Connect with us

  LATEST NEWS

  ಉಡುಪಿ: ‘ಮೊಂತಿ ಫೆಸ್ತ್‌’ಗಾಗಿ ಉಚಿತ ತೆನೆ ಹಂಚುವ ಜೂಲಿಯನ್ ದಾಂತಿ ಫ್ಯಾಮಿಲಿ

  Published

  on

  ಉಡುಪಿ: ತೆನೆ ಹಬ್ಬಕ್ಕೆ ಕ್ರೈಸ್ತ, ಹಿಂದೂ ಧರ್ಮಗಳಲ್ಲಿ ವಿಶೇಷ ಮಹತ್ವ ಇದ್ದು ಹಳ್ಳಿಗಳಲ್ಲಿ ತೆನೆಗೆ ಯಾವುದೇ ತೊಂದರೆ ಇಲ್ಲ, ಆದರೆ ನಗರದಲ್ಲಿ ತೆನೆ ಸಿಗುವುದೇ ಕಷ್ಟ. ಇದಕ್ಕಾಗಿ ಉಡುಪಿಯ ಒಂದು ಕುಟುಂಬ ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಭತ್ತದ ಕೃಷಿ ಮಾಡಿ ಎಲ್ಲರಿಗೂ ಉಚಿತವಾಗಿ ತೆನೆ ಹಂಚುತ್ತಾರೆ. ವಿಶೇಷ ಅಂದರೆ ಉಡುಪಿಯ ತೆನೆ ಸಾಗರದಾಚೆಗಿನ ಕೊಲ್ಲಿ ರಾಷ್ಟ್ರಕ್ಕೂ ಕಳುಹಿಸಿಕೊಡಲಾಗುತ್ತದೆ.


  ಕರಾವಳಿ ಅಂದರೆ ಧಾರ್ಮಿಕ ಆಚರಣೆಯ ಕಣಜವಾಗಿದ್ದು ನಿತ್ಯ ಒಂದಲ್ಲ ಒಂದು ಹಬ್ಬ ಆಚರಣೆಗಳು ತಪ್ಪಿದ್ದಲ್ಲ.

  ಕೃಷಿ ಪ್ರಧಾನವಾದ ಕುಟುಂಬಗಳೇ ಹೆಚ್ಚಾಗಿರೋ ಕರಾವಳಿಯಲ್ಲಿ ಕೃಷಿ ಜೊತೆಗೆ ಧಾರ್ಮಿಕ ಆಚರಣೆ ಹಾಸುಹೊಕ್ಕಾಗಿವೆ. ಅಂತಹ ಆಚರಣೆಯಲ್ಲಿ ತೆನೆ ಹಬ್ಬನೂ ಒಂದು.

  ಕರಾವಳಿಯ ಕೈಸ್ತರು ತೆನೆ ಹಬ್ಬವನ್ನು ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿ ಪೆಸ್ಟ್ ಎಂದು ಆಚರಿಸಿದರೆ ಹಿಂದೂಗಳು ಮನೆ ತುಂಬಿಸುವ ಹಬ್ಬ (ತೆನೆ ಕಟ್ಟು) ಅನಂತ ಚತುರ್ಥಿ ನಂತರ ಒಂದು ತಿಂಗಳಕಾಲ ಆಚರಿಸುವುದು ರೂಢಿ.

  ಬೆಳೆದು ನಿಂತ ಭತ್ತದ ತೆನೆಗಳನ್ನು ಪೂಜಿಸಿ ಮನೆ ಹೊಸ್ತಿಲು ದೇವರ ಗುಡಿ ,ಕೃಷಿ ಪರಿಕರಗಳು ಹೀಗೆ ಎಲ್ಲದಕ್ಕೂ ಕಟ್ಟಿ ಪೂಜಿಸಿದರೆ ಕ್ರೈಸ್ತರು ಚರ್ಚುಗಳಿಂದ ತಂದ ಪವಿತ್ರ ತೆನೆಗಳನ್ನು ದೇವರ ಪೀಠದ ಮೇಲೆ ಇಟ್ಟು ಪ್ರಾರ್ಥನೆ ಸಲ್ಲಿಸುತ್ತಾರೆ.

