Connect with us

LATEST NEWS

ಹಣ ಹಂಚುತ್ತಿದ್ದ ಬಿಜೆಪಿ ಕಾರ್ಯಕರ್ತರ ಬೆನ್ನಟ್ಟಿ ಹಿಡಿದ ಕಲಬುರಗಿ ಜಿಲ್ಲಾಧಿಕಾರಿ..!

Published

on

ಕಲಬುರಗಿಯ ದಕ್ಷಿಣ ‌ಮತಕ್ಷೇತ್ರದ ಸಂಗಮೇಶ್ವರ ಕಾಲೊನಿಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಹಣ ಹಂಚಲು‌ ಮುಂದಾಗಿದ್ದ ಇಬ್ಬರು ವ್ಯಕ್ತಿಗಳನ್ನು ‌ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಯಶವಂತ ‌ವಿ. ಗುರುಕರ್ ಬೆನ್ನಟ್ಟಿ ಹಿಡಿದಿದ್ದಾರೆ.

ಕಲಬುರಗಿ: ಕಲಬುರಗಿಯ ದಕ್ಷಿಣ ‌ಮತಕ್ಷೇತ್ರದ ಸಂಗಮೇಶ್ವರ ಕಾಲೊನಿಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಹಣ ಹಂಚಲು‌ ಮುಂದಾಗಿದ್ದ ಇಬ್ಬರು ವ್ಯಕ್ತಿಗಳನ್ನು ‌ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಯಶವಂತ ‌ವಿ. ಗುರುಕರ್ ಬೆನ್ನಟ್ಟಿ ಹಿಡಿದಿದ್ದಾರೆ.

ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಕಡೆಯವರು ಎನ್ನಲಾದ ಇಬ್ಬರು ಕಳೆದ ರಾತ್ರಿ 1ಕ್ಕೆ ಬೀದಿ ದೀಪ ಬಂದ್ ಮಾಡಿ ಹಣ ಹಂಚಲು‌ ಮುಂದಾಗಿದ್ದರು ಎಂದು ಕಾಂಗ್ರೆಸ್ ‌ಕಾರ್ಯಕರ್ತರು ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದರು.

ಪೊಲೀಸರ‌ ಗಮನಕ್ಕೂ ತರದೇ ಜಿಲ್ಲಾಧಿಕಾರಿ ಸ್ಥಳಕ್ಕೆ ಧಾವಿಸಿದರು.

ಕಲಬುರಗಿ ದಕ್ಷಿಣ ‌ಮತಕ್ಷೇತ್ರದ ಸಂಗಮೇಶ್ವರ ಕಾಲೊನಿಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಹಣ ಹಂಚಲು‌ ಮುಂದಾಗಿದ್ದ ಇಬ್ಬರು ವ್ಯಕ್ತಿಗಳನ್ನು ‌ಜಿಲ್ಲಾಧಿಕಾರಿ ಯಶವಂತ ‌ವಿ. ಗುರುಕರ್ ಬೆನ್ನಟ್ಟಿ ಹಿಡಿದಿದ್ದಾರೆ.

ಇದರಿಂದ ಕಕ್ಕಾಬಿಕ್ಕಿಯಾದ ಇಬ್ಬರು ಕಾರನ್ನು ಗಂಟೆಗೆ 100 ಕಿ.ಮೀ. ವೇಗದಲ್ಲಿ ಚಲಾಯಿಸಿಕೊಂಡು ಪರಾರಿಯಾಗುತ್ತಿದ್ದರು.

ಅವರ ಬೆನ್ನಟ್ಟಿದ ಜಿಲ್ಲಾಧಿಕಾರಿ ‌ಕೇಂದ್ರ ಬಸ್ ನಿಲ್ದಾಣ ಸಮೀಪದ ವಿದ್ಯಾನಗರದ ಬಳಿ ಕಾರನ್ನು ತಡೆದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರ ಕೊರಳಪಟ್ಟಿ ಹಿಡಿದು ವಶಕ್ಕೆ ಪಡೆದರು.

ಜಿಲ್ಲಾಧಿಕಾರಿ ಬರುವ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಹಣದ ಬ್ಯಾಗ್ ನೊಂದಿಗೆ ವ್ಯಕ್ತಿಯೊಬ್ಬರು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರನ್ನು ನಿಲ್ಲಿಸು ಎಂದರೂ ಕೇಳದೇ ವೇಗವಾಗಿ ಚಲಾಯಿಸಿದ ಕಾರು ಚಾಲಕನನ್ನು ಜಿಲ್ಲಾಧಿಕಾರಿ ‌ಗುರುಕರ್ ಅವರು ತರಾಟೆಗೆ ತೆಗೆದುಕೊಂಡ ದೃಶ್ಯ ವಿಡಿಯೊದಲ್ಲಿದೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸ್ ಕಮಿಷನರ್ ಚೇತನ್ ಆರ್.’ರಾತ್ರಿ ಕೆಲವರು ಹಣ ಹಂಚುತ್ತಿರುವ ಬಗ್ಗೆ ಮಾಹಿತಿ ಬಂದ ಬಳಿಕ ಜಿಲ್ಲಾಧಿಕಾರಿ ಅವರು ತೆರಳಿದ್ದಾರೆ.

