Connect with us

LATEST NEWS

ದೇಶದಲ್ಲಿ 11 ಸಾವಿರದ ಗಡಿ ದಾಟಿದ ಕೊರೊನಾ ಪ್ರಕರಣ : ರಾಜ್ಯದಲ್ಲೂ ಕಟ್ಟೆಚ್ಚರಕ್ಕೆ ಸೂಚನೆ..!

Published

on

ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದ್ದು 5 ಸಾವಿರದ ಗಡಿ ದಾಟಿದ ಒಂದು ವಾರದಲ್ಲೇ  ದೇಶದ ಹೊಸ ದೈನಿಕ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡು 11 ಸಾವಿರ ದಾಟಿದೆ.

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದ್ದು 5 ಸಾವಿರದ ಗಡಿ ದಾಟಿದ ಒಂದು ವಾರದಲ್ಲೇ  ದೇಶದ ಹೊಸ ದೈನಿಕ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡು 10 ಸಾವಿರ ದಾಟಿದೆ.

ಕಳೆದ ವರ್ಷದ ಆಗಸ್ಟ್ 25ರ ಬಳಿಕ ದಾಖಲಾದ ಗರಿಷ್ಠ ಸಂಖ್ಯೆ ಇದಾಗಿದೆ.

ಕೇರಳದಲ್ಲಿ ಪ್ರಕರಣಗಳು ಗಣನೀಯವಾಗಿ ಹೆಚ್ಚಿದ್ದು, ದೆಹಲಿ, ತಮಿಳುನಾಡು ಮತ್ತು ಇತರ ಹಲವು ಉತ್ತರ ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ.

ದೇಶಾದ್ಯಂತ ಬುಧವಾರ 10168 ಪ್ರಕರಣಗಳು ದಾಖಲಾಗಿದ್ದು, 15 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಕಳೆದ ಏಳು ದಿನಗಳಲ್ಲಿ 47 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಹಿಂದಿನ ಏಳು ದಿನಗಳಲ್ಲಿ ದಾಖಲಾದ 26300 ಪ್ರಕರಣಗಳಿಗೆ ಹೋಲಿಸಿದರೆ ಇದು ಶೇಕಡ 80ರಷ್ಟು ಅಧಿಕ.

ಇದೇ ಅವಧಿಯಲ್ಲಿ ಮೃತರ ಸಂಖ್ಯೆ 48 ರಿಂದ 85ಕ್ಕೇರಿದೆ.

ಗುರುವಾರ ತಡರಾತ್ರಿ ವೇಳೆಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 46 ಸಾವಿರ ಇತ್ತು.

ವಾರದ ಹಿಂದೆ ಇದು 26 ಸಾವಿರ ಆಗಿತ್ತು. ಅಂತೆಯೇ ಟೆಸ್ಟ್ ಪಾಸಿಟಿವಿಟಿ ದರ ಹಿಂದಿನ ವಾರ 3.22% ಇದ್ದುದು ಇದೀಗ ಶೇಕಡ 4.46ಕ್ಕೇರಿದೆ.

ಕೇರಳದಲ್ಲಿ 3420 ಹೊಸ ಪ್ರಕರಣಗಳು ವರದಿಯಾಗಿದ್ದು, ಕಳೆದ ವರ್ಷದ ಜುಲೈ 13ರ ಬಳಿಕ ದಾಖಲಾದ ಗರಿಷ್ಠ ಪ್ರಕರಣ ಇದಾಗಿದೆ.

ದೆಹಲಿ (1159) ಮತ್ತು ಮಹಾರಾಷ್ಟ್ರ (1155) ದಲ್ಲಿ ಕೂಡಾ ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ರಾಜ್ಯದಲ್ಲೂ ಕಟ್ಟೆಚ್ಚರಕ್ಕೆ ಸೂಚನೆ :
ರಾಜ್ಯದಲ್ಲೂ ಶೇ.30ರಷ್ಟು ರಾಟ್   ಹಾಗೂ ಶೇ.70ರಷ್ಟು RTPCR ಪರೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಹೆಚ್ಚು ಜನಸಂಖ್ಯೆ ಪ್ರದೇಶಗಳಲ್ಲಿ ಪಾಸಿಟಿವಿಟಿ ಆಧಾರದ ಮೇಲೆ ದಿನಕ್ಕೆ 20 ಸಾವಿರ ಪರೀಕ್ಷೆ ನಿಗದಿಪಡಿಸಲಾಗಿದ್ದು, ಎಲ್ಲ ಪರೀಕ್ಷೆಗಳನ್ನು ಕಡ್ಡಾಯವಾಗಿ ಸರಕಾರಿ ಪ್ರಯೋಗ ಶಾಲೆಗಳಲ್ಲಿಯೇ ನಡೆಸುವಂತೆ ಹೇಳಲಾಗಿದೆ.

