Wednesday, October 5, 2022

ರಾಜ್ಯ, ಕೇಂದ್ರದಲ್ಲಿ ನೀವೇ ಅಧಿಕಾರದಲ್ಲಿದ್ದೀರಾ, ತಾಕತ್ತಿದ್ದರೆ SDPI,PFI ನಿಷೇಧಿಸಿ: ಹಿಂದೂ ಮಹಾಸಭಾ ಸವಾಲು

ಪುತ್ತೂರು: ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲದ ಸಂದರ್ಭ SDPI,PFI ನಿಷೇಧಿಸಿ ಎಂದಿದ್ದರು. ಇದೀಗ ಅಧಿಕಾರಕ್ಕೆ ಬಂದ ಬಳಿಕ ಈ ವಿಚಾರವನ್ನೇ ಮರೆತಿದ್ದಾರೆ. ಕೇಂದ್ರ ಹಾಗು ರಾಜ್ಯದಲ್ಲಿ ನೀವೇ ಅಧಿಕಾರದಲ್ಲಿ ಇದ್ದೀರಾ. ತಾಕತ್ತಿದ್ದರೆ ಎರಡೂ ಸಂಘಟನೆಗಳನ್ನು ನಿಷೇಧಿಸಿ ಎಂದು ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪುತ್ರನ್ ಸವಾಲು ಹಾಕಿದ್ದಾರೆ.


ಈ ಬಗ್ಗೆ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾವರ್ಕರ್ ಹಾಗೂ ನಾಥುರಾಮ್ ಗೋಡ್ಸೆಯನ್ನು ಒಪ್ಪದ ಬಿಜೆಪಿಯಿಂದ ಇದೀಗ ಪ್ರತಿಭಟನೆಯ ನಾಟಕ.

ಟಿಪ್ಪು ಜಯಂತಿಯನ್ನು ಆಚರಿಸಿದ ಬಿಜೆಪಿ ನಾಯಕರಿಂದ ಪುತ್ತೂರಿನ್ನಲ್ಲಾದ ಘಟನೆಯನ್ನು ಖಂಡಿಸುತ್ತಿದ್ದಾರೆ.

ಈ ಘಟನೆಯನ್ನು ಖಂಡಿಸಿ ಬಿಜೆಪಿ, ಸಂಘಪರಿವಾರ ಮಾಡುತ್ತಿರುವ ಪ್ರತಿಭಟನೆ ರಾಜಕೀಯ ಡೊಂಬರಾಟ ಎಂದು ಹೇಳಿದರು.
ಇಂಥ ನಾಚಿಕೆಗೇಡಿನ ವಿಚಾರ ಮತ್ತೊಂದಿಲ್ಲ. ಚುನಾವಣೆಯನ್ನು ಮುಂದಿಟ್ಟುಕೊಂಡು ಹಿಂದೂ ಸಮಾಜದ ಹಾದಿ ತಪ್ಪಿಸುವ ಹುನ್ನಾರ.

ಅಧಿಕಾರಕ್ಕಾಗಿ ಎಸ್‌ಡಿಪಿಐ ಪಕ್ಷದ‌ ಜೊತೆ ಹೊಂದಾಣಿಕೆ ಮಾಡಿದವರಿಂದ ಇದೀಗ ಪ್ರತಿಭಟನೆಯ ನಾಟಕ ನಡೆಯುತ್ತಿದೆ. ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲದ ಸಂದರ್ಭ SDPI,PFI ನಿಷೇಧಿಸಿ ಎಂದಿದ್ದರು.

