Connect with us

DAKSHINA KANNADA

ಸಾರಾ ಅಬೂಬಕ್ಕರ್ ಗೆ ಅಂತಿಮ ಗೌರವ ಸಲ್ಲಿಸದೆ ಅಸಹಿಷ್ಣುತೆ ತೋರಲಾಗಿದೆ : ಸರಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳ‌ ನಡೆಗೆ ಗಣ್ಯರ ಖಂಡನೆ..!

Published

on

ಮಂಗಳೂರು :  ಕನ್ನಡದ ಪ್ರಖ್ಯಾತ ಬರಹಗಾರ್ತಿ ಸಾರಾ ಅಬೂಬಕ್ಕರ್ ಅವರು ನಿಧನ ಹೊಂದಿದ ಸಂದರ್ಭ ಸರಿಯಾದ ಗೌರವ ಸಲ್ಲಿಸದೆ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಕಡೆಗಣಿಸಿರುವುದ ಖೇದಕರ. ಸರಕಾರದ  ನಡೆಯ‌ನ್ನು ಸಾಹಿತಿ, ಬುದ್ದಿ ಜೀವಿಗಳ ಕರಾವಳಿಯ ಸಮಾನ ಮನಸ್ಕರು ತೀವ್ರವಾಗಿ ಖಂಡಿಸಿದ್ದಾರೆ.

ಬಿ.ಎಂ.ರೋಹಿಣಿ, ಪ್ರೊ.ನರೇಂದ್ರ ನಾಯಕ್, ಟಿ.ಆರ್.ಭಟ್, ಚಂದ್ರಕಲಾ ನಂದಾವರ, ಪ್ರೊ. ಚಂದ್ರ ಪೂಜಾರಿ, ಪ್ರೊ.ಪಟ್ಟಾಭಿರಾಮ ಸೋಮಯಾಜಿ, ಎಂ.ದೇವದಾಸ್, ಬಿ.ಎಂ.ಹನೀಫ್, ವಾಸುದೇವ ಉಚ್ಚಿಲ, ಡಾ. ಬಿ.ಶ್ರೀನಿವಾಸ ಕಕ್ಕಿಲ್ಲಾಯ, ಗುಲಾಬಿ ಬಿಳಿಮಲೆ, ಪ್ರೊ.ಕೆ.ರಾಜೇಂದ್ರ ಉಡುಪ, ಮೋಹನ್ ಪಿ. ವಿ., ಐ.ಕೆ.ಬೊಳುವಾರು, ಯಶವಂತ ಮರೋಳಿ, ಮುನೀರ್ ಕಾಟಿಪಳ್ಳ, ಡಾ.ಕೃಷ್ಣಪ್ಪ ಕೊಂಚಾಡಿ, ಶ್ರೀನಿವಾಸ ಕಾರ್ಕಳ ಮತ್ತಿರರು ಒಳಗೊಂಡ ಜಂಟಿ ಹೇಳಿಕೆಯಲ್ಲಿ

ಸಾರಾ ಅಬೂಬಕ್ಕರ್ ಪ್ರಖ್ಯಾತ ಕತೆಗಾರರು, ಬರಹಗಾರರು ಎಂಬಲ್ಲಿಗೆ ಅವರ ಪ್ರಾಮುಖ್ಯತೆ ಮುಗಿಯುವುದಿಲ್ಲ.

ಕ‌ರ್ನಾಟಕದ ಮುಸ್ಲಿಂ ಸಮುದಾಯ ಕನ್ನಡದಲ್ಲಿ ಸಾಹಿತ್ಯ ಕೃಷಿ ನಡೆಸುವುದೇ ಅಪರೂಪವಾಗಿದ್ದ ಕಾಲಘಟ್ಟದಲ್ಲಿ ಆ ಸಮುದಾಯದ ಹೆಣ್ಣು ಮಗಳು ಕನ್ನಡ ಸಾಹಿತ್ಯ ಲೋಕಕ್ಕೆ ಪ್ರವೇಶ ಪಡೆದದ್ದು, ಸಮಾಜದ ಕಂದಾಚಾರ, ತನ್ನದೇ ಸಮುದಾಯದ ಹೆಣ್ಣು ಮಕ್ಕಳ ಸಂಕಟಗಳನ್ನು ಕತೆಯಾಗಿಸಿದ್ದು ಸಣ್ಣ ಸಾಧನೆಯೇನೂ ಅಲ್ಲ.

