Connect with us

    LATEST NEWS

    ಮಂಗಳೂರು: ತೋಟಬೆಂಗ್ರೆಯಲ್ಲಿ ಅಕ್ರಮ ಮರಳು ಸಾಗಾಟ; ಸ್ಥಳೀಯರಿಂದ ದೂರು

    Published

    on

    ಮಂಗಳೂರು: ನಗರದ ಹೊರವಲಯದ ಬೆಂಗ್ರೆಯಲ್ಲಿ ಸರ್ಕಾರಿ ಜಾಗದಿಂದ ಅಕ್ರಮವಾಗಿ ಮರಳನ್ನು ತೆಗೆದು ಸಾಗಾಟ ಮಾಡಲಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

    ತೋಟಬೆಂಗ್ರೆ ಹಿಂದೂ ರುದ್ರಭೂಮಿಯ ಸಮೀಪ ಸುಮಾರು 6 ಎಕರೆ ಮೀನುಗಾರಿಕಾ ಇಲಾಖೆಗೆ ಬಂದರು ಇಲಾಖೆಯಿಂದ ಹಸ್ತಾಂತರಿಸಲಾಗಿದೆ. ಜೆಟ್ಟಿ ನಿರ್ಮಾಣ ಮಾಡುವ ಉದ್ದೇಶದಿಂದ ಇದನ್ನು ನೀಡಲಾಗಿದ್ದು, ಬಾಕಿ ಉಳಿದ ಜಾಗದಲ್ಲಿ ಹಾಗೆಯೇ ಎಷ್ಟೋ ವರ್ಷಗಳಿಂದ ಮರಳು ಇದೆ. ಅದನ್ನು ತೆರವು ಮಾಡುವಂತಿಲ್ಲ. ಆದರೆ 3-4 ತಿಂಗಳ ಹಿಂದಿನಿಂದಲೇ ಇಲ್ಲಿಂದ ಯಾರೋ ಕೆಲವರು ರಾತ್ರಿ ಹೊತ್ತು ಜೆಸಿಬಿ ಹಾಗೂ ಟಿಪ್ಪರ್ ಬಳಸಿ ಮರಳು ಕೊಂಡೊಯ್ಯುದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

    ಈ ರೀತಿ ಮರಳು ತೆಗೆದ ಕಾರಣ ಸಮತಟ್ಟಾಗಿರುವ ಜಾಗದಲ್ಲಿ 5-6 ಅಡಿ ಆಳದ ಹೊಂಡಗಳು ನಿರ್ಮಾಣವಾಗಿದ್ದು, ಇವು ಅಪಾಯಕಾರಿಯಾಗಿದೆ ಎಂದು ಸ್ಥಳೀಯರು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಿಆರ್‌ಝಡ್ ಇಲಾಖೆಗೆ ಮೌಖಿಕ ದೂರು ನೀಡಿದ್ದಾರೆ. ಇನ್ನು ಈ ದೂರಿಗೆ ಪ್ರತಿಕ್ರಿಯಿಸಿದ ಗಣಿ ಇಲಾಖೆ ಹಿರಿಯ ಜಿಯೊಲಜಿಸ್ಟ್ ಮೌಖಿಕವಾಗಿ ದೂರು ಕೊಟ್ಟು ತಕ್ಷಣ ಬರಬೇಕೆಂದರೆ ಕಷ್ಟ. ನಾವು ಬೇರೆ ಕೆಲಸದಲ್ಲಿರುತ್ತೇವೆ. ಆದರೆ ಲಿಖಿತವಾಗಿ ದೂರು ನೀಡಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ.

    LATEST NEWS

    ಮಹಿಳೆಯರೇ ಗಮನಿಸಿ: ನೀವು ಮನೆಯಲ್ಲಿ ಎಷ್ಟು `ಚಿನ್ನ’ ಇಟ್ಟುಕೊಳ್ಳಬಹುದು ಗೊತ್ತಾ?