ಈ ಕುರಿತು ಕಾಂಗ್ರೆಸ್ ಮುಖಂಡರು ದೂರು ನೀಡಿದ್ದು, ನ್ಯಾಯಾಲಯದ ಅನುಮತಿ ಪಡೆದು ಎಫ್ಐಆರ್ ದಾಖಲಿಸಲಾಗುತ್ತಿದೆ’ ಎಂದರು.

ತಡರಾತ್ರಿ ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ, ಚಿತ್ತಾಪುರ ಕ್ಷೇತ್ರದ ಅಭ್ಯರ್ಥಿ ಪ್ರಿಯಾಂಕ್ ‌ಖರ್ಗೆ ಸ್ಥಳಕ್ಕೆ ಭೇಟಿ ನೀಡಿದರು.

 

LATEST NEWS

ಹೊಸ ಅಪ್​ಡೇಟ್ ನೊಂದಿಗೆ ಬರುತ್ತಿದೆ ವಾಟ್ಸ್ಆ್ಯಪ್; ಏನದು ಗೊತ್ತಾ!?

Published

on

ಮಂಗಳೂರು : ಆ್ಯಪ್ ಗಳು ಅಂದ್ರೆ ಹೊಸ ಹೊಸ ಫೀಚರ್ ಗಳ ಅನಾವರಣ ಮಾಡುತ್ತಿರುತ್ತವೆ. ಬಳಕೆದಾರರಿಗೆ ಅನುಕೂಲತೆಯನ್ನು ಸೃಷ್ಟಿಸಲು ನವೀನ ಫೀಚರ್ ಗಳನ್ನು ಅಳವಡಿಸಲಾಗುತ್ತದೆ. ವಾಟ್ಸ್ ಆ್ಯಪ್ ಕೂಡ ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಿರುತ್ತದೆ. ಇದೀಗ ಮತ್ತೊಂದು ಹೊಸ ಫೀಚರ್ ಪರಿಚಯಿಸುತ್ತಿದೆ.


ಏನಿದು ಫೀಚರ್ ?

ವಾಟ್ಸ್ ಆ್ಯಪ್ ಗೆ ಅತ್ಯಂತ ಹೆಚ್ಚಿನ ಬಳಕೆದಾರರಿದ್ದಾರೆ. ಈಗಾಗಲೇ ನೂತನ ಫೀಚರ್ ಗಳನ್ನು ವಾಟ್ಸ್ ಆ್ಯಪ್ ಪರಿಚಯಿಸುತ್ತಿರುತ್ತದೆ. ಇದೀಗ ಹೊಸ ಫೀಚರ್​ವೊಂದನ್ನು ಪರಿಶೀಲಿಸುತ್ತಿದೆ. ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್​ನಲ್ಲಿ ಫೋಟೋ, ವೀಡಿಯೋ ಇತ್ಯಾದಿ ಫೈಲ್ ಶೇರಿಂಗ್ ಮಾಡಲು ಅವಕಾಶ ಕೊಡುವ ಫೀಚರ್ ಇದಾಗಿದೆ. ಬೀಟಾ ಆವೃತ್ತಿಯಲ್ಲಿ ಇದನ್ನು ಪರೀಕ್ಷಿಸಲಾಗುತ್ತಿದೆ. ಶೀಘ್ರದಲ್ಲಿ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ : 123 ವರ್ಷಗಳಲ್ಲಿ 2ನೇ ಬಾರಿಗೆ ಅತ್ಯಧಿಕ ತಾಪಮಾನ..! ಇನ್ನೂ 11 ದಿನ ಮುಂದುವರಿಯಲಿದೆ ಬಿಸಿ ಶಾಖ..!

