Connect with us

    DAKSHINA KANNADA

    Job: ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಆಹ್ವಾನ- 186 ಖಾಲಿ ಹುದ್ದೆ

    Published

    on

    ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹಲವು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

    ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹಲವು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

    ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಫೀಲ್ಡ್ ಇನ್ಸ್ ಪೆಕ್ಟರ್ ಹುದ್ದೆಗಳು ಖಾಲಿ ಇದೆ.

    ಸಂಸ್ಥೆಯ ಹೆಸರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
    ಹುದ್ದೆಗಳ ಸಂಖ್ಯೆ: 186
    ಉದ್ಯೋಗ ಸ್ಥಳ: ಕರ್ನಾಟಕ
    ಹುದ್ದೆಯ ಹೆಸರು: ಎಸ್ ಡಿ ಎ, ಫೀಲ್ಡ್ ಇನ್ಸ್ ಪೆಕ್ಟರ್

    ಹುದ್ದೆಯ ಹೆಸರು:
    ಲ್ಯಾಣ ಅಧಿಕಾರಿ- 12 ಹುದ್ದೆಗಳು
    ಕ್ಷೇತ್ರ ನಿರೀಕ್ಷಕರು- 60 ಹುದ್ದೆಗಳು
    ಮೊದಲ ವಿಭಾಗದ ಸಹಾಯಕ (FDA)- 12 ಹುದ್ದೆಗಳು
    ಖಾಸಗಿ ಸಲಹೆಗಾರ- 2 ಹುದ್ದೆಗಳು
    ಎರಡನೇ ವಿಭಾಗದ ಸಹಾಯಕ (SDA)- 100 ಹುದ್ದೆಗಳು
    ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

    ಮಾಸಿಕ ವೇತನ:
    ಕಲ್ಯಾಣ ಅಧಿಕಾರಿ- ರೂ. 37900 ರಿಂದ ರೂ. 70850/-
    ಕ್ಷೇತ್ರ ನಿರೀಕ್ಷಕರು- ರೂ. 33450 ರಿಂದ ರೂ. 62600/-
    ಮೊದಲ ವಿಭಾಗದ ಸಹಾಯಕ (FDA)- ರೂ. 27650 ರಿಂದ ರೂ. 52650/-
    ಖಾಸಗಿ ಸಲಹೆಗಾರ- ರೂ. 21400 ರಿಂದ ರೂ. 42000/-
    ಎರಡನೇ ವಿಭಾಗದ ಸಹಾಯಕ (SDA)- ರೂ. 21400 ರಿಂದ ರೂ. 42000/-

    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜೂ.23 ಪ್ರಾರಂಭ ದಿನಾಂಕವಾಗಿದೆ.

    ಜು.15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

     

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಹರೇಕಳ ಹಾಜಬ್ಬ ಶಾಲೆಯ ಕಂಪೌಂಡ್ ಕುಸಿತ..! ವಿದ್ಯಾರ್ಥಿನಿ ಸಾ*ವು..!

    Published

    on

    ಮಂಗಳೂರು : ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ನ್ಯೂಪಡ್ಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್‌ ವಾಲ್ ಕುಸಿತಗೊಂಡಿದೆ. ಕುಸಿತಗೊಂಡ ವಾಲ್‌ ಅಡಿಗೆ ಸಿಲುಕಿದ 3 ನೇ ತರಗತಿ ವಿದ್ಯಾರ್ಥಿನಿ ಅಸುನೀಗಿದ್ದಾಳೆ. ಹರೇಕಳ ಗ್ರಾ.ಪಂ ವ್ಯಾಪ್ತಿಯ ನ್ಯೂಪಡ್ಪುವಿನಲ್ಲಿ ಮೇ 20ರ ಸಂಜೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಂಜೆ ವೇಳೆ ಸುರಿದ ಧಾರಕಾರ ಮಳೆಯಿಂದಾಗಿ ದುರ್ಘಟನೆ ಸಂಭವಿಸಿದೆ.


    ನ್ಯೂಪಡ್ಪು ನಿವಾಸಿ ಸಿದ್ದೀಖ್ – ಜಮೀಲಾ ದಂಪತಿ ಪುತ್ರಿ ಶಾಝಿಯಾ ಬಾನು (7) ಮೃತ ಬಾಲಕಿ. ಹರೇಕಳ ಹಾಜಬ್ಬರ ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಡಿಪು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಶಿಬಿರ ನಡೆಯುತ್ತಿದೆ. ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳು ಇದ್ದ ಹಿನ್ನೆಲೆಯಲ್ಲಿ ಶಾಲೆಯ ಸಮೀಪದಲ್ಲೇ ಇರುವ ವಿದ್ಯಾರ್ಥಿನಿ ಶಾಝಿಯಾ ಭಾನು ಭಾಗವಹಿಸಿದ್ದಳು.

