Connect with us

  MANGALORE

  ಕಷ್ಟ ಬಂತೆಂದು ಆತ್ಮಹತ್ಯೆಯ ನಿರ್ಧಾರ ಮಾಡದಿರಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ

  Published

  on

  ಮಂಗಳೂರು: ಜೀವನದಲ್ಲಿ ಕಷ್ಟ ಬಂತೆಂದು ಏಕಾಏಕಿ ಆತ್ಮಹತ್ಯೆಯ ನಿರ್ಧಾರ ಮಾಡದಿರಿ. ಎನೇ ಕಷ್ಟವಿದ್ದರೂ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ತಿಳಿಸಿ.

  ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಒಕ್ಕೂಟದ ಪ್ರಮುಖ ಧ್ಯೇಯವಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಹೇಳಿದರು.


  ಅವರು ಬಂಟ್ಸ್ ಹಾಸ್ಟೆಲ್’ನಲ್ಲಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ನಡೆದ ಸಮಾಜ ಕಲ್ಯಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

  ಇಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಪ್ರತಿ ತಿಂಗಳು ಆರ್ಥಿಕ ಕಷ್ಟದಲ್ಲಿರುವ ಫಲಾನುಭವಿಗಳಿಗೆ ಸಹಾಯಧನ ವಿತರಿಸುತ್ತಿದೆ. ಕೊರೋನದಂತಹ ಲಾಕ್ಡೌನ್ ಸಂದರ್ಭದಲ್ಲೂ 1.5 ಕೋಟಿ ರೂ ಗಳಷ್ಟು ಹಣವನ್ನು ದಾನಿಗಳಿಂದ ಸಂಗ್ರಹಿಸಿ ಕಷ್ಟದಲ್ಲಿದವರಿಗೆ ನೀಡಿದ್ದೇವೆ.

  ಉಳ್ಳವರಿಂದ ಸಂಗ್ರಹಿಸಿ ಇಲ್ಲದವರಿಗೆ ನೀಡುವುದು ಒಕ್ಕೂಟದ ಕಾರ್ಯ, ನಮ್ಮ ಶಕ್ತಿಯಾನುಸಾರ ಮುಂದೆಯೂ ಸಹಾಯ ಮಾಡಲಿದ್ದೇವೆ ಎಂದರು.

  ಇಂದು ಯಾವುದೇ ಬಂಟ ಶಾಸಕರು, ಸಚಿವರು 1ರೂಪಾಯಿಯ ಸಹಾಯವನ್ನು ಒಕ್ಕೂಟಕ್ಕೆ ಮಾಡಿಲ್ಲ. ಬೇರೆ ಸಮಾಜದ ರಾಜಕೀಯ ಮುಖಂಡರಿಗೆ ಅವರ ಸಮಾಜದ ಮೇಲಿರುವಷ್ಟು ಪ್ರೀತಿ, ಅಭಿಮಾನ ನಮ್ಮವರಿಗಿಲ್ಲ.

  ಆಸ್ಪತ್ರೆಗಳಲ್ಲೂ ಕಷ್ಟದಲ್ಲಿ ಇರುವವರಿಗೆ ವಿನಾಯಿತಿ ನೀಡುತ್ತಿಲ್ಲ. ಸಾಯುವಾಗ ಕೂಡಿಟ್ಟದನ್ನು ಹೊತ್ತುಕೊಂಡು ಹೋಗಲಿದ್ದಾರೆಯೇ ಎಂದು ಬೇಸರ ವ್ಯಕ್ತ ಪಡಿಸಿದರು.
  ದಾನಿಗಳಿಲ್ಲದೆ ನಾವು ಎನೂ ಮಾಡಲು ಸಾಧ್ಯವಿಲ್ಲ,

  ದಾನಿಗಳು ನೀಡಿದ ಹಣವನ್ನು ಒಕ್ಕೂಟಕ್ಕೆ ಬಂದ ಅರ್ಜಿಗಳನ್ನು ಪರಿಶೀಲಿಸಿ ಸಹಾಯಧನ ನೀಡುತ್ತಿದ್ದೇವೆ. ಕಟೀಲು ಶ್ರೀದೇವಿಯ ಆರ್ಶಿವಾದದಿಂದ ಮುಂದೆಯೂ ನೀಡಲಿದ್ದೇವೆ. ಎಲ್ಲರಿಗೂ ದೇವರು ಅನುಗ್ರಹಿಸಲಿ ಎಂದು ಹಾರೈಸಿದರು.