ನಿಯರ್ ​ಬೈ ಡಿವೈಸ್, ಕ್ವಿಕ್ ಶೇರಿಂಗ್ ಇತ್ಯಾದಿ ಫೀಚರ್ ರೀತಿಯಲ್ಲಿ ಇದು ಇರಬಹುದು ಎನ್ನಲಾಗಿದೆ.
ಭಾರತ ಸೇರಿದಂತೆ ಜಗತ್ತಿನಾದ್ಯಂತ ವಾಟ್ಸ್ ಆ್ಯಪ್ ಜನಪ್ರಿಯ. ಜನರಿಗೆ ಹೆಚ್ಚಿನ ಖಾಸಗಿತನ ಮತ್ತು ಭದ್ರತೆಯನ್ನು ಒದಗಿಸಲು ಕೂಡ ವಾಟ್ಸ್​​ಆ್ಯಪ್ ಸಹಾಯ ಮಾಡುತ್ತದೆ.

Continue Reading

LATEST NEWS

123 ವರ್ಷಗಳಲ್ಲಿ 2ನೇ ಬಾರಿಗೆ ಅತ್ಯಧಿಕ ತಾಪಮಾನ..! ಇನ್ನೂ 11 ದಿನ ಮುಂದುವರಿಯಲಿದೆ ಬಿಸಿ ಶಾಖ..!

Published

on

ದೆಹಲಿ: ಭಾರತೀಯ ಹವಾಮಾನ ಇಲಾಖೆ ಮೇ ತಿಂಗಳ ಹವಾಮಾನ ಮುನ್ಸೂಚನೆ ಬಿಡುಗಡೆ ಮಾಡಿದ್ದು ಇದೀಗ ಅಚ್ಚರಿ ಮೂಡಿಸಿದೆ. 1901ರ ನಂತರ ಏಪ್ರಿಲ್‌ನಲ್ಲಿ ಇಷ್ಟೊಂದು ತಾಪಮಾನವನ್ನು ದಾಖಲಿಸಿರುವುದು ಇದೇ ಮೊದಲು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.

havamana

ಎಲ್ಲಾ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಎಪ್ರಿಲ್‌ ತಿಂಗಳಿನಲ್ಲಿ ಹೆಚ್ಚು ತಾಪಮಾನ ದಾಖಲಾಗಿದೆ. ದೇಶದಲ್ಲಿ 1901ರ ನಂತರ ಇದೇ ಮೊದಲ ಬಾರಿಗೆ ಹೆಚ್ಚು ತಾಪಮಾನ ಏರಿಕೆಯಾಗಿರುವುದು. ಎಪ್ರಿಲ್ ತಿಂಗಳಿನಲ್ಲಿ ಕೆಲವು ಕಡೆ ಆಲಿಕಲ್ಲು ಸಹಿತೆ ಮಳೆ ಬಂದಿದ್ದು, ಮೇ ತಿಂಗಳಿನಲ್ಲಿ ಹೆಚ್ಚಿನ ಉರಿಬಿಸಿಲು, ಶಾಖ ಮತ್ತು ಆಲಿಕಲ್ಲು ಮುಂದವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ. ಇನ್ನು ಮೇ ತಿಂಗಳಿನಲ್ಲಿ ಬಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದ್ದು, ಇನ್ನು 11 ದಿನಗಳ ಕಾಲ ಬಿಸಿಗಾಳಿ ಮುಂದುವರಿಯಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಮುಂದೆ ಓದಿ..; ನಾಯಿಗಳಿಗೂ ಬಂತು ಆಧಾರ್‌ ಕಾರ್ಡ್‌.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?

ಏಪ್ರಿಲ್ 5 ರಿಂದ 7 ರವರೆಗೆ, ನಂತರ 15 ರಿಂದ 30 ರವರೆಗೆ ಹೆಚ್ಚಿನ ತಾಪಮಾನ ಮತ್ತು ಆಲಿಕಲ್ಲು ಮಳೆಯಾಗಿದೆ. ಸರಾಸರಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಏಪ್ರಿಲ್ ತಿಂಗಳಲ್ಲಿ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಸರಾಸರಿ ಕನಿಷ್ಠ ತಾಪಮಾನ 28.12 ಡಿಗ್ರಿ ಸೆಲ್ಸಿಯಸ್ ಎಂದು ಮೊಹಾಪಾತ್ರ ಹೇಳಿದ್ದಾರೆ. ದಕ್ಷಿಣ ಪರ್ಯಾಯ ದ್ವೀಪದ ಭಾರತದಲ್ಲಿ 1980 ರ ದಶಕದಿಂದಲೂ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನವು ಸಾಮಾನ್ಯವಾಗಿದೆ ಎಂದು ಅವರು ವರದಿ ಮಾಡಿದ್ದಾರೆ.

