Connect with us

    LATEST NEWS

    ಕಲಬುರ್ಗಿಯಲ್ಲಿ ಕಳ್ಳ- ಪೊಲೀಸ್ ಆಟ- ಪಿಎಸ್‌ಐ ಲೋಡೆಡ್ ರಿವಾಲ್ವರ್ ಕಸಿದು ಕಳ್ಳ ಪರಾರಿ..!

    Published

    on

    ಖತರ್ನಾಕ್ ಕಳ್ಳನೊಬ್ಬನನ್ನು ಹಿಡಿಯಲು ಹೋದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರ ರಿವಾಲ್ವರ್ ನ್ನೇ ಕಿತ್ತುಕೊಂಡು ಕಳ್ಳ ಪರಾರಿಯಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಅಫಜಲಪುರದಲ್ಲಿ ನಡೆದಿದೆ.

    ಕಲಬುರ್ಗಿ: ಖತರ್ನಾಕ್ ಕಳ್ಳನೊಬ್ಬನನ್ನು ಹಿಡಿಯಲು ಹೋದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರ ರಿವಾಲ್ವರ್ ನ್ನೇ ಕಿತ್ತುಕೊಂಡು ಕಳ್ಳ ಪರಾರಿಯಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಅಫಜಲಪುರದಲ್ಲಿ ನಡೆದಿದೆ.

    ಬಳ್ಳೂರ್ಗಿ ಮೂಲದ ಖಾಜಾ ಎಂಬ ಕಳ್ಳನನ್ನು ಹಿಡಿಯಲು ಬೆಂಗಳೂರು ಸಿಸಿಬಿ ಪೊಲೀಸರು ಅಫಜಲಪುರಕ್ಕೆ ಆಗಮಿಸಿದ್ದು, ಕಳ್ಳನನ್ನು ಬಂಧಿಸುವ ವೇಳೆ ಪಿಎಸ್ ಐ ಭೀಮರಾವ್ ಬಂಕಲಿ ಅವರ ಸರ್ವಿಸ್ ರಿವಾಲ್ವರ್ ಕಸಿದುಕೊಂಡು ಎಸ್ಕೇಪ್ ಆಗಿದ್ದಾನೆ.

    ಖಾಜಾ ಬೆಂಗಳೂರು, ಕಲಬುರ್ಗಿ, ಅಫಜಲಪುರ ಸೇರಿದಂತೆ ಹಲವೆಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು.

    ನಿನ್ನೆಯಿಂದ ಖಾಜಾನ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

    ಕಳ್ಳನನ್ನು ಹಿಡಿಯಲು ಹೋದಾಗ ಆತ ಕಾರಿನಲ್ಲಿ ಕುಳಿತಿದ್ದ ಪಿಎಸ್ ಐ ಸರ್ವಿಸ್ ರಿವಾಲ್ವರ್ ಹಿಡಿದು ಕಾರಿನ ಗಾಜು ಒಡೆಯಲು ಯತ್ನಿಸಿದ್ದರು. ಈ ವೇಳೆ ಪಿಎಸ್ ಐ ಕೈಯಲ್ಲಿದ್ದ ಲೋಡೆಡ್ ರಿವಾಲ್ವರ್ ಕಸಿದುಕೊಂಡು ಪರಾರಿಯಾಗಿದ್ದಲ್ಲದೇ ಮರವೇರಿ ಕುಳಿತಿದ್ದಾನೆ.

    ಕೊನೆಗೆ ಎಂಟುವರೆ ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಆರೋಪಿ ಶರಣಾಗಿದ್ದಾನೆ.

    ಏನಿದು ಘಟನೆ ..?

    ಸರಿಸುಮಾರು ಎಂಟುವರೆ ಗಂಟೆಗಳ ಕಾಲ ಕಳ್ಳಾಟವಾಡಿ ಪೊಲೀಸರಿಗೆ ಶರಣಾದ ಕಿಲಾಡಿ ಕಳ್ಳನ ಹೆಸರು ಖಾಜಪ್ಪಾ ಅಂತ.

    ಮೂಲತ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಳ್ಳೂರಗಿ ಗ್ರಾಮದ ನಿವಾಸಿ.

