Connect with us

    DAKSHINA KANNADA

    ಜಪ್ಪಿನಮೊಗರು ದೊಂಪದಬಲಿ ಗದ್ದೆ ಸಮೀಪ ಮನೆಗಳು ಜಲಾವೃತ

    Published

    on

    ಮಂಗಳೂರು ಹೊರವಲಯದ ಜಪ್ಪಿನಮೊಗೆರು ಪ್ರದೇಶದಲ್ಲಿ ಮಳೆಯಿಂದಾಗಿ ಹಲವು ರಸ್ತೆಗಳು ಹಾಗೂ ಮನೆಗಳು ಜಲಾವೃತಗೊಂಡಿದೆ. ಇಲ್ಲಿನ ದೊಂಪದಬಲಿ ಎಂಬಲ್ಲಿನ ರಾಜಾಕಾಲುವೆ ಬ್ಲಾಕ್ ಆಗಿ ನೀರು ನದಿ ಸೇರದೆ ಈ ಕೃತಕ ನೆರೆ ಉಂಟಾಗಿದೆ.

    ಹಲವಾರು ವರ್ಷಗಳಿಂದ ಇಲ್ಲಿ ರಸ್ತೆ ಸಮಸ್ಯೆ ಇದ್ದು, ಇತ್ತೀಚೆಗೆ ನೂತನ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಆದ್ರೆ ಕಾಂಕ್ರೀಟ್ ರಸ್ತೆಯ ಇಕ್ಕೆಲೆಗಳಲ್ಲಿ ನಿರ್ಮಿಸಬೇಕಾದ ಚರಂಡಿಯನ್ನು ನಿರ್ಮಾಣ ಮಾಡದೆ ಇರುವುದು ಇದಕ್ಕೆ ಕಾರಣ ಎಂದು ಸ್ಥಳಿಯರು ದೂರಿದ್ದಾರೆ. ಮೊದಲೇ ತಗ್ಗು ಪ್ರದೇಶದಲ್ಲಿ ಇರುವ ದೊಂಪದ ಬಲಿ ಪ್ರದೇಶ ರಸ್ತೆಗಿಂತ ಕೆಳಗೆ ಇರುವ ಕಾರಣ ರಸ್ತೆಯಲ್ಲಿ ಹರಿಯುವ ನೀರು ನೇರ ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದೆ. ಚರಂಡಿ ನಿರ್ಮಾಣ ಮಾಡಿದ್ದೇ ಆಗಿದ್ದಲ್ಲಿ ಈ ರೀತಿಯ ಸಮಸ್ಯೆ ಆಗುತ್ತಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಸ್ಥಳಕ್ಕೆ ಭೇಟಿ ನೀಡಿ ಕಾರ್ಪೋರೇಟರ್ ವೀಣಾಮಂಗಳ ಸ್ಥಳೀಯ ನಿವಾಸಿಗಳು ತ್ಯಾಜ್ಯ ವಿಲೇವಾರಿಯಲ್ಲಿ ಸಹಕರಿಸದೇ ಇರುವುದು ಈ ಸಮಸ್ಯೆಗೆ ಮೂಲಕ ಕಾರಣ ಎಂದು ಹೇಳಿದ್ದಾರೆ. ಎಲ್ಲಾ ತ್ಯಾಜ್ಯಗಳನ್ನು ಇಲ್ಲಿನ ಚರಂಡಿಗೆ ಎಸೆಯುವ ಕಾರಣ ರಾಜಾಕಾಲುವೆಯಲ್ಲಿ ಶೇಖರಣೆಯಾಗಿ ಈ ರೀತಿ ಅವಾಂತರ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

