Connect with us

    LATEST NEWS

    ಮನೆ ಮೇಲೆ ಕಾಗೆ ಕುಳಿತರೆ ಶುಭವೇ..?

    Published

    on

    ಹಿಂದೂ ಧರ್ಮದಲ್ಲಿ ಅನೇಕ ಪ್ರಾಣಿ ಪಕ್ಷಿಗಳನ್ನು ನಾವು ಶುಭ, ಅಶುಭಗಳನ್ನಾಗಿ ವಿಂಗಡಿಸುತ್ತೇವೆ. ಇದರಲ್ಲಿ ಕಾಗೆ ಕೂಡಾ ಅನೇಕ ನಂಬಿಕೆಗಳನ್ನು ಒಳಗೊಂಡಿದೆ. ಇನ್ನು ಕಾಗೆಯನ್ನು ಕೆಲವರು ಅಶುಭ ಎಂದು ಹೇಳಿದ್ರೆ ಇನ್ನೂ ಕೆಲವರು ಶುಭ ಎಂದು ಪರಿಗಣಿಸುತ್ತಾರೆ.

     

    ಸನಾತನ ನಂಬಿಕೆಗಳ ಪ್ರಕಾರ ಪಿತೃ ಪಕ್ಷದಂದು ಕಾಗೆಗಳಿಗೆ ಆಹಾರ ನೀಡುವುದರಿಂದ ಶುಭವಾಗುತ್ತದೆ. ಯಾಕಂದ್ರೆ ನಮ್ಮ ಪಿತೃಗಳು ಪಿತೃ ಪಕ್ಷದಂದು ಕಾಗೆಯ ರೂಪದಲ್ಲಿ ಬಂದು ಆಹಾರ ಸೇವನೆ ಮಾಡುತ್ತಾರೆ ಎಂಬ ನಂಬಿಕೆ ಇದೆ. ಇದು ಪಿತೃಗಳನ್ನು ಸಂತೋಷಪಡಿಸುತ್ತದೆ ಮತ್ತು ಅವರನ್ನು ತೃಪ್ತಿಗೊಳಿಸುತ್ತದೆ.  ಇನ್ನು ಕಾಗೆಗಳು ಮನೆಗೆ ಬಂದರೆ ಶುಭವೇ? ಇದು ಏನನ್ನು ಸೂಚಿಸುತ್ತದೆ.

    ಮುಂಜಾನೆ ನಿಮ್ಮ ಮನೆಯ ಮೇಲ್ಭಾಗದಲ್ಲಿ ಕಾಗೆ ಕುಳಿತರೆ, ಮನೆಗೆ ಅತಿಥಿಗಳ ಆಗಮನ ಆಗಲಿದೆ ಎಂಬ ನಂಬಿಕೆ ಇದೆ. ಇನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕಾಗೆ ಕೂಗುತ್ತಿದ್ದರೆ, ಇದು ಕೂಡಾ ಅತಿಥಿಯ ಆಗಮನ ಅಥವಾ ಹಳೆ ಸ್ನೇಹಿತನ ಭೇಟಿಯ ಸೂಚನೆಯನ್ನು ನೀಡುತ್ತದೆ.

    ಮನೆಗೆ ಕಾಗೆಗಳ ದಂಡು ಬರುತ್ತಿದೆ ಅಂದ್ರೆ ಜಾಗೂರಕರಾಗಬೇಕು. ಯಾಕಂದ್ರೆ ಇದು ಅಶುಭವನ್ನು ಹೊತ್ತು ತರುತ್ತದೆ.  ಅಲ್ಲದೆ ಕುಟುಂಬದಲ್ಲಿ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ದಕ್ಷಿಣ ದಿಕ್ಕಿನಲ್ಲಿ ಕಾಗೆ ಕುಳಿತರೆ ಅದನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಇದು ಪಿತೃದೋಷವನ್ನು ಸೂಚಿಸುವುದರಿಂದ ಕೂಡಲೇ ಪಿತೃ ದೋಷ ಪರಿಹಾರ ಮಾಡಿಕೊಳ್ಳುವುದು ಉತ್ತಮ.

