Connect with us

  DAKSHINA KANNADA

  ಸಂಸದ ನಳಿನ್‌ಗಿಂತ ನವಯುಗದ CEO ದೊಡ್ಡವರಾ..?-ಮುನೀರ್ ಕಾಟಿಪಳ್ಳ

  Published

  on

  ಮಂಗಳೂರು: ‘ನವಯುಗದವರು ಈ ದೇಶವನ್ನು ಆಳುವವರು ಅಲ್ಲ. ಆಳುವವರು ಜನರು. ನಮ್ಮ ಬಿಜೆಪಿ ಶಾಸಕರು, ಸಂಸದರು ಸಣ್ಣ ಸಣ್ಣ ವಿಷಯಕ್ಕೂ ಅಗ್ರೆಸಿವ್ ಆಗಿ ಮಾತನಾಡುತ್ತಾರೆ. ಇವರಿಗೆ ನವಯುಗದವರನ್ನು ಎದುರಿಸೋ ಧಮ್ ಇಲ್ವಾ? ನಳೀನ್ ಕುಮಾರ್ ಕಟೀಲ್ ಪಾರ್ಲಿಮೆಂಟ್ ಮೆಂಬರ್. ಅವರಿಗಿಂತ ನವಯುಗದ ಸಿಇಒ ದೊಡ್ಡವರಾ? ಬಿಜೆಪಿ ಶಾಸಕರು, ಸಂಸದರು ಮನಸ್ಸು ಮಾಡಿದ್ರೆ 24 ಗಂಟೆಗಳಲ್ಲಿ ಈ ಟೋಲ್‌ಗೇಟ್ ತೆರವು ಆಗುತ್ತೆ. ಆದರೆ ಇವರಿಗೆ ಅದು ಆಗೋದಿಲ್ಲ ಎಂದು ಟೋಲ್‌ಗೇಟ್ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದರು.


  ಮತ್ತೆ ಟೋಲ್‌ಗೇಟ್ ವಿರುದ್ಧ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವುದರ ಬಗ್ಗೆ ಮಾತನಾಡಿ ‘ಈಗ ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೇವೆ.

  ನಳಿನ್ ಕುಮಾರ್ ಹೇಳಿದಂತೆ ನವೆಂಬರ್ 7ರಿಂದ ಏನೂ ಬದಲಾವಣೆ ಆಗದೆ ಇದ್ದರೆ ನಾವು ಹೋರಾಟದ ಇನ್ನೊಂದು ಹಂತವನ್ನು ಮುಂದುವರೆಸುತ್ತೇವೆ. ದ.ಕ ಮತ್ತು ಉಡುಪಿ ಜಿಲ್ಲೆಯ ಸಮಸ್ತ ಜನರ ಪರವಾಗಿ ನಮ್ಮ ಈ ಹೋರಾಟ.

  ಬಿಜೆಪಿ ಶಾಸಕರ, ಸಂಸದರ ಗಡುವು ಎಷ್ಟು ಉದ್ದ ಇದೆ ಅಂದ್ರೆ ಇವರ ದಿನಾಂಕಗಳಿಗೆ ಮಿತಿ ಎಂಬುದೇ ಇಲ್ಲ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇವಲ 15ದಿನ ಕಾಲಾವಕಾಶ ಕೊಡಿ, ಮತ್ತೆ ಅದು ಇರೋದಿಲ್ಲ ಅಂತ ಕೈ ಮುಗಿದ್ರು.


  ಅದೆಲ್ಲ ಮುಗಿದ ಮೇಲೆ ಈಗ ಉಸ್ತುವಾರಿ ಸಚಿವರು ಹೇಳ್ತಾರೆ ನವೆಂಬರ್ ಅಂತ್ಯದವರೆಗೆ ಸಮಯ ಬೇಕು ಅಂತ. ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ ಅಂತ ಧರಣಿ ನಿಂತ್ರೆ ಇದೀಗ ಹೆದ್ದಾರಿ ಪ್ರಾಧಿಕಾರವು ‘ಸ್ವಲ್ಪ ಕಾಯಿರಿ. ಫೈನಲ್ ನೋಟಿಫಿಕೇಶನ್ ಮಾತ್ರ ಬಾಕಿ ಇದೆ.

