LATEST NEWS
ಕೇರಳ ತುಳು ಅಕಾಡೆಮಿ ಅಧ್ಯಕ್ಷರಾಗಿ ಕೆ.ಆರ್. ಜಯಾನಂದ ಆಯ್ಕೆ
ಕಾಸರಗೋಡು: ಕೇರಳ ತುಳು ಅಕಾಡೆಮಿ ಅಧ್ಯಕ್ಷರಾಗಿ ಕೆ.ಆರ್. ಜಯಾನಂದ ಅವರನ್ನು ಕೇರಳ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ.
ಕೆ.ಆರ್. ಜಯಾನಂದ
ಕೇರಳ ಸಂಸ್ಕೃತಿ ಇಲಾಖೆಯು ಅಕಾಡೆಮಿ ಸಮಿತಿ ಪುನರ್ ರಚನೆ ಮಾಡಿ ಆದೇಶ ಹೊರಡಿಸಿದ್ದು, ಅಧ್ಯಕ್ಷ, ಕಾರ್ಯದರ್ಶಿ, ಮೂವರು ಅಧಿಕೃತ ಸದಸ್ಯರ ಸಹಿತ 17 ಮಂದಿ ಸದಸ್ಯರ ಹೆಸರು ಘೋಷಣೆ ಮಾಡಲಾಗಿದೆ.
ಕಾಸರಗೋಡು ಸಹಕಾರಿ ಸಹಾಯಕ ನೋಂದಣಾಧಿಕಾರಿ ಎ.ರವೀಂದ್ರ ಕಾರ್ಯದರ್ಶಿಯಾಗಿ, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎ.ಕೆ.ಎಂ.ಅಶ್ರಫ್ ಅಧಿಕೃತ ಸದಸ್ಯರಾಗಿದ್ದಾರೆ.
ವಕೀಲ ಜಿ.ಚಂದ್ರಮೋಹನ್, ಕೃಷ್ಣವೇಣಿ ಟೀಚರ್, ಜೋಸೆಫ್ ಕ್ರಾಸ್ತಾ, ಸಿ.ಕೆ.ಅಜಿತ್ ಚಿಪ್ಪಾರು, ಉದಯ ಸಾರಂಗ್ ಎಣ್ಮಕಜೆ, ಗಣೇಶ ಕಾಜವದ, ಭುಜಂಗ ಶೆಟ್ಟಿ, ಎ. ಚಂದ್ರಶೇಖರನ್, ವರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಸುಳ್ಯಮೆ, ಪೈವಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ, ಅಬ್ದುಲ್ಲ ಪೈವಳಿಕೆ, ಗಂಗಾಧರ ದುರ್ಗಿಪಳ್ಳ ಅಕಾಡೆಮಿಯ ಸದಸ್ಯರಾಗಿದ್ದಾರೆ.
LATEST NEWS
ಪದ್ಮಶ್ರೀ ಪುರಸ್ಕೃತ ಕಲಾವಿದನ ಈಗಿನ ಪರಿಸ್ಥಿತಿ ನೋಡಿ ‘ಅಯ್ಯೋ’ ಎನ್ನುತ್ತಿದ್ದಾರೆ ಜನ!
ಹೈದರಾಬಾದ್ : ‘ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ’ ಎಂಬಂತೆ ಅನೇಕ ಕಲಾವಿದರು ಕಲಾಪೋಷಣೆಯಲ್ಲಿ ತೊಡಗಿಕೊಂಡಿರುತ್ತಾರೆ. ಅಂತಹ ಕಲಾವಿದರಲ್ಲಿ ಕೆಲವರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವ ಕೆಲಸಗಳೂ ನಡೆಯುತ್ತದೆ. ಹಾಗಂತ ದೊಡ್ಡ ವ್ಯಕ್ತಿಗಳಾಗಿ, ಶ್ರೀಮಂತರಾಗಿ ಕಲಾವಿದರು ಮೆರೆಯುತ್ತಾರಾ? ಇಲ್ಲ ಎಂದು ಹೇಳುತ್ತಿದೆ ಈ ವ್ಯಕ್ತಿಯ ಜೀವನ.
ಹೌದು, ಇವರು ಎರಡು ವರ್ಷಗಳ ಹಿಂದೆಯಷ್ಟೇ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು. ಆದ್ರೆ, ಈಗ ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಅವರೇ ಸಂಗೀತ ಸಾಧಕ ತೆಲಂಗಾಣದ ಸಾಧಕ ದರ್ಶನಂ ಮೊಗುಳಯ್ಯ. ಅವರು ಕೆಲಸ ಮಾಡುತ್ತಿರುವ ಫೋಟೋ, ವೀಡಿಯೋ ವೈರಲ್ ಆಗಿವೆ.