ಮುಂದಿನ 11 ದಿನದ ಶಾಖದ ಅಲೆ, ಆಲಿಕಲ್ಲು ಮಳೆ:

ದಕ್ಷಿಣ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ಮರಾಠವಾಡ ಮತ್ತು ಗುಜರಾತ್‌ನಲ್ಲಿ ಮೇ ತಿಂಗಳಲ್ಲಿ 8-11 ದಿನಗಳವರೆಗೆ ಶಾಖದ ಅಲೆಗಳು ಇರಬಹುದೆಂದು ಮಹಾಪಾತ್ರ ಹೇಳಿದ್ದಾರೆ. ರಾಜಸ್ಥಾನ, ಪೂರ್ವ ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಛತ್ತೀಸ್‌ಗಢ, ಆಂತರಿಕ ಒಡಿಶಾ, ಗಂಗಾನದಿ ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಒಳಭಾಗ ಕರ್ನಾಟಕ, ತೆಲಂಗಾಣದಲ್ಲಿ 5-5 ವರೆಗೆ ಬಿಸಿ ಗಾಳಿ ಬೀಸುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಉತ್ತರ ಭಾರತ, ಮಧ್ಯ ಭಾರತ ಮತ್ತು ಪೆನಿನ್ಸುಲಾರ್ ಭಾರತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ಮೂರು ದಿನಗಳ ಕಾಲ ಆಲಿಕಲ್ಲು ಮಳೆಯಾಗುತ್ತದೆ ಎಂದು ಹೇಳಿದ್ದಾರೆ.

Continue Reading

LATEST NEWS

ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ

Published

on

ಬೆಂಗಳೂರು : ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಪ್ರಕರಣದ ಆರೋಪ ಎದುರಿಸುತ್ತಿರೋ ಪ್ರಜ್ವಲ್ ರೇವಣ್ಣ ಜರ್ಮನಿಯಲ್ಲಿದ್ದಾರೆ ಎನ್ನಲಾಗಿದೆ. ಇದೀಗ ಎಸ್ಐಟಿ ಅಧಿಕಾರಿಗಳು ಲುಕ್‌ ಔಟ್ ನೋಟಿಸ್ ಹೊರಡಿಸಿದ್ದಾರೆ.


ಸಂಸದ ಪ್ರಜ್ವಲ್‌ ಹಾಗೂ ಎಚ್‌.ಡಿ.ರೇವಣ್ಣ ವಿರುದ್ಧ ಲೈಂ*ಗಿಕ ದೌರ್ಜ*ನ್ಯ ಆರೋಪ ಕೇಳಿಬಂದಿದೆ. ಈ ಬಗ್ಗೆ ವೀಡಿಯೋ ಹಾಸನ ಜಿಲ್ಲೆಯಾದ್ಯಂತ ಸದ್ದು ಮಾಡಿದೆ. ಈ ಬಗ್ಗೆ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆ ಈಗಾಗಲೇ ದೂರನ್ನೂ ದಾಖಲಿಸಿದ್ದಾರೆ. ಪ್ರಕರಣದ ಕುರಿತು ತನಿಖೆಗೆ ರಾಜ್ಯ ಸರ್ಕಾರ ಎಸ್​ಐಟಿ ರಚನೆ ಮಾಡಿದ್ದು, ಎಸ್ಐಟಿ ತಂಡ ಈಗಾಗಲೇ ತನಿಖೆ ಚುರುಕುಗೊಳಿಸಿದ್ದಾರೆ.
ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಅದಕ್ಕೂ ಮೊದಲೇ ಪ್ರಜ್ವಲ್‌ ದೇಶದಿಂದ‌ ಪರಾರಿಯಾಗಿದ್ದಾರೆ. ವಿಚಾರಣೆಗೆ ನೋಟಿಸ್ ನೀಡಿದರೂ ಹಾಜರಾಗಿಲ್ಲ.

ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪ್ರಕರಣ ; ವೀಡಿಯೋ ಹರಿಬಿಟ್ಟ ಕಾರ್ತಿಕ್ ನಾಪತ್ತೆ! ಮಲೇಷ್ಯಾಕ್ಕೆ ಹೋಗಿರುವ ಶಂಕೆ

ಸಮಯಾವಕಾಶ ಕೇಳಿದ್ದ ಪ್ರಜ್ವಲ್ :

ಸದ್ಯಕ್ಕೆ ಜರ್ಮನಿಯವಲ್ಲಿರುವ ಪ್ರಜ್ವಲ್ ರೇವಣ್ಣ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಹಾಗಾಗಿ, ತಮಗೆ ಏಳು ದಿನಗಳ ಕಾಲಾವಕಾಶ ಬೇಕು ಎಂದು ತಮ್ಮ ವಕೀಲರ ಮೂಲಕ ಮನವಿ ಸಲ್ಲಿಸಿದ್ದರು. ಆದರೆ, ಆ ಮನವಿಯ ಹೊರತಾಗಿಯೂ ಎಸ್ಐಟಿ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದೆ.

Continue Reading

LATEST NEWS

Trending