  ಈ ಸಂದರ್ಭ ಬೆಂಗಳೂರು ಬಂಟರ ಸಂಘದ ದಿ. ಮುಲ್ಕಿ ಸುಂದರರಾಮ್ ಶೆಟ್ಟಿ ಸ್ಮಾರಕ ಪ್ರಶಸ್ತಿ ಪುರಸ್ಕೃತ ಐಕಳ ಹರೀಶ್ ಶೆಟ್ಟಿ ಅವರನ್ನು ಒಕ್ಕೂಟದ ಪದಾಧಿಕಾರಿಗಳು,

  ವಿವಿಧ ಬಂಟರ ಸಂಘಗಳ ಪ್ರಮುಖರು ತಮ್ಮ ಅಭಿಮಾನ ದ್ಯೋತಕವಾಗಿ ಸನ್ಮಾನಿಸಿ ಅಭಿನಂದಿಸಿದರು.


  ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕಟೀಲ್, ಪತ್ರಕರ್ತರಾದ ವಿದ್ಯಾಧರ ಶೆಟ್ಟಿ ಹಾಗೂ ಅಶೋಕ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

  ಸನ್ಮಾನ ಸ್ವೀಕರಿಸಿ ಮಾತನಾಡಿದ ರೋಹಿತ್ ಕಟೀಲ್ ಅವರು, ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಇಂದು ಮನೆ ಮಾತಾಗಿದೆ.

  ಹಿಂದೆ ಬಂಟರ ಸಂಘವನ್ನು ಕೇಳುವವರಿಲ್ಲ, ಆದರೆ ಐಕಳ ಅವರು ಒಕ್ಕೂಟದ ಅಧ್ಯಕ್ಷರಾದ ನಂತರ 3-4 ವರ್ಷದಲ್ಲಿ ಸಮಾಜದ ಎಲ್ಲಾ ವರ್ಗದ ಕಷ್ಟದಲ್ಲಿರುವ ಧ್ವನಿಯಾಗಿದ್ದಾರೆ.

  ಒಕ್ಕೂಟದ ಸಮಾಜ ಸೇವೆಯು ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆಯಲಿ ಎಂದು ಹಾರೈಸಿದರು.
  ಪತ್ರಕರ್ತ ವಿದ್ಯಾಧರ ಶೆಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿ,

  ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದೇ ಎಂದು ಗೊತ್ತಾಗಿದ್ದೆ ಐಕಳ ಅವರು ಅಧ್ಯಕ್ಷರಾದಗ ಬಡವರ ಕಣ್ಣೀರೊರೆಸುವ ಹರೀಶಣ್ಣ ಹಾಗೂ ಅವರ ಜೊತೆಗಾರರಿಗೆ ದೇವರ ಮತ್ತಷ್ಟು ಶಕ್ತಿ ನೀಡಲೆಂದರು.


  ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಅಶೋಕ ಶೆಟ್ಟಿ ಅವರು, ಹೊರಗಿನ ಸನ್ಮಾನಕ್ಕಿಂತ ನಮ್ಮ ಸಮಾಜದ ಸನ್ಮಾನ ಮುಖ್ಯ, ಇದು ದೇವರ ಪ್ರಸಾದದಂತೆ. ಅಂತರರಾಷ್ಟ್ರೀಯ ಮಟ್ಟ ಸಂಸ್ಥೆಯಾಗಿರುವ ಒಕ್ಕೂಟ ಗುರುತಿಸಿ ಸನ್ಮಾನಿಸಿರುವುದಕ್ಕೆ ಚಿರರುಣಿಯಾಗಿರುವ ಎಂದರು.