ಅದೇ ರೀತಿ, ಇನ್ನೂ, ರೋಗಲಕ್ಷಣ ಕಂಡುಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಪರೀಕ್ಷಿಸಬೇಕೆಂದು ಎಲ್ಲ ಜಿಲ್ಲಾಧಿಕಾರಿಗಳು, ಪ್ರಯೋಗಾಲಯಗಳ ನೋಡಲ್ ಅಧಿಕಾರಿಗಳಿಗೆ ಸೂಚಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕೋವಿಡ್ ನೋಡಲ್ ಅಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆ.

LATEST NEWS

ಮೂರು ವರ್ಷದ ಮಗುವಿನ ಎದೆಗೆ ಕಾಲಿಟ್ಟು ಕೊಂ*ದ ಪಾಪಿ..! ಬೆಳಗಾವಿಯಲ್ಲೊಂದು ಅಮಾನುಷ ಘಟನೆ

Published

on

ಬೆಳಗಾವಿ: ಮೂರು ವರ್ಷದ ಮಗುವಿನ ಎದೆ ಮೇಲೆ ಕಾಲಿಟ್ಟು, ತುಳಿದು ಹ*ತ್ಯೆ ಮಾಡಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿಯಲ್ಲಿ ನಡೆದಿದೆ.

ಬುರ್ಲಟ್ಟಿ ಗ್ರಾಮದ ಶ್ರೀನಿಧಿ ಕಾಡಪ್ಪ ಕಾಳಾಪಾಟೀಲ್ ಮೂರು ವರ್ಷದ ಮೃತಪಟ್ಟಿರುವ ಮಗು.  ಜೋತಿಭಾ ತುಕಾರಾಮ ಬಾಬಾಬರ ಎಂಬವನು ಮಗುವನ್ನು ಕೊಂ*ದವರು ಎಂದು ತಿಳಿದು ಬಂದಿದೆ. ಮಗುವಿನ ತಂದೆ ಕಾಡಪ್ಪ ಕಾಳಪಾಟೀಲಗೆ ಕಳೆದ ವರ್ಷ ಜೋತಿಭಾ ಬಾಬಾಬರ ಐವತ್ತು ಸಾವಿರ ಸಾಲ ನೀಡಿದ್ದ ಎನ್ನಲಾಗಿದೆ. ಈ ಹಣವನ್ನು ವಾಪಸ್‌ ನೀಡುವಂತೆ ಕಾಳಪ್ಪನಿಗೆ ಕೇಳಿದಾಗ ಶನಿವಾರ ಬೆಳಗ್ಗೆ ಜೋತಿಭಾ ಕಾಳಪ್ಪನ ಮನೆ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದಾಗಿ ಇಬ್ಬರ ನಡುವೆ ಜಗಳ ತಾರಕಕ್ಕೇರಿ ಜೋತಿಭಾ ತುಕಾರಾಮ ಬಾಬಾಬರ ಮಗುವಿನ ಎದೆ ಮೇಲೆ ಕಾಲಿಟ್ಟು ಕೊಂದಿದ್ದಾನೆ ಎಂದು ಮೃತಪಟ್ಟ ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.

ಮುಂದೆ ಓದಿ..: ಸಾ*ವಿನಲ್ಲಿ ಒಂದಾದ ತಂದೆ ಮಗ.. ತಂದೆಯ ಅಗಲಿಕೆ ನೋವಲ್ಲೇ ಅಸುನೀಗಿದ ಮಗ..!

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

ಸಾ*ವಿನಲ್ಲೂ ಒಂದಾದ ತಂದೆ ಮಗ.. ತಂದೆಯ ಅಗಲಿಕೆ ನೋವಲ್ಲೇ ಅಸುನೀಗಿದ ಮಗ..!

