Connect with us

    LATEST NEWS

    ಪತ್ನಿ ಸುಳ್ಳು ಹೇಳಿದರೆ ಪತಿ ವಿಚ್ಛೇದನ ನೀಡಬಹುದು: ಹೈಕೋರ್ಟ್

    Published

    on

    ಚಂಡೀಗಢ: ಪತಿ  ಹಾಗೂ ಆತನ ಕುಟುಂಬದ ವಿರುದ್ಧ ಪತ್ನಿಯ ದೂರು ವಿಚಾರಣೆ ವೇಳೆ ಪತಿ ವಿಚ್ಛೇದನ ನೀಡಬಹುದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ.

    ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್​​ನಲ್ಲಿ ವಿಚಾರಣೆಗೆ ಬಂದ ಕ್ರಿಮಿನಲ್ ದೂರೊಂದು ಆಧಾರರಹಿತ ಮತ್ತು ಸುಳ್ಳಿನಿಂದ ಕೂಡಿದ್ದು,

    ಪತಿ ಮತ್ತು ಆತನ ಕುಟುಂಬಕ್ಕೆ ಕಿರುಕುಳ ಮತ್ತು ಹಿಂಸೆಯನ್ನು ಉಂಟುಮಾಡುತ್ತದೆ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ.
    ಪ್ರಕರಣದಲ್ಲಿ ವಿಚ್ಛೇದನದ ವಿರುದ್ಧ ಪತ್ನಿ ಸಲ್ಲಿಸಿದ ಮನವಿಯನ್ನು ಕೋರ್ಟ್​ ವಜಾಗೊಳಿಸಿತು. ಮದುವೆಯಾದ ಮೂರು ತಿಂಗಳಲ್ಲೇ ಪತ್ನಿಯು ತನ್ನ ಪತಿ ಮತ್ತು ಆತನ ಕುಟುಂಬದ ಸದಸ್ಯರ ವಿರುದ್ಧ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಅವೆಲ್ಲವೂ ಸುಳ್ಳು ಎಂದು ಕಂಡುಬಂದಿದೆ. ಹೀಗಾಗಿ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲು ಸೂಕ್ತವಲ್ಲ. ನ್ಯಾಯಾಲಯವು, ಈ ಎಲ್ಲ ಸಂಗತಿಗಳನ್ನು ಪರಿಶೀಲಿಸಿದ ನಂತರ,

    ಮೇಲ್ಮನವಿ ಸಲ್ಲಿಸಿದ ಪತ್ನಿಯ ವರ್ತನೆ ಮತ್ತು ನಡವಳಿಕೆಯು ಗಂಡನನ್ನು ಮಾನಸಿಕ ಹಿಂಸೆಗೆ ದೂಡಿದೆ ಎಂದು ಹೇಳಿದೆ.
    2012 ರಲ್ಲಿ ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ಒಂದು ವಿವಾಹ ನೆರವೇರಿತ್ತು.

    ಪತಿಯ ಪ್ರಕಾರ, ಪತ್ನಿ ಜಗಳಗಂಟಿ ಸ್ವಭಾವದವಳು. ಹಳ್ಳಿಯಲ್ಲಿರುವ ತನ್ನ ಗಂಡನ ಅವಿಭಕ್ತ ಕುಟುಂಬದಲ್ಲಿ ವಾಸಿಸಲು ಆಕೆಗೆ ಇಷ್ಟವಿರಲಿಲ್ಲ.

    ಮತ್ತು ಹೆತ್ತವರಿಂದ ದೂರವಾಗಿ ರೋಹ್ಟಕ್‌ನಲ್ಲಿ ಬೇರೆ ಮನೆ ಖರೀದಿಸುವಂತೆ ಒತ್ತಡ ಹೇರಲು ಆರಂಭಿಸಿದಳು.

    ಗಂಡ ಪ್ರತ್ಯೇಕವಾಗಿ ವಾಸಿಸಲು ನಿರಾಕರಿಸಿದಾಗ, ಹೆಂಡತಿ ಕೋಪಗೊಂಡು, ಪತಿಯ ಕುಟುಂಬ ಸದಸ್ಯರನ್ನು ಸುಳ್ಳು ವರದಕ್ಷಿಣೆ ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದಳು.