  ಒಕ್ಕೂಟದ ಪೋಷಕರು, ಥಾಣೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಅವರನ್ನು ಮತ್ತು ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
  ಉದ್ಯವಿು , ಒಕ್ಕೂಟದ ಪೋಷಕರು ಥಾಣೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಮಾತನಾಡಿ,

  ಶೃದ್ಧೆ, ಕ್ಷಮತೆ, ಗೌರವವಿದ್ದಲ್ಲಿ ತನ್ನೆಡೆಗೆ ಪುರಸ್ಕಾರ, ಸನ್ಮಾನಗಳು ನಮ್ಮನ್ನು ಹುಡುಕಿ ಬರುತ್ತದೆ. ಐಕಳ ಅವರು ತನ್ನ ವ್ಯವಹಾರ ಬಿಟ್ಟು ತನ್ನ ಜೀವನವನ್ನೇ ಸೇವೆಯಾಗಿ ಮುಡಿಪಾಗಿಟ್ಟಿದ್ದಾರೆ.

  ಮುಂದಿನ ದಿನಗಳಲ್ಲಿ ಒಕ್ಕೂಟದ ಕಾರ್ಯಗಳಿಗೆ ತನ್ನಿಂದಾಗುವ ಸಹಾಯ ಮಾಡುವ ಭರವಸೆ ನೀಡಿದರು.
  ಫಲಾನುಭವಿಗಳಿಗೆ ಸಹಾಯಧನ ವಿತರಣೆ: ಒಕ್ಕೂಟದ ಸಮಾಜದ ಕಲ್ಯಾಣ ಯೋಜನೆಯಡಿಯಲ್ಲಿ ವೈದ್ಯಕೀಯ, ಹೆಣ್ಮಕ್ಕಳ ವಿವಾಹ ಸಹಾಯ, ವಸತಿ ಸಹಾಯಹಸ್ತ ಹಾಗೂ ಇನ್ನಿತರ ಆರ್ಥಿಕ ಕಷ್ಟದಲ್ಲಿರುವ ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಿಸಲಾಯಿತು.
  ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಸ್ವಾಗತಿಸಿದರು.

  ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕಾರ ಶೆಟ್ಟಿ ಪ್ರಸ್ತಾವಿಕ ಮಾತುಗಳ್ನಾಡಿದರು. ಶರತ್ ಶೆಟ್ಟಿ ನಿರೂಪಿಸಿದರು. ಸಿಂಧ್ಯಾ ಶೆಟ್ಟಿ ಪ್ರಾರ್ಥಿಸಿದರು. ಒಕ್ಕೂಟದ ಜೊತೆ ಕಾರ್ಯದರ್ಶಿ ಸಂಕಬೈಲ್ ಸತೀಶ್ ಅಡಪ ವಂದಿಸಿದರು.
  ಕಾರ್ಯಕ್ರಮದಲ್ಲಿ ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಲ್ಕೆಬೈಲ್, ಸುರತ್ಕಲ್, ಇರಾ, ಸಾಲೆತ್ತೂರು, ಕಂಕನಾಡಿ ಮತ್ತಿತರ ಬಂಟರ ಸಂಘಗಳ ಪ್ರಮುಖರು,

  ಸಹಾಯಧನ ಪಡೆಯಲು ಬಂದ ಫಲಾನುಭವಿಗಳು, ಒಕ್ಕೂಟದ ಸಿಬ್ಬಂದಿಗಳು ಉಪಸ್ಥಿತರಿದ್ದರು.

  LATEST NEWS

  ‘ಜೆಲ್ಲಿ ಮೀನು’ ಕುಟುಕಿ ಮೀನುಗಾರ ಸಾವು..!

  Published

  on

  ಕಾರವಾರ: ಇಲ್ಲಿನ ದೇವಬಾಗ್‌ನಲ್ಲಿ ಜೆಲ್ಲಿ ಮೀನು ಕಚ್ಚಿ ಮೀನುಗಾರ ಸಾವನಪ್ಪಿರುವ ಘಟನೆ ನಡೆದಿದೆ. ಮೀನುಗಳಲ್ಲಿ ಜೆಲ್ಲಿ ಮೀನು ನೋಡಲು ಬಲು ಸುಂದರ. ಹೆಚ್ಚಾಗಿ ಮೀನುಗಳು ಯಾರಿಗೂ ಹಾನಿಯುಂಟು ಮಾಡುವುದಿಲ್ಲ.  ಆದರೆ ಈ ಮೀನು ಅತ್ಯಂತ ವಿಷಕಾರಿಯಾಗಿದೆ. ಜೆಲ್ಲಿ ಮೀನು ಪ್ರತಿಯೊಂದನ್ನು ತನ್ನ ಕಾಲಿನ ಮೂಲಕ ಗ್ರಹಿಸುತ್ತದೆ. ಅದರ ಮೂಲಕವೇ ಶತ್ರುಗಳಿಗೆ ಕುಟುಕುತ್ತದೆ. ಈಗೇನಾದರೂ ಆದಲ್ಲಿ ಆ ವ್ಯಕ್ತಿ ಬದುಕುಳಿಯುವುದು ಬಹಳ ವಿರಳ.

