Thursday, August 11, 2022

‘ಒಂದು ಹಿಂದು ಹುಡುಗಿಯನ್ನು ಹಾರಿಸಿದ್ರೆ 10 ಮುಸ್ಲಿಂ ಹುಡುಗಿಯರನ್ನ ಹಾರಿಸಿಕೊಂಡು ಹೋಗಿ’

ಗದಗ: ಇನ್ನು ಮುಂದೆ ಒಂದು ಹಿಂದು ಹುಡುಗಿಯನ್ನು ಹಾರಿಸಿಕೊಂಡು ಹೋದರೆ ಹಿಂದು ಯುವಕರೇ ನೀವು 10 ಮುಸ್ಲಿಂ ಹುಡುಗಿಯನ್ನು ಹಾರಿಸಿಕೊಂಡು ಹೋಗಿ ಎಂದು ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶಿರಹಟ್ಟಿ ಪಟ್ಟಣದಲ್ಲಿ ಬಹಿರಂಗ ಸಮಾವೇಷದಲ್ಲಿ ಮಾತನಾಡಿದ ಇವರು ” ಇತ್ತೀಚೆಗೆ ಹಿಂದು ಯುವತಿಯರನ್ನು ಲವ್ ಜಿಹಾದ್ ಮಾಡಲಾಗುತ್ತಿದೆ.

 

ಹಿಂದೂ ಹೆಣ್ಣು ಮಕ್ಕಳಿಗೆ ಪ್ರೀತಿ ಪ್ರೇಮದ ಹೆಸರಿನಲ್ಲಿ ನಂಬಿಸಿ ವ್ಯವಸ್ಥಿತವಾಗಿ ವಂಚನೆ ಮಾಡಲಾಗುತ್ತಿದೆ. ಸಂಘರ್ಷಕ್ಕೆ ಎಡೆ ಮಾಡಿಕೊಡಬೇಡಿ,ನಿಮ್ಮ ಮಕ್ಕಳಿಗೆ ಬುದ್ಧಿ ಹೇಳಿ” ಅಂತ ಮುಸ್ಲಿಂ ಮುಖಂಡರಿಗೆ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.

ಈ ದೇಶವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಏಕೆಂದರೆ ಈ ಮಣ್ಣಿನ ಕಣ ಕಣದಲ್ಲಿಯೂ ಶಿವಾಜಿ ರಕ್ತ ಇದೆ’ ಎಂದು ಹೇಳಿದರು. ಅದೇ ರೀತಿ ಆಕ್ರೋಶಿತರಾಗಿ ಮಾತನಾಡಿದ ಅವರು ‘ಓವೈಸಿ ಒಬ್ಬ ನಾಯಿ, ನಿನ್ನಂತವರನ್ನು ಬಹಳ ಜನರನ್ನ ನೋಡಿದ್ದೀವಿ. ನಾವು 20 ಕೊಟಿ ಮುಸ್ಲಿಂರು 100 ಕೋಟಿ ಹಿಂದೂಗಳನ್ನು ನಾಶ ಮಾಡುತ್ತೇವೆ ಅಂತಾನೆ.

ಟಿಪ್ಪು ಸುಲ್ತಾನ, ಗೋರಿ, ಘಜನಿ, ಬಾಬಾರ್ ಗಳನ್ನ ಗೋರಿ ಮಾಡಿದ್ದೇವೆ” ಅಂತ ಗುಡುಗಿದರು. ಜಾತಿಗಳ ಆಚರಣೆ ಮನೆಯಲ್ಲಿರಲಿ, ಹೊರಗೆ ಬಂದ್ರೆ ಹಿಂದೂ ಅಂತ ಹೆಮ್ಮೆಯಿಂದ ಹೇಳಿ ಎಂದ ಅವರು, ಶಾಸಕ ಜಮೀರ್ ಅಹ್ಮದ್ ವಿರುದ್ಧ ವಾಗ್ದಾಳಿ ಸಹ ನಡೆಸಿದರು.

ಇನ್ನು “ಬೆಂಗಳೂರಿನಲ್ಲಿ ಅಮಾಯಕ ಚಂದ್ರು ಎಂಬ ಯುವಕನ ಕೊಲೆ ಮಾಡಲಾಗಿದೆ. ಕಲ್ಲಂಗಡಿ ಹಣ್ಣು ಒಡೆದಿದ್ದು ನೆನಪಾಗುತ್ತೆ ಚಂದ್ರು ಕೊಲೆ ನೆನಪಾಗಿಲ್ವಾ.

ಮುಸ್ಲಿಮರ ಬಚಾವ್ ಮಾಡಲು ಏನೇನ್ ಮಾಡ್ತಿಯಾ ನಾಚಿಕೆ ಆಗಲ್ವಾ”, ಸ್ವಾತಂತ್ರ್ಯ ಸಿಗುವ ವೇಳೆ ಶ್ರೀರಾಮ ಸೇನೆ ಇದ್ದಿದ್ದರೆ ಇಂದು ಪಾಕಿಸ್ತಾನ ಇರುತ್ತಿರಲಿಲ್ಲ ಎಂದು ಏಕವಚನದಲ್ಲಿ ಜಮೀರ್ ಗೆ ತರಾಟೆ ತಗೆದುಕೊಂಡರು.

 

1 COMMENT

LEAVE A REPLY

Please enter your comment!
Please enter your name here

Hot Topics

ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ರಕ್ಷಾಬಂಧನ

ಮಂಗಳೂರು: ನಗರದ ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ಇಂದು ರಕ್ಷಾಬಂಧನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ವಿಶ್ವಸ್ಥರಾದ ಸುಧಾಕರ ರಾವ್ ಪೇಜಾವರರವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು...

ಸ್ವಾತಂತ್ರ್ಯ ಸಂಭ್ರಮಕ್ಕೆ ಅಹಿತಕರ ಘಟನೆ ಆಗದಂತೆ ದ.ಕದಲ್ಲಿ ಟೈಟ್ ಸೆಕ್ಯೂರಿಟಿ

ಮಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತೋತ್ಸವಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಇನ್ನೊಂದೆಡೆ ಪೊಲೀಸರು ಬಂದೋಬಸ್ತು ಬಿಗಿಗೊಳಿಸಿದ್ದಾರೆ.ಯಾವುದೇ ಸಂಭಾವ್ಯ ಅಹಿತಕರ ಘಟನೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಬಿಗಿ ಕಣ್ಗಾವಲು ಇರಿಸಿದ್ದಾರೆ. ಜಿಲ್ಲಾದ್ಯಂತ ಪ್ರಮುಖ...

ಆ.14 ರಂದು ಮಂಗಳೂರು ಪುರಭವನದಲ್ಲಿ ನಾಟಕ ಪ್ರದರ್ಶನ ಮತ್ತು ಮೆಗಾ ಮ್ಯಾಜಿಕ್

ಮಂಗಳೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆ.14 ರ ಭಾನುವಾರ ಸಂಜೆ 5 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಮತ್ತು ಕನ್ನಡ ಮತ್ತು...