Connect with us

DAKSHINA KANNADA

ಚಾಲಕನ ನಿರ್ಲಕ್ಷಕ್ಕೆ ಅಮಾಯಕ ವೃದ್ದ ಬಲಿ – ಶಕ್ತಿನಗರ ಕಾರ್ಮಿಕ ಕಾಲೋನಿಯಲ್ಲಿ ಘಟನೆ

Published

on

ಮಂಗಳೂರು : ವಾಹನ ರಿವರ್ಸ್ ತೆಗೆಯುವ ಸಂದರ್ಭ ವಾಹನ ಡಿಕ್ಕಿ ಹೊಡೆದ ಕಾರಣ ವಯೋವೃದ್ದರೋರ್ವರು ಮೃತಪಟ್ಟ ಘಟನೆ ಮಂಗಳೂರು ನಗರದ ಶಕ್ತಿನಗರದಲ್ಲಿ ಸಂಭವಿಸಿದೆ.

ಇಲ್ಲಿನ ಕಕ್ಕೆಬೆಟ್ಟು ಕಾರ್ಮಿಕ ಕಾಲೋನಿಯ ಮನೆ ಅಂಗಳದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಮೃತರನ್ನು 85 ವರ್ಷದ ಕೊರಗಪ್ಪ ಎಂದು ಗುರುತ್ತಿಸಲಾಗಿದೆ.

ಕೊರಗಪ್ಪ ರವರು ಮನೆಯ ಅಂಗಳದಲ್ಲಿದ್ದ ಸಮಯ ಕೆ.ಎ-19-ಎಡಿ-2189 ನಂಬ್ರದ ಪಿಕ್ ಅಪ್ ವಾಹನದಲ್ಲಿ ಟೈಲ್ಸ್ ತುಂಬಿಕೊಂಡು ಬಂದ ವಾಹನವನ್ನು ಹಿಂದಕ್ಕೆ ತೆಗೆಯುವ ಸಂದರ್ಭ ಈ ಹಿಂದುಗಡೆ ನಿಂತಿದ್ದ ಕೊರಗಪ್ಪರಿಗೆ ಗುದ್ದಿದ್ದ ಪರಿಣಾಮ ತಲೆಗೆ ತಾಗಿ ಗಂಭೀರ ಗಾಯಗೊಂಡಿದ್ದ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರೂ ಆದಾಗಲೇ ಆವರು ಮೃತಪಟ್ಟಿದ್ದರು.

ಚಾಲಕನ ನಿರ್ಲಕ್ಯವೇ ಅಪಘಾತಕ್ಕೆ ಕಾರಣವೆಂದು ಆರೋಪಿಸಲಾಗಿದ್ದು ಪಿಕ್ ಅಪ್ ವಾಹನದ ಚಾಲಕ ಮೋಹನ್ ರವರ ವಿರುದ್ದ ಕಂಕನಾಡಿ ನಗರ ಠಾಣೆಯಲ್ಲಿ 05/2022 ಕಲಂ 304 (ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

DAKSHINA KANNADA

ಹರೇಕಳದಲ್ಲಿ ಪದವಿಪೂರ್ವ ಶಿಕ್ಷಣ ಆರಂಭ: ಹಾಜಬ್ಬರ ಕನಸು ನನಸು

Published

on

ಕೊಣಾಜೆ: ತಾನು ವಿದ್ಯಾವಂತನಲ್ಲದಿದ್ದರೂ ತನ್ನ ಊರಿನ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಪದ್ಮಶ್ರೀ ಪುರಸ್ಕ್ಋತರಾದ ಹರೇಕಳ ಹಾಜಬ್ಬರು ಕಿತ್ತಲೆ ಹಣ್ಣು ಮಾರಾಟ ಮಾಡಿ ಅದರಲ್ಲಿ ಬಂದ ಹಣದಲ್ಲಿ ಹರೇಕಳದ ನ್ಯೂಪಡ್ಪು ಎನ್ನುವಲ್ಲಿ ಶಾಲೆಯೊಂದನ್ನು ಆರಂಭಿಸಿದರು.

