ಕಾಸರಗೋಡು: ಅಕ್ರಮ ಕೋವಿಗಳ ಸಹಿತ ಓರ್ವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಚೀಮೇನ ಚೇಟುಕಂಡುವಿನ ಕೆ.ವಿ.ವಿಜಯನ್ ಬಂಧಿತ ಆರೋಪಿ. ಇನ್ನಿಬ್ಬರು ಪರಾರಿಯಾಗಿದ್ದಾರೆ.
ಬಂಧಿತನಿಂದ 9 ಕೋವಿ, ಸಜೀವ ಮದ್ದುಗುಂಡು ಹಾಗೂ ವಾಹನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬೇಟೆಗೆ ಈ ಕೋವಿಗಳನ್ನು ಬಳಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.