Tuesday, July 5, 2022

ಯುವಕರಲ್ಲಿ ಹೆಚ್ಚಾಗುತ್ತಿದೆ ಹೃದಯಘಾತ : ಆಡುತ್ತಲೇ ಪ್ರಾಣ ಬಿಟ್ಟ ಕೊಡಗಿನ ಹಾಕಿ ಆಟಗಾರ..!

ಮಡಿಕೇರಿ: ಹಾಕಿ ಪಂದ್ಯಾಟ ಆಡುತ್ತಿರುವಾಗಲೇ ಆಟಗಾರ ಹೃದಯಾಘಾತದಿಂದ ಮೃತಪಟ್ಟಿರುವ ವಿದ್ರಾವಕ ಘಟನೆ ಕೊಡಗಿನ ಮೂರ್ನಾಡುವಿನಲ್ಲಿ ನಡೆದಿದೆ.

ಸೋಮಯ್ಯ (22) ಹೃದಯಾಘಾತದಿಂದ ಮೃತಪಟ್ಟ ಹಾಕಿ ಆಟಗಾರರಾಗಿದ್ದಾರೆ.

ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದಲ್ಲಿ ಕೊಡವ ಹಾಕಿ ಪಂದಾಟ ನಡೆಯುತ್ತಿತ್ತು. ಪಂದ್ಯಾಟ ಆಡುತ್ತಿರುವಾಗಲೇ ಸೋಮಯ್ಯಗೆ ಹೃದಯಘಾತವಾಗಿದ್ದು, ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ.

ಕೂಡಲೇ ಎಚ್ಚೆತ್ತುಕೊಂಡ ಆಯೋಜಕರು, ಸೋಮಯ್ಯ ಅವರನ್ನು ಮಡಿಕೇರಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ.

ಆದರೆ ಮಾರ್ಗಮಧ್ಯದಲ್ಲೇ ಸೋಮಯ್ಯ ಉಸಿರು ನಿಲ್ಲಿಸಿದ್ದಾರೆ. ಆರೋಗ್ಯದಾಯಕವಾಗಿದ್ದ ಸೋಮಯ್ಯ ಪಂದ್ಯಾಟ ಆಡುವಾಗಲೇ ಕುಸಿದು ಮೃತಪಟ್ಟಿರುವುದು ಉಳಿದ ಹಾಕಿ ಆಟಗಾರರು ಮತ್ತು ನೆರೆದ ಕ್ರೀಡಾಪ್ರೇಮಿಗಳು ಶಾಕ್ ಆಗಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಬಳಿಕ ಎಳೇ ವಯಸ್ಸಿನಲ್ಲೇ ಹೃದಯಘಾತಗಳು ಹೆಚ್ಚಾಗುತ್ತಿರುವುದಕ್ಕೆ ಆತಂಕ ವ್ಯಕ್ತವಾಗಿದ್ದು, ಯುವಕರೇ ಹೆಚ್ಚಾಗಿ ಹೃದಯಘಾತಕ್ಕೆ ಬಲಿಯಾಗುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ : ಶಾಲಾ- ಕಾಲೇಜುಗಳಿಗೆ ಇಂದು (ಜು5) ರಜೆ ಘೋಷಿಸಿದ ಜಿಲ್ಲಾಧಿಕಾರಿ..!

ಮಂಗಳೂರು " ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ದಿನಾಂಕ 05/07/ 2022ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ ಪ್ರೌಢಶಾಲೆ, ಪದವಿ ಪೂರ್ವ...