    ಇದನ್ನೂ ಓದಿ..; ಇನ್ನೂ ಪ್ಯಾನ್ ಕಾರ್ಡ್‌ಗೆ ಆಧಾರ್ ಲಿಂಕ್‌ ಮಾಡಿಲ್ವಾ..!? ಹಾಗಿದ್ರೆ ಈ ಸ್ಟೋರಿ ನೋಡಿ

    ಇನ್ನು ಪಿತೃ ಪಕ್ಷದಲ್ಲಿ ಕಾಗೆಗಳಿಗೆ ಆಹಾರ ನೀಡಿದರೆ ಅದು ಶುಭವನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಪ್ರಯಾಣಕ್ಕೆ ಹೋಗುವ ಮುನ್ನ ಕಾಗೆಗಳಿಗೆ ಮೊಸರು ಅಥವಾ ಅನ್ನವನ್ನು ಸಮರ್ಪಿಸಿದರೆ ಪ್ರಯಾಣ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಇದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ‘HSRP’ ನಂಬರ್ ಪ್ಲೇಟ್ ಅಳವಡಿಸಲು ಸೆ.15 ರವರೆಗೆ ಗಡುವು ವಿಸ್ತರಣೆ

    Published

    on

    ಬೆಂಗಳೂರು: ರಾಜ್ಯದಲ್ಲಿ ಎಚ್​ಎಸ್​ಆರ್​ಪಿ ಅಳವಡಿಸಲು ಸೆಪ್ಟೆಂಬರ್ 15ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಸರ್ಕಾರವು ಹೈಕೋರ್ಟ್​ಗೆ ಮಾಹಿತಿ ನೀಡಿದೆ.

    ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿಕ್ರಮ್ ಹುಯಿಲಗೋಳ ಅವರು ನ್ಯಾಯಪೀಠದ ಮುಂದೆ ಹಾಜರಾಗಿ, ಎಚ್‌ಎಸ್‌ಆರ್​ಪಿ ಅಳವಡಿಸಿಕೊಳ್ಳಲು ನಿಗದಿಪಡಿಸಲಾಗಿದ್ದ ಅವಧಿಯನ್ನು ಸೆಪ್ಟೆಂಬರ್ 15ರವರೆಗೆ ರಾಜ್ಯ ಸರ್ಕಾರ ವಿಸ್ತರಿಸಿದೆ ಎಂದು ಮಾಹಿತಿ ತಿಳಿಸಿದರು.

    ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿತು.

    ಎಚ್‌ಎಸ್‌ಆರ್‌ಪಿಗಳನ್ನು ಅಳವಡಿಸಲು ಸಾರಿಗೆ ಇಲಾಖೆ ಗಡುವನ್ನು ವಿಸ್ತರಿಸಿರುವುದು ಇದು ನಾಲ್ಕನೇ ಬಾರಿಯಾಗಿದೆ . ಹಿಂದಿನ ಗಡುವು ನವೆಂಬರ್ 17, 2023, ಫೆಬ್ರವರಿ 17, 2024 ಮತ್ತು ಮೇ 17, 2024 ಆಗಿತ್ತು. HSRP ಗಳನ್ನು ಪಡೆಯದ ವಾಹನ ಮಾಲೀಕರು ದಂಡವನ್ನು ಪಾವತಿಸಬೇಕಾಗಬಹುದು ಅಥವಾ ಇತರ ದಂಡದ ಕ್ರಮವನ್ನು ಎದುರಿಸಬೇಕಾಗುತ್ತದೆ.

    Continue Reading

    DAKSHINA KANNADA

    ಶ್ರೀ ಗಜಾನನ ಯಕ್ಷಗಾನ ವೇಷಭೂಷಣ ಸಂಸ್ಥೆ ಸಂಸ್ಥಾಪಕ ಹಂದಾಡಿ ಬಾಲಕೃಷ್ಣ ನಾಯಕ್ ನಿಧ*ನ..!