ದರ್ಶನಂ ಮೊಗುಳಯ್ಯ ಸಂಗೀತ ವಾದನವಾದ ಕಿನ್ನೇರವನ್ನು ನುಡಿಸುವಲ್ಲಿ ಖ್ಯಾತರು, ಆ ವಾದನಕ್ಕೆ ರಾಷ್ಟ್ರೀಯ ಗೌರವ ಸಿಗುವಲ್ಲಿ ದರ್ಶನಂ ಮೊಗುಳಯ್ಯ ಅವರ ಪಾತ್ರ ಹಿರಿದು. ಹೀಗಾಗಿಯೇ ಕೇಂದ್ರ ಸರ್ಕಾರವು 2022ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಆಗ ರಾಷ್ಟ್ರಪತಿಯಾಗಿದ್ದ ರಾಮನಾಥ್ ಕೋವಿಂದ್ ಅವರು ದರ್ಶನಂ ಮೊಗುಳಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು. ಇದಾದ ಬಳಿಕ ದರ್ಶನಂ ಮೊಗುಳಯ್ಯ ಅವರನ್ನು ಇಡೀ ದೇಶವೇ ಮೆಚ್ಚಿಕೊಂಡಿತ್ತು. ‘ವ್ಹಾ’ ಎಂದಿತ್ತು. ಆದರೆ, ಈಗಿನ ಪರಿಸ್ಥಿತಿ ಕೇಳಿದ್ರೆ ‘ಅಯ್ಯೋ’ ಎನ್ನುವಂತಿದೆ.
ಕೂಲಿ ಕೆಲಸ ಮಾಡ್ತಿದ್ದಾರೆ ಪದ್ಮಶ್ರೀ ಪುರಸ್ಕೃತ :
ದರ್ಶನಂ ಮೊಗುಳಯ್ಯ ತಮ್ಮ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. ಆದರೆ, ಈಗ ತಮ್ಮ 73ನೇ ವಯಸ್ಸಿನಲ್ಲಿ ಹೈದರಾಬಾದ್ ಬಳಿಯಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕುಟುಂಬಕ್ಕೆ ಇವರೇ ಆಧಾರ ಸ್ತಂಭ. ಹಾಗಾಗಿ ಮೂರು ಹೊತ್ತಿನ ಊಟಕ್ಕಾಗಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಫೋಟೊಗಳು ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇವರ ದುಸ್ಥಿತಿ ಕಂಡು ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಮಹಿಳೆಯರ ಸುರಕ್ಷತೆಗೆ ಬಂತು ‘ವುಮೆನ್ ಸೇಫ್ಟೀ’ ಅಪ್ಲಿಕೇಷನ್..!
ಒಂದು ಕೋಟಿ ರೂ. ಎಲ್ಲಿ ಹೋಯ್ತು ?
ದರ್ಶನಂ ಮೊಗುಳಯ್ಯ ಸಾಧನೆಗೆ ಸರ್ಕಾರವೇನೋ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದೆ. ಇದರ ಬೆನ್ನಲ್ಲೇ ತೆಲಂಗಾಣ ಸರ್ಕಾರವು ಅವರಿಗೆ ಒಂದು ಕೋಟಿ ರೂ. ಪ್ರೋತ್ಸಾಹ ಧನವನ್ನೂ ನೀಡಿತ್ತು. ಅಂದಿನ ಸಿಎಂ ಕೆ.ಚಂದ್ರಶೇಖರ್ ರಾವ್ ಒಂದು ನಿವೇಶನವನ್ನೂ ಮಂಜೂರು ಮಾಡಿದ್ದರು.
ಆದರೆ, ಸರ್ಕಾರ ಕೊಟ್ಟ ಪ್ರೋತ್ಸಾಹಧನದಲ್ಲಿ ಒಂದಷ್ಟು ಹಣವನ್ನು ಮಗಳ ಮದುವೆಗೆ ಖರ್ಚು ಮಾಡಿದ ಅವರು, ಉಳಿದ ಹಣವನ್ನು ಸಾಲ ತೀರಿಸಲು, ಕುಟುಂಬದ ತುರ್ತು ಸಂದರ್ಭಗಳಿಗೆ ಬಳಸಿದ್ದಾರಂತೆ. ಹಾಗಾಗಿ, ಅವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.