  ಕಾರವಾರ ದೇವಬಾಗ್‌ನ ಸಮುದ್ರ ತೀರದಲ್ಲಿ ಮೀನುಗಾರನ ಬಲೆಯಲ್ಲಿ ಜೆಲ್ಲಿ ಮೀನು ಕಂಡುಬಂದಿದೆ. ಮೀನುಗಾರ ಕೃಷ್ಣ ಎಂಬಾತ ಮೀನನ್ನು ಬಲೆಯಿಂದ ಬಿಡಿಸಿ ಸಮುದ್ರಕ್ಕೆ ಬಿಟ್ಟಿದ್ದಾರೆ. ಇದಾದ ಕೆಲವೇ ಕೆಲವು ಸಮಯದಲ್ಲಿ ಕೃಷ್ಣರವರ ಕಣ್ಣು, ಮೈ ಉರಿಯಲು ಆರಂಭಿಸಿದೆ. ಭಯಭೀತರಾದ ಮೀನುಗಾರ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

  Read More..;  ಹಾವು ಕಚ್ಚಿದ್ದರೂ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯೆ..!

  ಏನಿದು ಜೆಲ್ಲಿ ಫಿಷ್?

  ಈ ಮೀನಿಗೆ ಕನ್ನಡದಲ್ಲಿ ಅಂಬಲಿ ಮೀನು, ಲೋಳೆ ಮೀನು ಎಂದೆಲ್ಲಾ ಕರೀತಾರೆ. ಸಮುದ್ರದಲ್ಲಿ ಆಮೆಗಳು ಮತ್ತು ದೊಡ್ಡ ಮೀನುಗಳು ಜೆಲ್ಲಿ ಮೀನುಗಳನ್ನು ತಿನ್ನುತ್ತವೆ. ಕರಾವಳಿಯಲ್ಲಿ ಅಪರೂಪದ ಹಾಗೂ ಬೃಹತ್ ಗಾತ್ರದ ಜೆಲ್ಲಿ ಫಿಶ್ ಸಮುದ್ರ ಸಂಶೋಧಕಿಯೊಬ್ಬರು ಸಂಶೋಧನೆ ನಡೆಸುವ ವೇಳೆ ಕಣ್ಣಿಗೆ ಬಿದ್ದಿದೆ. ಈ ಮೀನು ಸುಮಾರು 1.5ಮೀ. ಉದ್ದವಿದೆ.

  Continue Reading

  DAKSHINA KANNADA

  ಕೋಲ್ನಾಡು ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ : ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

  Published

  on

  ಮಂಗಳೂರು : ಕೋಲ್ನಾಡು ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಮಂಗಳವಾರ(ಜೂ.18) ಕೆಎಸ್ ರಾವ್ ನಗರದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.


  ಈ ಸಂದರ್ಭ ಸರ್ವೋತ್ತಮ ಅಂಚನ್, ಜಯಕೃಷ್ಣ ಕೋಟ್ಯಾನ್ ಹಳೆಯಂಗಡಿ, ಹಿಂದುಸ್ತಾನ್ ಪೆಟ್ರೋಲಿಯಂನ ರವಿ ಎಸ್ ಶೆಟ್ಟಿ, ಶಾಲೆಯ ಮುಖ್ಯೋಪಾಧ್ಯಾಯ ದಿನೇಶ್ ಕೆ, ಹಾಗೂ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

  ಇದನ್ನೂ ಓದಿ : ಯುವಕನ ಜೊತೆ ಓಡಿಹೋದ ತಾಯಿ..! ಅಮ್ಮಾ ಬಾರಮ್ಮ..ಎಂದು ಮಕ್ಕಳು ಅಂಗಲಾಚಿದ್ರೂ ಕ್ಯಾರೇ ಅನ್ನದ ತಾಯಿ..!!