  ಈಗ ನಾವು ಯಾರ ಮಾತನ್ನು ಕೇಳೋದು. ಈಗಲೂ ಅವರಲ್ಲಿ ನಿರ್ದಿಷ್ಟ ದಿನಾಂಕ ಅನ್ನೋದು ಇಲ್ಲ. ಅಲ್ಲಿಯವರೆಗೆ ನಾವು ರಸ್ತೆಗೂ ಹೋಗಲ್ಲ, ಟೋಲ್ ಹತ್ರನೂ ಹೋಗಲ್ಲ. ಸ್ಥಳೀಯ ಶಾಸಕ ಭರತ್ ಶೆಟ್ಟಿ ಈ ಬಗ್ಗೆ ಒಂದು ಮಾತೂ ಆಡಿಲ್ಲ. ಇದೇನಾ ಅವರ ಜವಾಬ್ದಾರಿ.

  ಹತ್ತಿರದ ಉಮಾನಾಥ ಕೋಟ್ಯಾನ್ ಸೇರಿದಂತೆ ಲಾಲಾಜಿ ಆರ್ ಮೆಂಡನ್, ವೇದವ್ಯಾಸ್ ಕಾಮತ್ ಯಾರೂ ಈ ಬಗ್ಗೆ ಮಾತಾಡಿಲ್ಲ. ಇವರಿಗೆ ಕೇವಲ ಹಬ್ಬ-ಹರಿದಿನಗಳ ಆಚರಣೆ, ಸಣ್ಣಪುಟ್ಟ ವಿಷಯಕ್ಕೆ ಮತೀಯ ಸೂಕ್ಷ್ಮತೆ ಹೆಚ್ಚಿಸೋದು ಮಾತ್ರ ಕೆಲಸನಾ?

  ನಮ್ಮ ಮೇಲೆ ಬಿಜೆಪಿಗರಿಗೆ ಅಲರ್ಜಿಯಾದ್ರೆ ಬಂದು ಜನರ ಮುಂದೆ ಬಂದು ಈ ಟೋಲ್ ತೆಗೆಲಿಕ್ಕೆ ಏನು ಸಮಸ್ಯೆ ಹೇಳಿ… ಅದೂ ಆಗೋದಿಲ್ಲ ಯಾಕೆ…?

  ಮೊನ್ನೆ ಕಟೀಲ್ ಕೋರ್ಟಿಗೆ ಹೋಗ್ತೇನೆ ಹೇಳಿದ್ರು, ಯಾಕೆ ಸ್ವಾಮಿ ಕೋರ್ಟಿಗೆ ಹೋಗೊದು. ಸರ್ಕಾರದ ಮೂಲಕ ಕ್ರಮ ಜಾರಿ ಮಾಡ್ಲಿಕ್ಕೆ ಸಾಧ್ಯ ಆಗಿಲ್ಲ ಆದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಘೋಷಿಸಲಿ ಅಲ್ವಾ? ಎಂದು ಕಿಡಿಕಾರಿದರು.

  DAKSHINA KANNADA

  ಇನ್ಮುಂದೆ ಶಾಲೆಗಳಲ್ಲಿ ಹುಟ್ಟುಹಬ್ಬ ಆಚರಿಸುವಂತಿಲ್ಲ; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

  Published

  on

  ಬೆಂಗಳೂರು: ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ಹುಟ್ಟುಹಬ್ಬ ಆಚರಣೆ ಮಾಡದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

  ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳು, ಖಾಸಗಿ ವ್ಯಕ್ತಿಗಳ ಅಂದ್ರೆ ಸೆಲೆಬ್ರಿಟಿಗಳು, ಗಣ್ಯವ್ಯಕ್ತಿಗಳು ಹಾಗೂ ಅವರ ಮಕ್ಕಳ ಹುಟ್ಟುಹಬ್ಬ ಆಚರಣೆಯನ್ನು ನಿಷೇಧಿಸಿದೆ ಎಂದು ಸುತ್ತೋಲೆ ಹೊರಡಿಸಿದೆ.

  ಗಣ್ಯವ್ಯಕ್ತಿಗಳು ಮಕ್ಕಳ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಸಿಹಿ ಇತ್ಯಾದಿ ಹಂಚುವ ಅದ್ದೂರಿ ಕಾರ್ಯಕ್ರಮಗಳನ್ನು ಸಂಸ್ಥೆಯಲ್ಲಿ ಆಚರಿಸುವುದರಿಂದ ಮಕ್ಕಳಿಗೆ ಅವರ ಹುಟ್ಟು ಹಬ್ಬವನ್ನು ಈ ರೀತಿ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವಲ್ಲ ಅಂತ ಬೇಜಾರು ಮಾಡಿಕೊಳ್ಳುತ್ತವೆ. ಇದರಿಂದ ಮನಸ್ಸಿಗೆ ಆಘಾತವಾಗಿ ಮಕ್ಕಳ ಮನಸ್ಸು ದುರ್ಬಲವಾಗುವ ಸಂಭವ ಹೆಚ್ಚಾಗಿರುತ್ತದೆ. ಹೀಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ.

