Connect with us

    LATEST NEWS

    ಜಾಗಿಂಗ್‌ ಮಾಡುತ್ತಿದ್ದ ನ್ಯಾಯಾಧೀಶರ ವ್ಯವಸ್ಥಿತ ಕೊಲೆ ಶಂಕೆ: ಸಿಬಿಐ ತನಿಖೆಗೆ ಆಗ್ರಹ

    Published

    on

    ಧನ್‍ಬಾದ್: ಬೆಳಗಿನ ವೇಳೆ ಜಾಗಿಂಗ್‌ ಹೋಗುತ್ತಿದ್ದ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರನ್ನು ಗೂಡ್ಸ್‌ ಟೆಂಪೋದಲ್ಲಿ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಜಾರ್ಖಂಡ್‍ನ ಧನ್‍ಬಾದ್ ನಲ್ಲಿ ನಡೆದಿದೆ. ಇದು ಕೊಲೆಯಾಗಿರಬಹುದೇ ಎಂದು ವಕೀಲರೊಬ್ಬರು ಸಂಶಯ ವ್ಯಕ್ತಪಡಿಸಿ, ಇದರ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.


    ನಿನ್ನೆ ಮುಂಜಾನೆ 5 ಗಂಟೆ ಸುಮಾರಿಗೆ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಉತ್ತಮ್ ಆನಂದ್ ಅವರು ರಸ್ತೆಯಲ್ಲಿ ಅವರು ಜಾಗಿಂಗ್ ಮಾಡುತ್ತಿರುವುದಾಗ ಟೆಂಪೋ ವೊಂದು ನೇರವಾಗಿ ಅವರತ್ತವೇ ಸಾಗಿ ನಂತರ ಅವರಿಗೆ ಢಿಕ್ಕಿ ಹೊಡೆದು ಪರಾರಿಯಾಗುವುದು ಸಿಸಿಟಿವಿಯಲ್ಲಿ ಕಾಣಿಸುತ್ತದೆ.
    ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ದಾರಿಹೋಕರೊಬ್ಬರು ಆಸ್ಪತ್ರೆಗೆ ಸೇರಿಸಿದ್ದರೂ ಅವರು ಅಲ್ಲಿ ಮೃತಪಟ್ಟರು. ಅವರು ಮೃತಪಟ್ಟ ಹಲವು ಗಂಟೆಗಳ ಕಾಲ ಯಾರಿಗೂ ಅವರ ಗುರುತು ತಿಳಿದಿರಲಿಲ್ಲ
    ಬೆಳಿಗ್ಗೆ 7 ಗಂಟೆಯಾದರೂ ಅವರು ವಾಪಸಾಗದೇ ಇದ್ದಾಗ ಅವರ ಕುಟುಂಬ ನಾಪತ್ತೆ ದೂರು ದಾಖಲಿಸಿತ್ತು. ಕೊನೆಗೆ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರೆಂದು ಪೊಲೀಸರು ಕಂಡುಕೊಂಡಿದ್ದರು.
    ಆದರೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಇದೊಂದು ಉದ್ದೇಶಪೂರ್ವಕ ಕೃತ್ಯವೆಂದು ಕಂಡು ಬಂದಿದೆ. ಮೇಲಾಗಿ ನ್ಯಾಯಾಧೀಶರಿಗೆ ಢಿಕ್ಕಿ ಹೊಡೆದ ವಾಹನವನ್ನು ಘಟನೆಗಿಂತ ಕೆಲವೇ ಗಂಟೆಗಳ ಮೊದಲು ಕಳವುಗೈಯ್ಯಲಾಗಿತ್ತು.
    ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದ ಹಲವು ಪ್ರಕರಣಗಳನ್ನು ಪೊಲೀಸರು ಪರಾಮರ್ಶಿಸುತ್ತಿದ್ದಾರೆ. ಧನ್‍ಬಾದ್‍ನಲ್ಲಿ ನಡೆದ ಮಾಫಿಯಾ ಕೊಲೆಗಳ ಪ್ರಕರಣಗಳ ವಿಚಾರಣೆಯನ್ನೂ ಅವರು ನಡೆಸುತ್ತಿದ್ದರಲ್ಲದೆ ಇತ್ತೀಚೆಗೆ ಇಬ್ಬರು ಗ್ಯಾಂಗ್ಸ್ಟರ್ ಗಳ ಜಾಮೀನು ಅಪೀಲುಗಳನ್ನೂ ತಿರಸ್ಕರಿಸಿದ್ದರು.
    ಈ ಘಟನೆಯನ್ನು ಇಂದು ಸುಪ್ರೀಂ ಕೋರ್ಟಿನಲ್ಲಿ ಜಸ್ಟಿಸ್ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಪೀಠದ ಮುಂಧೆ ಪ್ರಸ್ತಾಪಿಸಿದ ವಕೀಲ ವಿಕಾಸ್ ಸಿಂಗ್, ಈ ಘಟನೆಯನ್ನು ಸಿಬಿಐ ಮೂಲಕ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಐಸ್‌ಕ್ರೀಂನಲ್ಲಿ ಪತ್ತೆಯಾಗಿದ್ದ ಬೆರಳು ಯಾರದ್ದು ಗೊತ್ತಾ..? ಪೊಲೀಸರು ಹೇಳಿದ್ದೇನು?