    ಕೊನೆಗೆ ಪತಿಯ ಮನೆಯವರು ರೋಹ್ಟಕ್‌ನಲ್ಲಿ ಈ ದಂಪತಿಗೆ ಬಾಡಿಗೆ ಮನೆ ವ್ಯವಸ್ಥೆ ಮಾಡಿದರು. ಇದರಿಂದ ದಂಪತಿ ಜಗಳ ದೂರವಾಗಿ ಆಕೆ ಸಂತೋಷದಿಂದ ಇರುತ್ತಾಳೆ ಎಂದುಕೊಂಡರು.

    ಆದರೆ ಪತಿಯ ಕುಟುಂಬ ಸದಸ್ಯರು ಪದೇ ಪದೆ ಮನೆಗೆ ಬರಲು ಆರಂಭಿಸಿದ್ದರಿಂದ ಪತ್ನಿ ಮತ್ತೆ ಕೋಪಗೊಂಡಳು ಮತ್ತು ಪತಿಯ ಕುಟುಂಬಸ್ಥರನ್ನು ನಿಂದಿಸಲು ಶುರು ಮಾಡಿದಳು. ಪೊಲೀಸರಿಗೆ ದೂರಿನ ಮೇಲೆ ದೂರು ನೀಡಿದಳು.

    ತನ್ನ ಕುಟುಂಬದ ಪುರುಷ ಸದಸ್ಯರನ್ನು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಿದರು. ಆದರೆ ಎಲ್ಲಾ ದೂರುಗಳು ಸುಳ್ಳು ಮತ್ತು ಆಧಾರರಹಿತ ಎಂದು ಸಾಬೀತಾಗಿದ್ದು,​ ಪತ್ನಿ ಸುಳ್ಳು ದೂರು ನೀಡಿದರೆ, ಗಂಡ ವಿಚ್ಛೇದನ ಪಡೆಯಬಹುದು ಎಂದು ನ್ಯಾಯಾಲಯ ತೀರ್ಪು ನೀಡಿದೆ.

    BIG BOSS

    ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜು ಆಡಳಿತ !

    Published

    on

    ಮಂಗಳೂರು/ಬೆಂಗಳೂರು: ‘ಕನ್ನಡದ ಬಿಗ್ ಬಾಸ್ ಸೀಸನ್ 11’ ಈಗ, 9ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರದ ಹೊಸ ಟಾಸ್ಕ್ ಗೆ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ. ಅದುವೇ ಬಿಗ್ ಬಾಸ್ ಸಾಮ್ರಾಜ್ಯ. ಈ ಸಾಮ್ರಾಜ್ಯದಲ್ಲಿ ಉಗ್ರಂ ಮಂಜು ಅವತಾರಕ್ಕೆ, ಇನ್ನುಳಿದ ಸ್ಪರ್ಧಿಗಳು ಸುಸ್ತಾಗಿದ್ದಾರೆ.


    ಮಹಾರಾಜನಾಗಿರುವ ಉಗ್ರಂ ಮಂಜು ಆಸ್ಥಾನದಲ್ಲಿ, ಪ್ರಜೆಗಳೆಲ್ಲರೂ ಕಕ್ಕಾಬಿಕ್ಕಿಯಾಗಿದ್ದಾರೆ. ಈ ವಾರ ಮಂಜು ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈಗಾಗೀ ಮಹಾರಾಜನಾಗಿ ಮೆರೆಯುವ ಅವಕಾಶ ಸಿಕ್ಕಿದೆ. ಮಂಜು ಅವರ ಸಾಮ್ರಾಜ್ಯದಲ್ಲಿ ತಪ್ಪು ಮಾಡಿದವರಿಗೆ ಸರಿಯಾದ ಶಿಕ್ಷೆಯನ್ನು ನೀಡುತ್ತಿದ್ದಾರೆ.