    ಸಂಜೆ ವೇಳೆ ಮನೆಗೆ ಹಿಂತಿರುಗುವ ಸಂದರ್ಭ ಶಾಲಾ ಕಂಪೌಂಡ್ ಗೇಟಿನಲ್ಲಿ ಆಟವಾಡುವ ಸಂದರ್ಭ ಕಂಪೌಂಡ್ ಬಾಲಕಿ ಶಾಝಿಯಾ ಮೇಲೆ ಕುಸಿದುಬಿದ್ದಿದೆ. ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ, ಬಾಲಕಿ ಪ್ರಾಣಪಕ್ಷಿ ಹಾರಿಹೋಗಿತ್ತು. ಬೆಳಿಗ್ಗೆಯಿಂದ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಆಗಾಗ್ಗ ಮಳೆಯಾಗುತ್ತಿದ್ದು, ಇದರಿಂದಾಗಿ ಕಂಪೌಂಡ್ ಶಿಥಿಲಗೊಂಡು ಬಿದ್ದಿದೆ. ಘಟನಾ ಸ್ಥಳಕ್ಕೆ ಹರೇಕಳ ಗ್ರಾ.ಪಂ ಅಧಿಕಾರಿಗಳು, ಕೊಣಾಜೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Continue Reading

    DAKSHINA KANNADA

    ಪಡೀಲ್‌ ಕಣ್ಣೂರು ಬಳಿ ಭೀಕರ ವಾಹನ ಅಪಘಾ*ತ; ಕೇಬಲ್ ಟೆಕ್ನಿಷಿಯನ್ ವಿಧಿವ*ಶ

    Published

    on

    ಮಂಗಳೂರು : ಪಡೀಲ್‌ ಕಣ್ಣೂರು ಬಳಿ ನಡೆದ ರಸ್ತೆ ಅಪಘಾ*ತದಲ್ಲಿ ನಮ್ಮ ಕುಡ್ಲ ವಾಹಿನಿಯ ಸಹಸಂಸ್ಥೆ ವಿಝಾರ್ಡ್‌ ಕೇಬಲ್‌ ನೆಟ್ ವರ್ಕ್‌ನ ಸಿಬಂದಿ ಹರೀಶ್ (45) ವಿಧಿವ*ಶರಾಗಿದ್ದಾರೆ. ಕರ್ತವ್ಯ ನಿಮಿತ್ತ ಫರಂಗಿಪೇಟೆಗೆ ತೆರಳಿದ್ದ ಹರೀಶ್ ಪಡೀಲ್‌ ಕಣ್ಣೂರು ಬಳಿ ಬೈಕ್ ನಿಲ್ಲಿಸಿದ್ದ ವೇಳೆ ವೇಗವಾಗಿ ಬಂದ ಡಸ್ಟರ್‌ ಕಾರೊಂದು ಬೈಕ್‌ಗೆ ಡಿ*ಕ್ಕಿ ಹೊಡೆದಿದೆ.


    ಮಹಿಳೆಯೊಬ್ಬರು ಕಾರು ಚಲಾಯಿಸುತ್ತಿದ್ದು, ಬೈಕ್‌ಗೆ ಡಿ*ಕ್ಕಿ ಹೊಡೆದ ಬಳಿಕ ಅಲ್ಪ ದೂರ ಚಲಿಸಿದ ಕಾರಣ ಬೈಕ್ ಸಹಿತ ಹರೀಶ್ ಕಾರಿನ ಅಡಿಗೆ ಸಿಲುಕಿಕೊಂಡಿದ್ದರು. ಈ ಭೀಕರ ಅಪಘಾ*ತದಲ್ಲಿ ಗಂಭೀರ ಗಾಯಗೊಂಡಿದ್ದ ಹರೀಶ್ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

    ಹರೀಶ್ ಕಲ್ಲಾಪು ಅವರು ಹಲವಾರು ವರ್ಷಗಳಿಂದ ವಿಝಾರ್ಡ್‌ ಕೆಬಲ್ ನೆಟ್‌ವರ್ಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ : ಕಾರ್ಕಳ : ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿ*ಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾ*ವು

    ಅಗಲಿದ ಸಿಬ್ಬಂದಿಗೆ ನಮ್ಮ ಕುಡ್ಲ ವಾಹಿನಿಯ ನಿರ್ದೇಶಕರು ಹಾಗೂ ಸಿಬಂದಿ ಸಂತಾಪ ಸೂಚಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃ*ತ ಹರೀಶ್‌ ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

    Continue Reading

    DAKSHINA KANNADA

    ಕದ್ದ ಫೋನ್ ಸ್ವಿಚ್ ಆಫ್ ಆಗಿದ್ರೂ ಸುಲಭದಲ್ಲಿ ಕಂಡುಹಿಡಿಯಬಹುದು.. ಹೇಗೆ ಗೊತ್ತಾ?

