Connect with us

    LATEST NEWS

    ಎಕ್ಸಿಟ್ ಪೋಲ್‌ ನಿಜವಾದ್ರೆ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಕಾದಿದೆ ಸಂಕಷ್ಟ..!

    Published

    on

    ಅಕ್ಟೋಬರ್ 8 ರಂದು ಹರಿಯಾಣ ಮತ್ತು ಜಮ್ಮು- ಕಾಶ್ಮೀರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಎಕ್ಸಿಟ್‌ ಪೋಲ್ ಫಲಿತಾಂಶಗಳ ಪ್ರಕಾರ ಎಲ್ಲಾ ಸಂಸ್ಥೆಗಳೂ ಹರಿಯಾಣದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯಲಿದೆ ಎಂದು ವರದಿ ಮಾಡಿದೆ. ಹಾಗೆ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿ ಮುನ್ನಡೆ ಸಾಧಿಸಲಿದೆ ಎಂದಿದ್ದಾರೆ. ಹಾಗಂತ ಇತ್ತೀಚಿಗೆ ಈ ಸಮೀಕ್ಷೆಗಳೆಲ್ಲವೂ ಹಲವಾರು ಬಾರಿ ಉಲ್ಟಾ ಹೊಡೆದಿದೆ. ಹಾಗೊಂದು ವೇಳೆ ಈ ಭಾರಿಯ ಎಕ್ಸಿಟ್ ಪೋಲ್ ಫಲಿತಾಂಶ ಸರಿ ಆದ್ರೆ ಅದು ಬಿಜೆಪಿಗೆ ದೊಡ್ಡ ಹೊಡೆತ ನೀಡಲಿದೆ.

    ಎಲ್ಲಾ ಎಕ್ಸಿಟ್‌ ಪೋಲ್‌ ಪ್ರಕಾರ, ಹರಿಯಾಣದಲ್ಲಿ ಕಾಂಗ್ರೆಸ್ 44 ರಿಂದ 65 ಸ್ಥಾನ ಗೆಲ್ಲಲಿದೆ ಎಂದು ಹೇಳಲಾಗಿದೆ. 2019 ರಲ್ಲಿ ಬಿಜೆಪಿ ಇಲ್ಲಿ 40 ಸ್ಥಾನ ಪಡೆದುಕೊಂಡಿದ್ದರೆ ಕಾಂಗ್ರೆಸ್ 31 ಸ್ಥಾನ ಪಡೆದುಕೊಂಡಿತ್ತು. ಅಕ್ಟೋಬರ್ 8 ರ ಫಲಿತಾಂಶ ಇದೇ ಎಕ್ಸಿಟ್ ಪೋಲ್ ಪ್ರಕಾರ ಬಂದ್ರೆ ಅದು ರಾಜಕೀಯವಾಗಿ ಬಿಜೆಪಿಗೆ ದೊಡ್ಡ ಹಿನ್ನಡೆ ಆಗುವ ಎಲ್ಲಾ ಲಕ್ಷಣ ಇದೆ. ಯಾಕಂದ್ರೆ ಲೋಕ ಸಭಾ ಚುನಾವಣೆಯಲ್ಲೂ ನಿಚ್ಚಳ ಬಹುಮತ ಪಡೆಯದ ಬಿಜೆಪಿ ಲೋಕಸಭಾ ಚುನಾವಣೆಯ ಬಳಿಕ ನಡೆಯುತ್ತಿರುವ ಈ ಚುನಾವಣೆಯಲ್ಲೂ ಅದೇ ಹಿನ್ನಡೆ ಅನುಭವಿಸಿದಂತಾಗಲಿದೆ.