    Published

    on

    ನವದೆಹಲಿ: ಭಾರತದಲ್ಲಿ ಚಿನ್ನವು ಆಭರಣ ರೂಪದಲ್ಲಿ ಮಾತ್ರವಲ್ಲದೆ ಹೂಡಿಕೆಯಲ್ಲೂ ಮುಂದಿದೆ. ಇದರೊಂದಿಗೆ ಬೇರೆ ದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಚಿನ್ನದ ಬಳಕೆ ಕೂಡ ಹೆಚ್ಚಿದ್ದು, ಮದುವೆ ಸಮಾರಂಭ ಅಥವಾ ಹಬ್ಬ ಹರಿದಿನಗಳಲ್ಲಿ ಆಭರಣ ಶೋರೂಂಗಳು ಕಿಕ್ಕಿರಿದು ತುಂಬಿರುತ್ತವೆ. ಇದೆಲ್ಲದರ ನಡುವೆ ವಿವಾಹಿತ ಮಹಿಳೆ ಭಾರತದಲ್ಲಿ ತನ್ನ ಬಳಿ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯೇ?

    ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಇದಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ನಿಗದಿಪಡಿಸಿದೆ, ಅದರ ಅಡಿಯಲ್ಲಿ ಹೆಚ್ಚುವರಿ ಚಿನ್ನವನ್ನು ಇರಿಸಿಕೊಳ್ಳಲು ತೆರಿಗೆ ವಿಧಿಸಲಾಗುತ್ತದೆ. ನಿಯಮಗಳ ಪ್ರಕಾರ, ದೇಶದಲ್ಲಿ ವಿವಾಹಿತ ಮಹಿಳೆ 500 ಗ್ರಾಂ ಚಿನ್ನಾಭರಣವನ್ನು ಇಟ್ಟುಕೊಳ್ಳಬಹುದು. ನಾವು ಅವಿವಾಹಿತ ಹುಡುಗಿಯರ ಬಗ್ಗೆ ಮಾತನಾಡಿದರೆ, ಮದುವೆಯಾಗದ ಹುಡುಗಿಯರು ತಮ್ಮೊಂದಿಗೆ 250 ಗ್ರಾಂ ಚಿನ್ನ ಅಥವಾ ಚಿನ್ನದ ಆಭರಣಗಳನ್ನು ಇಟ್ಟುಕೊಳ್ಳಬಹುದು.

    ಆದಾಯ ತೆರಿಗೆ ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿ 100 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದು. ಅವನು ಮದುವೆಯಾಗಿರಲಿ ಅಥವಾ ಅವಿವಾಹಿತನಾಗಿರಲಿ. ನಿಮ್ಮ ಬಳಿ ಇದಕ್ಕಿಂತ ಹೆಚ್ಚು ಚಿನ್ನ ಇರುವುದು ಕಂಡುಬಂದಲ್ಲಿ ಹೆಚ್ಚುವರಿ ಚಿನ್ನದ ಮೇಲೆ ತೆರಿಗೆ ಅನ್ವಯವಾಗುತ್ತದೆ. ನೀವು ಚಿನ್ನವನ್ನು ಆನುವಂಶಿಕವಾಗಿ ಪಡೆದರೆ ಅದು ತೆರಿಗೆ ಮುಕ್ತವಾಗಿರುತ್ತದೆ, ಆದರೆ ನೀವು ಅದನ್ನು ಮಾರಾಟ ಮಾಡಿದರೆ ಅದರ ಮೇಲೆ ತೆರಿಗೆ ಅನ್ವಯಿಸುತ್ತದೆ ಎಂಬುದನ್ನು ಇಲ್ಲಿ ನೆನಪಿನಲ್ಲಿಡಿ. ಆದಾಗ್ಯೂ, ಇದಕ್ಕಾಗಿ ನೀವು ಕಾನೂನು ಉಯಿಲು ಅಥವಾ ಇತರ ಪುರಾವೆಗಳನ್ನು ಒದಗಿಸಬೇಕಾಗುತ್ತದೆ, ಇಲ್ಲದಿದ್ದರೆ ಅದು ಶಿಕ್ಷೆಯ ವರ್ಗಕ್ಕೆ ಬರುತ್ತದೆ.

    Continue Reading

    LATEST NEWS

    ಬಂಪರ್ ಆಫರ್ – ಫ್ಲೈಟ್ ಟಿಕೇಟ್ ಫ್ರೀ ಫ್ರೀ….