    Published

    on

    ಮುಂಬೈ/ಮಂಗಳೂರು: ಕೆಲ ದಿನಗಳ ಹಿಂದೆ ಮುಂಬೈನಲ್ಲಿ ವೈದ್ಯರೊಬ್ಬರು ಆನ್‌ಲೈನ್‌ನಲ್ಲಿ ಐಸ್‌ಕ್ರೀಂ ಆರ್ಡರ್ ಮಾಡಿದ್ದಾರೆ. ಆದ್ರೆ ಐಸ್‌ಕ್ರೀಂನಲ್ಲಿ  ಮನುಷ್ಯ ನ ಬೆರಳು ಪತ್ತೆಯಾಗಿದ್ದು, ಅಚ್ಚರಿಯನ್ನು ಮೂಡಿಸಿತ್ತು. ಮೊದಲು ಇದು ವೆಲ್ನೆಟ್ ಅಂದುಕೊಂಡಿದ್ದರು. ಬಳಿಕ ಕೂಲಂಕುಷವಾಗಿ ಪರಿಶೀಲನೆ ಮಾಡಿದಾಗ ಅದು ಮನುಷ್ಯನ ಬೆರಳೆಂದು ಗೊತ್ತಾಗಿದೆ. ಈ ಕುರಿತು ವೈದ್ಯರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದರು.

    Read More..; ಆನ್​ಲೈನ್​ ಮೂಲಕ ಆರ್ಡರ್​ ಮಾಡಿದ್ದ ಐಸ್​ಕ್ರೀಂನಲ್ಲಿ ಮನುಷ್ಯನ ಬೆರಳು ಪತ್ತೆ

    ಇದೀಗ ಆನ್‌ಲೈನ್ ಮೂಲಕ ತರಿಸಿದ್ದ ಐಸ್‌ಕ್ರೀಂ ನಲ್ಲಿ ಪತ್ತೆಯಾಗಿದ್ದಬೆರಳು ಯಾರದ್ದು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.  ಪುಣೆಯಲ್ಲಿ ಐಸ್‌ಕ್ರೀಂ ತಯಾರಿಕಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬಂದಿಯ ಕೈ ಬೆರಳು ಎಂದು ಹೇಳಲಾಗಿದೆ. ಐಸ್‌ಕ್ರೀಂ ತಯಾರಿಕಾ ಫ್ಯಾಕ್ಟರಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕೆಲ ದಿನಗಳ ಹಿಂದೆ ಇಲ್ಲಿನ ಸಿಬಂದಿಯೊಬ್ಬರು ಕೆಲಸ ಮಾಡುವಾಗ ಕೈ ಬೆರಳು ತುಂಡರಿಸಿತ್ತು.  ಹೀಗಾಗಿ ಆತನದ್ದೇ  ಈ ಕೈಬೆರಳು ಎಂದು ಅಂದಾಜಿಸಲಾಗಿದೆ. ವ್ಯಕ್ತಿಯ ಡಿಎನ್‌ಎ ಮಾದರಿಗಳನ್ನು ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು ನಿಖರ ಮಾಹಿತಿಗಾಗಿ ಕಾದು ನೋಡಬೇಕಿದೆ.

