಂಗಳೂರು: ಬೆಂಗಳೂರಲ್ಲಿ ಇದೀಗ ಮತ್ತೊಂದು ದುರಂತ ಸಂಭವಿಸಿದ್ದು, ತನ್ನ ಹುಟ್ಟು ಹಬ್ಬದ ದಿನದಂದೇ ಐಐಎಂ ವಿದ್ಯಾರ್ಥಿ ಒಬ್ಬ ಹಾಸ್ಟೆಲ್ ಕಟ್ಟಡದಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಎಂಬಿಎ ಎರಡನೇ ವರ್ಷದ ವಿದ್ಯಾರ್ಥಿ ಕೈಲಾಶ್‌ಭಾಯ್ ಪಟೇಲ್ (28) ಎಂದು ಗುರುತಿಸಲಾಗಿದೆ. ಈತ ಗುಜರಾತ್ ಮೂಲದವನು ಎಂದು ತಿಳಿದುಬಂದಿದ್ದು, ಹಾಸ್ಟೆಲ್ ಕಟ್ಟಡದ 3ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು, ಕೈಲಾಶ್ ಮೃತಪಟ್ಟಿದ್ದಾನೆ.
ಶನಿವಾರ ನಿಲಯ್ ತನ್ನ ಹುಟ್ಟುಹಬ್ಬವಿದ್ದ ಕಾರಣ ಸ್ನೇಹಿತರೊಂದಿಗೆ ಹೊರಗಡೆ ತೆರಳಿದ್ದ. ನಂತರ ಹಾಸ್ಟೆಲ್ನಲ್ಲಿರುವ ಸ್ನೇಹಿತನ ಕೊಠಡಿಯಲ್ಲಿ ನಿಲಯ್ ಹುಟ್ಟುಹಬ್ಬ ಆಚರಿಸಲಾಗಿತ್ತು. ಬಳಿಕ ತನ್ನ ಕೋಣೆಗೆ ಹಿಂತಿರುಗುತ್ತಿದ್ದಾಗ ಅವಘಡ ಸಂಭವಿಸಿದೆ. ಭಾನುವಾರ ಬೆಳಗ್ಗೆ ಹಾಸ್ಟೆಲ್ ಭದ್ರತಾ ಸಿಬ್ಬಂದಿ ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
LATEST NEWS
ಪತ್ರಕರ್ತನ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಪೊಲೀಸ್ ವಶಕ್ಕೆ
UPI ಬಳಕೆದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆಯೇ ಖಾಲಿ.!
ಸುದೀಪ್ ಮಗಳು ಸಾನ್ವಿ ಬಗ್ಗೆ ಯಾಕಿಷ್ಟು ಟ್ರೋಲ್? ಅವರು ಮಾಡಿದ ತಪ್ಪೇನು?
ಬೈಕ್ ಕಾರು ನಡೆವೆ ಭೀಕರ ಅ*ಪಘಾ*ತ ; ಆರ್ಎಸ್ಎಸ್ ಪ್ರಮುಖ್ ವಿ*ಧಿವಶ
ಮತ್ತೋರ್ವ ಬಾಣಂತಿ ಸಾವು – ಸಾವಿನ ಸಂಖ್ಯೆ 12ಕ್ಕೆ ಏರಿಕೆ
BBK 11: ತ್ರಿವಿಕ್ರಮ್ ಡೇಂಜರ್ ಎಂದ ಭವ್ಯಾ ಗೌಡ
Trending
- DAKSHINA KANNADA5 days ago
ಬೊಜ್ಜು ಕರಗಿಸಲು ವ್ಯಾಯಾಮದ ಅಗತ್ಯ ಇಲ್ಲ : ಮಾತ್ರೆ ತಿಂದರೆ ಸಾಕು..!
- DAKSHINA KANNADA3 days ago
ಜಮೀನು ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ಸುಪ್ರೀಂ ಕೋರ್ಟ್..!
- LATEST NEWS6 days ago
ಮೈಸೂರು: ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಪ್ರತ್ಯಕ್ಷ; ಉದ್ಯೋಗಿಗಳಿಗೆ ಮನೆಯಿಂದ ಕೆಲಸಕ್ಕೆ ಸೂಚನೆ
- BIG BOSS2 days ago
2ನೇ ಮದುವೆಗೆ ಸಜ್ಜಾದ ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್; ಹುಡುಗಿ ಯಾರು ಗೊತ್ತಾ..?
Pingback: ಇನ್ಮುಂದೆ ನಾನು ಮಹಿಳೆಯರನ್ನು ನೋಡುವುದೇ ಇಲ್ಲ; ಹೊಸ ವರ್ಷಕ್ಕೆ ಖ್ಯಾತ ಡೈರೆಕ್ಟರ್ ಟ್ವೀಟ್ ವೈರಲ್ ! - NAMMAKUDLA NEWS - ನಮ
Pingback: ಮಹಿಳಾ ಉದ್ಯೋಗಿಗೆ ಚೂರಿ ತೋರಿಸಿ, ಹಲ್ಲೆ; ಆರೋಪಿ ಬಂಧನ - NAMMAKUDLA NEWS - ನಮ್ಮಕುಡ್ಲ ನ್ಯೂಸ್