    ಇದನ್ನೂ ಓದಿ: ಮಹಿಳೆಯರಿಗೆ ಮಾತ್ರ ಎಂಟ್ರಿ ; ಪುರುಷರು ಈ ಪಬ್‌ಗೆ ಬರುವಂತಿಲ್ಲ  !! 
    ಇನ್ನೂ ದೊಡ್ಮನೆಯಲ್ಲಿ ಯಾವಾಗಲೂ ಸೌಂಡ್ ಮಾಡುತ್ತಿದ್ದ ಚೈತ್ರಾ ಅವರ ಬಾಯಿಗೆ ಆಲೂಗಡ್ಡೆ ತುರುಕುವಂತೆ ಮಹಾರಾಜರು ಆದೇಶಿಸಿದ್ದಾರೆ. ಮಹಾರಾಜರ ಅಪ್ಪನೆಯಂತೆ ಬಾಯಲ್ಲಿ ಆಲೂಗಡ್ಡೆ ಇಟ್ಟುಕೊಂಡಿದ್ದ ಚೈತ್ರಾ ಕೆಲಹೊತ್ತು ಸುಮ್ಮನೆ ಕೂತಿದ್ದರು. ನಂತರ ಇದನ್ನು ನಾನು ಖಂಡಿಸುತ್ತೇನೆ ಎಂದು ಸೌಂಡ್ ಮಾಡೋಕೆ ಪ್ರಾರಂಭಿಸಿದರು.
    ಒಟ್ಟಿನಲ್ಲಿ ಮಂಜು ಅವರ ಆಡಳಿತಕ್ಕೆ ಪ್ರಜೆಗಳು ಉಸಿರಾಡುವುದಕ್ಕೂ ಭಯ ಪಡುತ್ತಿದ್ದಾರೆ. ಅಷ್ಟಕ್ಕೂ ಮಂಜು ಆಡಳಿತ ಇಂದಿನ ಸಂಚಿಕೆಯಲ್ಲಿ ನೋಡಬಹುದು.

    Continue Reading

    DAKSHINA KANNADA

    ಸಿದ್ಧಕಟ್ಟೆ ಕೊಡಂಗೆ ‘ವೀರ – ವಿಕ್ರಮ’ ಜೋಡುಕರೆ ಕಂಬಳ; 166 ಜೊತೆ ಕೋಣಗಳು ಭಾಗಿ

    Published

    on

    ಮಂಗಳೂರು : ಈ ವರ್ಷದ ಕಂಬಳ ಸೀಸನ್ ನ ಮೊದಲ ಕಂಬಳ ನವೆಂಬರ್‌ 22 ಮತ್ತು 23  ರಂದು ಸಿದ್ದಕಟ್ಟೆಯಲ್ಲಿ ನಡೆಯಿತು. ಇದು ಎರಡನೇ ವರ್ಷದ ಸಿದ್ಧಕಟ್ಟೆ ಕೊಡಂಗೆ ‘ವೀರ – ವಿಕ್ರಮ’ ಜೋಡುಕರೆ ಕಂಬಳ ಆಗಿದ್ದು, ಬರೋಬ್ಬರಿ 166 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ 6 ಜೊತೆ, ಅಡ್ಡಹಲಗೆ 6 ಜೊತೆ, ಹಗ್ಗ ಹಿರಿಯ 15 ಜೊತೆ, ನೇಗಿಲು ಹಿರಿಯ 34 ಜೊತೆ, ಹಗ್ಗ ಕಿರಿಯ 27 ಜೊತೆ, ನೇಗಿಲು ಕಿರಿಯ 78 ಜೊತೆ ಕೋಣಗಳು ಪಾಲ್ಗೊಂಡಿದ್ದವು.