ಇದೀಗ ಅಧಿಕಾರಕ್ಕೆ ಬಂದ ಬಳಿಕ ಈ ವಿಚಾರವನ್ನೇ ಮರೆತಿದ್ದಾರೆ. ಕೇಂದ್ರ ಹಾಗು ರಾಜ್ಯದಲ್ಲಿ ನೀವೇ ಅಧಿಕಾರದಲ್ಲಿ ಇದ್ದೀರಾ. ತಾಕತ್ತಿದ್ದರೆ ಎರಡೂ ಸಂಘಟನೆಗಳನ್ನು ನಿಷೇಧಿಸಿ. ರಾಜ್ಯದಲ್ಲಿ ನಡೆಯುವ ಮುಂದಿನ ಚುನಾವಣೆಯಲ್ಲಿ ಹಿಂದೂ ಮಹಾಸಭಾ ಸ್ಪರ್ಧಿಸಲಿದೆ.

ಬಿಜೆಪಿ ಮುಂದಿನ ದಿನಗಳಲ್ಲಿ ಠೇವಣಿ ಕಳೆದುಕೊಳ್ಳುವ ದಿನ ಎದುರಾಗಲಿದೆ ಎಂದು ವಾಗ್ದಾಳಿ ನಡೆಸಿದ ಅವರು ಹಿಂದೂ ರಾಷ್ಟ್ರ ನಿರ್ಮಾಣ ಹಿಂದೂ ಮಹಾಸಭಾದ ಉದ್ಧೇಶ ಎಂದು ಹೇಳಿದರು.

LEAVE A REPLY

Please enter your comment!
Please enter your name here

Hot Topics

ಎಲ್‌ಇಡಿ ಟಿ.ವಿ ಬ್ಲಾಸ್ಟ್‌..! : ಬಾಲಕ ಸಾವು-ಮನೆ ಗೋಡೆ ಕುಸಿತ

ಲಕ್ನೋ: ಎಲ್‌ಇಡಿ ಟಿ.ವಿ ಸ್ಪೋಟಗೊಂಡ ಪರಿಣಾಮ ಬಾಲಕನೊಬ್ಬ ಸಾವನಪ್ಪಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.ಮೃತ ಬಾಲಕನನ್ನು ಓಮೇಂದ್ರ (16) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಟಿವಿ ನೋಡುತ್ತಿದ್ದ ಸಂದರ್ಭ ಎಲ್ ಐಡಿ ಟಿವಿ...

ಅರಬ್‌ ನಾಡಲ್ಲಿ ನೂತನ ಹಿಂದೂ ದೇವಾಲಯ: ಉದ್ಘಾಟಿಸಿದ UAE ಸಚಿವ ಶೇಖ್ ನಹ್ಯಾನ್

ದುಬೈ(ಯುಎಇ): ಅರಬ್‌ ನಾಡಲ್ಲಿ ಮೊಟ್ಟ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದ್ದು, ನಿನ್ನೆ ಉದ್ಘಾಟನೆಗೊಂಡಿದೆ.ಯುಎಇಯ ಜೆಬೆಲ್‌ ಆಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಈ ಮೂಲಕ ಭಾರತೀಯರ ದಶಕದ ಕನಸು ಈಡೇರಿದೆ.ಯುಎಇಯ...

ಮಂಗಳೂರು: ಹೆಲಿಕಾಪ್ಟರ್‌ನಲ್ಲಿ ವೈಷ್ಣೋದೇವಿ ಮಂದಿರಕ್ಕೆ ಕರೆದೊಯ್ಯುವುದಾಗಿ 38 ಸಾವಿರ ರೂ. ವಂಚನೆ

ಮಂಗಳೂರು: ವೈಷ್ಣೋದೇವಿ ಮಂದಿರ ಯಾತ್ರೆಗೆ ಹೆಲಿಕಾಪ್ಟರ್ ಬುಕ್ಕಿಂಗ್ ಮಾಡುತ್ತೇನೆಂದು ನಂಬಿಸಿ ಮಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ರೂ.38 ಸಾವಿರ ವಂಚನೆಗೈದ ಬಗ್ಗೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಂಚನೆಗೊಳಗಾದ ವ್ಯಕ್ತಿ ಬೆಂಗಳೂರಿನಲ್ಲಿ IT consultant...