    2014 ರಲ್ಲಿ ಮೋದಿ ಅಲೆಯ ಆರಂಭಿಕ ಹಂತದಲ್ಲಿ ಬಿಜೆಪಿ ಹರಿಯಾಣದಲ್ಲಿ ಅಧಿಕಾರ ಹಿಡಿದುಕೊಂಡಿತ್ತು. 2014 ರಲ್ಲಿ ಶೇಕಡಾ 33.3 ಮತಗಳನ್ನು ಪಡೆದು ಬಿಜೆಪಿ 47 ಸ್ಥಾನಗಳನ್ನು ಪಡೆದಿತ್ತು. ಬಳಿಕ 2019 ರಲ್ಲಿ ಕಾಂಗ್ರೆಸ್ ಶೇಕಡಾ 36.5 ಮತಗಳನ್ನು ಪಡೆದಿದ್ದರೂ ಬಿಜೆಪಿ 7 ಸ್ಥಾನ ಕಳೆದುಕೊಂಡು 40 ಸ್ಥಾನಕ್ಕೆ ಕುಸಿದಿತ್ತು. 1987 ಮತ್ತು 2005 ರ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಇಲ್ಲಿ ಶೇಕಡಾವಾರು ಮತಗಳಿಕೆಯಲ್ಲಿ ಎರಡಂಕಿ ದಾಟಿದ್ದು ದಾಖಲೆಯಾಗಿತ್ತಾದ್ರೂ 2014 ರಲ್ಲಿ ಮೋದಿ ಅಲೆಯಲ್ಲಿ ಅದು 33.3 ಶೇಕಡಾ ಮತಗಳಿಕೆಯೊಂದಿಗೆ ಅಧಿಕಾರ ಹಿಡಿದಿತ್ತು.

    2024 ರ ಎಕ್ಸಿಟ್ ಪೋಲ್ ನಿಜವಾದಲ್ಲಿ ಅದು ಬಿಜೆಪಿ ತನ್ನ ಜನಪ್ರಿಯತೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಅನ್ನೋದನ್ನು ತೋರಿಸಲಿದೆ. ರೈತರು , ಅಗ್ನಿವೀರ್ ಮತ್ತು ಕುಸ್ತಿಪಟುಗಳ ವಿಚಾರದಲ್ಲಿ ಬಿಜೆಪಿಯ ನಿರ್ಧಾರಗಳು ಕಾಂಗ್ರೆಸ್‌ಗೆ ವರದಾನವಾಗಿರುವ ಎಲ್ಲಾ ಸಾಧ್ಯತೆ ಇದೆ.

    ಚುನಾವಣೆಗೂ ಕೆಲವು ತಿಂಗಳ ಮೊದಲು ಬಿಜೆಪಿ ಸಿಎಂ ಬದಲಾವಣೆ ಮಾಡಿರುವುದು ಹಾಗೂ ಪಕ್ಷದಲ್ಲಿನ ಬಂಡಾಯಗಳು ಬಿಜೆಪಿಗೆ ದೊಡ್ಡ ಹೊಡೆತ ನೀಡಿರುವ ಸಾಧ್ಯತೆ ಇದೆ. ಶಿಸ್ತಿನ ಪಕ್ಷವಾಗಿ ಹೆಸರು ಮಾಡಿದ್ದ ಬಿಜೆಪಿಗೆ ಹರಿಯಾಣದಲ್ಲಿ ಪಕ್ಷದಲ್ಲಿನ ಅಶಿಸ್ತು ದೊಡ್ಡ ಹೊಡೆತ ನೀಡಿದೆ ಅನ್ನೋದು ಸತ್ಯ.

    ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೂ ಕೂಡ ಪಕ್ಷಕ್ಕೆ ಸಿಎಂ ಹುದ್ದೆ ವಿಚಾರದಲ್ಲಿ ದೊಡ್ಡ ಸವಾಲು ಎದುರಾಗಲಿದೆ. ಈಗಾಗಲೇ ಪಕ್ಷದಲ್ಲಿ ಗುಂಪುಗಾರಿಕೆ ಇದ್ದು, ಅದರ ಶಮನಕ್ಕೆ ಹೈ ಕಮಾಂಡ್ ಹರಸಾಹಸ ಪಡ್ತಾ ಇದೆ. ಇನ್ನು ದಲಿತರೊಬ್ಬರನ್ನು ಸಿಎಂ ಮಾಡಲಿದ್ದಾರೆ ಎಂದು ಕುಮಾರಿ ಸೆಲ್ಜಾ ಹೇಳಿದ್ರೆ , ಹುಡಾ ತನಗೆ ಸಿಎಂ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

    ಹರಿಯಾಣದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಲ್ಲಿ ಮಹಾರಾಷ್ಟ್ರದಲ್ಲೂ ಬಿಜೆಪಿಗೆ ದೊಡ್ಡ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಸೀಟು ಹಂಚಿಕೆ ವಿಚಾರದಲ್ಲಿ ಏಕನಾಥ್ ಶಿಂಧೆಯ ಶಿವಸೇನೆಯ ಜೊತೆ ಮಾತುಕತೆಗೆ ತೊಡಕಾಗಬಹುದು. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದ್ದು, ಅದು ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಮರುಕಳಿಸಬಹುದು.

    ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ, ಎರಡೂ ಪ್ರಮುಖ ಪಕ್ಷಗಳು ಚುನಾವಣಾ ತಯಾರಿಯಲ್ಲಿ ನಿರತವಾಗಿವೆ. ನವೆಂಬರ್ 26ರೊಳಗೆ ಚುನಾವಣೆ ನಡೆಯಬೇಕಿದ್ದು ಶೀಘ್ರವೇ ಚುನಾವಣಾ ಆಯೋಗ ದಿನಾಂಕ ಪ್ರಕಟಿಸುವ ನಿರೀಕ್ಷೆ ಇದೆ. 2019 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 164 ಸ್ಥಾನಗಳಲ್ಲಿ 105 ಸ್ಥಾನಗಳನ್ನು ಗೆದ್ದಿದೆ. ಈ ಬಾರಿ ಬಿಜೆಪಿ 288 ಸ್ಥಾನಗಳ ಪೈಕಿ 160ರಲ್ಲಿ ಸ್ಪರ್ಧಿಸಲು ಬಯಸಿದೆ.

    ಹರಿಯಾಣದ ಎಕ್ಸಿಟ್ ಪೋಲ್‌ ಫಲಿತಾಂಶ ಕಾಂಗ್ರೆಸ್ ಪರವಾಗಿರುವ ಕಾರಣ ರಾಹುಲ್ ಗಾಂಧಿ ಮಹಾರಾಷ್ಟ್ರದತ್ತ ಮುಖ ಮಾಡಿದ್ದಾರೆ. ಸಂವಿಧಾನ ರಕ್ಷಣೆಯ ವಿಚಾರವನ್ನೇ ಮುಂದಿಟ್ಟು ಮಹಾರಾಷ್ಟ್ರದ ಜನರ ಮುಂದೆ ಹೋಗುತ್ತಿದ್ದಾರೆ. ಸೀಟು ಹೊಂದಾಣಿಕೆಯಲ್ಲೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ತನ್ನ ಮೇಲುಗೈ ಉಳಿಸಿಕೊಳ್ಳುವ ಸ್ಥಿತಿಯಲ್ಲಿದೆ.

    ಎಕ್ಸಿಟ್ ಪೋಲ್‌ನ ಫಲಿತಾಂಶಗಳು ಸರಿಯಾಗಿವೆ ಎಂದು ಸಾಬೀತಾದರೆ, ಹರಿಯಾಣವನ್ನು ದೀರ್ಘಕಾಲ ಆಳಿದ ‘ಲಾಲ್’ ಮತ್ತು ‘ಚೌತಾಲಾ’ ಕುಟುಂಬಗಳನ್ನು ಜನರು ತಿರಸ್ಕಾರ ಮಾಡಿದ್ದಾರೆ ಎಂದಾಗುತ್ತದೆ. ಅಷ್ಟೇ ಅಲ್ಲದೇ, ಆಮ್‌ ಆದ್ಮಿ ಪಕ್ಷದ ಮೇಲೂ ಜನರು ಭರವಸೆ ಇಟ್ಟುಕೊಂಡಿಲ್ಲ ಎಂಬುದನ್ನು ತೋರಿಸಲಿದೆ.