  Continue Reading

  DAKSHINA KANNADA

  ತೊಳೆದ್ರು ಬಿಳಿ ಬಟ್ಟೆ ಮೇಲಿನ ಕಲೆ ಹೋಗ್ತಿಲ್ವಾ? ಹೀಗೆ ಮಾಡಿ

  Published

  on

  ಮಂಗಳೂರು: ಬಿಳಿ ಬಟ್ಟೆಯನ್ನು ಕಲೆಯಾಗದಂತೆ ನೋಡಿಕೊಳ್ಳುವುದು ಕಷ್ಟದ ಕೆಲಸ. ಕೆಲವೊಮ್ಮೆ ಕೈ ತಪ್ಪಿ ಟೀ ಕಾಫಿ ಚೆಲ್ಲಿಯೋ, ಪೆನ್ನಿನ ಇಂಕ್ ತಾಗಿಯೋ ಬಿಳಿ ಬಟ್ಟೆಯ ಅಂದವನ್ನು ಹಾಳು ಮಾಡುತ್ತದೆ. ಈ ವೇಳೆ ಯಾವುದೇ ಡಿಟರ್ಜೆಂಟ್, ಸೋಪ್ ಬಳಸಿ ತಿಕ್ಕಿ ತೊಳೆದರೂ ಪ್ರಯೋಜನವಂತೂ ಆಗುವುದೇ ಇಲ್ಲ. ಬಟ್ಟೆಯನ್ನು ಜಾಸ್ತಿ ಉಜ್ಜಿದರೆ, ಆ ಬಟ್ಟೆಗಳು ಹಾಳಾಗುವ ಸಾಧ್ಯತೆ ಇರುತ್ತದೆ. ನಿಮಗೂ ಈ ರೀತಿ ಅನುಭವವಾಗಿದ್ದರೆ ಟೆನ್ಶನ್ ಮಾಡಿಕೊಳ್ಬೇಡಿ, ಈ ವಸ್ತುಗಳನ್ನು ಬಳಸಿ ಕಲೆಯನ್ನು ನಿವಾರಿಸಿಕೊಳ್ಳಬಹುದು.

  • ಅರ್ಧ ಕಪ್ ನೀರಿಗೆ ಅರ್ಧ ಕಪ್ ವಿನೆಗರ್ ಮಿಶ್ರಣ ಮಾಡಿ ಬಿಳಿ ಬಟ್ಟೆಯ ಮೇಲೆ ಇರುವ ಕಲೆಗೆ ಸ್ಪ್ರೇ ಮಾಡಿ, ಸ್ವಲ್ಪ ಸಮಯ ಹಾಗೆ ಬಿಡಬೇಕು. ತದನಂತರದಲ್ಲಿ ಅದೇ ನೀರಿನಿಂದ ತಿಕ್ಕಿ ತೊಳೆದರೆ ಕಲೆ ಬಿಡುತ್ತದೆ.
  • ಬಿಳಿ ಬಟ್ಟೆ ಮೇಲಿನ ಕಲೆಯನ್ನು ತೆಗೆದು ಹಾಕಲು ಅಡುಗೆ ಸೋಡಾ ಬೆಸ್ಟ್ ಎನ್ನಬಹುದು. ನೀರಿಗೆ ಅಡುಗೆ ಸೋಡಾ ಸೇರಿಸಿ, ಕಲೆಯಾದ ಬಟ್ಟೆಯನ್ನು ಆ ನೀರಿನಲ್ಲಿ ನೆನೆಸಿಡಬೇಕು. ಸ್ವಲ್ಪ ಸಮಯದ ಬಳಿಕ ಬಟ್ಟೆಯನ್ನು ತೊಳೆದರೆ ಕಲೆಯೂ ಹೋಗುತ್ತದೆ.
  • ಬಿಳಿ ಬಟ್ಟೆಯಲ್ಲಿ ಕಲೆಯಿದ್ದರೆ ಆ ಜಾಗಕ್ಕೆ ನಿಂಬೆರಸ ಹಾಕಿ ಉಪ್ಪು ಮತ್ತು ಸೋಪಿನಿಂದ ಚೆನ್ನಾಗಿ ತೊಳೆದರೆ ಕಲೆಯೂ ಇಲ್ಲದಂತಾಗುತ್ತದೆ.
   ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಉಜ್ಜುವುದರಿಂದ ಬಿಳಿ ಬಟ್ಟೆ ಮೇಲಿನ ಕಲೆಯೂ ನಿವಾರಣೆಯಾಗುತ್ತದೆ.
  • ಬಿಳಿ ಬಟ್ಟೆಯಲ್ಲಿ ಕಲೆಯಿದ್ದರೆ ಸ್ವಲ್ಪ ಬಿಸಿ ನೀರನ್ನು ಆ ಜಾಗಕ್ಕೆ ಹಾಕಿ, ಡಿರ್ಟಜೆಂಟ್‌ ನಿಂದ ಉಜ್ಜಿ ಕಲೆಯನ್ನು ತೆಗೆದು ಹಾಕಬಹುದು.
  • ಬಿಳಿ ಬಟ್ಟೆ ಮೇಲಿನ ಕಲೆ ನಿವಾರಣೆಗೆ ಟೂತ್ ಪೇಸ್ಟ್ ಬಳಸುವುದು ಪರಿಣಾಮಕಾರಿಯಾಗಿದೆ. ಕಲೆ ಮೇಲೆ ಟೂತ್ಪೇಸ್ಟ್ ಅನ್ವಯಿಸಿ, ಹತ್ತರಿಂದ ಹದಿನೈದು ನಿಮಿಷಗಳ ಕಾಲ ಹಾಗೆ ಬಿಡಬೇಕು. ಆ ಬಳಿಕ ಡಿಟೆರ್ಜಂಟ್ ಬಳಸಿ ಸ್ವಚ್ಛಗೊಳಿಸಿದರೆ ಕಲೆ ಉಳಿಯುವುದಿಲ್ಲ.
  Continue Reading