ಬಳಿಕ ಫ್ರೌಡಶಾಲೆಯ ಕನಸು ಕೂಡ ನನಸಾಗಿದ್ದು, ಇದೀಗ ಅವರ ಮತ್ತೊಂದು ಮಹಾದಾಸೆ ಆಗಿದ್ದ ಪದವಿ ಪೂರ್ವ ಕಾಲೇಜಿನ ಕನಸೂ ಕೂಡ ನೆರವೇರಿದೆ. ಈ ವರ್ಷದಿಂದ ಅಂದರೆ ಜೂನ್ 1 ರಿಂದ ಪದವಿ ಪೂರ್ವ ತರಗತಿಗಳು ಆರಂಭವಾಗಲಿದೆ.

ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ತರಗತಿಗಳು ನಡೆಯಲಿದ್ದು, ಪ್ರಾಂಶುಪಾಲರಾಗಿ ನಾಯಿಲಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರದ ಉಪನ್ಯಾಸಕ ಅಬ್ದುಲ್ ರಝಾಕ್ ನಿಯೋಜನೆಗೊಂಡಿದ್ದಾರೆ. ಈಗಾಗಲೇ ಪಿಯುಸಿ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ.

ನ್ಯೂಪಡ್ಪು ಶಾಲೆಯಿಂದ ಸಮೀಪದ ಹರೇಕಳ ದಗನೆಪಡ್ಪು ಬಳಿ ಕಾಲೇಜಿಗೆ 1.3 ಎಕ್ರೆ ಜಾಗ ಮೀಸಲಿಟ್ಟಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ನೊಂದಾವಣೆಯಾಗಿದೆ.

Continue Reading

DAKSHINA KANNADA

ಇಂತಹ ವಿಷಕಾರಿ ಗಿಡಗಳನ್ನು ಯಾವತ್ತೂ ನೀವು ಮನೆಯಲ್ಲಿ ಇಡಬೇಡಿ!!

Published

on

ಮಂಗಳೂರು: ನಮ್ಮ ತೋಟಗಳು ಮತ್ತು ಬಾಲ್ಕನಿಗಳಲ್ಲಿ ಅರಳುವ ಹೂವುಗಳು ಮತ್ತು ನಮ್ಮ ಮುಖದಲ್ಲಿ ನಗು ತರುವ ಸಾಕು ಪ್ರಾಣಿಗಳನ್ನು ನಾವು ಪ್ರೀತಿಸುತ್ತೇವೆ. ಆದ್ಧರಿಂದ ಅವರಿಬ್ಬರನ್ನೂ ಉಳಿಸಲು ಮತ್ತು ಸಂತೋಷದ ಶಕ್ತಿಯನ್ನು ಕಾಪಾಡಿಕೊಳ್ಳಲು ಇಲ್ಲಿ ನಾವು ನಿಮ್ಮ ಸಾಕು ಪ್ರಾಣಿಗಳಿಗೆ ಹಾನಿಕಾರಕವಾದ ಕೆಲವು ಸಸ್ಯಗಳ ಬಗ್ಗೆ ಮಾಹಿತಿ ಕೊಡುತ್ತೇವೆ. ಈ ಸಸ್ಯಗಳು ನಿಮ್ಮ ಮನೆಯಲ್ಲಿ ಇದ್ದರೆ ಅದು ವಿಷಕಾರಿ ಗಿಡ. ಅಂತಹ ಸಸ್ಯಗಳನ್ನು ಯಾವತ್ತೂ ನಿಮ್ಮ ಮನೆಯಲ್ಲಿ ಇಡಬೇಡಿ.