  Continue Reading

  LATEST NEWS

  ವಯನಾಡಿನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ..!

  Published

  on

  ನವದೆಹಲಿ / ಮಂಗಳೂರು : ರಾಯ್‌ ಬರೇಲಿ ಹಾಗೂ ವಯನಾಡು ಎರಡೂ ಕಡೆಯಿಂದ ಗೆಲುವು ಸಾಧಿಸಿದ್ದ ರಾಹುಲ್ ಗಾಂಧಿ, ವಯನಾಡು ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಪ್ರಿಯಾಂಕಾ ಗಾಂಧಿ ವಯನಾಡಿನಲ್ಲಿ ಚುನಾವಣೆ ಸ್ಪರ್ಧಿಸುವುದು ಖಚಿತವಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ರಾಹುಲ್ ಗಾಂಧಿ ಮಾಹಿತಿ ನೀಡಿದ್ದಾರೆ.


  2019 ರ ಚುನಾವಣೆಯಲ್ಲಿ ರಾಹುಲ್‌ ಗಾಂಧಿಗೆ ಮರು ಜೀವ ನೀಡಿದ ಕ್ಷೇತ್ರ ವಯನಾಡು. ಅಮೇಠಿ ಹಾಗೂ ವಯನಾಡಿನಿಂದ ಸ್ಪರ್ಧೆ ಮಾಡಿದ್ದ ರಾಹುಲ್ ಗಾಂಧಿ ಅಮೇಠಿಯಲ್ಲಿ ಸೋಲು ಕಂಡಿದ್ದರು. ಬಿಜೆಪಿಯ ಸ್ಮೃತಿ ಇರಾನಿ ಗೆಲುವು ಸಾಧಿಸಿ ಸಚಿವೆ ಕೂಡಾ ಆಗಿದ್ದರು. 2024 ರ ಚುನಾವಣೆಯಲ್ಲಿ ಅಮೇಠಿಯಲ್ಲಿ ಗಾಂಧಿ ಕುಟುಂಬದ ಆಪ್ತ ಕಿಶೋರಿಲಾಲ್ ಶರ್ಮ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದಾರೆ.
  ರಾಯಬರೇಲಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ ಸ್ಪರ್ಧೆ ಮಾಡುತ್ತಿದ್ದು, ಈ ಬಾರಿ ಅವರು ರಾಜ್ಯಸಭೆಯಿಂದ ಸಂಸದರಾಗಿ ಕ್ಷೇತ್ರವನ್ನು ರಾಹುಲ್ ಗಾಂಧಿಗೆ ಬಿಟ್ಟುಕೊಟ್ಟಿದ್ದರು. ರಾಯಬರೇಲಿಯಲ್ಲಿ ರಾಹುಲ್‌ ಗಾಂಧಿ ನಾಲ್ಕು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಇನ್ನು ವಯನಾಡಿನಲ್ಲೂ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದರು. ಇದೀಗ ವಯನಾಡು ಕ್ಷೇತ್ರವನ್ನು ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿಗೆ ಬಿಟ್ಟುಕೊಟ್ಟಿದ್ದಾರೆ.


  ಈ ಎರಡೂ ಕ್ಷೇತ್ರಗಳ ಜನರ ಜೊತೆ ನನ್ನ ಉತ್ತಮ ಬಾಂಧವ್ಯವಿದ್ದು, ವಯನಾಡು ಕ್ಷೇತ್ರ ಬಿಟ್ಟಿರುವುದಕ್ಕೆ ತುಂಬಾ ಬೇಸರವಾಗಿದೆ. ಆದ್ರೆ, ನನ್ನ ಸಹೋದರಿ ಅಲ್ಲಿ ಗೆದ್ದು ಜನರ ಜೊತೆ ಇರಲಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

  ಇದನ್ನು ಓದಿ:ಪ್ರತಿಭಟನೆ ವೇಳೆ ಸುಸ್ತಾದ ಬಿಜೆಪಿಯ ಹಿರಿಯ ನಾಯಕ ಭಾನುಪ್ರಕಾಶ್ ನಿಧನ

  Continue Reading

  LATEST NEWS

  Trending