    Published

    on

    ಮಂಗಳೂರು: ಶ್ರೀ ಗಜಾನನ ಯಕ್ಷಗಾನ ವೇಷಭೂಷಣ ಸಂಸ್ಥೆಯ ಸಂಸ್ಥಾಪಕ, ಬಡಗುತಿಟ್ಟಿನ ಹಿರಿಯ ಪ್ರಸಾದನ ತಜ್ಞ ಹಂದಾಡಿ ಬಾಲಕೃಷ್ಣ ನಾಯಕ್ ತಮ್ಮ 76ರ ಹರೆಯದಲ್ಲಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿ*ಧನ ಹೊಂದಿದರು.


    ಎಚ್. ಸುಬ್ಬಣ್ಣ ಭಟ್ ಮತ್ತು ಇಂದು ನಾಯಕ್ ಇವರ ಜೊತೆಯಲ್ಲಿ ಬಡಗುತಿಟ್ಟಿನ ವೇಷಭೂಷಣಗಳನ್ನು ವಿವಿಧ ಸಂಘ ಸಂಸ್ಥೆಗಳಿಗೆ ಒದಗಿಸುತ್ತಾ, ಬಳಿಕ ಸ್ವಂತ ಸಂಸ್ಥೆಯನ್ನು ಸ್ಥಾಪಿಸಿದರು. ತಮ್ಮ ಅಪೂರ್ವ ಕಲಾಪ್ರತಿಭೆ ಹಾಗೂ ಸರಳ ಸಜ್ಜನಿಕೆಯಿಂದ ಎಲ್ಲ ಸಂಘ ಸಂಸ್ಥೆಗಳಿಗೂ ಅನಿವಾರ್ಯ ಎಂಬಂತೆ ಬಾಳಿದ ಧೀಮಂತರು. ಬಡಗುತಿಟ್ಟಿನ ಕಿರೀಟ ಹಾಗೂ ವೇಷಭೂಷಣಗಳ ತಯಾರಿಕೆಯಲ್ಲಿ ಸಿದ್ಧಹಸ್ತರಾಗಿದ್ದರು.

    ದೇಶವಿದೇಶಗಳಲ್ಲಿ ನೂರಾರು ಮಂದಿಗೆ ಬಡಗುತಿಟ್ಟಿನ ಪಾರಂಪರಿಕ ವೇಷಭೂಷಣ ಸಿದ್ಧಪಡಿಸಿಕೊಟ್ಟ ಕೀರ್ತಿ ಬಾಲಕೃಷ್ಣ ನಾಯಕರದ್ದು. ತನ್ನ ಮೂವರು ಪುತ್ರರೂ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಈ ಕುಟುಂಬದ ವಿಶೇಷತೆಯಾಗಿದೆ.

    ಇವರ ಕಲಾ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿ, ಯಕ್ಷಗಾನ ಕಲಾರಂಗ ಹಾಗೂ ಕಳೆದ ವರ್ಷ ಉಡುಪಿಯಲ್ಲಿ ಜರಗಿದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಗೌರವಿಸಲಾಗಿತ್ತು. ಉಡುಪಿಯ ಯಕ್ಷಶಿಕ್ಷಣ ಅಭಿಯಾನ ಯಶಸ್ವಿಯಾಗುವಲ್ಲಿ ಬಾಲಕೃಷ್ಣ ನಾಯಕ್ ಕೊಡುಗೆ ಮಹತ್ತರವಾದುದು.

    ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅ*ಗಲಿದ್ದಾರೆ. ಯಕ್ಷಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರೂ, ಉಡುಪಿಯ ಶಾಸಕರೂ ಆದ ಯಶಪಾಲ್ ಸುವರ್ಣ, ಸ್ಥಾಪಕ ಟ್ರಸ್ಟಿ ಕೆ.ರಘುಪತಿ ಭಟ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಬ್ರಹ್ಮಾವರದ ಅಜಪುರ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪದ್ಮನಾಭ ಗಾಣಿಗ ಹಾಗೂ ಸದಸ್ಯರು ತೀರ್ವ ಸಂತಾಪ ಸೂಚಿಸಿದ್ದಾರೆ.