  ಜನರ ಧಾರ್ಮಿಕ ಆಚರಣೆಯ ಖುಷಿಗಾಗಿಯೇ ಉಡುಪಿ ಕುತ್ಪಾಡಿಯ ಈ ಕುಟುಂಬ ಭತ್ತದ ಬೇಸಾಯ ಮಾಡುತ್ತದೆ.

  ಕುತ್ಪಾಡಿಯ ಜೂಲಿಯನ್ ದಾಂತಿ ಅವರ ಕುಟುಂಬ ಅರ್ಧ ಎಕರೆ ಗದ್ದೆಯಲ್ಲಿ ಬೇಸಾಯ ಮಾಡಿದ್ದಾರೆ. ತೆನೆ ಭರಿತ ಪೈರಿನ ಫಸಲು ಬೆಳೆದು ನಿಂತಿದ್ದು, ಚೌತಿ, ಮೊಂತಿ ಹಬ್ಬದ ಸಂದರ್ಭ ಕಟ್ಟುವ ತೆನೆ ಹಬ್ಬಕ್ಕೂ ತನ್ನ ಗದ್ದೆಯಲ್ಲಿ ಬೆಳೆದ ಭತ್ತದ ಎಲ್ಲರಿಗೂ ಹಂಚುತ್ತಾರೆ.

  ತೆನೆಯನ್ನು ಜಾತಿ ಧರ್ಮ ಮತದ ಭೇದವಿಲ್ಲದೆ ತೆನೆಹಬ್ಬಕ್ಕೆ ತೆನೆಯ ಬೇಡಿಕೆ ಇಟ್ಟವರಿಗೆ ಉಚಿತವಾಗಿ ಹಂಚುತ್ತಾರೆ.

  ಜೂಲಿಯನ್ ಧಾಂತಿ ಕುಟುಂಬ ತೆನೆ ಹಬ್ಬಕ್ಕಾಗಿಯೇ ತಮ್ಮ ಎಕರೆ ಗದ್ದೆಯಲ್ಲಿ ಎಪ್ರಿಲ್-ಮೇ ತಿಂಗಳಲ್ಲಿಯೇ ನಾಟಿ ಕೆಲಸವನ್ನು ಪೂರೈಸುತ್ತಾರೆ. ಸುಡು ಮಣ್ಣು, ಹಟ್ಟಿಗೊಬ್ಬರ ಬಳಸಿ ಸಮರ್ಪಕ ಮಳೆಯು ಸುರಿಯುವ ಮುನ್ನವೇ ಪಂಪ್ ಮೂಲಕ ಗದ್ದೆಗೆ ನೀರು ಹಾಯಿಸಿ ಬೇಸಾಯ ನಡೆಸುತ್ತಾರೆ.

  ಈ ಗದ್ದೆಯ ತೆನೆ ಭರಿತ ಫಸಲನ್ನು ತೆನೆ ಹಬ್ಬ ಹಬ್ಬಕ್ಕಾಗಿ ಉಚಿತ ವಿತರಣೆಯಾಗಿ ಮಿಕ್ಕಿದ ಭತ್ತ ಹಕ್ಕಿ ನವೀಲು ಅಳಿಲುಗಳಿಗೆ ಆಹಾರಕ್ಕಾಗಿ ಮೀಸಲಿಡುತ್ತಾರೆ.

  ತೆನೆ ಹಬ್ಬದ ಅವಧಿಗೆ ಸರಿಯಾಗಿ ತೆನೆಕಟ್ಟುವ ಭತ್ತದ ಪೈರುನ್ನು ಕಳೆದ 25 ವರ್ಷಗಳಿಂದಲೂ ದೇಶ ವಿದೇಶಗಳಲ್ಲಿನ ಇಗರ್ಜಿಗಳಿಗೆ ಕನ್ಯಾ ಮರಿಯಮ್ಮನ ಜನ್ಮದಿನದಂದು ತೆನೆ (ಕದಿರು)ಕಟ್ಟಲು, ಚೌತಿ ಹಬ್ಬದ ಸಂದರ್ಭದಲ್ಲಿ ದೇವಸ್ಥಾನ, ಸಂಘ ಸಂಸ್ಥೆಗಳಿಗೆ,ಅಗತ್ಯ ಇರುವ ಕುಟುಂಬಗಳಿಗೂ ಫಸಲು ಭರಿತ ತೆನೆಯನ್ನು ಒದಗಿಸುತ್ತಾರೆ.