ಲೋಳೆ ಸರ

ಅಲೋವೆರಾ ಅದರ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಆದರೆ ಅದು ಮನುಷ್ಯರಿಗೆ ಮಾತ್ರ ಸೀಮಿತವಾಗಿದೆ. ಸಸ್ಯವನ್ನು ಸೇವಿಸಿದರೆ ಸಾಕುಪ್ರಾಣಿಗಳಿಗೆ ತುಂಬಾ ವಿಷಕಾರಿಯಾಗಬಹುದು ಮತ್ತು ವಾಂತಿ, ಅತಿಸಾರ ಮತ್ತು ನಡುಕವನ್ನು ಉಂಟುಮಾಡಬಹುದು.

ಪೊಥೋಸ್

ಪೋಥೋಸ್ ಜನಪ್ರಿಯ ಒಳಾಂಗಣ ಸಸ್ಯವಾಗಿದ್ದು ಅದು ಗಾಳಿಯನ್ನು ಶುದ್ದೀಕರಿಸುವ ಗುಣಗಳಿಗೆ ಹೆಸರುವಾಸಿಯಾಗಿದೆ. ಆದರೆ ಅವುಗಳನ್ನು ಇಟ್ಟುಕೊಳ್ಳುವುದರ ಸಮಸ್ಯೆಯೆಂದರೆ ಎಲೆಗಳು ಕ್ಯಾಲ್ಸಿಯಂ ಆಕ್ಸಲೇಟ್ ಹರಳುಗಳನ್ನು ಹೊಂದಿರುತ್ತವೆ. ಇದು ಸಾಕು ಪ್ರಾಣಿಗಳ ಬಾಯಿ ಮತ್ತು ಜೀರ್ಣಾಂಗವನ್ನು ಕೆರಳಿಸಬಹುದು.

ಹಾವಿನ ಗಿಡ

ನಮ್ಮ ಸುತ್ತಲಿನ ಗಾಳಿಯನ್ನು ಶುದ್ದೀಕರಿಸಲು ಸಹಾಯ ಮಾಡುವ ಮತ್ತು ಬೆಳೆಯಲು ತುಂಬಾ ಸುಲಭವಾದ ಮತ್ತೊಂದು ಉತ್ತಮ ಸಸ್ಯವೆಂದರೆ ಸ್ನೇಕ್ ಸಸ್ಯ. ಆದರೆ ಮನೆಯಲ್ಲಿ ಸಾಕುಪ್ರಾಣಿ ಇದ್ದರೆ ಜಾಗರೂಕರಾಗಿರಿ. ಹಾವಿನ ಸಸ್ಯಗಳು ಸಪೋನಿನ್‌ಗಳನ್ನು ಹೊಂದಿರುತ್ತವೆ. ಇದು ಸಾಕುಪ್ರಾಣಿಗಳಲ್ಲಿ ವಾಂತಿ ಮತ್ತು ಭೇದಿಗೆ ಕಾರಣವಾಗಬಹುದು.

ZZ ಸಸ್ಯ

ZZ ಸಸ್ಯಗಳು ತುಂಬಾ ಕಡಿಮೆ ನಿರ್ವಹಣೆಯನ್ನು ಹೊಂದಿವೆ ಮತ್ತು ಯಾರು ಬೇಕಾದರೂ ಬೆಳೆಸಬಹುದು. ಆದರೆ, ZZ ಸಸ್ಯದ ರಸವು ವಿಷಕಾರಿ ಪದಾರ್ಥಗಳು ಮತ್ತು ಉದ್ರೇಕಕಾರಿಗಳನ್ನು ಹೊಂದಿರುತ್ತದೆ. ಅದು ಮನುಷ್ಯರು ಅಥವಾ ಪ್ರಾಣಿಗಳು ಸೇವಿಸಿದರೆ, ಸುಟ್ಟಗಾಯಗಳು ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡಬಹುದು.