DAKSHINA KANNADA
ಉಪ್ಪಿನಂಗಡಿ : ಹೃದಯಾ*ಘಾತದಿಂದ ಮಲಗಿದ್ದಲ್ಲೇ ಇಹಲೋಕ ತ್ಯಜಿಸಿದ ಯುವಕ
ಉಪ್ಪಿನಂಗಡಿ : ಕೋವಿಶೀಲ್ಡ್ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆಯಂತ ಅಡ್ಡ ಪರಿಣಾಮದ ಬಗ್ಗೆ ಒಪ್ಪಿಕೊಂಡಿದ್ದ ಸೀರಂ ಸಂಸ್ಥೆಯಿಂದ ಭಾರತದ ಜನರಲ್ಲಿ ಆತಂಕ ಹೆಚ್ಚಾಗಿದೆ. ಕೋವಿಡ್ ಲಸಿಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ ಆರೋಗ್ಯವಾಗಿದ್ದ ಯುವಕನೊಬ್ಬ ಹೃದಯಾ*ಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾರೆ.
ಗಾರೆ ಕೆಲಸ ಮಾಡಿಕೊಂಡು ಆರೋಗ್ಯವಾಗಿದ್ದ 27 ವರ್ಷದ ಜನಾರ್ದನ ಎಂಬ ಯುವಕ ಅಸು ನೀಗಿದ್ದಾನೆ. ಉಪ್ಪಿನಂಗಡಿ ಸಮೀಪದ ನಿನ್ನಿಕಲ್ಲು ನಿವಾಸಿಯಾಗಿದ್ದ ಜನಾರ್ದನ ಮೇಸ್ತ್ರಿಯಾಗಿ ಗಾರೆ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಕೆಲಸಕ್ಕೆ ರಜೆ ಹಾಕಿ ಬಂದಿದ್ದ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.ಈ ವೇಳೆ ನಿದ್ರೆಗೆ ಜಾರಿದ ಜನಾರ್ದನ್ ಮತ್ತೆ ಮೇಲೆದ್ದಿಲ್ಲ.
ಇದನ್ನೂ ಓದಿ : ಸಿಡಿಲ ಬಡಿತಕ್ಕೆ ನವವಿವಾಹಿತ ದುರ್ಮರ*ಣ..!10 ದಿನಗಳ ಹಿಂದೆಯಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ವಿಧಿಯಾಟಕ್ಕೆ ಬ*ಲಿ!!
ಮಗ ಮಲಗಿದ್ದಾನೆ ಅಂತ ತಾಯಿ ತೋಟದ ಕೆಲಸಕ್ಕೆ ಹೋಗಿದ್ದು ಸಂಜೆ ಬಂದು ಮಗನನ್ನು ಎಬ್ಬಿಸಿದಾಗಲೇ ವಿಚಾರ ಗೊತ್ತಾಗಿದೆ. ಕರೆದರೂ ಮಗ ಎದ್ದಿಲ್ಲ ಎಂದು ತಾಯಿ ಮಗನನ್ನು ಅಲುಗಾಡಿಸಿ ಎಚ್ಚರಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ, ಆ ವೇಳೆ ಯಾವುದೇ ರೆಸ್ಪಾನ್ಸ್ ಇಲ್ಲದ ಕಾರಣ ತಾಯಿಗೆ ಅನುಮಾನ ಬಂದು ಉಸಿರು ಪರಿಶೀಲಿಸಿದಾಗ ಮಗ ಮೃ*ತಪಟ್ಟಿರುವುದು ಆರಿವಾಗಿದೆ.
LATEST NEWS
ಮಹಿಳೆಯರ ಸುರಕ್ಷತೆಗೆ ಬಂತು ‘ವುಮೆನ್ ಸೇಫ್ಟೀ’ ಅಪ್ಲಿಕೇಷನ್..!