    ಬಳ್ಳೂರಗಿ ಗ್ರಾಮದವನಾದರೂ ಕೂಡ ಈತ ಇರ್ತಿದ್ದು ಹೆಚ್ಚಾಗಿ ಮಹರಾಷ್ಟ್ರದ ಪುಣೆ, ಅಕ್ಕಲಕೋಟೆ ಸೇರಿದಂತೆ ಅನೇಕ ಬಾಗದಲ್ಲಿಯೇ.

    ಈತನ ಮೇಲೆ ಕಲಬುರಗಿ, ಮಹರಾಷ್ಟ್ರ, ತೆಲೆಂಗಾಣದ ವಿವಿಧ ಪೊಲೀಸ್ ಠಾಣೆಗಳಲ್ಲಿ ಬರೋಬ್ಬರಿ 28 ಮನೆಗಳ್ಳತನ ಪ್ರಕರಣಗಳಿವೆ.

    ಕಳೆದ ಕೆಲ ದಿನಗಳ ಹಿಂದೆ ಈತ ಮಹರಾಷ್ಟ್ರದ ಅಕ್ಕಲಕೋಟೆಯಲ್ಲಿ ಮನೆಕಳ್ಳತನ ಮಾಡಿದ್ದನಂತೆ.

    ಹೀಗಾಗಿ ಖಾಜಪ್ಪನ ಚಲನವಲನದ ಬಗ್ಗೆ ಅಕ್ಕಲಕೋಟೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು.

    ಆದರೆ ಕಳೆದ ರಾತ್ರಿ ಆತ ಅಫಜಲಪುರಕ್ಕೆ ಹೋಗ್ತಿರೋದು ಗೊತ್ತಾಗಿತ್ತು.

    ಹೀಗಾಗಿ ಅಫಜಲಪುರ ಪೊಲೀಸರಿಗೆ ಅಕ್ಕಲಕೋಟೆ ಪೊಲೀಸರು ಮಾಹಿತಿ ನೀಡಿದ್ದರು.

    ಇಂದು ನಸುಕಿನ ಜಾವ ಮೂರು ಗಂಟೆಯಿಂದ ಅಫಜಲಪುರ ಪೊಲೀಸರು, ಅಫಜಲಪುರ ಹೊರವಲಯದ ಸೊನ್ನ ಕ್ರಾಸ್ ಬಳಿ ಚೆಕ್ ಪೋಸ್ಟ್ ಹಾಕಿಕೊಂಡು ವಾಹನ ತಪಾಸಣೆ ಮಾಡ್ತಿದ್ದರು.

    ಮೂರುವರೆ ಸಮಯದಲ್ಲಿ ಖಾಜಪ್ಪಾ ಕಾರ್​ನಲ್ಲಿ ಬಂದಿದ್ದ. ಆದರೆ ಪೊಲೀಸರನ್ನು ನೋಡುತ್ತಿದ್ದಂತೆ, ಕಾರ್​ನ್ನು ರಿಟರ್ನ್ ತೆಗದುಕೊಂಡು ಹೋಗಲು ಮುಂದಾಗಿದ್ದ.

    ಕೂಡಲೇ ಅಫಜಲಪುರ ಪಿಎಸ್​ಐ ಭೀಮರಾಯ್ ಬಂಕಲಿ, ಕಾರ್ ನ ಗ್ಲಾಸ್​ನ್ನು ಒಡೆದು, ಆತನನ್ನು ಹಿಡಿಯುವ ಯತ್ನ ಮಾಡಿದ್ದರು.

    ಆದರೆ ಪಿಎಸ್​ಐ ಕೈಯಲ್ಲಿದ್ದ ಲೋಡೆಡ್ ಸರ್ವಿಸ್ ಪಿಸ್ತೂಲ್ ಕೈಜಾರಿ ಕಾರ್​ನೊಳಗೆ ಬಿದಿತ್ತು.

    ಕಳ್ಳ ಖಾಜಪ್ಪ ಕಾರ್​ನ್ನು ರಿಟರ್ನ್ ಮಾಡಿಕೊಂಡು ಪರಾರಿಯಾಗಿದ್ದ.

    ಲೋಡೆಡೆ ಸರ್ವಿಸ್ ಪಿಸ್ತೂಲ್ ತಗೆದುಕೊಂಡು ಹೋಗಿದ್ದ ಪೊಲೀಸರ ತಲೆಬಿಸಿ ಹೆಚ್ಚಿಸಿತ್ತು.

