ಪುತ್ತೂರು : ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರ್ಕಾರ ನೀಡಿರುವ ಭರವಸೆಯನ್ನು ಈಡೇರಿಸಬೇಕು. ಒಂದು ವೇಳೆ ಮಾತು ತಪ್ಪಿದ್ರೆ ಸಿಎಂ ಮುಖಕ್ಕೆ ಮಸಿ ಬಳಿಯಬೇಕಾಗುತ್ತೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ತಿಳಿಸಿದ ಮುತಾಲಿಕ್ ಪ್ರವೀಣ್ ಪತ್ನಿಗೆ ಸಿಎಂ ಕಚೇರಿಯಲ್ಲಿ ಉದ್ಯೋಗ ನೀಡುವ ಭರವಸೆಯನ್ನು ಸಿಎಂ ನೀಡಿದ್ದಾರೆ.
ಅದನ್ನ ಕೂಡಲೇ ನೆರವೇರಿಸಬೇಕು. ಆಶ್ವಾಸನೆ ಈಡೇರದಿದ್ದರೆ ಸಿಎಂ ಮನೆ ಮುಂದೆ ಧರಣಿ ಕೂತು ಸಿಎಂ ಮುಖಕ್ಕೆ ಮಸಿ ಬಳಿಯುವುದಾಗಿ ಎಚ್ಚರಿಕೆ ನೀಡಿದ್ರು.
ಬಳಿಕ ಪುತ್ತೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುತಾಲಿಕ್ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವುದು ವಕ್ಫ್ ಬೋರ್ಡ್ ಅಲ್ಲ ಅದು ಬೋಗಸ್ ಬೋರ್ಡ್ ಎಂದು ಕಿಡಿಕಾರಿದ್ದಾರೆ.
ಅವರು ತಮಿಳುನಾಡಿನ ಒಂದು ಗ್ರಾಮವನ್ನೇ ವಕ್ಪ್ ಬೋರ್ಡ್ ತನ್ನದೆಂದು ಹೇಳಿಕೊಂಡಿರುವುದು ಇಡೀ ದೇಶದ ಕಣ್ಣು ತೆರೆಸಿದೆ. ವಕ್ಫ್ ಬೋರ್ಡ್ ಸಂಪೂರ್ಣವಾಗಿ ಇಡೀ ದೇಶದಲ್ಲಿ ರದ್ದಾಗಬೇಕು.
ಇದೊಂದು ಡೇಂಜರಸ್ ಬೋರ್ಡ್. ಇಡೀ ಸಮಾಜದ ದೇಶದ ಆಸ್ತಿಯನ್ನು ನುಂಗುತ್ತಿರುವ ಈ ವಕ್ಫ್ ಬೋರ್ಡನ್ನು ಕೂಡಲೇ ರದ್ದು ಮಾಡಬೇಕು.
ಈ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಒತ್ತಾಯವನ್ನು ಮಾಡಲಾಗುವುದು ಎಂದರು.
ಪಿ ಎಫ್ ಐ ಮತ್ತು ಎಸ್ ಡಿ ಪಿ ಐ ಸಂಘಟನೆಯನ್ನು ದೇಶದಾದ್ಯಂತ ಕೂಡಲೇ ನಿಷೇಧಿಸಬೇಕು. ನಿಷೇಧಕ್ಕೆ ಆಗ್ರಹಿಸಿ ಮುಂದಿನ ತಿಂಗಳಿಂದ ರಾಜ್ಯದಾದ್ಯಂತ ಹೋರಾಟವನ್ನು ನಡೆಸಲಾಗುವುದು ಎಂದರು.