    Continue Reading

    LATEST NEWS

    ಉಡುಪಿ : ಪ್ರೇಯಸಿಯೊಂದಿಗೆ ಜಗಳ; ಅರ್ಧ ದಾರಿಯಲ್ಲೇ ಬಸ್ ನಿಲ್ಲಿಸಿ ಹೋದ ಡ್ರೈವರ್!

    Published

    on

    ಉಡುಪಿ : ಜಿಲ್ಲೆಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಬಸ್ ಡ್ರೈವರ್ ಒಬ್ಬರು ಬಸ್ ನಲ್ಲಿ ಪ್ರೇಯಸಿಯೊಂದಿಗೆ ಜಗಳವಾಡಿ ಬಸ್ಸನ್ನು ಅರ್ಧದಲ್ಲೇ ನಿಲ್ಲಿಸಿ ಇಳಿದು ಹೋದ ವಿಚಿತ್ರ ಘಟನೆ ನಡೆದಿದೆ. ಉಡುಪಿ ನಗರದಿಂದ ಸಂತೆಕಟ್ಟೆಗೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ ಗುರುವಾರ(ಜುಲೈ 4) ಈ ಘಟನೆ ನಡೆದಿದೆ.


    ನಿಟ್ಟೂರಿನಲ್ಲಿ ಬಸ್ ಡ್ರೈವರ್ ನ ಪ್ರೇಯಸಿ ಬಸ್ ಹತ್ತಿದ್ದಾಳೆ. ಈ ವೇಳೆ ಆಕೆಗೂ ಚಾಲಕನಿಗೂ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದದ ಮಧ್ಯೆಯೂ ಚಾಲಕ ಬಸ್ಸನ್ನು ಚಲಾಯಿಸುತ್ತಲೇ ಇದ್ದು ಇವರ ಅವಾಂತರ ಕಂಡ ಕಂಡಕ್ಟರ್ ಮಧ್ಯೆ ಬಂದು ಇವರಿಬ್ಬರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಜಗಳ ನಿಲ್ಲಿಸಲಾಗಲಿಲ್ಲ. ವಾಗ್ವಾದ ತಾರಕಕ್ಕೇರಿ ಚಾಲಕ ಏಕಾಏಕಿ ಬಸ್ಸನ್ನು ಸಂತೆಕಟ್ಟೆಯ ಆಶೀರ್ವಾದ್ ಥಿಯೇಟರ್ ಬಳಿ ನಿಲ್ಲಿಸಿ, ಬಸ್ಸಿನಿಂದ ಇಳಿದು ಹೊರಟುಹೋಗಿದ್ದಾನೆ.

    ಇದನ್ನೂ ಓದಿ : ಮದುವೆಗೂ ಮೊದಲು ಹುಡುಗರು ಹುಡುಗಿಯ ಬಳಿ ಈ ಪ್ರಶ್ನೆಗಳನ್ನು ಕೇಳಲೇಬೇಕಂತೆ!
    ಆತನ ಬೆನ್ನಲ್ಲೇ ಪೇಯಸಿಯೂ ಬಸ್ಸಿನಿಂದ ಇಳಿದು ಹೋಗಿದ್ದಾಳೆ. ಬಸ್ಸನ್ನು ಅರ್ಧಲ್ಲೇ ನಿಲ್ಲಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಬಳಿಕ ಬಸ್ ಕಂಡಕ್ಟರ್ ಬೇರೆ ದಾರಿ ಕಾಣದೆ, ತಾನೇ ಬಸ್ಸನ್ನು ಚಲಾಯಿಸಿಕೊಂಡು ಹೋಗಿದ್ದಾರೆ.

    Continue Reading

    LATEST NEWS

    Trending