    ನಸುಕಿನ ಜಾವ ನಾಲ್ಕು ಗಂಟೆಯಿಂದ ಖಾಜಪ್ಪನಿಗಾಗಿ ಕಲಬುರಗಿ ಜಿಲ್ಲಾ ಪೊಲೀಸರು ಹುಡುಕಾಟ ನಡೆಸಿದ್ದರು.

    ಆದ್ರೆ ಮುಂಜಾನೆ ಎಂಟು ಗಂಟೆಗೆ ಗೊತ್ತಾಗಿತ್ತು, ಆತ ಬಳ್ಳೂರಗಿ ಹೊರವಲಯದ ಮಹಾಲಕ್ಷ್ಮಿ ದೇವಸ್ಥಾನದ ಬಳಿಯಿದ್ದಾನೆ ಅಂತ.

    ಅಲ್ಲಿಗೆ ಬರುವಷ್ಟರಲ್ಲಿ ಖಾಜಪ್ಪ ಮರವೇರಿ ಕೂತಿದ್ದ. ಮತ್ತೊಂದಡೆ ಆತನ ಸಹಚರರಾದ ಸಂಜು ಮತ್ತು ರವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

    ಮುಂಜಾನೆ ಎಂಟು ಗಂಟೆಯಿಂದ ಆತನನ್ನು ಮರದಿಂದ ಕೆಳಗಿಳಿಸೋ ಯತ್ನವನ್ನು ಪೊಲೀಸರು ಮಾಡಿದ್ದರು.

    ಆದ್ರೆ ನನ್ನ ಸಮೀಪ ಬಂದ್ರೆ ನಾನೇ ಪೈರ್ ಮಾಡಿಕೊಂಡು ಸಾಯ್ತೇನೆ ಅಂತ ಬೆದರಿಕೆ ಹಾಕಿದ್ದನಂತೆ.

    ಕೊನೆಗೆ ಆತನ ಕುಟುಂಬದವರನ್ನು ಕರೆಸಿ, ಆತನಿಗೆ ಏನು ಮಾಡೋದಿಲ್ಲಾ ಅಂತ ಹೇಳಿ, ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಇಂದು ಮಧ್ಯಾಹ್ನ 12-45 ಕ್ಕೆ ಆರೋಪಿ ಖಾಜಪ್ಪ ಪೊಲೀಸರಿಗೆ ಶರಣಾಗಿದ್ದು, ತನ್ನ ಬಳಿಯಿದ್ದ ಸರ್ವಿಸ್ ಪಿಸ್ತೂಲ್​ನ್ನು ಪೊಲೀಸರಿಗೆ ನೀಡಿದ್ದಾನೆ.
    ಯಾವುದೇ ತೊಂದರೆಯಿಲ್ಲದೆ ಕಾರ್ಯಾಚರಣೆ ಯಶಸ್ವಿಯಾಗಿದ್ದ ಹಿನ್ನೆಲೆ, ಮರವಿದ್ದ ದೇವಸ್ಥಾನದ ಕೆಳಗಿದ್ದ ಮಹಾಲಕ್ಷ್ಮಿ ದೇವಿಗೆ ಕಲಬುರಗಿ ಎಸ್ಪಿ ಇಶಾ ಪಂತ್ ಪೂಜೆ ಮಾಡಿ ನಿಟ್ಟುಸಿರು ಬಿಟ್ಟಿದ್ದಾರೆ.

    ಸದ್ಯ ಖಾಜಪ್ಪನನ್ನು ವಶಕ್ಕೆ ಪಡೆದಿರೋ ಪೊಲೀಸರು ಆತನಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ, ವಿಚಾರಣೆ ನಡೆಸಲು ಮುಂದಾಗಿದ್ದಾರೆ.