    Continue Reading

    LATEST NEWS

    ಅಯೋಧ್ಯೆ ರಾಮ ಮಂದಿರದಲ್ಲಿ ಗುಂಡಿಗೆ ಯೋಧನ ಜೀವಾಂತ್ಯ..!

    Published

    on

    ಅಯೋಧ್ಯಾ : ಅಯೋಧ್ಯೆಯ ರಾಮ ಮಂದಿರದ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್‌ಎಸ್‌ಎಫ್‌ ಯೋಧ ಅನುಮಾನಾಸ್ಪದವಾಗಿ ಗುಂಡು ತಾಗಿ ಸಾ*ವನ್ನಪ್ಪಿದ್ದಾರೆ. ಜೂನ್ 19 ರ ಮುಂಜಾನೆ 5.25 ಕ್ಕೆ ಈ ಘಟನೆ ನಡೆದಿದ್ದು, ಯೋಧನ ಹಣೆಗೆ ಗುಂಡು ತಾಗಿ ಮಂದಿರದ ವಿಐಪಿ ಗೇಟ್ ಬಳಿ ಮೃ*ತಪಟ್ಟಿದ್ದಾನೆ. ಮೃ*ತ ಯೋಧನನ್ನು ಶತ್ರುಘ್ನ ವಿಶ್ವಕರ್ಮ ಎಂದು ಗುರುತಿಸಲಾಗಿದ್ದು, ಘಟನೆ ಹೇಗಾಯ್ತು ಅನ್ನೋದು ಇನ್ನೂ ನಿಗೂಢವಾಗಿ ಉಳಿದಿದೆ.

    ಮೂಲಗಳ ಪ್ರಕಾರ, ರಾಮಮಂದಿರ ಸಂಕೀರ್ಣದ ವಿಐಪಿ ಗೇಟ್ ಬಳಿ ಗುಂಡಿನ ಸದ್ದು ಕೇಳಿ ಬಂದಿದೆ. ಸಹೋದ್ಯೋಗಿ ಭದ್ರತಾ ಸಿಬ್ಬಂದಿ ಓಡಿ ಬಂದು ನೋಡಿದಾಗ ಶತ್ರುಘ್ನ ವಿಶ್ವಕರ್ಮ ಹಣೆಗೆ ಗುಂಡು ತಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತಾದ್ರೂ ಆ ವೇಳೆಗೆ ಅವರು ಮೃ*ತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇವರು ಅಂಬೇಡ್ಕರ್ ನಗರದ ನಿವಾಸಿಯಾಗಿದ್ದು, ಘಟನಾ ಸ್ಥಳಕ್ಕೆ ಐಜಿ ಹಾಗೂ ಎಸ್‌ಎಸ್‌ಪಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

    ಘಟನೆ ವೇಳೆ ಶತ್ರುಘ್ನ ವಿಶ್ವಕರ್ಮ ಮೊಬೈಲ್ ನೋಡುತ್ತಿದ್ದು, ಅವರ ಜೊತೆ ಬೇರೆ ಸಿಬ್ಬಂದಿ ಇದ್ದರು ಎಂದು ಮೊದಲ ಮಾಹಿತಿ ದೊರೆತಿದೆ. ಆದ್ರೆ, ಗುಂಡು ಹಣೆಗೆ ಹೇಗೆ ತಾಗಿತು ಅನ್ನೋ ಬಗ್ಗೆ ಯಾರಿಂದಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಯೋಧ ಶತ್ರುಘ್ನ ವಿಶ್ವಕರ್ಮ ಅವರ ಸಹೋದರರು ಆರೋಪಿಸಿದ್ದಾರೆ. ಸಹೋದರನ ಸಾ*ವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು ತನಿಖೆಗೆ ಆಗ್ರಹಿಸಿದ್ದಾರೆ.