ಅಂತಹ ಬರವಣಿಗೆಗಳ ಕಾರಣಕ್ಕೆ ಅವರು ಎದುರಿಸಿದ ದಾಳಿ, ದಬ್ಬಾಳಿಕೆಗಳೂ ಸಣ್ಣದಲ್ಲ. ಬರವಣಿಗೆಯ ಜೊತೆಗೆ ಮಹಿಳಾಪರ ಹೋರಾಟಗಳಲ್ಲಿಯೂ ತೊಡಗಿಸಿಕೊಂಡ ಹೆಗ್ಗಳಿಕೆ ಸಾರಾ ಅವರದ್ದು.

ಅವರ ಕತೆ, ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದು ಮಾತ್ರವಲ್ಲ, ಕ‌ನ್ನಡದ ಹಿರಿಮೆಯನ್ನು ಹೊರನಾಡಿನಲ್ಲಿಯೂ ಎತ್ತಿ ಹಿಡಿದಿದೆ.

ತನ್ನ ಸಾಧನೆಗಾಗಿ ಅವರು ಅರ್ಹವಾಗಿಯೇ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಇಂತಹ ಗಣ್ಯ ಬರಹಗಾರ್ತಿ, ಲೇಖಕಿ ಅಗಲಿದ ಸಂದರ್ಭ ಸಹಜವಾಗಿಯೇ ಅವರಿಗೆ ಸರಕಾರಿ ಗೌರವಗಳು ಸಲ್ಲಬೇಕಿತ್ತು.

ಆದರೆ ಸರಕಾರದ ಯಾವುದೇ ಅಂತಿಮ ಗೌರವಗಳು ಅವರಿಗೆ ಸಲ್ಲಲಿಲ್ಲ. ಸರಕಾರದ, ಜಿಲ್ಲಾಡಳಿತದ ಪ್ರತಿನಿಧಿಗಳು ಅಧಿಕೃತ ಗೌರವ ಸಲ್ಲಿಸಲಿಲ್ಲ.

ಉಸ್ತುವಾರಿ ಸಚಿವರು, ಶಾಸಕರುಗಳು ನಗರದಲ್ಲೇ ಇದ್ದರೂ ಸಾರಾ ಅಬೂಬಕ್ಕರ್ ಅವರ ಅಂತಿಮ ದರ್ಶನ ಪಡೆಯಲಿಲ್ಲ.

ಇದು ನಮಗೆಲ್ಲಾ ಅಪಾರ ನೋವು ತಂದಿದೆ. ಈ ಕಡೆಗಣನೆ ಆಕಸ್ಮಿಕ ಆಗಿರಲಾರದು ಎಂಬುದು ನಮ್ಮ ಅಂದಾಜು.

ಇದು ಸರಕಾರ ಪ್ರಗತಿಪರ, ಜಾತ್ಯಾತೀತ ವಿಚಾರಗಳು, ಸಾಹಿತಿ, ಬುದ್ದಿಜೀವಿಗಳ ಕುರಿತು ಇತ್ತೀಚೆಗೆ ಹೊಂದಿರುವ ಅಸಹಿಷ್ಣು ಧೋರಣೆಗಳು, ಕೋಮುವಾದಿ ದೃಷ್ಟಿಕೋನದ ಭಾಗವಾದ ನಿಲುವೇ ಆಗಿದೆ ಎಂಬಂತೆ ತೋರುತ್ತದೆ.

ಸರಕಾರ, ಜಿಲ್ಲಾಡಳಿತ, ಜ‌ನಪ್ರತಿನಿಧಿಗಳ ಈ ಧೋರಣೆ ಆಘಾತಕಾರಿಯಾಗಿದ್ದು, ಕ‌ನ್ನಡನಾಡಿನ ವಿಶಾಲ, ಉದಾರ ಪ್ರಜ್ಞೆಗೆ ವಿರುದ್ದವಾಗಿದೆ, ನಾವಿದ‌‌ನ್ನು ಬಲವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಚೈತ್ರಾ ಹೆಬ್ಬಾರ್ ನಾಪತ್ತೆ ಹಿಂದೆ ಅನ್ಯಕೋಮಿನ ಯುವಕನ ಕೈವಾಡ ಶಂಕೆ- ಆರೋಪಿಯ ಬಂಧಿಸಲು ಹಿಂದೂ‌ ಸಂಘಟನೆ ಒತ್ತಾಯ