    ಇಷ್ಟೇ ಅಲ್ಲದೆ ನೀರು ಸರಾಗವಾಗಿ ಹರಿದು ರಾಜಕಾಲುವ ಸೇರಲು ಚರಂಡಿ ನಿರ್ಮಾಣದ ವೇಳೆ ಕೆಲವರು ಅನಗತ್ಯವಾಗಿ ಸ್ಟೇ ತಂದು ಕಾಮಾಗಾರಿ ತಡೆ ಹಿಡಿದಿದ್ದಾರೆ ಎಂದು ಸ್ಥಳಿಯರ ಅಸಹಕಾರದಿಂದ ಈ ರೀತಿ ಆಗಿದೆ ಎಂದು ಹೇಳಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಉಜಿರೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾ*ತ; ಡಿವೈಡರ್ ಗೆ ಕಾರು ಡಿ*ಕ್ಕಿ ಹೊಡೆದು ಚಾಲಕ ಸಾ*ವು

    Published

    on

    ಬೆಳ್ತಂಗಡಿ : ಬೆಳ್ಳಂಬೆಳಗ್ಗೆ ಉಜಿರೆಯಲ್ಲಿ ಭೀಕರ ಅಪಘಾ*ತ ಸಂಭವಿಸಿದೆ. ಡಿವೈಡರ್ ಗೆ ಕಾರು ಡಿ*ಕ್ಕಿ ಹೊಡೆದು ಚಾಲಕ ಮೃ*ತಪಟ್ಟಿರುವ ಘಟನೆ ಉಜಿರೆ ಮುಖ್ಯದ್ವಾರದಿಂದ ಕಾಲೇಜು ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಸಂಭವಿಸಿದೆ. ಈ ಭೀಕರ ಅಪಘಾ*ತದಲ್ಲಿ ಬೆಳ್ತಂಗಡಿ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಪ್ರಜ್ವಲ್ ನಾಯಕ್ (35) ಮೃ*ತಪಟ್ಟಿದ್ದಾರೆ.


    ಇಂದು(ಜೂ.29) ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಕಾಲೇಜು ರಸ್ತೆಯಿಂದ ಬೆಳ್ತಂಗಡಿ ಸಾಗುವ ಮಧ್ಯೆ ಡಿವೈಡರ್ ನ ಬೀದಿ ದೀಪದ ಕಂಬಗಳಿಗೆ ಕಾರು ಡಿ*ಕ್ಕಿ ಹೊಡೆದಿದೆ. ಡಿ*ಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ನಜ್ಜು ಗುಜ್ಜಾದರೆ, ಒಂದು ವಿದ್ಯುತ್ ಕಂಬ ಬುಡ ಸಮೇತ ಕಿತ್ತು ಬಿದ್ದಿದೆ. ಅಪಘಾ*ತದ ರಭಸಕ್ಕೆ ಚಾಲಕ ಪ್ರಜ್ವಲ್ ತಲೆಗೆ ಗಂಭೀ*ರ ಗಾಯವಾಗಿದ್ದು, ಆತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟಿದ್ದಾರೆ.

    ಇದನ್ನೂ ಓದಿ :  ಸೈಬರ್ ಕ್ರೈಂ ನಲ್ಲಿ ಭಾಗಿ ಆರೋಪ : ಶ್ರೀಲಂಕಾದಲ್ಲಿ 60 ಭಾರತೀಯರ ಬಂಧನ


    ಅಪಘಾತ*ದಲ್ಲಿ ನಿಧ*ನ ಹೊಂದಿದ ಪ್ರಜ್ವಲ್ ನಾಯಕ್ ಅವರು ಬೆಳ್ತಂಗಡಿ ಸಂತೆಕಟ್ಟೆ ನಿವಾಸಿ ಹೆಸರಾಂತ ಉದ್ಯಮಿ, ಸಂಘ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದ, ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕ ಪ್ರಮೋದ್ ಆರ್. ನಾಯಕ್ ಅವರ ಪುತ್ರ.
    ಪ್ರಜ್ವಲ್ ಉಜಿರೆಯ ಡಿ.ಎಂ. ಗೌಡ ಕಾಂಪ್ಲೆಕ್ಸ್ ನಲ್ಲಿ ಗೇಮಿಂಗ್ ಶಾಪ್ ಮಾಲೀಕ ಹಾಗೂ ಉದ್ಯಮಿಯಾಗಿದ್ದರು.