    DAKSHINA KANNADA

    ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೆಂಗಳೂರಿನಲ್ಲಿ ಡ್ರ*ಗ್‌ ಮಾಫಿಯಾ ಕಿಂಗ್‌ ಪಿನ್ ಅರೆಸ್ಟ್

    Published

    on

    ಮಂಗಳೂರು : ಡ್ರ*ಗ್ಸ್ ಜಾಲದ ಬೆನ್ನು ಹತ್ತಿ ಬೇಟೆಯಾಡಿದ ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಆರು ಕೋಟಿ ರೂ. ಮೌಲ್ಯದ ಡ್ರ*ಗ್ಸ್ ವಶಪಡಿಸಿಕೊಂಡಿದ್ದಾರೆ. ಡ್ರ*ಗ್‌ ಫ್ರೀ ಮಂಗಳೂರು ಮಾಡುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಕೈಗೊಂಡ ಕಟ್ಟು ನಿಟ್ಟಿನ ಕ್ರಮಕ್ಕೆ ಇದೊಂದು ದೊಡ್ಡ ಗೆಲುವಾಗಿದೆ. ಈ ಕಾರ್ಯಾಚರಣೆಯ ವಿಚಾರವಾಗಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್‌ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

    ಸೆಪ್ಟಂಬರ್ 29 ರಂದು ಪಂಪ್‌ವೆಲ್ ಬಳಿಯ ಲಾಡ್ಜ್‌ ಒಂದರಲ್ಲಿ ಹೈದರ್ ಎಂಬಾತನನ್ನು ಮಂಗಳೂರು ಪೂರ್ವ ಪೊಲೀಸರು ಡ್ರಗ್ ಸಮೇತ ಬಂಧಿಸಿದ್ದರು. ಬಳಿಕ ಈ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದ್ದು, ಸಿಸಿಬಿ ಪೊಲೀಸರು ಆರೋಪಿಗೆ ಡ್ರ*ಗ್ ಪೂರೈಕೆ ಮಾಡುವ ಜಾಲದ ತನಿಖೆ ಆರಂಭಿಸಿದ್ದರು.

    ಆರೋಪಿಯಿಂದ ಹಲವು ಮಾಹಿತಿ ಪಡೆದುಕೊಂಡ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿದ್ದ ನೈಜೇರಿಯಾ ಮೂಲದ ಪೀಟರ್ ಅಕೆಡಿ ಬೆಲನೋವು ಎಂಬಾತನ ಮನೆಗೆ ದಾಳಿ ಮಾಡಿದ್ದಾರೆ. ಈ ವೇಳೆ ಆತನ ಮನೆಯಲ್ಲಿ ಒಟ್ಟು 6 ಕೋಟಿ ಮೌಲ್ಯದ 6 ಕೆಜಿ 310 ಗ್ರಾಂ ಎಂಡಿಎಂಎ ಪತ್ತೆಯಾಗಿದೆ.

    ಇದನ್ನೂ ಓದಿ :  ಕೇಕ್ ತಿಂದು ಒಂದೇ ಕುಟುಂಬದ ಮೂವರು ಅಸ್ವಸ್ಥ; 5 ವರ್ಷದ ಮಗು ದಾರುಣ ಸಾ*ವು

    ಈತ ಕರ್ನಾಟಕ, ಕೇರಳ ಸೇರಿದಂತೆ ಹಲವು ರಾಜ್ಯಗಳಿಗೆ ಈ ಮಾ*ದಕ ವಸ್ತು ಪೂರೈಕೆ ಮಾಡುತ್ತಿದ್ದ ಎಂಬ ವಿಚಾರ ಕೂಡ ತಿಳಿದು ಬಂದಿದೆ. ಈತನ ಮೇಲೆ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಮಾ*ದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಈ ಹಿಂದೆಯೇ ಪ್ರಕರಣ ದಾಖಲಾಗಿದೆ.

