Friday, August 19, 2022

‘ಜಗತ್ತಿನಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಜಗತ್ತಿನಲ್ಲೇ ಬಲಿಷ್ಠ’-ವಿಶ್ವೇಶ್ವರ ಹೆಗಡೆ ಕಾಗೇರಿ

ಮಂಗಳೂರು: ಜಗತ್ತಿನಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅತ್ಯಂತ ಸಮರ್ಥವಾಗಿ ಅನುಷ್ಠಾನಗೊಳಿಸಿದ ದೇಶ ಭಾರತ ಚಹಾ ಮಾರುವ ಸಾಮಾನ್ಯ ಓರ್ವ ದೇಶದ ಪ್ರಧಾನಿ, ರಾಷ್ಟ್ರಪತಿಯಾಗುವ ಅವಕಾಶವನ್ನು ಈ ದೇಶದ ಸಂವಿಧಾನ ನೀಡಿದೆ ಎಂದು ವಿಧಾನ ಸಭಾ ಸಭಾಧ್ಯಕ್ಷ್ಯರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.


ಅವರು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಜಿಲ್ಲಾಡಳಿತ ದ.ಕ.ಜಿಲ್ಲೆ, ಮಹಾನಗರಪಾಲಿಕೆ, ಎಸ್.ಡಿ.ಎಂ ಕಾಲೇಜು, ಜಿಲ್ಲಾ ವಾಣೀಜ್ಯೋದ್ಯಮ ಸಂಘ, ಹಾಗೂ ವಿಶ್ವ ವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಚುನಾವಣಾ ಸುಧಾರಣಾ ಕ್ರಮದ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.


75 ವರ್ಷದಲ್ಲಿ ಭಾರತ ಮಾಡಿದ ಸಾಧನೆ ನೋಡಿದರೆ ಹೆಮ್ಮೆ ಅನಿಸುತ್ತದೆ. ಅಭಿವೃದ್ಧಿ ಹೊಂದಿದ ಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯರಾದ ನಾವು ಗುರುತಿಸಿಕೊಂಡಿದ್ದೇವೆ.

ಈ ದೇಶ ಈ ಪ್ರಗತಿ ಕಾಣಲು ಸಾಧ್ಯವಾದದ್ದು ನಮ್ಮ ಸಂವಿಧಾನದಿಂದಲೇ. ಸಂವಿಧಾನದ ಶ್ರೇಷ್ಠ ಕೊಡುಗೆ ಎಷ್ಟು ಅದ್ಭುತವಾಗಿದೆ ಅಂದರೆ ಆ ಹಿರಿಯರನ್ನು ನೆನೆಸಿಕೊಳ್ಳೋದೆ ಒಂದು ರೀತಿಯ ಪುಣ್ಯ. ಸಂವಿದಾನದಲ್ಲಿ ನಮ್ಮ ದೇಶ ಭಾರತವೇ ಅಗ್ರಮಾನ್ಯವಾಗಿದೆ.

ಸಾಮಾನ್ಯರಲ್ಲಿ ಸಾಮಾನ್ಯನೊಬ್ಬ ಇಲ್ಲಿ ಒಬ್ಬ ಜನಪ್ರತಿನಿಧಿ ಆಗಲು ಸಾಧ್ಯವಿದೆ ಅಂದರೆ ಸಂವಿಧಾನದ ಶ್ರೇಷ್ಠತೆಯನ್ನು ಮನಗಾಣಬೇಕು. ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಗಳನ್ನು ಮನೆಯಲ್ಲಿ ಫೊಟೋ ಹಾಕಿಸಿಕೊಳ್ಳಬೇಕು ಪ್ರತೀ ಕ್ಷೇತ್ರದಲ್ಲಿ ಭಾರತೀಯರ ಸಾಧನೆ ಹೆಮ್ಮೆ ಪಡುವಂತದ್ದು.

ನಾವು ಅಭಿಮಾನ ಪಡುವಂತಹ ಎಲ್ಲಾ ಸಂಗತಿಗಳು ಭಾರತದಲ್ಲಿದೆ. ನಮ್ಮಲ್ಲಿರುವ ಜವಾಬ್ದಾರಿಯನ್ನು ಇನ್ನೊಬ್ಬರ ಮೇಲೆ ಹೊರಿಸದೆ ನಮ್ಮ ಕರ್ತವ್ಯವನ್ನು ನಾವು ಆತ್ಮವಲೋಕನದ ಮೂಲಕ ಮಾಡಿದಾಗ ವಿಷವರ್ತುಲ ಪರಿಹಾರವಾಗುತ್ತದೆ.

ಕರೋನಾ ಬಂದಂತಹ ಸಂದರ್ದಲ್ಲಿ ಮೋದಿಯವರ ಕಾರ್ಯವೈಖರಿಯನ್ನು ನಾವು ನೋಡಿದ್ದೇವೆ. ಮುಂದುವರಿದ ದೇಶಗಳು ಉತ್ಪಾದಿಸಿದಷ್ಟೇ ವೇಗದಲ್ಲಿ ಭಾರತ ಕೂಡ ಲಸಿಕೆಯನ್ನು ಉತ್ಪಾದಿಸಿ ಉಚಿತವಾಗಿ ವಿತರಿಸಿ ಸೋಂಕು ನಿವಾರಿಸುವಲ್ಲಿ ಗೆದ್ದಿದೆ.