    Click to comment

    Leave a Reply

    Your email address will not be published. Required fields are marked *

    FILM

    ಚಾಲೆಂಜಿಂಗ್ ಸ್ಟಾರ್ ನ್ಯೂ ಪೋಸ್ಟ್; ದರ್ಶನ್ ಅಭಿಮಾನಿಗಳಿಗೆ ದಿಲ್‌ಖುಷ್

    Published

    on

    ಮಂಗಳೂರು/ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಬರೋಬ್ಬರಿ 7 ತಿಂಗಳ ನಂತರ ತಮ್ಮ ಅಭಿಮಾನಿಗಳಿಗೆ, ಜನತೆಗೆ ಜಾಲತಾಣದ ಮೂಲಕ ಸಂದೇಶವೊಂದನ್ನು ಹಂಚಿಕೊಂಡಿದ್ದು, ಫೋಟೊ ಫುಲ್ ವೈರಲ್ ಆಗುತ್ತಿದೆ.

    2024 ರ ಜೂನ್‌ ತಿಂಗಳಿನಿಂದ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ ದರ್ಶನ್ ಕೊನೆಗೂ ತಮ್ಮ ಅಭಿಮಾನಿಗಳಿಗೆ ಇನ್‌ಸ್ಟಾಗ್ರಾಂ ಮೂಲಕ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

    ‘ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಎಳ್ಳು-ಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿ ಯನ್ನು ಬರಮಾಡಿಕೊಳ್ಳೋಣ’ ಎಂದು ಬರೆದುಕೊಂಡಿದ್ದು, ಕುದುರೆಯೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಮಾಡಿದ ಕೆಲವೇ ಗಂಟೆಯಲ್ಲಿ 4.66 ಲಕ್ಷಕ್ಕೂ ಅಧಿಕ ಲೈಕ್‌, 27 ಸಾವಿರಕ್ಕೂ ಅಧಿಕ ಕಮೆಂಟ್ಸ್‌ ಪಡೆಯಿತು.

    ನಟ ದರ್ಶನ್ ಪ್ರತಿ ವರ್ಷವೂ ಕೂಡ ಫಾರಂ ಹೌಸ್‌ನಲ್ಲಿ ತನ್ನ ಸಾಕು ಪ್ರಾಣಿಗಳೊಂದಿಗೆ ಸಂಕ್ರಾತಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ. ಈ ಬಾರಿಯೂ ನೆಚ್ಚಿನ ಸ್ಥಳದಲ್ಲೇ ಸಂಕ್ರಾಂತಿ ಆಚರಿಸಿಕೊಂಡಿದ್ದಾರೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ನೆಚ್ಚಿನ ನಟನ ಪೋಸ್ಟ್ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ದರ್ಶನ್ ಪೋಸ್ಟ್ ಮಾಡುತ್ತಿದ್ದಂತೆ, ಅಭಿಮಾನಿಗಳು ‘ಜೈ ಡಿ ಬಾಸ್’ ಎಂದು ಕಮೆಂಟ್ ಮಾಡಿದ್ದಾರೆ.

    Continue Reading

    LATEST NEWS

    ಮಹಾಕುಂಭ ಮೇಳ 2025: ಗಮನ ಸೆಳೆಯುತ್ತಿರುವ ನಾಗಾ ಸಾಧ್ವಿಗಳು

    Published

    on

    ಮಂಗಳೂರು/ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ-2025 ಜನವರಿ 13 ಕ್ಕೆ ಆರಂಭವಾಗಿದ್ದು, ಫೆಬ್ರುವರಿ 26ರ ತನಕ ನಡೆಯಲಿದೆ. ಮಹಾ ಕುಂಭಮೇಳ ಐತಿಹಾಸಿಕ ಹಿನ್ನಲೆಯನ್ನು ಹೊಂದಿದ್ದು, ಅಪಾರವಾದ ನಂಬಿಕೆ, ಶ್ರದ್ಧೆಯು ಸಂಕೇತವಾಗಿದೆ. ಉತ್ತರ ಪ್ರದೇಶ ಸರ್ಕಾರ ಮಹಾ ಕುಂಭಮೇಳಕ್ಕಾಗಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿದೆ. ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿರುವ ಮಹಾ ಕುಂಭಮೇಳ ಬಹಳ ವಿಶೇಷವಾಗಿದ್ದು, 114 ವರ್ಷಗಳ ಬಳಿಕ ಈ ಮಹಾ ಕುಂಭಮೇಳ ನಡೆಯುತ್ತಿದೆ. ಇಲ್ಲಿ ದೇಶದ ನಾಗಾಸಾಧುಗಳು ಆಗಮಿಸಿದ್ದು, ಇದೀಗ ಮಹಿಳಾ ನಾಗಾಸಾಧುಗಳು ಬಹಳ ವಿಶೇಷವಾಗಿ ಆಕರ್ಷಣೀಯರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