ಮೂಕ ಕಬ್ಬಿನ ಗಿಡ

ಡೈಫೆನ್‌ ಬಾಚಿಯಾ ಅಥವಾ ಮೂಕ ಕಬ್ಬನ್ನು ಉಲ್ಲೇಖಿಸಿದಂತೆ, ವಿಶೇಷವಾಗಿ ಸಾಕುಪ್ರಾಣಿಗಳಿಗೆ ಹೆಚ್ಚು ವಿಷಕಾರಿ ಸಸ್ಯವಾಗಿದೆ. ಮೂಕ ಕಬ್ಬಿನ ಎಲೆಗಳನ್ನು ಅಗಿಯುವುದು ಅಥವಾ ರುಚಿ ನೋಡುವುದು ಕಿರಿಕಿರಿ, ವಾಂತಿ ಮತ್ತು ನುಂಗಲು ತೊಂದರೆ ಉಂಟುಮಾಡಬಹುದು. ಇದನ್ನು ಪಶುವೈದ್ಯರು ಮಾತ್ರ ಚಿಕಿತ್ಸೆ ಮಾಡಬಹುದು.

ರಬ್ಬರ್ ಸಸ್ಯ

ರಬ್ಬರ್ ಸಸ್ಯಗಳು ಒಳಾಂಗಣದಲ್ಲಿ ಇರಿಸಿಕೊಳ್ಳಲು ಉತ್ತಮವಾದ ಮತ್ತೊಂದು ಸೆಟ್, ಆದರೆ ದುರದೃಷ್ಟವಶಾತ್ ನೀವು ಸಾಕುಪ್ರಾಣಿಗಳನ್ನು ಹೊಂದಿದ್ದರೆ ಹಾಗಲ್ಲ. ರಬ್ಬರ್ ಸಸ್ಯವು ಫಿಸಿನ್ ಮತ್ತು ರಬ್ಬರ್ ಟ್ರೀ ಲ್ಯಾಟೆಕ್ಸ್ ಎಂದು ಕರೆಯಲ್ಪಡುವ ವಿಷವನ್ನು ಹೊಂದಿರುತ್ತದೆ. ಇದು ಎಲೆಗಳನ್ನು ಅಗಿಯಲು ಅಥವಾ ನುಂಗಲು ಸಾಕುಪ್ರಾಣಿಗಳಿಗೆ ಹಾನಿಕಾರಕವಾಗಿದೆ.

ಲಿಲ್ಲಿಗಳು

ಲಿಲ್ಲಿಗಳು ಸುಂದರವಾಗಿದ್ದರೂ, ಬೆಕ್ಕುಗಳಿಗೆ ಹೆಚ್ಚು ವಿಷಕಾರಿ ಮತ್ತು ಸಣ್ಣ ಪ್ರಮಾಣದಲ್ಲಿ ಮೂತ್ರಪಿಂಡ ವೈಫಲ್ಯವನ್ನು ಉಂಟುಮಾಡಬಹುದು. ಸಸ್ಯದ ಎಲ್ಲಾ ಭಾಗಗಳು, ಪರಾಗ ಮತ್ತು ಹೂದಾನಿಗಳಿಂದ ನೀರು ಸೇರಿದಂತೆ, ತಿಂದರೆ ಅಥವಾ ಕುಡಿದರೆ ಹಾನಿಕಾರಕವಾಗಬಹುದು.

Continue Reading

DAKSHINA KANNADA

ಮುಲ್ಕಿ: ಚಿಪ್ಪು ಹೆಕ್ಕಲು ಹೋಗಿ ನೀರಲ್ಲಿ ಕಣ್ಮರೆಯಾದ ಯುವಕ.! ಪತ್ತೆಗೆ ಶೋಧ

Published

on

ಮಂಗಳೂರು: ಮುಲ್ಕಿ  ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ  ಬಜಪೆಯ ಅದ್ಯಪಾಡಿಯಿಂದ ಬಂದ ಯುವಕರ ತಂಡ ಚಿಪ್ಪು ಹೆಕ್ಕಲು ಹೋಗಿದ್ದು ಓರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ನಾಪತ್ತೆಯಾದ ಯುವಕನನ್ನು ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಶ್ (24) ಎಂದು ಗುರುತಿಸಲಾಗಿದೆ.