    Continue Reading

    LATEST NEWS

    ಮೆಗಾಸ್ಟಾರ್ ಚಿರಂಜೀವಿಯ ಮಾಜಿ ಅಳಿಯ ಹಠಾತ್ ನಿಧ*ನ

    Published

    on

    ಮಂಗಳೂರು / ಚೆನ್ನೈ : ಮೆಗಾಸ್ಟಾರ್ ಚಿರಂಜೀವಿಯ ಮಾಜಿ ಅಳಿಯ ಶಿರೀಶ್ ಭಾರಧ್ವಜ್ ಹೃದಯಾ*ಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಶಿರೀಶ್, ಮೆಗಾಸ್ಟಾರ್ ಚಿರಂಜೀವಿಯ ಪುತ್ರಿ ಶ್ರಿಜಾ ಕೊನೆಡೆಲಾ ಅವರನ್ನು ವಿವಾಹವಾಗಿದ್ದರು. ಈ ವಿವಾಹಕ್ಕೆ ಚಿರಂಜೀವಿ ಅವರ ತೀವ್ರ ವಿರೋಧವಿತ್ತು, ಹಾಗಾಗಿ ಕುಟುಂಬಕ್ಕೆ ತಿಳಿಸದೆ ಶಿರೀಶ್ ಹಾಗೂ ಶ್ರೀಜಾ ವಿವಾಹವಾಗಿದ್ದರು. ಆದರೆ ಬಳಿಕ ಶ್ರಿಜಾ, ಶೀರೀಶ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು, ಬುಧವಾರ (ಜೂನ್ 19) ಬೆಳಿಗ್ಗೆ ಶಿರೀಶ್ ಇಹಲೋಕ ತ್ಯಜಿಸಿದ್ದಾರೆ.


    ಶಿರೀಶ್ ಕಳೆದ ಕೆಲವು ತಿಂಗಳಿನಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ, ಅವರು ಬುಧವಾರ ಬೆಳಿಗ್ಗೆ ಹೃದಯಾ*ಘಾತದಿಂದ ಮೃತಪಟ್ಟಿದ್ದಾರೆ.

    ವಿರೋಧದ ನಡುವೆ ಮದುವೆಯಾಗಿದ್ದ ಶಿರೀಶ್ – ಶ್ರೀಜಾ :

    ಶಿರೀಶ್ ಹಾಗೂ ಶ್ರೀಜಾ ಕುಟುಂಬದವರನ್ನು ಎದುರು ಹಾಕಿಕೊಂಡು ವಿವಾಹವಾಗಿದ್ದು ಭಾರಿ ವಿವಾದ ಸೃಷ್ಟಿಸಿತ್ತು. ಆ ಸಮಯದಲ್ಲಿ ಪವನ್ ಕಲ್ಯಾಣ್ ಸೇರಿದಂತೆ ಕೆಲವರಿಂದ ತಮಗೆ ಬೆದರಿಕೆ ಇರುವುದಾಗಿ ಶ್ರೀಜಾ ದೂರನ್ನೂ ನೀಡಿದ್ದರು.

    ಇದನ್ನೂ ಓದಿ : ಪತ್ನಿಯ ಅಗಲುವಿಕೆಗೆ ಜೀವಾಂತ್ಯಗೊಳಿಸಿದ ಶೌರ್ಯ ಪ್ರಶಸ್ತಿ ವಿಜೇತ ಐಪಿಎಸ್ ಅಧಿಕಾರಿ ..!

    ಶ್ರೀಜಾ ಹಾಗೂ ಶಿರೀಶ್ ಮದುವೆಯಾದ ಕೆಲ ವರ್ಷಗಳಲ್ಲಿ ಅವರಿಗೆ ಮಗಳೊಬ್ಬಳು ಜನಿಸಿದಳು. ಅದಾದ ಬಳಿಕ ಶ್ರೀಜಾ ಶಿರೀಶ್​ರಿಂದ ವಿಚ್ಛೇದನ ಪಡೆದು ಮರು ಮದುವೆ ಆದರು. ಆ ಬಳಿಕ ಶಿರೀಶ್ ಸಹ ಮತ್ತೊಂದು ಮದುವೆಯಾದರು.

    Continue Reading

    LATEST NEWS

    Trending