    ಪುರುಷ ನಾಗಾ ಸಾಧುಗಳಂತೆ ಸ್ತ್ರೀ ನಾಗಾ ಸಾಧುಗಳೂ ಇದ್ದು, ಅವರು ಕುಟುಂಬ ಮತ್ತು ಭೌತಿಕ ಆಸ್ತಿಗಳ ಜೊತೆಗೆ ತಮ್ಮ ಎಲ್ಲಾ ಬಾಂಧವ್ಯಗಳನ್ನು ಕಡಿದು, ತಪಸ್ಸಿನ ಜೀವನವನ್ನು ಸ್ವೀಕರಿಸುತ್ತಾರೆ. ನಾಗಾ ಸಾಧ್ವಿಗಳಿಗೆ ನೀಡುವ ದೀಕ್ಷಾ ಪ್ರಕ್ರಿಯೆಯೂ ಪುರುಷರಿಗೆ ನೀಡುವುದರಷ್ಟೇ ಕಠಿಣವಾಗಿದೆ. ಅವರು ತಮ್ಮ ಗುರುಗಳಿಗೆ ಅಚಲವಾದ ಬದ್ಧತೆಯನ್ನು ಪ್ರದರ್ಶಿಸಬೇಕು. ಗುರು ಆಕೆಯನ್ನು ಒಪ್ಪಿಕೊಳ್ಳುವ ಮೊದಲು ತೀವ್ರವಾದ ಆಧ್ಯಾತ್ಮಿಕ ಪರೀಕ್ಷೆಗಳು ಮತ್ತು ತರಬೇತಿಗಳಿಗೆ ಒಳಗಾಗಬೇಕು. ಆಧ್ಯಾತ್ಮಿಕ ಅನ್ವೇಷಣೆಗಾಗಿ ತಮ್ಮ ಲೌಕಿಕ ಜೀವನವನ್ನು ಸಂಪೂರ್ಣವಾಗಿ ತ್ಯಜಿಸಿರುತ್ತಾರೆ. ಅವರು ತಮ್ಮ ಹಿಂದಿನ ಜೀವನದಿಂದ ಎಲ್ಲವನ್ನೂ ಬಿಟ್ಟು ಆಧ್ಯಾತ್ಮಿಕ ಮಾರ್ಗಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಸ್ತ್ರೀ ನಾಗಾಸಾಧುಗಳು ವಿರಕ್ತ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ. ಸಂಸಾರ, ದಾಂಪತ್ಯದ ಕಡೆಗೆ ಇವರು ಹೊರಳುವಂತಿಲ್ಲ. ಹಾಗೆ ಹೋದರೆ ಅವರನ್ನು ನಾಗಾ ಪಂಥದಿಂದ ತೆಗೆಯುಲಾಗುತ್ತದೆ.