abhilash

ಬಜಪೆ ಸಮೀಪದ ಆದ್ಯಪಾಡಿಯ ಸುಮಾರು ಹತ್ತು ಮಂದಿಯ ಯುವಕರ ತಂಡ ಚಿಪ್ಪು ಮತ್ತು ಏಡಿ ಹಿಡಿಯಲು ಮುಲ್ಕಿಯ ಕೊಳಚಿ ಕಂಬಳ ಬೀಚ್ ಬಳಿಗೆ ಬಂದಿದ್ದಾರೆ. ಶಾಂಭವಿ ನದಿಯಲ್ಲಿ ನೀರಿನ ಇಳಿತ ವಿದ್ದ ಕಾರಣ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಸಸಿಹಿತ್ಲು ಮುಂಡಾ ಬೀಚ್ ಅಳಿವೆ ಬಾಗಿಲು ಬಳಿ ನೀರಿನ ಆಳ ಗೊತ್ತಾಗದೆ ಈಜು ಬಾರದ ಧನುಷ್ ಮತ್ತು ಜೀವನ್ ಎಂಬವರು ನೀರಿನಲ್ಲಿ ಮುಳುಗಿದ್ದಾರೆ.   ಈಜು ಅರಿತಿದ್ದ  ಅಭಿಲಾಶ್ ಅವರನ್ನು ರಕ್ಷಿಸಲು ಮುಂದಾಗಿದ್ದಾನೆ. ಅವರನ್ನು ರಕ್ಷಿಸುವ ಯತ್ನದಲ್ಲಿ ಉಳಿದವರ ಕಣ್ಣೆದುರೇ ನೀರಿನ ರಭಸಕ್ಕೆ ತಾನು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಅಪಘಾತದಲ್ಲಿ ಕನ್ನಡದ ನಟಿಯ ದುರಂತ ಸಾ*ವು..!

ಈ ಸಂದರ್ಭ ಉಳಿದವರ ಬೊಬ್ಬೆ ಕೇಳಿ ಸ್ಥಳಕ್ಕೆ ಹೆಜಮಾಡಿ ಮೀನುಗಾರರ ತಂಡದ ಸದಾಶಿವ ಕೋಟ್ಯಾನ್  ಧಾವಿಸಿ ಧನುಷ್ ಮತ್ತು ಜೀವನ್ ರವರ ನ್ನು ರಕ್ಷಿಸಿದ್ದಾರೆ. ಆದರೆ ನೀರಿನಲ್ಲಿ ಮುಳುಗಿದ ಅಭಿಲಾಶ್ ಪತ್ತೆಯಾಗಿಲ್ಲ. ಅಭಿಲಾಶ್ ಅವಿವಾಹಿತನಾಗಿದ್ದು ಮಂಗಳೂರು ರೈಲ್ವೇ ಯಲ್ಲಿ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಭಾನುವಾರ ರಜಾ ದಿನವಾದ ಕಾರಣ ಚಿಪ್ಪು ಹೆಕ್ಕಲು ಬಂದಿದ್ದ ಎಂದು ಮಿತ್ರರು ಹೇಳಿದ್ದಾರೆ. ಅಭಿಲಾಶ್ ಪತ್ತೆಗೆ ಎಸ್ ಡಿ ಆರ್ ಎಫ್ ತಂಡ,ಕರಾವಳಿ  ಕಾವಲು ಪಡೆಯ ಹೆಜ್ಮಾಡಿ, ಮುಲ್ಕಿ ಹಾಗೂ ಸುರತ್ಕಲ್ ಪೊಲೀಸರ ತಂಡ ಶ್ರಮಿಸುತ್ತಿದ್ದಾರೆ.

Continue Reading

LATEST NEWS

Trending