ಮಂಗಳೂರು: ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿರಬೇಕಾದರೆ ಕೂಡಾ ಆಭರಣ, ಪರ್ಸ್ ಕದ್ದುಕೊಂಡು ಹೋಗುವ ಜನರನ್ನು ನಾವು ನೋಡಿರುತ್ತೇವೆ. ಬಸ್ಸು ಮತ್ತು ಎಲ್ಲೆಂದರಲ್ಲಿ ಮಹಿಳೆಯರಿಗೆ ಉಪದ್ರ ಕೊಡುವ ಕಿರಾತಕರನ್ನು ನಾವು ನೋಡಿರುತ್ತೇವೆ. ಹೀಗೆ ಮಹಿಳೆಯರಿಗೆ ಎಲ್ಲಿ ಹೋದರೂ ಅಪಾಯ ಮುಗಿಯುವಂತದ್ದಲ್ಲ. ಇನ್ನು ಅಪರಿಚಿತ ಜಾಗದಲ್ಲಿ ಕೇಳಬೇಕು ಅಂತಾನೆ ಇಲ್ಲ. ಆದರೆ ಇನ್ಮುಂದೆ ಮಹಿಳೆಯರು ಸುರಕ್ಷತೆಯ ವಿಚಾರದಲ್ಲಿ ಭಯಪಡಬೇಕಾಗಿಲ್ಲ. ಏಕಾಂಗಿಯಾಗಿ ಎಲ್ಲಿ ಬೇಕಾದರೂ ಹೋಗಬಹುದು.
ಪ್ರಯಾಣದ ವೇಳೆ ಸಹ ಪ್ರಯಾಣಿಕರು ಕಿರುಕುಳ ಕೊಡುತ್ತಿದ್ದಾರೆ ಅನ್ನೋದು ಮನವರಿಕೆಯಾದರೆ ಕೂಡಲೇ ಈ ಒಂದು ಪ್ಯಾನಿಕ್ ಬಟನ್ ಒತ್ತಿದರೆ ಸಾಕು ನೀವು ಕಳುಹಿಸಬೇಕಾದ ವ್ಯಕ್ತಿಗಳಿಗೆ ಅಲರ್ಟ್ ಮೇಸೆಜ್ ಹೋಗುತ್ತದೆ. ಇಂತಹ ಒಂದು ನೂತನ ಅಪ್ಲಿಕೇಶನ್ವೊಂದನ್ನು ಕಾಲೇಜು ವಿದ್ಯಾರ್ಥಿನಿಯೊಬ್ಬರು ಅಭಿವೃದ್ಧಿ ಪಡಿಸಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಆಯೇಷಾ ಸರ್ವತ್ ವುಮೆನ್ ಸೇಫ್ಟಿ ಎನ್ನುವ ಸಾಫ್ಟ್ವೇರ್ಅಪ್ಲಿಕೇಶನ್ ಅನ್ನು ತಯಾರಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಪುರುಷರಿಗೆ ಸರಿಸಮನಾಗಿ ಮಹಿಳೆಯರು ಬೆಳೆದು ನಿಂತಿದ್ದಾರೆ. ಮನೆ ಕಾಯಕದ ಜೊತೆಗೆ ಮನೆಯಿಂದ ಆಚೆಗೂ ಸಹ ದುಡಿಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಂಪೆನಿ ಕೆಲಸ ಮುಗಿಸಿಕೊಂಡು ತಡರಾತ್ರಿ ಮನೆಗೆ ಬರಬೇಕಾದರೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತೆ ಕೃತ್ಯಗಳು ನಡೆದಿರುವ ನಿದರ್ಶನಗಳು ಇವೆ. ಅಲ್ಲದೆ ಒಂಟಿಯಾಗಿ ಕ್ಯಾಬ್ನಲ್ಲಿ ಸಂಚರಿಸುವಾಗ ಆ ಒಂದು ಭಯ ಇದ್ದೇ ಇರುತ್ತದೆ.
ಪ್ಯಾನಿಕ್ ಬಟನ್ ಒತ್ತಿದರೆ ಸೈರನ್ ಮೊಳಗಲಿದೆ:
ಹೀಗಾಗಿ ರೆಡ್ ಝೋನ್ ಪ್ರದೇಶಗಳಲ್ಲಿ ಅಥವಾ ಅಪರಿಚಿತ ಸ್ಥಳಗಳಲ್ಲಿ ಓಡಾಡುವಾಗ ಈ ಅಪ್ಲಿಕೇಶನ್ ಮಹಿಳೆಯರ ನೆರವಿಗೆ ಬರಲಿದೆ. ಅಪಾಯದಲ್ಲಿ ಸಿಲುಕಿರುವುದು ಗೊತ್ತಾದರೆ ಕೂಡಲೇ ಪ್ಯಾನಿಕ್ ಬಟನ್ ಒತ್ತಿದರೆ ಸೈರನ್ ಮೊಳಗಲಿದೆ. ಜೊತೆಗೆ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿರುವ ಯಾರಿಗಾದರೂ ಕಳುಹಿಸಿದರೆ ಕೂಡಲೇ “ಐಯಮ್ ಇನ್ ಟ್ರಬಲ್” ಎಂದು ಲೊಕೇಶನ್ ಸಹಿತ ಸಂದೇಶ ರವಾನೆಯಾಗಲಿದೆ.