    Published

    on

    ಮಂಗಳೂರು: ಪ್ರಪಂಚದ ಸುಂದರ ದೇಶವಾಗಿರುವ ಜಪಾನ್‌ ದೇಶಕ್ಕೆ ಪ್ರವಾಸ ಹೋಗಬೇಕೆಂಬುದುವುದು ಹಲವರ ಕನಸು. ಯಾರಾದರೂ ಈಗ ಜಪಾನ್‌ಗೆ ಹೋಗುವ ಪ್ಲಾನ್ ಹಾಕಿದ್ರೆ, ಅವರಿಗೆ ಇಲ್ಲಿದೆ ಗುಡ್ ನ್ಯೂಸ್…


    ಜಪಾನ್‌ ಏರ್‌ಲೈನ್ಸ್‌ನವರು ದೇಶಕ್ಕೆ ಭೇಟಿ ನೀಡಲು ಬಯಸುವವರಿಗೆ ಫ್ರೀ ಫ್ಲೈಟ್‌ ಟಿಕೆಟ್‌ ನೀಡಿದ್ದಾರೆ. ಇನ್ನೂ ಮುನ್ನೆಲೆಗೆ ಬಂದಿರದ ಆಫ್‌ ಬೀಟ್‌ ಪ್ರವಾಸಿ ಸ್ಥಳಗಳ ಉತ್ತೇಜನಕ್ಕಾಗಿ ಒಂದಷ್ಟು ದೇಶಗಳ ಪ್ರವಾಸಿಗರಿಗೆ ಬಂಪರ್‌ ಈ ಆಫರ್‌ ನೀಡಿದ್ದು, ಇದರಲ್ಲಿ ಭಾರತೀಯ ಪ್ರವಾಸಿಗರೂ ಕೂಡಾ ಅವಕಾಶವನ್ನು ಪಡೆದುಕೊಂಡಿದ್ದಾರೆ. ಈ ಕಾನೂನಿನನ್ವಯ ಜಪಾನ್‌ಗೆ ಹೋಗುವ ಭಾರತೀಯರಿಗೆ ವಿಮಾನದಲ್ಲಿ ಉಚಿತ ಪ್ರಯಾಣ ಮಾಡುವ ಅವಕಾಶವಿದೆ.
    ಈ ಉಪಕ್ರಮವನ್ನು ಸೆಪ್ಟೆಂಬರ್‌ ತಿಂಗಳಿನಿಂದಲೇ ಪ್ರಾರಂಭಿಸಲಾಗಿದೆ. ಭಾರತ, ಅಮೇರಿಕಾ, ಕೆನಡಾ, ಮೆಕ್ಸಿಕೋ, ಥೈಲ್ಯಾಂಡ್‌, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ವಿಯೆಟ್ನಾಂ, ಫಿಲಿಪೈನ್‌, ಇಂಡೋನೇಷ್ಯಾ, ಚೀನಾ ಮತ್ತು ತೈವಾನ್‌ ದೇಶದ ಜನರಿಗೆ ಈ ಭರ್ಜರಿ ಆಫರ್‌ ಅನ್ನು ನೀಡಿದೆ. ಭಾರತ ಸೇರಿದಂತೆ ಈ ಕೆಲ ದೇಶಗಳ ಜನರು ಜಪಾನ್‌ಗೆ ಪ್ರವಾಸ ಹೋಗಲು ಬಯಸಿದರೆ ಅವರಿಗೆ ಜಪಾನ್‌ ಏರ್‌ಲೈನ್ಸ್‌ ಫ್ರೀ ಟಿಕೆಟ್‌ ನೀಡಲಿದೆ.
    ಉಚಿತ ಟಿಕೆಟ್‌ಗಳನ್ನು ಪಡೆಯಲು, ಪ್ರವಾಸಿಗರು ಜಪಾನ್‌ ಏರ್‌ಲೈನ್ಸ್‌ನೊಂದಿಗೆ ಅಂತರಾಷ್ಟ್ರೀಯ ರೌಂಡ್‌-ಟ್ರಿಪ್‌ ಟಿಕೆಟ್‌ಗಳನ್ನು ಬುಕ್‌ ಮಾಡಬೇಕಾಗುತ್ತದೆ. ಅದೇ ಟಿಕೆಟ್‌ ಖರೀದಿಯ ಸಮಯದಲ್ಲಿ ಆಫರ್‌ನಲ್ಲಿ ದೇಶೀಯ ವಿಮಾನವನ್ನು ಸಹ ಕಾಯ್ದಿರಿಸಬೇಕು. ಈ ಒಂದು ಆಫರ್‌ ಯಾವಾಗ ಲಾಸ್ಟ್ ಎಂಬುದನ್ನು ಇನ್ನೂ ನಿಗದಿಪಡಿಸಲಾಗಿಲ್ಲ ಎಂದು ಜಪಾನ್‌ ಏರ್‌ಲೈನ್ಸ್‌ನ ವಕ್ತಾರರು ಹೇಳಿದ್ದಾರೆ
    ಕ್ಯರೇಟೆಡ್‌ ಕ್ಯೋಟೋ ಎಂಬ ಟ್ರಾವೆಲ್‌ ಏಜೆನ್ಸಿಯ ಸ್ಥಾಪಕರಾದ ಸಾರಾ ಐಕೊ, “ರಾಜಧಾನಿಯಲ್ಲಿನ ಪ್ರವಾಸೋದ್ಯಮವನ್ನು ಕಡಿಮೆ ಮಾಡಿ ನಮ್ಮ ದೇಶದ ಆಫ್‌ ಬೀಟ್‌ ಸ್ಥಳಗಳ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಉಪಕ್ರಮವನ್ನು ಜಾರಿಗೆ ತರಲಾಗಿದೆ” ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ.
    ಪ್ರವಾಸೋದ್ಯಮವನ್ನು ಉತ್ತೇಜಿಸಲು ಇದು ತುಂಬಾನೇ ಉತ್ತಮ ಉಪಕ್ರಮ ಆದರೆ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆಯೋ ಗೊತ್ತಿಲ್ಲ. ಯಾಕಂದ್ರೆ ಆಫ್‌ ಬೀಟ್‌ ಸ್ಥಳಗಳೊಂದಿಗೆ ಹೀಗೆ ಬರುವ ಪ್ರವಾಸಿಗರು ಪ್ರಮುಖ ನಗರಗಳಿಗೂ ಭೇಟಿ ನೀಡುವ ಸಾಧ್ಯತೆ ಇರುತ್ತದೆ. ಇದರಿಂದ ನಗರಗಳಲ್ಲಿ ಜನಜಂಗುಳಿಯೇ ತುಂಬಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    Continue Reading