  ವಿದೇಶದಲ್ಲಿ ತೆನೆ ಹಬ್ಬ ಆಚರಿಸುವ ಮಂದಿಗೂ ತೆನೆಯನ್ನು ಪಾರ್ಸೆಲ್ ಮೂಲಕ ಕಳುಹಿಸಿಕೊಡುತ್ತಾರೆ.

  ವಿದೇಶದಲ್ಲಿ ದುಡಿಮೆ ಮಾಡಿ ಪ್ರಸ್ತುತ ನಿವೃತ್ತಿಯಾಗಿ ಕೃಷಿಯನ್ನು ಮಾಡಿಕೊಂಡು ಬಂದಿರುವ ಈ ಕುಟುಂಬದ ಮಂದಿ ಸದ್ಯ ಉಚಿತ ಸೇವೆ ಮಾಡುವದರಲ್ಲೆ ಖುಷಿ ಪಡುವ ಈ ಕುಟುಂಬ ಎಲ್ಲರಿಗೂ ಮಾದರಿ.

  Click to comment

  Leave a Reply

  Your email address will not be published. Required fields are marked *

  LATEST NEWS

  ಐಸ್‌ಕ್ರೀಂನಲ್ಲಿ ಪತ್ತೆಯಾಗಿದ್ದ ಬೆರಳು ಯಾರದ್ದು ಗೊತ್ತಾ..? ಪೊಲೀಸರು ಹೇಳಿದ್ದೇನು?

  Published

  on

  ಮುಂಬೈ/ಮಂಗಳೂರು: ಕೆಲ ದಿನಗಳ ಹಿಂದೆ ಮುಂಬೈನಲ್ಲಿ ವೈದ್ಯರೊಬ್ಬರು ಆನ್‌ಲೈನ್‌ನಲ್ಲಿ ಐಸ್‌ಕ್ರೀಂ ಆರ್ಡರ್ ಮಾಡಿದ್ದಾರೆ. ಆದ್ರೆ ಐಸ್‌ಕ್ರೀಂನಲ್ಲಿ  ಮನುಷ್ಯ ನ ಬೆರಳು ಪತ್ತೆಯಾಗಿದ್ದು, ಅಚ್ಚರಿಯನ್ನು ಮೂಡಿಸಿತ್ತು. ಮೊದಲು ಇದು ವೆಲ್ನೆಟ್ ಅಂದುಕೊಂಡಿದ್ದರು. ಬಳಿಕ ಕೂಲಂಕುಷವಾಗಿ ಪರಿಶೀಲನೆ ಮಾಡಿದಾಗ ಅದು ಮನುಷ್ಯನ ಬೆರಳೆಂದು ಗೊತ್ತಾಗಿದೆ. ಈ ಕುರಿತು ವೈದ್ಯರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದರು.

  Read More..; ಆನ್​ಲೈನ್​ ಮೂಲಕ ಆರ್ಡರ್​ ಮಾಡಿದ್ದ ಐಸ್​ಕ್ರೀಂನಲ್ಲಿ ಮನುಷ್ಯನ ಬೆರಳು ಪತ್ತೆ

  ಇದೀಗ ಆನ್‌ಲೈನ್ ಮೂಲಕ ತರಿಸಿದ್ದ ಐಸ್‌ಕ್ರೀಂ ನಲ್ಲಿ ಪತ್ತೆಯಾಗಿದ್ದಬೆರಳು ಯಾರದ್ದು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.  ಪುಣೆಯಲ್ಲಿ ಐಸ್‌ಕ್ರೀಂ ತಯಾರಿಕಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬಂದಿಯ ಕೈ ಬೆರಳು ಎಂದು ಹೇಳಲಾಗಿದೆ. ಐಸ್‌ಕ್ರೀಂ ತಯಾರಿಕಾ ಫ್ಯಾಕ್ಟರಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕೆಲ ದಿನಗಳ ಹಿಂದೆ ಇಲ್ಲಿನ ಸಿಬಂದಿಯೊಬ್ಬರು ಕೆಲಸ ಮಾಡುವಾಗ ಕೈ ಬೆರಳು ತುಂಡರಿಸಿತ್ತು.  ಹೀಗಾಗಿ ಆತನದ್ದೇ  ಈ ಕೈಬೆರಳು ಎಂದು ಅಂದಾಜಿಸಲಾಗಿದೆ. ವ್ಯಕ್ತಿಯ ಡಿಎನ್‌ಎ ಮಾದರಿಗಳನ್ನು ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು ನಿಖರ ಮಾಹಿತಿಗಾಗಿ ಕಾದು ನೋಡಬೇಕಿದೆ.