ಈ ಆ್ಯಪ್ ಗೆ ಇಂಟರ್ನೆಟ್, ವೈಫೈ, ಜಿಪಿಎಸ್ ಅಗತ್ಯವಿಲ್ಲ:
ಸಾರ್ವಜನಿಕ ಪ್ರದೇಶಗಳಲ್ಲಿ ಅಪಾಯ ಎದುರಾಗುವ ಸಂದರ್ಭ ಬಂದರೆ ಕೂಡಲೇ ಮೊಬೈಲ್ನಲ್ಲಿ ಅಳವಡಿಸಿಕೊಂಡಿರುವ ವುಮೆನ್ ಸೇಫ್ಟಿ ಅಪ್ಲಿಕೇಶನ್ನಲ್ಲಿ ಪ್ಯಾನಿಕ್ ಬಟನ್ ಒತ್ತಿದರೆ ಅಲಾರಂ ರೀತಿ ಸೈರನ್ ಮೊಳಗಲಿದೆ. ಈ ಮೂಲಕ ಸುತ್ತಮುತ್ತಲಿನಲ್ಲಿರುವವರ ಗಮನ ಸೆಳೆದು ನೆರವು ಪಡೆಯಬಹುದು. ಎರಡನೇಯದಾಗಿ ನಿರ್ಜನ ಪ್ರದೇಶಗಳಲ್ಲಿ ಅಥವಾ ಒಂಟಿಯಾಗಿ ಪ್ರಯಾಣ ಮಾಡುವಾಗ ನಿಮ್ಮ ಮೊಬೈಲ್ನಲ್ಲಿರುವ ಸಂಪರ್ಕಿತರ ನಂಬರ್ಗಳಿಗೆ ಸಂದೇಶ ಕಳುಹಿಸಬಹುದಾಗಿದೆ.
ಇದಕ್ಕೆ ಯಾವುದೇ ಇಂಟರ್ನೆಟ್, ವೈಫೈ ಹಾಗೂ ಜಿಪಿಎಸ್ ಸಹಾಯದ ಅಗತ್ಯವಿಲ್ಲ. ಆ್ಯಂಡ್ರಾಯ್ಡ್ ಮೊಬೈಲ್ ಇರುವವರು ಮಾತ್ರ ಅಪ್ಲಿಕೇಶನ್ ನಿಂದ ನೆರವು ಪಡೆಯಬಹುದು. ಏಕಕಾಲದಲ್ಲಿ 150 ಮಂದಿಗೆ ಅಲರ್ಟ್ ಮೆಸ್ಸೇಜ್ ಕಳುಹಿಸಬಹುದಾಗಿದೆ. ಈ ಆ್ಯಪ್ ನ ಪ್ರಯೋಜನ ಸಾಮಾನ್ಯ ಮಹಿಳೆಯರಿಗೂ ತಲುಪಲಿ ಎಂಬುವುದೇ ಆಶಯ.
- FILM7 days ago
PHOTOS : ಗೀತಾ ‘ವಿಜಯ್’ ಅದ್ದೂರಿ ಮದುವೆ; ಮೆಚ್ಚುಗೆ ಪಡೆದ ಧನುಷ್ ಮಾಡಿದ ಆ ಒಂದು ಕಾರ್ಯ!
- DAKSHINA KANNADA7 days ago
ಅಮೇರಿಕಾದಲ್ಲಿ ಕಾರು ಅಪಘಾತ…! ಮೂವರು ಭಾರತೀಯ ಮಹಿಳೆಯರ ಸಾ*ವು…!
- DAKSHINA KANNADA7 days ago
ದೊಡ್ಡವರ ಜಗಳದಲ್ಲಿ ಇಹಲೋಕ ತ್ಯಜಿಸಿದ 3 ರ ಕಂದಮ್ಮ…
- DAKSHINA KANNADA7 days ago
ದೆಹಲಿಯ ರಾಣಾ ಪ್ರತಾಪ್ ನಗರದ ಜಿನ ಬಸದಿ 24ತೀರ್ಥಂಕರ ಪಂಚ ಕಲ್ಯಾಣ; ಮೂಡುಬಿದಿರೆ ಸ್ವಾಮೀಜಿ ಭಾಗಿ