  DAKSHINA KANNADA

  ಕಟೀಲು ಶ್ರೀದುರ್ಗಾ ಪರಮೇಶ್ವರಿ ಕ್ಷೇತ್ರಕ್ಕೆ ಸ್ವರ್ಣಪಾದುಕೆ ಸಮರ್ಪಣೆ

  Published

  on

  ಮಂಗಳೂರು: ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ 36ನೆಯ ಅಧಿಪತಿಗಳಾದ ಜಗದ್ಗುರು ಶ್ರೀಭಾರತೀ ತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾರ ಸುವರ್ಣಮಹೋತ್ಸವದ ಸ್ಮರಣಾರ್ಥ ಕಟೀಲು ಶ್ರೀದುರ್ಗಾ ಪರಮೇಶ್ವರಿ ಕ್ಷೇತ್ರಕ್ಕೆ ಶೃಂಗೇರಿ ಶಾರದಾಪೀಠದ ವತಿಯಿಂದ 40 ಲಕ್ಷ ರೂಪಾಯಿ ಮೌಲ್ಯದ ಸ್ವರ್ಣಪಾದುಕೆ ಹಾಗೂ ಒಡ್ಯಾಣವನ್ನು ಸಮರ್ಪಿಸಲಾಗಿದೆ.

  ಶ್ರೀಭಾರತೀ ತೀರ್ಥ ಮಹಾಸ್ವಾಮಿಗಳವರು 1974 ರಲ್ಲಿ ಸನ್ಯಾಸ ಸ್ವೀಕರಿಸಿದ್ದು, 2024 ಕ್ಕೆ 50 ವರ್ಷಗಳಾಗುತ್ತಿವೆ. ಶೃಂಗೇರಿಯಲ್ಲಿ ಉಭಯ ಜಗದ್ಗುರುಗಳು ಈ ಪಾದುಕೆ ಹಾಗೂ ಒಡ್ಯಾಣವನ್ನು ಕಟೀಲು ದೇವಳದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಅಸ್ರಣ್ಣ ಅವರಿಗೆ ಹಸ್ತಾಂತರಿಸಿದರು. ಇದನ್ನು ಜೂ.19 ರಂದು ಶ್ರೀದೇವಿಗೆ ತೊಡಿಸಿ ಅಲಂಕಾರ ಮಾಡಲಾಯಿತು. ಈ ಸೇವೆಯನ್ನು ಶೃಂಗೇರಿ ಶ್ರೀಮಠದ ಶಿಷ್ಯರಾದ ಆಂಧ್ರಪ್ರದೇಶದ ಶ್ರೀಪೋಲಿಸೆಟ್ಟಿ ಶ್ಯಾಮ್ ಸುಂದರ್ ಅವರು ನೀಡಿರುತ್ತಾರೆ.

  Read More..; ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕ್ರಿಕೆಟಿಗ ಮಯಂಕ್ ಅಗರವಾಲ್ ಭೇಟಿ

  Continue Reading

  LATEST NEWS

  Trending