ಜಾತಿ, ಭಾಷೆ, ವೇಷ, ಗಡಿ, ನೀರು ಈ ಎಲ್ಲಾ ಕಾರಣಗಳಿಂದ ಬೇಧ ಭಾವಗಳು ನಿರ್ಮಾಣವಾಗಿದೆ. ಇದಕ್ಕೆ ಶಿಕ್ಷಣ ಕಾರಣವೋ, ಅಥವಾ ಕುಟುಂಬ ವ್ಯವಸ್ಥೆಯ ಸಡಿಲತೆಯೋ ಅನ್ನುವಂತದ್ದು ವಿಶ್ಲೇಷಣೆಗೆ ಬಿಟ್ಟಿದ್ದು.

ಇದರಲ್ಲಿ ಬರೀ ರಾಜಕಾರಣಿಗಳು ಅಪರಾಧಿಗಳು ಎಂದರೆ ಸಮಂಜಸವಲ್ಲ. ನಾವೆಲ್ಲರೂ ತಪ್ಪಿನಲ್ಲಿ ಭಾಗಿಯಾಗಿದ್ದೇವೆ. ಹೀಗಾಗಿ ಎಲ್ಲರೂ ಕೂಡ ಜವಬ್ದಾರರಾಗಬೇಕು’ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ದ.ಕ.ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ “ಚುನಾವಣೆಯಲ್ಲಿ ಚುನಾವಣಾ ಗುರುತು ಚೀಟಿ ಎಷ್ಟು ಮುಖ್ಯವಾಗಿರುತ್ತದೆ, ಜೊತೆಗೆ ಇವತ್ತಿನ ಯುವ ಜನಾಂಗ ಓಟರ್ ಐಡಿ ಮಾಡಿಸಿಕೊಳ್ಳುವಲ್ಲಿ ಎಷ್ಟು ಆಲಸ್ಯವನ್ನು ತೋರಿಸುತ್ತಿದ್ದಾರೆ ಹಾಗೂ ಪ್ರಜಾಪ್ರಭುತ್ವದ ವ್ಯವಸ್ಥೆಯೊಳಗಡೆ ಯುವ ಜನಾಂಗ ತೊಡಗಿಸಿಕೊಳ್ಳುವಿಕೆಯಲ್ಲಿ ಎಷ್ಟು ಹಿಂಜರಿಯುತ್ತಿದ್ದಾರೆ ಎಂಬುದವುದರ ಕುರಿತು ಮಾಹಿತಿ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಸಭಾ ಸಭಾಧ್ಯಕ್ಷ್ಯರಾದ ವಿಶ್ವೇಶ್ವರ ಹೆಗಡೆ, ಕಾಗೇರಿ ಮಾತನಾಡಿ “ಜಗತ್ತು ಯಾವೆಲ್ಲಾ ಕ್ಷೇತ್ರದಲ್ಲಿ ಅಭಿವೃದ್ದಿಯನ್ನು ಕಂಡಿದೆಯೋ ಆ ಎಲ್ಲಾ ಕ್ಷೇತ್ರಗಳಲ್ಲೂ ಭಾರತೀಯರು ನಾವು ಇದ್ದೇವೆ,. ಇದು ನಾವು ಹೆಮ್ಮೆ ಪಡುವಂತಹ ವಿಚಾರ.

ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮ.ನಾ.ಪ ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಣಾ ಅಧಿಕಾರಿ ಡಾ.ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ: ಐವರು ಆರೋಪಿಗಳು NIA ವಶಕ್ಕೆ

ಪುತ್ತೂರು: ಬಿಜೆಪಿ ಯುವ ಮುಖಂಡ ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿರುವ ಐವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳದವರು ವಿಚಾರಣೆಗಾಗಿ 6 ದಿನಗಳ ಕಾಲ ತಮ್ಮ...

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದನ್ನು ಖಂಡಿಸಿ ಆ.26 ರಂದು ಮಡಿಕೇರಿ ಎಸ್‌ಪಿ ಕಚೇರಿಗೆ ಮುತ್ತಿಗೆ

ಬೆಂಗಳೂರು: ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಮಡಿಕೇರಿ ಭೇಟಿ ವೇಳೆ ಮೊಟ್ಟೆ ಎಸೆದ ಪ್ರಕರಣವನ್ನು ಕಾಂಗ್ರೆಸ್‌ ಖಂಡಿಸಿದ್ದು, ಆ.26 ರಂದು ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್‌ ಕಾರ್ಯಕರ್ತರು ನಿರ್ಧರಿಸಿದ್ದಾರೆ.ಈ...

ಪುಂಡ ಕಾಂಗ್ರೆಸ್ಸಿಗರೇ ನಿಮಗೆ ಎಚ್ಚರಿಕೆ ಕೊಡ್ತೇನೆ ಎಂದ ಯಶ್ಪಾಲ್‌ ಸುವರ್ಣ

ಮಂಗಳೂರು: ಇವತ್ತಿನ ಪೀಳಿಗೆಗೆ ಸಾವರ್ಕರ್ ಅವರ ಆದರ್ಶ, ಕೊಡುಗೆಗಳನ್ನು ತಿಳಿಸುವ ನಿಟ್ಟಿನಲ್ಲಿ ನಾವು ಕೇವಲ ಆ ಭಾಗದಲ್ಲಿ ಫ್ಲೆಕ್ಸ್ ಮಾತ್ರವಲ್ಲ,ಪುತ್ಥಳಿ ನಿರ್ಮಾಣಕ್ಕೆ ಅನುಮತಿ ಕೋರಿ ಉಡುಪಿ ನಗರ ಸಭೆಗೆ ಪತ್ರವನ್ನು ಬರೆದಿದ್ದೇವೆ ಎಂದು...