    Continue Reading

    BIG BOSS

    ಇತಿಹಾಸದಲ್ಲೇ ಮೊದಲು.. ಬಿಗ್​ಬಾಸ್ ಕಂಟೆಸ್ಟಂಟ್ ಆಗಿ​ ಮನೆಗೆ ಎಂಟ್ರಿ ಕೊಟ್ಟ ಕತ್ತೆ; ಏನಿದರ ಗುಟ್ಟು?

    Published

    on

    ಈಗಂತೂ ಎಲ್ಲಾ ಭಾಷೆಯಗಳಲ್ಲಿ ಬಿಗ್​ಬಾಸ್​ನ​ದ್ದೇ ಹವಾ ಸೃಷ್ಟಿಯಾಗಿದೆ. ಭಾರತದಲ್ಲಿ ಹಲವು ಭಾಷೆಗಳಲ್ಲಿ ಬಿಗ್​​ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಕೆಲವೊಂದು ಭಾಷೆಯಲ್ಲಿ ಈಗಾಗಲೇ ಬಿಗ್​ಬಾಸ್​ ಸೀಸನ್​ ಮುಕ್ತಾಯಗೊಂಡಿದೆ. ಹೀಗೆ ಬಿಗ್​ಬಾಸ್​ ಕಾರ್ಯಕ್ರಮ ಅಪಾರ ಪ್ರೇಕ್ಷಕರ ಬಳಗವನ್ನು ಹೊಂದಿಕೊಂಡು ಮುನ್ನುಗ್ಗುತ್ತಿದೆ.

    ಈಗಾಗಲೇ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಶುರುವಾಗಿ ಒಂದು ವಾರ ಕಳೆದಿದೆ. ಇದರ ನಡುವೆ ನಿನ್ನೆ ಅಂದ್ರೆ ಭಾನುವಾರ ಹಿಂದಿ ಬಿಗ್​ಬಾಸ್​ ಸೀಸನ್​ 18 ಶುರುವಾಗಿದೆ. ಹೌದು, ಹಿಂದಿ ಬಿಗ್​ಬಾಸ್​ ಸೀಸನ್​ 18 ಶುರುವಾಗಿದೆ. ಆದರೆ ಬಿಗ್​ಬಾಸ್​ ಇತಿಹಾಸದ ಮೊಟ್ಟ ಮೊದಲ ಬಾರಿಗೆ ಸಾಕು ಪ್ರಾಣಿಯೊಂದನ್ನು ಮನೆಗೆ ಕಳುಹಿಸಲಾಗಿದೆ. ಒಟ್ಟು 19 ಕಂಟೆಸ್ಟೆಂಟ್​ಗಳ ಜೊತೆಗೆ ಒಂದು ಕತ್ತೆ ಕೂಡ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದೆ.

    ಸಲ್ಮಾನ್ ಖಾನ್ ನಡೆಸಿಕೊಡುತ್ತಿರೋ ಬಿಗ್​ಬಾಸ್​ ಸೀಸನ್​ 18 ಕಾರ್ಯಕ್ರಮದಲ್ಲಿ ಈ ಕತ್ತೆ ಎಂಟ್ರಿ ಕೊಟ್ಟಿದೆ. ವೇದಿಕೆಗೆ 19ನೇ ಸ್ಪರ್ಧಿಯಾಗಿ ಬಂದ ಕತ್ತೆಯನ್ನು ನೋಡಿದ ವೀಕ್ಷಕರು ಫುಲ್ ಶಾಕ್ ಆಗಿದ್ದಾರೆ. ಬಿಗ್​ಬಾಸ್​ ಮನೆಗೆ ಬಂದ ‘ಗಧರಾಜ್’ ಕತ್ತೆಯನ್ನು ಕಂಡು ಮನೆ ಮಂದಿ ಫುಲ್​ ಶಾಕ್​ ಆಗಿದ್ದಾರೆ. ಸದ್ಯ ಹೊಸ ಪ್ರೋಮೋಗಳನ್ನು ನೋಡಿದ ವೀಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