  Continue Reading

  LATEST NEWS

  ಅಯೋಧ್ಯೆ ರಾಮ ಮಂದಿರದಲ್ಲಿ ಗುಂಡಿಗೆ ಯೋಧನ ಜೀವಾಂತ್ಯ..!

  Published

  on

  ಅಯೋಧ್ಯಾ : ಅಯೋಧ್ಯೆಯ ರಾಮ ಮಂದಿರದ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್‌ಎಸ್‌ಎಫ್‌ ಯೋಧ ಅನುಮಾನಾಸ್ಪದವಾಗಿ ಗುಂಡು ತಾಗಿ ಸಾ*ವನ್ನಪ್ಪಿದ್ದಾರೆ. ಜೂನ್ 19 ರ ಮುಂಜಾನೆ 5.25 ಕ್ಕೆ ಈ ಘಟನೆ ನಡೆದಿದ್ದು, ಯೋಧನ ಹಣೆಗೆ ಗುಂಡು ತಾಗಿ ಮಂದಿರದ ವಿಐಪಿ ಗೇಟ್ ಬಳಿ ಮೃ*ತಪಟ್ಟಿದ್ದಾನೆ. ಮೃ*ತ ಯೋಧನನ್ನು ಶತ್ರುಘ್ನ ವಿಶ್ವಕರ್ಮ ಎಂದು ಗುರುತಿಸಲಾಗಿದ್ದು, ಘಟನೆ ಹೇಗಾಯ್ತು ಅನ್ನೋದು ಇನ್ನೂ ನಿಗೂಢವಾಗಿ ಉಳಿದಿದೆ.

  ಮೂಲಗಳ ಪ್ರಕಾರ, ರಾಮಮಂದಿರ ಸಂಕೀರ್ಣದ ವಿಐಪಿ ಗೇಟ್ ಬಳಿ ಗುಂಡಿನ ಸದ್ದು ಕೇಳಿ ಬಂದಿದೆ. ಸಹೋದ್ಯೋಗಿ ಭದ್ರತಾ ಸಿಬ್ಬಂದಿ ಓಡಿ ಬಂದು ನೋಡಿದಾಗ ಶತ್ರುಘ್ನ ವಿಶ್ವಕರ್ಮ ಹಣೆಗೆ ಗುಂಡು ತಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತಾದ್ರೂ ಆ ವೇಳೆಗೆ ಅವರು ಮೃ*ತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇವರು ಅಂಬೇಡ್ಕರ್ ನಗರದ ನಿವಾಸಿಯಾಗಿದ್ದು, ಘಟನಾ ಸ್ಥಳಕ್ಕೆ ಐಜಿ ಹಾಗೂ ಎಸ್‌ಎಸ್‌ಪಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

  ಘಟನೆ ವೇಳೆ ಶತ್ರುಘ್ನ ವಿಶ್ವಕರ್ಮ ಮೊಬೈಲ್ ನೋಡುತ್ತಿದ್ದು, ಅವರ ಜೊತೆ ಬೇರೆ ಸಿಬ್ಬಂದಿ ಇದ್ದರು ಎಂದು ಮೊದಲ ಮಾಹಿತಿ ದೊರೆತಿದೆ. ಆದ್ರೆ, ಗುಂಡು ಹಣೆಗೆ ಹೇಗೆ ತಾಗಿತು ಅನ್ನೋ ಬಗ್ಗೆ ಯಾರಿಂದಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಯೋಧ ಶತ್ರುಘ್ನ ವಿಶ್ವಕರ್ಮ ಅವರ ಸಹೋದರರು ಆರೋಪಿಸಿದ್ದಾರೆ. ಸಹೋದರನ ಸಾ*ವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು ತನಿಖೆಗೆ ಆಗ್ರಹಿಸಿದ್ದಾರೆ.