Published

on

ಪುತ್ತೂರು: ಮಾಡೂರು ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ ಪ್ರಕರಣದ ಹಿಂದೆ ಡ್ರಗ್ಸ್ ಮಾಫಿಯಾ, ಲವ್ ಜಿಹಾದ್ ಶಂಕೆಯನ್ನು ವ್ಯಕ್ತಪಡಿಸಿದ ಹಿಂದೂ‌ ಸಂಘಟನೆ ಮುಖಂಡರು, ಇದೀಗ ಬಂಟ್ವಾಳದ ಅನ್ಯಕೋಮಿನ ಯುವಕನ ಕೈವಾಡ ಆಕೆ ನಾಪತ್ತೆ ಪ್ರಕರಣದ ಹಿಂದೆ ಇದ್ದು, ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಪುತ್ತೂರಿನ ಕೂರ್ನಡ್ಕದಲ್ಲಿ ವಾಸವಿದ್ದ ಶಾರೂಕ್ ಶೇಖ್ ಮೂಲತಃ ಬಂಟ್ವಾಳದ ನೇರಳಕಟ್ಟೆಯ ನಿವಾಸಿಯಾಗಿದ್ದಾನೆ. ಚೈತ್ರಾ ತಂಗಿದ್ದ ಪಿಜಿಗೆ ಬರುತ್ತಿದ್ದ ಶಂಕಿತ ಬರುತ್ತಿದ್ದ. ಚೈತ್ರಾ ಪೋಷಕರಿಗೆ ಮಾಡೂರು ಬಜರಂಗದಳ ಮುಖಂಡರು ಮಾಹಿತಿಯನ್ನೂ ನೀಡಿದ್ದರು. ಇದೀಗ ಮಾಹಿತಿ ನೀಡಿದ ಬಳಿಕ ನಾಪತ್ತೆಯಾದ ಚೈತ್ರಾ ಹೆಬ್ಬಾರ್‌ ಹಿಂದೆ ಈ ಆರೋಪಿ ಇರುವುದು ದೃಢಪಡುತ್ತಿರುವುದರಿಂದ ಎರಡು ದಿನದಲ್ಲಿ ಚೈತ್ರಾಳನ್ನು ಪೊಲೀಸರು ಕರೆ ತರಬೇಕು. ಇಲ್ಲದೇ ಇದ್ದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಪ್ರಾಂತ ಸಂಚಾಲಕ ಮುರಳಿ ಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.

Continue Reading

DAKSHINA KANNADA

Ullala: ನಾಪತ್ತೆಯಾಗಿದ್ದ ಚೈತ್ರಾ ಹೆಬ್ಬಾರ್ ಸ್ಕೂಟರ್ ಪತ್ತೆ..!

Published

on

ಮಂಗಳೂರು: ಉಳ್ಳಾಲದ ಮಾಡೂರಿನ ಪಿಜಿಯಿಂದ ಫೆ.17 ರಂದು ನಾಪತ್ತೆಯಾಗಿದ್ದ ಚೈತ್ರಾ ಹೆಬ್ಬಾರ್ ಚಲಾಯಿಸಿದ ಸ್ಕೂಟರ್ ಸುರತ್ಕಲ್ ಬಳಿ ಪತ್ತೆಯಾಗಿದೆ.

ಮಾಡೂರಿನ ಪಿಜಿ ಯಿಂದ ಫೆ.17 ರಂದು ಮುಂಜಾನೆ 9 ಗಂಟೆಗೆ ಚೈತ್ರಾ ಇದೇ ಸ್ಕೂಟರ್‌ನಲ್ಲಿ ತೆರಳಿದ್ದರು. ಬಳಿಕ ನಾಪತ್ತೆಯಾಗಿದ್ದ ಚೈತ್ರಾ ಸುಳಿವು ಸಿಗದೆ ಹಿನ್ನೆಲಯಲ್ಲಿ ಚೈತ್ರಾ ದೊಡ್ಡಪ್ಪ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಹಿಂದೂ ಸಂಘಟನೆಗಳೂ ಇದೊಂದು ಲವ್‌ ಜಿಹಾದ್ ಪ್ರಕರಣವೆಂದು ಆರೋಪಿಸಿ ಹೋರಾಟದ ಎಚ್ಚರಿಕೆ ನೀಡಿತ್ತು. ಇದಾದ ಬಳಿಕ ತನಿಕೆ ಚುರುಕುಗೊಳಿಸಿ ಪೊಲೀಸರಿಗೆ ಇದೀಗ ಚೈತ್ರಾಳ ಸ್ಕೂಟರ್ ಪತ್ತೆಯಾಗಿದೆ. ಚೈತ್ರ ಪಿಜಿಯಿಂದ ಹೊರಟ ಬಳಿಕ ಪಂಪ್‌ವೆಲ್ ಬಳಿ ಮೊಬೈಲ್ ಆಫ್ ಮಾಡಿಕೊಂಡಿದ್ದು ಬಳಿಕ ಸುರತ್ಕಲ್‌ಗೆ ಬಂದು ಅಲ್ಲಿ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದರು, ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿಸಿರುವ ಪೊಲೀಸರು ಶಂಕಿತ ಯುವಕನ ಬಗ್ಗೆಯೂ ಮಾಹಿತಿ ಕಲೆ ಹಾಕಿದೆ. ಆದರೆ ಆತನ ಮೊಬೈಲ್ ಕೂಡಾ ಸ್ವಿಚ್‌ ಆಫ್ ಆಗಿರುವ ಕಾರಣ ಚೈತ್ರಾ ಆತನ ಜೊತೆಯಲ್ಲಿ ಹೋಗಿರುವ ಬಲವಾದ ಅನುಮಾನ ಮೂಡಿದೆ. ಕೇರಳ ಅಥವಾ ಬೆಂಗಳೂರಿಗೆ ಹೋಗಿರುವ ಸಾದ್ಯತೆ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Continue Reading