    Continue Reading

    DAKSHINA KANNADA

    ಕರಾವಳಿಯಲ್ಲಿ ಮಳೆಗೆ ಮತ್ತೊಂದು ಬ*ಲಿ; ವಿದ್ಯುತ್ ತಂತಿ ಸ್ಪರ್ಶಿಸಿ ಯುವತಿ ಸಾ*ವು

    Published

    on

    ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಹಲವು ಜೀವಗಳನ್ನು ಬ*ಲಿ ಪಡೆದಿದೆ. ಇದೀಗ ಕರಾವಳಿಯಲ್ಲಿ ಮಳೆಗೆ ಮತ್ತೊಂದು ಬ*ಲಿಯಾಗಿದ್ದು, ವಿದ್ಯುತ್ ತಂತಿ ಸ್ಪರ್ಶಿಸಿ ಯುವತಿ ಸಾ*ವನ್ನಪಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.


    ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಬರ್ಗುಲಾ ನಿವಾಸಿ ಗಣೇಶ್ ಶೆಟ್ಟಿ ಪುತ್ರಿ ಪ್ರತೀಕ್ಷಾ ಶೆಟ್ಟಿ(20) ಮೃ*ತ ದುರ್ದೈವಿ. ಯುವತಿ ಕಲ್ಲಡ್ಕದ ಮೆಡಿಕಲೊಂದರಲ್ಲಿ ಕೆಲಸ ಮಾಡುತ್ತಿದ್ದಳು.

    ಪ್ರತೀಕ್ಷಾ ಶೆಟ್ಟಿ ಮನೆಯ ಬಳಿ ಪಾರ್ಸೆಲ್ ಬಂದಿದೆ ಎಂದು ತೆಗೆದುಕೊಂಡು ಹೋಗಲು ಮನೆ ಸಮೀಪದ ರಸ್ತೆಗೆ ಬಂದಿದ್ದಾಳೆ. ರಸ್ತೆಯಲ್ಲಿ ವಿದ್ಯುತ್ ತಂತಿ ಮುರಿದು ಬಿದ್ದಿದ್ದು, ನೀರಿಗೆ ವಿದ್ಯುತ್‌ ಪ್ರವಹಿಸಿದೆ. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದ್ದು, ಸ್ಥಳದಲ್ಲೇ ಯುವತಿ ಮೃ*ತಪಟ್ಟಿದ್ದಾಳೆ.

    ಇದನ್ನೂ ಓದಿ : ವಿದ್ಯುತ್ ತಂತಿ ತಗುಲಿ ಇಬ್ಬರು ರಿಕ್ಷಾ ಚಾಲಕರ ದುರಂ*ತ ಅಂ*ತ್ಯ

    ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು, ಯುವತಿಯ ಮೃ*ತದೇಹ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

    Continue Reading

    DAKSHINA KANNADA

    ಮಂಗಳೂರು : ಸೂರಜ್ ಪದವಿಪೂರ್ವ ಕಾಲೇಜಿನಲ್ಲಿ ಯೋಗ ದಿನಾಚರಣೆ

    Published

    on

    ಮಂಗಳೂರು : ಸೂರಜ್ ಪದವಿಪೂರ್ವ ಕಾಲೇಜಿನಲ್ಲಿ ಯೋಗ ದಿನಾಚರಣೆಯನ್ನು ನಡೆಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಾದ ಕೃ ತಿಕ್ ಮತ್ತು ಪೃತ್ವಿಕ್ 6 ರಿಂದ 10ನೇ ತರಗತಿಯ ಮಕ್ಕಳಿಗೆ ಯೋಗವನ್ನು ಹೇಳಿಕೊಟ್ಟರು.

    ಶಾಲೆಯ ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

     

    Continue Reading

    LATEST NEWS

    Trending