    Published

    on

    ಮಂಗಳೂರು: ನಿಮ್ಮ ಸ್ಮಾರ್ಟ್‌ಫೋನ್ ಕದ್ದರೆ ಮತ್ತು ಕಳ್ಳರು ಆ ಫೋನನ್ನು ಸ್ವಿಚ್ ಆಫ್ ಮಾಡಿದರೆ ಅದನ್ನು ಹುಡುಕುವುದು ದೊಡ್ಡ ಕಷ್ಟ. ಆದರೆ ಮುಂಬರುವ ಗೂಗಲ್‌ನ ನವೀಕರಣ, ಆಂಡ್ರಾಯ್ಡ್ ಬಳಕೆದಾರರ ಫೋನ್ ಸ್ವಿಚ್ ಆಫ್ ಆಗಿದ್ದರೂ ಅವರ ಸ್ಮಾರ್ಟ್‌ಫೋನ್ ನಿಖರವಾದ ಸ್ಥಳವನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುತ್ತದೆ.

    ಗೂಗಲ್ ಶೀಘ್ರದಲ್ಲೇ ತನ್ನ ಆಂಡ್ರಾಯ್ಡ್ 15 ಅಪ್ಡೇಟ್ ಅನ್ನು ತರಲಿದೆ. ಇದನ್ನು ಇನ್​ಸ್ಟಾಲ್ ಮಾಡಿದ ನಂತರ ಆಂಡ್ರಾಯ್ಡ್ ಬಳಕೆದಾರರು ಸ್ವಿಚ್ ಆಫ್ ಮಾಡಿದ ನಂತರವೂ ತಮ್ಮ ಫೋನ್ ಅನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ ಈ ವೈಶಿಷ್ಟ್ಯವು ಆಂಡ್ರಾಯ್ಡ್ ಫೋನ್‌ಗಳಲ್ಲಿ ಲಭ್ಯವಿರಲಿಲ್ಲ.

    ಗೂಗಲ್ ಕಂಪನಿಯು ಆಂಡ್ರಾಯ್ಡ್ 15 ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಗೂಗಲ್‌ನ ಮುಂಬರುವ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿದೆ. ಆಂಡ್ರಾಯ್ಡ್ 15 ಓಎಸ್‌ನಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗೂಗಲ್ ಉತ್ತಮ ವೈಶಿಷ್ಟ್ಯವನ್ನು ನೀಡಲಿದೆ. ಇದರಲ್ಲಿ ಬಳಕೆದಾರರಿಗೆ ಫೋನ್ ಸ್ವಿಚ್ ಆಫ್ ಆಗಿದ್ದರೂ ಅದನ್ನು ಪತ್ತೆ ಮಾಡುವ ಆಯ್ಕೆ ಕೂಡ ಒಂದು.

    ಗೂಗಲ್​ನ ಮುಂಬರುವ OS ಆಂಡ್ರಾಯ್ಡ್ 15 ನಲ್ಲಿ ಪಾಸ್‌ವರ್ಡ್ ಮೂಲಕ ಹುಡುಕುವ ವೈಶಿಷ್ಟ್ಯವು ಲಭ್ಯವಿರುತ್ತದೆ. ಈ ಹೊಸ ವ್ಯವಸ್ಥೆಯು ಪೂರ್ವ ಕಂಪ್ಯೂಟೆಡ್ ಬ್ಲೂಟೂತ್ ಬೀಕನ್ ಆಗಿರುತ್ತದೆ. ಇದು ಸಾಧನದ ಮೆಮೊರಿಯಿಂದ ನಿಯಂತ್ರಿಸಲ್ಪಡುತ್ತದಂತೆ. ಇದಕ್ಕಾಗಿ ಫೋನ್​ನ ಹಾರ್ಡ್‌ವೇರ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

    ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಆಂಡ್ರಾಯ್ಡ್ ತಜ್ಞ ಮಿಶಾಲ್ ರೆಹಮಾನ್ ಈ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಜೊತೆಗೆ ಗೂಗಲ್‌ನ ಮುಂಬರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಆಂಡ್ರಾಯ್ಡ್ 15 ಓಎಸ್ ಬಿಡುಗಡೆಗೆ ಯಾವುದೇ ನಿಖರವಾದ ದಿನಾಂಕವನ್ನು ಗೂಗಲ್ ಬಹಿರಂಗಪಡಿಸಿಲ್ಲ.

    Continue Reading

    LATEST NEWS

    Trending