DAKSHINA KANNADA

Mangaluru: ಮನೆಗೆ ಆಕಸ್ಮಿಕ ಬೆಂಕಿ- ಸೊತ್ತುಗಳು ಸಂಪೂರ್ಣ ನಾಶ..!

Published

on

ಮಂಗಳೂರು: ಮಂಗಳೂರಿನ ಸಸಿಹಿತ್ಲು ಬೀಚ್ ಬಳಿಯ ದಾoಡಿ ಮನೆಯ ಶ್ಯಾಮಲಾ ಎಂಬವರ ಮನೆಗೆ ಬೆಂಕಿ ತಗುಲಿ ಮನೆ ಸಂಪೂರ್ಣ ಸುಟ್ಟು ಹೋದ ಘಟನೆ ಫೆ.24ರಂದು ನಡೆದಿದೆ.

ಮನೆಯಲ್ಲಿ ಶ್ಯಾಮಲಾ ಮತ್ತು ಅವರ ಪುತ್ರ ಮಾತ್ರ ವಾಸಿಸುತ್ತಿದ್ದು, ಇಬ್ಬರೂ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಆಗ್ನಿ ದುರಂತ ನಡೆದಿದೆ. ಬೆಂಕಿ ತಗುಲಿದ್ದನ್ನು ಗಮನಿಸಿದ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಅಗ್ನಿಶಾಮಕ ದಳದವರಿಗೂ ಮಾಹಿತಿ ನೀಡಿದ್ದು, ಬಳಿಕ ಅವರೂ ಬಂದಿದ್ದಾರೆ. ಕ್ಯಾಟರಿಂಗ್ ಸಂಸ್ಥೆಯ 4 ಟ್ಯಾಂಕ್‌ ನೀರನ್ನು ತರಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಲಾಗಿದೆ. ಆದರೆ ಅಷ್ಟರಲ್ಲಿ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು.

ಗ್ಯಾಸ್‌ ಸಂಪರ್ಕವನ್ನು ತೆಗೆದು ಹೊರಗೆ ಇರಿಸಿದ್ದರಿಂದ ಭಾರೀ ದುರಂತ ತಪ್ಪಿದೆ. ಬಟ್ಟೆ ಬರೆಗಳೆಲ್ಲ ಸುಟ್ಟು ಹೋಗಿವೆ. ಕಪಾಟಿನಲ್ಲಿದ್ದ 20 ಸಾವಿರ ರೂಪಾಯಿ ನಗದು ಮತ್ತು ಒಂದು ಲಕ್ಷ ರೂಪಾಯಿ ಅಂದಾಜು ಬೆಲೆಯ ಚಿನ್ನಾಭರಣ ಬೆಂಕಿಗೆ ಆಹುತಿಯಾಗಿದೆ ಎಂದು ಶ್ಯಾಮಲಾ ಅವರು ತಿಳಿಸಿದ್ದಾರೆ. ಮಾಹಿತಿ ಲಭಿಸಿದ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಮನೆ ಮಂದಿಗೆ ತಾತ್ಕಾಲಿಕವಾಗಿ ಪಕ್ಕದ ಬಾಡಿಗೆ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ.

ನಷ್ಟದ ಪ್ರಮಾಣ ಅಂದಾಜಿಸಿಲ್ಲ. ದೇವರ ದೀಪಕ್ಕೆ ಇರಿಸಿದ್ದ ಹಣತೆಯನ್ನು ಇಲಿ ಮಗುಚಿ ಹಾಕಿದ ಪರಿಣಾಮ ಬೆಂಕಿ ಹಿಡಿದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Continue Reading

LATEST NEWS

Trending