Connect with us

    BANTWAL

    ನಾಲಗೆ ಇದೆ ಎಂದು ಅಸಂಬದ್ಧ ಮಾತನಾಡಬೇಡಿ-ಕಲ್ಲಡ್ಕ ಪ್ರಭಾಕರ್ ಭಟ್

    Published

    on

    ಬಂಟ್ವಾಳ: ನಾಲಗೆ ಇದೆ ಎಂದು ಅಸಂಬದ್ಧವಾದ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ದೇಶದ್ರೋಹ ಹಾಗೂ ನಪುಂಸಕತೆಯ ನಡುವಿರುವ ವ್ಯತ್ಯಾಸ ಏನು ಅಂತ ಹೇಳಲಿ ಎಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಎಚ್ಚರಿಕೆ ನೀಡಿದ್ದಾರೆ.

    ಆರ್‌ಎಸ್‌ಎಸ್‌ ಬಗ್ಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ ಹೇಳಿಕೆಗೆ ನಿನ್ನೆ ಕಲ್ಲಡ್ಕದಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ, ಕಳೆದ 97 ವರ್ಷಗಳಿಂದ ದೇಶಕ್ಕಾಗಿ ಬದುಕುತ್ತಿರುವ, ಸೇವೆಯ ಕಣ್ಣ ಮುಂದೆ ಇಟ್ಟುಕೊಂಡು, ಕೋಟಿ ಕೋಟಿ ಜನರಿಗೆ ದೇಶಕ್ಕೋಸ್ಕರ ಬದುಕುವ ಚಿಂತನೆ ನಡೆಸುತ್ತಿರುವ ಏಕೈಕ ಸಂಸ್ಥೆ ಅದು ಆರ್‌ಎಸ್‌ಎಸ್ ಇದರ ಬಗ್ಗೆ ಮಾತನಾಡಲು ಇವರಲ್ಲಿ ಏನಿದೆ ನೈತಿಕತೆ ಎಂದು ಅವರು ಗುಡುಗಿದ್ದಾರೆ.


    ಸುಮಾರು ವರ್ಷಗಳ ಹಿಂದೆ ಮುಸ್ಲಿಂ ದೇಶಕ್ಕೆ ಹೊರಟ ಎರಡು ವಿಮಾನಗಳು ರಾಜಸ್ಥಾನದಲ್ಲಿ ಅಪಘಾತ ನಡೆದ ಸಂದರ್ಭದಲ್ಲಿ ತಕ್ಷಣ ಅಲ್ಲಿ ಹೋಗಿದ್ದು ಆರ್.ಎಸ್.ಎಸ್.ಸಂಘಟನೆ, ಅಲ್ಲಿ ಹೋಗಿ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳ ಶವ ಹಾಗೂ ಚಿನ್ನಾಭರಣಗಳನ್ನು ಅವರ ಅವರ ಕುಟುಂಬಕ್ಕೆ ಹಸ್ತಾಂತರ ಮಾಡಿದ ಬಳಿಕ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಅವರು ಅಲ್ಲಿಗೆ ಭೇಟಿ ನೀಡಿ ಮೊತ್ತಮೊದಲ ಬಾರಿಗೆ ಆರ್.ಎಸ್.ಎಸ್.ಬಗ್ಗೆ ಹೊಗಳಿ ಮಾತನಾಡಿದರು.


    ಸರ್ವೇ ಸಾಮಾನ್ಯರಿಗೋಸ್ಕರ ಬದುಕುವುದು ಸಂಘದ ಮೂಲ ಉದ್ದೇಶ. ದಿನ ನಿತ್ಯ ಭಾರತ್ ಮಾತ ಕೀ ಜೈ ಅಂತ ಹೇಳಿದರೆ ಅದು ಸಂಘದ ಕಾರ್ಯಕರ್ತರು ಮಾತ್ರ. ಇವರು ಇಟಲಿಯವರಿಗೆ ಜೈ ಕಾರ ಹಾಕಿದವರು. ದೇಶ ವಿಭಜನೆ ಮಾಡಿದ್ದು ಯಾರು? ಸಮಾಜ ವಿಭಜನೆ ಮಾಡಿದ್ದು ಯಾರು?

