Monday, January 24, 2022

ಕೋವಿಡ್ ಲಸಿಕೆ ವಿಷವೆಂದು ತಿಳಿದು ನದಿಗೆ ಹಾರಿದರಾ ಭಯ ಪಟ್ಟ ಮುಗ್ಧ ಜನತೆ..!

ಲಕ್ನೋ: ಭಾರತದಲ್ಲಿ ಕೊರೊನಾ ವೈರಸ್ ಮರಣ ಮೃದಂಗವನ್ನೇ ಬಾರಿಸಿದೆ ಇದರಿಂದ ತಪ್ಪಿಸಿಕೊಳ್ಳಲು ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲುವುದಿಲ್ಲ ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ವಿಧಿಸಿ ಕೋವಿಡ್ ಲಸಿಕೆ ನೀಡಲು ಸರ್ಕಾರ ಕಾರ್ಯಕರ್ತೆಯರನ್ನು ಕಳುಹಿಸುತ್ತಿದೆ. 

ಆದರೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಲಸಿಕೆ ನೀಡಲು ಬಂದಿದ್ದ ಆರೋಗ್ಯ ಕಾರ್ಯಕರ್ತೆಯರಿಂದ ತಪ್ಪಿಸಿಕೊಳ್ಳಲು ಅಲ್ಲಿನ ಗ್ರಾಮಸ್ಥರು ನದಿಗೆ ಹಾರಿದ ಘಟನೆ ನಡೆದಿದೆ.

ಕೊರೊನಾಗೆ ಲಸಿಕೆ ಪಡೆಯಬೇಕು ಎಂದು ತಿಳಿ ಹೇಳಲು ಜಾಗೃತಿ ಮೂಡಿಸಲು ಅಧಿಕಾರಿಗಳು ತೆರಳಿದ್ದರು. ಈ ವೇಳೆ ಲಸಿಕೆ ಪಡೆಯಲು ಒಪ್ಪಿದ್ದ ಜನತೆಗೆ ಸ್ಥಳದಲ್ಲೇ ಲಸಿಕೆ ನೀಡಲಾಗುತ್ತಿತ್ತು. ಆದರೆ ಗ್ರಾಮಸ್ಥರು ಅಧಿಕಾರಿಗಳ ಮಾತು ಒಪ್ಪದೆ ನೀವು ಲಸಿಕೆ ನೀಡುತ್ತಿಲ್ಲ ಇದರಲ್ಲಿ ಏನೋ ವಿಷ ಇದೆ ಎಂದು ಹೆದರಿ ಅಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡಿದ್ದಾರೆ.

ಕೆಲವರಂತೂ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಸರಯೂ ನದಿಗೆ ಹಾರಿದ ಘಟನೆಯೂ ನಡೆದಿದೆ. ಗ್ರಾಮಸ್ಥರಿಗೆ ಅರಿವು ಮೂಡಿಸಿದರೂ ಮಾತು ಕೇಳುತ್ತಿಲ್ಲ ಕೇವಲ 14ಮಂದಿಯಷ್ಟೇ ಲಸಿಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶದಲ್ಲಿ 18ರಿಂದ 44ವಯಸ್ಸಿನವರಿಗೆ ಲಸಿಕೆ ನೀಡಲು ಸಾಧ್ಯವಾಗದೆ ಲಸಿಕೆ ಪೂರೈಕೆಯಲ್ಲೇ ಕೊರತೆ ಎದುರಾಗಿದೆ.ತಜ್ಞರು ಕೋವಿಡ್ ಸೋಂಕಿನಿಂದ ಬದುಕಲು ಲಸಿಕೆ ಪಡೆಯುವುದು ಅಗತ್ಯ ಎಂದು ಹೇಳುತ್ತಿದ್ದಾರೆ. ಆದರೆ ಈ ಮುಗ್ಧ ಜನತೆ ಲಸಿಕೆಗೆ ಹೆದರಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುತ್ತಿರುವುದು ದುರಂತವೇ ಸರಿ

Hot Topics

ಮಂಗಳೂರು: ಮಾಲೀಕನ ಎದುರೇ ಸ್ಕೂಟರ್‌ ಕದ್ದೊಯ್ದ ಕಳ್ಳ

ಮಂಗಳೂರು: ಮಾಲೀಕನ ಎದುರಿನಲ್ಲಿಯೇ ಕಳ್ಳನೊಬ್ಬ ಸ್ಕೂಟರ್‌ ಕಳವು ಮಾಡಿದ ಘಟನೆ ನಗರದಲ್ಲಿ ನಡೆದಿದೆ.ರಿನ್ಸ್‌ ಮೋನ್‌ ಕ್ಸೇವಿಯರ್‌ ಅವರು ಜ.7ರಂದು ಬೆಳಗ್ಗೆ 11.30ರ ವೇಳೆಗೆ ಪಾರ್ಸಲ್‌ ಬಸ್‌ಗೆ ನೀಡಲು ಜ್ಯೋತಿ ವೃತ್ತದ ಬಳಿ ಸ್ಕೂಟರ್‌...

ಸುಳ್ಯ: ಅಂಗಡಿಗೆ ಬಂದ ಗ್ರಾಹಕನಿಗೆ ಮಾಲಕನಿಂದ ಹಲ್ಲೆ- ದೂರು ದಾಖಲು

ಸುಳ್ಯ: ಬೆಳ್ಳಿಯ ಚೈನಿಗೆ ಲೇಪನ ಮಾಡಲು ಬಂದ ಗ್ರಾಹಕನೊಬ್ಬನಿಗೆ ಅಂಗಡಿ ಮಾಲಕನೇ ಕಬ್ಬಿಣದ ಪೈಪಿನಿಂದ ಹೊಡೆದು ಗಾಯಗೊಳಿಸಿದ ಘಟನೆ ಸುಳ್ಯದಲ್ಲಿ ನಿನ್ನೆ ನಡೆದಿದೆ.ಗಾಯಗೊಂಡ ಗ್ರಾಹಕರನ್ನು ಗೋಪಾಲ ಶೇಟ್ ಕೆ (47) ಎಂದು ಗುರುತಿಸಲಾಗಿದೆ. ಗೋಪಾಲ...

“ಪೂಜಾರಿಯವರನ್ನು ನಡು ನೀರಲ್ಲಿ ಕೈ ಬಿಟ್ಟು ಓಡಿಹೋದ ಮಹಾನುಭಾವ”

ಮಂಗಳೂರು: ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರನ್ನು ನಡು ನೀರಲ್ಲಿ ಕೈ ಬಿಟ್ಟು ಓಡಿಹೋದ ಮಹಾನುಭಾವ. ಈ ಸಮಾಜದ ಯುವಕರನ್ನು ಪೂಜಾರಿಯವರಿಂದ ದೂರ ಮಾಡಿದ ಶ್ರೇಯಸ್ಸು ಯಾರಿಗಿದೆ ಎಂದರೆ ಅದೇ ಮಹಾನುಭಾವನಿಗೆ ಎಂದು...