Monday, July 4, 2022

ಬಂಟ್ವಾಳ: ಪತ್ನಿಯ ಜೊತೆ ಅನೈತಿಕ ಸಂಬಂಧ ಶಂಕೆ- ಸಲಾಕೆಯಿಂದ ತಮ್ಮನನ್ನು ಬಡಿದು ಕೊಂದ ಅಣ್ಣ

ಬಂಟ್ವಾಳ: ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಅಣ್ಣನೋರ್ವ ತನ್ನ ತಮ್ಮನನ್ನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಪಾಣೆಮಂಗಳೂರು ಬೊಂಡಾಲ ಶಾಂತಿಗುಡ್ಡೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.


ಶಾಂತಿಗುಡ್ಡೆ ನಿವಾಸಿ ಸುಂದರ (30) ಕೊಲೆಯಾದ ವ್ಯಕ್ತಿ. ಅವರ ಅಣ್ಣ ರವಿ ಎಂಬಾತ ಕೊಲೆ ಆರೋಪಿಯಾಗಿದ್ದು, ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಸುಂದರ ಅವಿವಾಹಿತನಾಗಿದ್ದು ಮನೆಯಲ್ಲಿ ಒಬ್ಬನೇ ವಾಸವಾಗಿದ್ದ. ಆತನ ಮನೆಯ ಸಮೀಪದಲ್ಲಿ ಅಣ್ಣ ರವಿಯ ಮನೆಯಿದ್ದು ಅಲ್ಲಿಂದ ರವಿಯ ಹೆಂಡತಿ ಊಟ ತಿಂಡಿ‌ ನೀಡುತ್ತಿದ್ದರು ಎನ್ನಲಾಗಿದೆ. ತನ್ನ ಹೆಂಡತಿ ಜೊತೆ ಅನೈತಿಕ‌ ಸಂಬಂಧವಿದೆ ಎಂದು ಶಂಕಿಸಿ ರವಿ ಪದೇ ಪದೇ ಸುಂದರನೊಂದಿಗೆ ಜಗಳ ಮಾಡುತ್ತಾ ಇದ್ದ ಎನ್ನಲಾಗಿದೆ. ಶುಕ್ರವಾರ ತಡರಾತ್ರಿಯೂ ಅವರ ಮಧ್ಯೆ ಜಗಳ ನಡೆದಿದ್ದು ಸುಂದರನ ಬೊಬ್ಬೆ ಕೇಳಿ ಅಲ್ಲೇ ಸಮೀಪದಲ್ಲಿ ವಾಸವಿರುವ ಮತ್ತೋರ್ವ ಅಣ್ಣ ರಮೇಶ ಬಂದು ನೋಡಿದಾಗ ರವಿಯು ಸುಂದರನಿಗೆ ಸಲಾಕೆಯಿಂದ ತಲೆಗೆ ಹೊಡೆದಿದ್ದು ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆರೈಕೆ ಮಾಡುತ್ತಿದ್ದಂತೆ ಕೊನೆಯುಸಿರು ಎಳೆದಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಬಳಿಕ ಆರೋಪಿ ರವಿ ಓಡಿ ತಲೆ ಮೆರೆಸಿಕೊಂಡಿದ್ದಾನೆ. ಬಂಟ್ವಾಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

“ಮದರಸ ಬಗ್ಗೆ ಹೇಳಿಕೆಯನ್ನು ಉದುರುವಾಗ ನಾಲಗೆ ಹದ್ದು ಬಸ್ತಿನಲ್ಲಿ ಇಟ್ಟು ಮಾತನಾಡುವುದು ಒಳಿತು”

ಮಂಗಳೂರು: ಪ್ರವಾದಿ ನಿಂದನೆಗೈದ ನೂಪುರ್ ಶರ್ಮಾ ರನ್ನು ಬೆಂಬಲಿಸಿ ಹೇಳಿಕೆ ನೀಡಿದ ಕನ್ನಯ್ಯ ಲಾಲ್ ನನ್ನು ಇತ್ತೀಚೆಗೆ ರಾಜಸ್ತಾನದ ಉದಯಪುರದಲ್ಲಿ ಹತ್ಯೆ ಮಾಡಿದ ಆರೋಪಿಗಳು ಸ್ಥಳೀಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯರು ಆಗಿದ್ದು,ಅಂತಹ...

ವಿಟ್ಲ: ಬಕ್ರೀದ್ ಹಬ್ಬ ಹಿನ್ನೆಲೆ ಜಿಲ್ಲಾ ಗಡಿಪ್ರದೇಶದಲ್ಲಿ ಬಂದೋಬಸ್ತ್‌

ವಿಟ್ಲ: ಬಕ್ರೀದ್ ಹಬ್ಬದ ಪ್ರಯುಕ್ತ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೊಡಂಗೆ ಚೆಕ್ ಪೋಸ್ಟ್‌ನಲ್ಲಿ ದಿನದ 24 ಗಂಟೆಯು ಸಿಬ್ಬಂದಿಗಳು ಇರಲಿದ್ದು, ವಾಹನ ತಪಾಸಣೆ ನಡೆಯಲಿದೆ...

ಡಿಸಿಪಿ ಹರಿರಾಂ ಶಂಕರ್‌ಗೆ ಮಂಗಳೂರು ನಗರ ಪೊಲೀಸರ ಹೃದಯಸ್ಪರ್ಶಿ ಬೀಳ್ಕೊಡುಗೆ

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನಿಂದ ಹಾಸನ ಜಿಲ್ಲೆಗೆ ಎಸ್ಪಿಯಾಗಿ ವರ್ಗಾವಣೆಗೊಂಡ ಡಿಸಿಪಿ ಹರಿರಾಂ ಶಂಕರ್‌ ಅವರನ್ನು ಇಂದು ಮಂಗಳೂರು ನಗರ ಪೊಲೀಸರು ಬೀಳ್ಕೊಟ್ಟರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಹರಿರಾಂ ಶಂಕರ್‌, ಮಂಗಳೂರಿನಲ್ಲಿ ವಿವಿಧ...