Published

on

ಕೊಪ್ಪಳ: ಒಂದೇ ದಿನದಲ್ಲಿ ತಂದೆ ಮಗ ಇಬ್ಬರೂ ಸಾವನ್ನಪ್ಪಿದ ಘಟನೆ ಕೊಪ್ಪಳದ ಬಂಡಿಹರ್ಲಾಪುರಾದಲ್ಲಿ ನಡೆದಿದೆ. ತಂದೆಯ ಸಾವಿನ ನೋವಿನಲ್ಲಿ ಮಗ ಕೂಡಾ ಸಾವನ್ನಪ್ಪಿದ್ದಾರೆ. ಮೃ*ತರನ್ನು ರಾಮರೆಡ್ಡಿ (70) ಮತ್ತು ಆದಿನಾರಾಯಣ ರೆಡ್ಡಿ (42) ಎಂದು ಗುರುತಿಸಲಾಗಿದೆ.

death

ಮುಂದೆ ಓದಿ..; ಎರಡು ಲಾರಿಗಳ ಮಧ್ಯೆ ಅಪಘಾತ; ಚಾಲಕ ಗಂಭೀರ

ರಾಮರೆಡ್ಡಿ ಅನಾರೋಗ್ಯದಿಂದ ಬಳಲುತ್ತಿದ್ದು, ನಿನ್ನೆ(ಎ.28) ಬೆಳಿಗ್ಗೆ ಮೃತಪಟ್ಟಿದ್ದರು. ಅದೇ ದಿನ ರಾತ್ರಿ 8.30ಕ್ಕೆ ಮಗ ಆದಿನಾರಾಯಣ ರೆಡ್ಡಿ ಕೂಡ ಪ್ರಾಣ ಬಿಟ್ಟಿದ್ದಾರೆ. ಆದಿನಾರಾಯಣ ತಂದೆಯನ್ನು ಬಹಳ ಪ್ರೀತಿಸುತ್ತಿದ್ದು, ತಂದೆಯ ಸಾವಿನ ದುಃಖದಲ್ಲಿ ಕುಳಿತಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಆದಿನಾರಾಯಣ ರೆಡ್ಡಿ, ಪತ್ನಿ ಹಾಗೂ ತನ್ನೆರಡು ಮಕ್ಕಳನ್ನು ಅಗಲಿದ್ದಾರೆ.

Continue Reading

DAKSHINA KANNADA

ಎರಡು ಲಾರಿಗಳ ಮಧ್ಯೆ ಅಪಘಾತ; ಚಾಲಕ ಗಂಭೀ*ರ

Published

on

ಮಂಗಳೂರು: ಬೈಕಂಪಾಡಿ ಹೋಟೆಲ್ ಶ್ರೀ ದ್ವಾರದ ಬಳಿ ಲಾರಿಗಳೆರಡರ ನಡುವೆ ಅಪಘಾತ ಸಂಭವಿಸಿ ಲಾರಿ ಚಾಲಕ ಗಂಭಿರ ಗಾಯಗೊಂಡ ಘಟನೆ ನಡೆದಿದೆ. ಒಂದು ಲಾರಿಯೊಂದು ಗ್ರಾನೈಟ್ ಅಂಗಡಿಯೊಳಗೆ ನುಗ್ಗಿದ್ದು, ಅಪಾರ ಮೌಲ್ಯದ ಗ್ರಾನೈಟ್‌ ಹಾನಿಗೊಂಡಿದೆ.

ಮುಂದೆ ಓದಿ..; ಪುತ್ತೂರು : ಧರೆಗುರುಳಿದ ಬೃಹದಾಕಾರದ ಮರ; ಮಾವಿನಕಾಯಿಗಾಗಿ ಮುಗಿಬಿದ್ದ ಜನ!

accident

ಲಾರಿ ಸಾಗಾಟ ಮಾಡುತ್ತಿದ್ದ ಲಾರಿ ಅಪಘಾತದಿಂದ ನಜ್ಜುಗುಜ್ಜಾಗಿದೆ. ಇನ್ನು ಇದೇ ಭಾಗದಲ್ಲಿ ನಿತ್ಯವೂ ಮಹಿಳೆಯರು ಮೀನ ಮಾರಾಟ ಮಾಡುತ್ತಿದ್ದರು. ಅದೃಷ್ಟವಶಾತ್ ಇದೀಗ ಭಾರೀ ಅನಾಹುತ ತಪ್ಪಿದೆ.

 

Continue Reading

LATEST NEWS

Trending