  Continue Reading

  LATEST NEWS

  ಮೆಗಾಸ್ಟಾರ್ ಚಿರಂಜೀವಿಯ ಮಾಜಿ ಅಳಿಯ ಹಠಾತ್ ನಿಧ*ನ

  Published

  on

  ಮಂಗಳೂರು / ಚೆನ್ನೈ : ಮೆಗಾಸ್ಟಾರ್ ಚಿರಂಜೀವಿಯ ಮಾಜಿ ಅಳಿಯ ಶಿರೀಶ್ ಭಾರಧ್ವಜ್ ಹೃದಯಾ*ಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಶಿರೀಶ್, ಮೆಗಾಸ್ಟಾರ್ ಚಿರಂಜೀವಿಯ ಪುತ್ರಿ ಶ್ರಿಜಾ ಕೊನೆಡೆಲಾ ಅವರನ್ನು ವಿವಾಹವಾಗಿದ್ದರು. ಈ ವಿವಾಹಕ್ಕೆ ಚಿರಂಜೀವಿ ಅವರ ತೀವ್ರ ವಿರೋಧವಿತ್ತು, ಹಾಗಾಗಿ ಕುಟುಂಬಕ್ಕೆ ತಿಳಿಸದೆ ಶಿರೀಶ್ ಹಾಗೂ ಶ್ರೀಜಾ ವಿವಾಹವಾಗಿದ್ದರು. ಆದರೆ ಬಳಿಕ ಶ್ರಿಜಾ, ಶೀರೀಶ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು, ಬುಧವಾರ (ಜೂನ್ 19) ಬೆಳಿಗ್ಗೆ ಶಿರೀಶ್ ಇಹಲೋಕ ತ್ಯಜಿಸಿದ್ದಾರೆ.


  ಶಿರೀಶ್ ಕಳೆದ ಕೆಲವು ತಿಂಗಳಿನಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ, ಅವರು ಬುಧವಾರ ಬೆಳಿಗ್ಗೆ ಹೃದಯಾ*ಘಾತದಿಂದ ಮೃತಪಟ್ಟಿದ್ದಾರೆ.

  ವಿರೋಧದ ನಡುವೆ ಮದುವೆಯಾಗಿದ್ದ ಶಿರೀಶ್ – ಶ್ರೀಜಾ :

  ಶಿರೀಶ್ ಹಾಗೂ ಶ್ರೀಜಾ ಕುಟುಂಬದವರನ್ನು ಎದುರು ಹಾಕಿಕೊಂಡು ವಿವಾಹವಾಗಿದ್ದು ಭಾರಿ ವಿವಾದ ಸೃಷ್ಟಿಸಿತ್ತು. ಆ ಸಮಯದಲ್ಲಿ ಪವನ್ ಕಲ್ಯಾಣ್ ಸೇರಿದಂತೆ ಕೆಲವರಿಂದ ತಮಗೆ ಬೆದರಿಕೆ ಇರುವುದಾಗಿ ಶ್ರೀಜಾ ದೂರನ್ನೂ ನೀಡಿದ್ದರು.

  ಇದನ್ನೂ ಓದಿ : ಪತ್ನಿಯ ಅಗಲುವಿಕೆಗೆ ಜೀವಾಂತ್ಯಗೊಳಿಸಿದ ಶೌರ್ಯ ಪ್ರಶಸ್ತಿ ವಿಜೇತ ಐಪಿಎಸ್ ಅಧಿಕಾರಿ ..!

  ಶ್ರೀಜಾ ಹಾಗೂ ಶಿರೀಶ್ ಮದುವೆಯಾದ ಕೆಲ ವರ್ಷಗಳಲ್ಲಿ ಅವರಿಗೆ ಮಗಳೊಬ್ಬಳು ಜನಿಸಿದಳು. ಅದಾದ ಬಳಿಕ ಶ್ರೀಜಾ ಶಿರೀಶ್​ರಿಂದ ವಿಚ್ಛೇದನ ಪಡೆದು ಮರು ಮದುವೆ ಆದರು. ಆ ಬಳಿಕ ಶಿರೀಶ್ ಸಹ ಮತ್ತೊಂದು ಮದುವೆಯಾದರು.

  Continue Reading

  LATEST NEWS

  Trending