    ನಾಗಾ ಸಾಧ್ವಿಗಳು ಆಂತರಿಕವಾಗಿ ಹೆಚ್ಚಿನ ಸಾಧನೆ ಮಾಡುತ್ತಾರೆ. ಯಾಕೆಂದರೆ ಪುರುಷರಿಗಿಂತ ಇವರ ಹಾರ್ಮೋನುಗಳು ದೇಹದಲ್ಲಿ ಈ ಕಠಿಣ ವ್ರತಗಳ ಸಂದರ್ಭದಲ್ಲಿ ಯದ್ವಾತದ್ವಾ ವರ್ತಿಸುತ್ತವೆ. ಜೊತೆಗೆ, ಇವರು ಆಕರ್ಷಕವಾಗಿದ್ದರೆ, ಇತರ ಪುರುಷರ ಅಥವಾ ನಾಗಾ ಸಾಧುಗಳ ವೇಷದಲ್ಲಿರುವ ದುರುಳರ ಕಣ್ಣು ಕೂಡ ಇವರ ಮೇಲೆ ಬಿದ್ದು ಅನಾಹುತ ಆಗುವ ಸಾಧ್ಯತೆಗಳಿರುತ್ತವೆ. ಆದರೆ ಪರಿಪಕ್ವ ನಾಗಾ ಸಾಧ್ವಿಗಳು ತಮ್ಮ ಕಠೋರವಾದ ದೃಷ್ಟಿ ಮಾತ್ರದಿಂದಲೇ ದುಷ್ಟರನ್ನು ಹಿಮ್ಮೆಟ್ಟಿಸಬಲ್ಲರು. ದೀಕ್ಷೆಗೆ ಮುನ್ನ ನಾಗಾ ಸಾಧ್ವಿಗಳು ಆರರಿಂದ ಹನ್ನೆರಡು ವರ್ಷಗಳ ಕಾಲ ಕಟ್ಟುನಿಟ್ಟಾದ ಬ್ರಹ್ಮಚರ್ಯವನ್ನು ಪಾಲಿಸಬೇಕಾಗುತ್ತದೆ. ಅವರು ತಮ್ಮ ಸಾಧನೆ ಅಥವಾ ತೀವ್ರವಾದ ತಪಸ್ಸಿನ ಸಮಯದಲ್ಲಿ ಸಾಮಾನ್ಯವಾಗಿ ಗುಹೆಗಳು, ಕಾಡುಗಳು ಅಥವಾ ಪರ್ವತಗಳಂತಹ ಪ್ರತ್ಯೇಕ ಸ್ಥಳಗಳಲ್ಲಿ ವಾಸವಿರಬೇಕಾಗುತ್ತದೆ. ಸಾಮಾನ್ಯವಾಗಿ ನಾಗಾ ಸಾಧ್ವಿಗಳು ಅಖಾಡಗಳು ಅಥವಾ ಸನ್ಯಾಸಿಗಳಿರುವ ಆಶ್ರಮಗಳಲ್ಲಿ ವಾಸಿಸುತ್ತಾರೆ. ಪುರುಷ ನಾಗಾ ಸಾಧುಗಳು ಮೈಮೇಲೆ ಒಂದೆಳೆ ಬಟ್ಟೆಯಿಲ್ಲದೆ ಓಡಾಡಬಲ್ಲರು. ಆದರೆ ಸಾಧ್ವಿಗಳು ಹಾಗೆ ಮಾಡಲಾರರು. ಯಾಕೆಂದರೆ ಸಮಾಜ ಅವರನ್ನು ಹಾಗೆ ಒಪ್ಪಿಕೊಳ್ಳಲಾರದು. ಬದಲಾಗಿ ಅವರು “ಗಂಟಿ” ಎಂದು ಕರೆಯಲ್ಪಡುವ ಕುಂಕುಮ ಬಣ್ಣದ ಬಟ್ಟೆಯನ್ನು ಧರಿಸಬೇಕು. ತಲೆಕೂದಲು ಕತ್ತರಿಸದೆ ಜಟೆ ಬಿಟ್ಟಿರಬೇಕು. ಹಣೆಯ ಮೇಲಿನ ವಿಶಿಷ್ಟ ತಿಲಕದಿಂದ ಸಾಧ್ವಿಗಳೆಂದು ಗುರುತಿಸಲ್ಪಡುತ್ತಾರೆ.