    LATEST NEWS

    ಮೈಸೂರು ದಸರಾ ಮಹೋತ್ಸವ: ನಂದಿ ಧ್ವಜಕ್ಕೆ ಸಿಎಂ ಸಿದ್ಧರಾಮಯ್ಯ ಪೂಜೆ ಸಲ್ಲಿಕೆ, ಜಂಬೂಸವಾರಿ ಮೆರವಣಿಗೆಗೆ ಚಾಲನೆ

    Published

    on

    ಮೈಸೂರು: ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳಲಿದೆ. ಇದಕ್ಕೂ ಮುನ್ನಾ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ಮೂಲಕ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.

    ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಮೈಸೂರಲ್ಲಿ ಕಳೆಗಟ್ಟಿದೆ. ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಮಧ್ಯಾಹ್ನ 1:55ರ ಸುಮಾರಿಗೆ ನಡೆದ ನಂದಿ ಧ್ವಜಕ್ಕೆ ಸಿಎಂ ಸಿದ್ಧರಾಮಯ್ಯ ಅವರು ಪೂಜೆ ನೆರವೇರಿಸಿದರು. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದಂತೆ ಆಗಿದೆ.

    ಸಿಎಂ ಸಿದ್ದರಾಮಯ್ಯಗೆ ಸಾತ್ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಮಹದೇವಪ್ಪ, ಶಿವರಾಜ ತಂಗಡಗಿ, ಲಕ್ಷ್ಮಿ ಹೆಬ್ಬಾಳ್ಕರ್ ಹಾಗು ಕೆಲ ಶಾಸಕರು.
    ಪೂಜೆ ಸಲ್ಲಿಸಿದ ಬಳಿಕ ಮಾತನಾಡಿ ನಾಡಿನ ಜನತೆಗೆ ಶುಭಾಶಯವನ್ನು ಸಿಎಂ ಸಿದ್ಧರಾಮಯ್ಯ ಕೋರಿದರು.

    Continue Reading

    LATEST NEWS

    Trending