    ನೆಹರು, ಗಾಂಧೀಜಿಯವರು ಎಂಬುದು ಇವರಿಗೆ ನೆನಪಿದೆಯಾ? ಅ ಮೂರೇ ಜನ ಇದ್ದದ್ದು, ಮುಸ್ಲಿಂ ಲೀಗ್, ಕಾಂಗ್ರೆಸ್, ಬ್ರಿಟಿಷರು. ಇವರು ದೇಶ ವಿಭಜನೆ ಮಾಡಿ ಇಷ್ಟು ದೊಡ್ಡ ಆಪತ್ತು ಬಂದಿದೆ ಅಲ್ವಾ ಅದನ್ನು ನಾವು ಒಪ್ಪಿಕೊಳ್ಳಬೇಕಾಲ್ವ ಎಂದು ಅವರು ಪ್ರಶ್ನಿಸಿದರು.

    ದೇಶ ವಿಭಜನೆಯ ಕಾರಣ ನಿತ್ಯ ನಿರಂತರ ತಲೆ ಬಿಸಿ ಆಗುವಂತೆ ಮಾಡಿದ್ದು ಕಾಂಗ್ರೇಸ್ ಅಲ್ವಾ, ಹೊರಗಿನಿಂದ ಆಕ್ರಮಣ, ಒಳಗಿನಿಂದ ಅಕ್ರಮಣ, ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಲು ಅವಕಾಶ ನೀಡಿದ್ದು ಕಾಂಗ್ರೇಸ್ ಅಲ್ವವೇ ಎಂದು ಪ್ರಶ್ನೆ ಮಾಡಿದರು.

    ಮಳಲಿಯನ್ನು ಬಿಟ್ಟುಕೊಡುವ ಪ್ರಶ್ನೆಯಿಲ್ಲ: ಡಾ!ಭಟ್
    ಮಳಲಿಯ ಮಸೀದಿಯಲ್ಲಿ ಹಿಂದೂ ಧಾರ್ಮಿಕ ಕೇಂದ್ರಕ್ಕೆ ಸಂಬಂಧಿಸಿದ ಕುರುಹುಗಳು ಸಿಕ್ಕಿದ ಕಾರಣಕ್ಕಾಗಿ ಅದನ್ನು ಒಪ್ಪಂದ ಮಾಡಿಕೊಂಡು ಹಿಂದೂಗಳಿಗೆ ಬಿಟ್ಟು ಕೊಡಬೇಕು ಎಂದು ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಹೇಳಿದ್ದಾರೆ. ಇಂತಹ ಅನೇಕ ಕೇಂದ್ರಗಳು ಇವೆ. ಎಲ್ಲವನ್ನೂ ಬಿಟ್ಟುಕೊಡುವ ಒಪ್ಪಂದಕ್ಕೆ ತಯಾರಿರಬೇಕು ಎಂದರು.

    ದೇವಸ್ಥಾನಕ್ಕೆ ಮತ್ತು ಮಸೀದಿ, ಚರ್ಚ್‌ಗೆ ವ್ಯತ್ಯಾಸ ಇದೆ. ಅದು ಎರಡೂ ಕೂಡ ಪ್ರಾರ್ಥನಾ ಮಂದಿರಗಳು.ಅದು ಎಲ್ಲಿ ಬೇಕಾದರೂ ಮಾಡಬಹುದು. ಆದರೆ ದೇವಸ್ಥಾನ, ದೈವಸ್ಥಾನಗಳಿಗೆ ಇತಿಹಾಸ ಇರುವುದರಿಂದ ಅದೇ ಸ್ಥಳದಲ್ಲಿ ನಿರ್ಮಾಣವಾಗಬೇಕಾಗಿದೆ ಎಂದು ಅವರು ಹೇಳಿದರು.

    BANTWAL

    ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಯುವಕ ಮೃ*ತ್ಯು

    Published

    on

    ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃ*ತಪಟ್ಟಿದ್ದಾರೆ.

    ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಅಟೋ ರಿಕ್ಷಾ ಮೆಕೇನಿಕ್ ಸಿ.ಎಚ್. ಹನೀಫ್ ಅವರ ಪುತ್ರ ಬಾತಿಷಾ( 22) ಮೃ*ತಪಟ್ಟವರು.

    ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮೇನ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ವಾರದ ಹಿಂದೆ ಜ್ವರ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದ, ಗುರುವಾರ ಬೆಳಿಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃ*ತಪಟ್ಟಿದ್ದಾರೆ

    Continue Reading

    BANTWAL

    ಬಂಟ್ವಾಳ: ಭಾರೀ ಗಾಳಿ ಮಳೆಗೆ ತಾಲೂಕಿನ ಕೆಲ ಭಾಗಗಳಲ್ಲಿ ಹಾನಿ

    Published

    on

    ಬಂಟ್ವಾಳ: ರಾತ್ರಿ ಬೀಸಿದ ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ಕೆಲವು ಭಾಗದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹಾನಿಯಾದ ಘಟನೆ ವರದಿಯಾಗಿದೆ.

    ಬಿಸಿ ರೋಡಿನ ಸರ್ಕಲ್ ಸಹಿತ ಅನೇಕ ಭಾಗದಲ್ಲಿ ವಿದ್ಯುತ್ ಕಂಬ, ಕಾಂಪೌಂಡ್, ಮರಗಳು ಉರುಳಿಬಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

    ಮಂಗಳವಾರ ರಾತ್ರಿ ಸುಮಾರು 9.30ರ ವೇಳೆ ಭಾರಿ ಗಾಳಿ ಮಳೆಯಾಗಿದ್ದು, ಇದರಿಂದ ಬಿ.ಸಿ.ರೋಡ್ ಸರ್ಕಲ್ ಬಳಿ ಸಹಿತ ಹಲವೆಡೆ ಒಟ್ಟು 5 ವಿದ್ಯುತ್ ಕಂಬಗಳು ಉರುಳಿಬಿದ್ದು ಮೆಸ್ಕಾಂ ಇಲಾಖೆಗೆ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರ ಬಳಿ ಬೃಹತ್ ಮರವೊಂದು ಉರುಳಿಬಿದ್ದಿದ್ದು, ಅನಾಹುತವನ್ನೇ ಉಂಟುಮಾಡಿದೆ.

    ಇನ್ನು ಬಂಟ್ವಾಳ ತಾಲೂಕಿನ ಮಾಧ್ವ ಬಳಿ ಮನೆಯ ಕಾಂಪೌಂಡ್ ಕುಸಿದು ಬಿದ್ದಿದ್ದು, ಅಪಾರ ಹಾನಿಯಾಗಿದೆ.

    Continue Reading

    BANTWAL

    ವಿಟ್ಲ: ಯುವಕ ನೇಣು ಬಿಗಿದು ಆತ್ಮಹ*ತ್ಯೆ..!

    Published

    on

    ವಿಟ್ಲ: ವಿಟ್ಲ ಬುಡೋಳಿ ಮಡಲ ನಿವಾಸಿ ಸುಶಾಂತ್(25 ವ) ಮನೆಯಲ್ಲಿ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಸುಶಾಂತ್ ರವರು ಇತ್ತೀಚೆಗೆ ಮಿನಿ ಬಸ್‌ ಖರೀದಿಸಿದ್ದು ಬಸ್ಸನ್ನು ತಾನೇ ಚಾಲನೆ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಈತ ಸಂಘಟನೆಯ ಜೊತೆಗೆ ಸಾಮಾಜಿಕ ಸೇವಾಕಾರ್ಯಗಳನ್ನು ಮಾಡಿಕೊಂಡಿದ್ದರು. ಗ್ರಾಮದಲ್ಲಿ ಉತ್ತಮ ಯುವಕನಾಗಿ ಗುರುತಿಸಿಕೊಂಡಿದ್ದ ಈತನ ಸಾವಿಗೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ. ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

    ಸುರತ್ಕಲ್: ಖಾಸಗಿ ಬಸ್ ಢಿ*ಕ್ಕಿ; ದ್ವಿಚಕ್ರ ಸವಾರನಿಗೆ ಗಾ*ಯ

    Continue Reading

    LATEST NEWS

    Trending