    ಪ್ರಶಸ್ತಿ ವಿವರ :

    ಕನೆಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿ ಪ್ರಥಮ, ವಾಮಂಜೂರು ತಿರುವೈಲು ಗುತ್ತು ಅಭಿಷೇಕ್ ನವೀನ್‌ ಚಂದ್ರ ಆಳ್ವ ದ್ವಿತೀಯ ಸ್ಥಾನ ಪಡೆದರು. ಅಡ್ಡ ಹಲಗೆ ವಿಭಾಗದಲ್ಲಿ ನಾರಾವಿ ಯುವರಾಜ್ ಜೈನ್ ಪ್ರಥಮ ಹಾಗೂ ಆಲದ ಪದವು ಮೇಗಿನ ಮನೆ ಅಜ್ಜಾಡಿ ಬಾಬು ರಾಜೇಂದ್ರ ಶೆಟ್ಟಿ ‘ಬಿ’ ಅವರು ದ್ವಿತೀಯ ಸ್ಥಾನಿಯಾದರು.

    ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ‘ಎ’ ಕೋಣಗಳು ಪ್ರಥಮ ಹಾಗೂ ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ ದ್ವಿತೀಯ ಸ್ಥಾನ ಪಡೆದರು. ಹಗ್ಗ ಕಿರಿಯ ವಿಭಾಗದಲ್ಲಿ ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ. ಶೆಟ್ಟಿ ಪ್ರಥಮ, ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ ‘ಎ’ ಕೋಣಗಳು ದ್ವಿತೀಯ  ಸ್ಥಾನ ಪಡೆದಿವೆ.

    ಇದನ್ನೂ ಓದಿ: WATCH : ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ರಕ್ಷಿಸಿದ ರೈಲ್ವೇ ಸಿಬ್ಬಂದಿ

    ನೇಗಿಲು ಹಿರಿಯ ವಿಭಾಗದಲ್ಲಿ ಹೊಸ್ಮಾರು ಸೂರ್ಯ ಶ್ರೀ ರತ್ನ ಸದಾಶಿವ ಶೆಟ್ಟಿ ಪ್ರಥಮ ಹಾಗೂ ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ ದ್ವಿತೀಯ ಸ್ಥಾನ ಗೆದ್ದಿದ್ದಾರೆ. ನೇಗಿಲು ಕಿರಿಯ ವಿಭಾಗದಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಪ್ರಥಮ ಹಾಗೂ ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ ‘ಎ’ ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ.

    Continue Reading

    LATEST NEWS

    ಬಾವಿಯ ಪೊಟರೆಯಲ್ಲಿ ಅವಿತು ಕುಳಿತುಕೊಂಡಿದ್ದ ಚಿರತೆ ಸೆರೆ

    Published

    on

    ಉಡುಪಿ : ಉಡುಪಿ ಜಿಲ್ಲೆಯ ಅರಣ್ಯದ ಅಂಚಿನ ಪ್ರದೇಶಗಳಲ್ಲಿ ಚಿರತೆಯ ಕಾಟ ಜೋರಾಗಿದೆ. ಆಹಾರ ಅರಸಿ ಬರುವ ಚಿರತೆಗಳು ಗ್ರಾಮಸ್ಥರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿವೆ.

    ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಎರ್ಮಂಜಪಲ್ಲ ಬಳಿಯ ಬಾಗಿ ಎನ್ನುವವರ ಮನೆಯ ಬಾವಿಗೆ ರಾತ್ರಿ ಚಿರತೆಯೊಂದು ಬಿದ್ದಿತ್ತು. ಬಾವಿಯ ಪೊಟರೆಯಲ್ಲಿ ಅವಿತು ಕುಳಿತುಕೊಂಡಿದ್ದ ಚಿರತೆಯನ್ನು ಮೇಲಕ್ಕೆ ಬರುವಂತೆ ಮಾಡಲು, ಅರಣ್ಯ ಇಲಾಖೆ ಹರ ಸಾಹಸ ಪಡುವಂತಾಯ್ತು.

    ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಬೋನಿನ ಮೂಲಕ ಚಿರತೆ  ಸೆರೆ ಹಿಡಿಯುವಲ್ಲಿ ಅರಣ್ಯ  ಇಲಾಖೆ  ಸಿಬ್ಬಂದಿ ಯಶಸ್ಸು ಕಂಡಿದ್ದಾರೆ. ಅರಣ್ಯ ಇಲಾಖೆಯ ಕಾರ್ಯ ದಕ್ಷತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

     

    Continue Reading

    LATEST NEWS

    Trending