    ಮಹಿಳೆಯರು ಸನ್ಯಾಸ ಸ್ವೀಕಾರ ಆಚರಣೆಯ ಭಾಗವಾಗಿ ತಮ್ಮದೇ ‘ಪಿಂಡದಾನ’ವನ್ನು ಮಾಡಬೇಕು. ಸಾಮಾನ್ಯವಾಗಿ ಇದು ಮರಣದ ನಂತರ ನಡೆಸಲಾಗುವ ಸಾಂಪ್ರದಾಯಿಕ ಆಚರಣೆ. ಇದು ಅವರ ಹಿಂದಿನ ಜೀವನದ ಅಂತ್ಯ ಮತ್ತು ಸನ್ಯಾಸಿಗಳಾಗಿ ಅವರ ಪುನರ್ಜನ್ಮವನ್ನು ಸಂಕೇತಿಸುತ್ತದೆ. ನಾಗಾ ಸಾಧ್ವಿಗಳು ನಾಗಾ ಸಮುದಾಯದಲ್ಲಿ ಗೌರವಾನ್ವಿತ ಸ್ಥಾನ ಹೊಂದಿರುತ್ತಾರೆ. ಅವರನ್ನು “ಮಾತಾ” (ತಾಯಿ) ಎಂದು ಸಂಬೋಧಿಸಲಾಗುತ್ತದೆ. ನಾಗಾ ಸಾಧ್ವಿಗಳು ತಮ್ಮ ಅಸಾಧಾರಣ ಆಧ್ಯಾತ್ಮಿಕ ಶಕ್ತಿ ಮತ್ತು ಕಠಿಣವಾದ ವ್ರತಗಳಿಗಾಗಿ ಖ್ಯಾತರಾಗಿದ್ದಾರೆ. ಮಹಾ ಕುಂಭಮೇಳದಲ್ಲಿ ಅವರ ಉಪಸ್ಥಿತಿಯನ್ನು ಆಶೀರ್ವಾದವೆಂದು ಪರಿಗಣಿಸಲಾಗುತ್ತದೆ. ಇವರು ಎಲ್ಲರ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಸ್ವಯಂ-ಸಾಕ್ಷಾತ್ಕಾರದ ಪ್ರಾಮುಖ್ಯತೆಯನ್ನು ನೆನಪಿಸುವವರಂತೆ ಕಾರ್ಯನಿರ್ವಹಿಸುತ್ತಾರೆ.

    Continue Reading

    DAKSHINA KANNADA

    ರಾಜ್ಯದ 6 ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ; ಎಲ್ಲೆಲ್ಲಿ?

    Published

    on

    ಮಂಗಳೂರು/ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಿನ್ನೆ ಸಂಜೆ ಮತ್ತು ರಾತ್ರಿ ಮಳೆಯಾಗಿದ್ದು, ಕೆಲವೆಡೆ ಮಳೆಗಾಲದಂತೆ ಜೋರಾಗಿ ಮಳೆಯಾಗಿದೆ.

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಕನ್ನಡ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಾಧಾರಣ ಮಳೆ ಆಗಿದ್ದು, ಇನ್ನೂ ಮುಂದಿನ 2 ದಿನ ಮಳೆಯಾಗಲಿದೆ ಎಂದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕೊಮೊರಿನ್ ಪ್ರದೇಶ ಮತ್ತು ನೆರೆಹೊರೆಗಳಲ್ಲಿ ಚಂಡಮಾರುತದ ಪರಿಚಲನೆಯು ಈಗ ಅಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಸಮಭಾಜಕ ವೃತ್ತದ ಹಿಂದೂ ಮಹಾಸಾಗರದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ. ಎತ್ತರದಲ್ಲಿದೆ. ಇದರಿಂದ ಕೆಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

    ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ

    ಯಾವ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ?
    ಹಾಸನ, ಚಾಮರಾಜನಗರ, ಕೊಡಗು, ಮೈಸೂರು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದ್ದು, ಇನ್ನು ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಮಂಜು ಬೀಳುವ ಸಾಧ್ಯತೆ ಇದೆ. ಜನವರಿ 20 ರವರೆಗೂ ಇದೇ ಹವಾಮಾನ ಮುಂದುವರಿಯಲಿದೆ.

    ಮುಂದಿನ 24 ಗಂಟೆಗಳ ಕಾಲ ಬೆಂಗಳೂರು ಹಾಗೂ ನೆರೆಯ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಡಿ.ಸೆ ಮತ್ತು 20 ಡಿ. ಸೆ ಇರುವ ಸಾಧ್ಯತೆ ಇದ್ದು, ನಾಳೆಯೂ ಹೀಗೆ ಇರಲಿದೆ.

    ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸೋಮವಾರ ಹಗುರ ಮಳೆಯಾಗಿದೆ. ವಿಜಯಪುರದಲ್ಲಿ ಕನಿಷ್ಠ ತಾಪಮಾನ 14.6 ಡಿ. ಸೆ ಹಾಗೂ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ಗರಿಷ್ಠ ತಾಪಮಾನ 32.8 ಡಿ. ಸೆ ದಾಖಲಾಗಿದೆ. ಇನ್ನು ಬೆಂಗಳೂರಿನಲ್ಲಿ ಇನ್ನೆರಡು ದಿನ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಮುಂದುವರಿಯುವ ಸಾಧ್ಯತೆ ಇದೆ.

    Continue Reading

    LATEST NEWS

    Trending