    Continue Reading

    LATEST NEWS

    iPhone 16 Pro Max: 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಐಫೋನ್ಸ್​ ಸೀಜ್​​! ಯಾಕೆ?

    Published

    on

    ಇತ್ತೀಚೆಗೆ ಐಫೋನ್​ 16 ಪ್ರೊ ಮ್ಯಾಕ್ಸ್​ ಬಿಡುಗಡೆಗೊಂಡಿದ್ದು, ಭಾರೀ ಬೇಡಿಕೆ ಪಡೆದುಕೊಂಡಿದೆ. ಭಾರತಕ್ಕೆ ಹೋಲಿಸಿದರೆ ಕೆಲವು ದೇಶಗಳಲ್ಲಿ ಕೊಂಚ ಕಡಿಮೆ ಬೆಲೆಗೆ ನೂತನ ಐಫೋನ್​ ಖರೀದಿಗೆ ಸಿಗುತ್ತಿದೆ. ಇದನ್ನೇ ಲಾಭವಾಗಿ ಇಟ್ಟುಕೊಂಡು ಕೆಲವು ಕಳ್ಳಸಾಗಾಣಿಕೆ ನಡೆಯುತ್ತಿದೆ. ಅದರಂತೆಯೇ ಇದೀಗ ಕಳ್ಳಸಾಗಣಿಕೆ ಮಾಡುವ ವೇಳೆ 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಐಫೋನ್​ 16 ಪ್ರೊ ಮ್ಯಾಕ್ಸ್​ ಮಾಡೆಲನ್ನು ಸೀಜ್​ ಮಾಡಲಾಗಿದೆ.

    ಭಾರತದಲ್ಲಿ ಸ್ಟ್ಯಾಂಡರ್ಸ್​​ ಐಫೋನ್​ ಮಾಡಲ್​​ಗಳನ್ನು ತಯಾರಿಸಲಾಗುತ್ತದೆ. ಅದಕ್ಕಾಗಿ ದೇಶದಲ್ಲಿ ಆಮದು ಮಾಡಿಕೊಳ್ಳುವ ಪ್ರೊ ಮಾದರಿಗಳಿಂತ ಕಡಿಮೆ ವೆಚ್ಚಕ್ಕೆ ಸಿಗುತ್ತಿದೆ. ಬಹುತೇಕರು ದುಬೈ, ಕೆನಡಾ ಇತರ ದೇಶಗಳಿಂದ ಐಫೋನ್​ ಖರೀದಿಸಲು ಬಯಸುತ್ತಾರೆ. ಇದರ ನಡುವೆ ಕಳ್ಳಸಾಗಾಣಿಯೂ ಹೆಚ್ಚಾಗುತ್ತಿದ್ದು, ಕಳೆದ ವಾರ ದೆಹಲಿ ವಿಮಾನ ನಿಲ್ದಾಣದಲ್ಲಿ 2 ಪ್ರತ್ಯೇಕ ಪ್ರಕರಣ ಬೆಳಕಿಗೆ ಬಂದಿದೆ. 28 ಐಫೋನ್​ 16 ಪ್ರೊ ಮ್ಯಾಕ್ಸ್​ ಮಾದರಿಯನ್ನು ಕಸ್ಟಮ್​ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ದುಬೈನಿಂದ ಆಗಮಿಸಿದ ಪ್ರಯಾಣಿಕರೊಬ್ಬರು ಕಸ್ಟಮ್ಸ್​​ ಮೂಲಕ 12 ಐಫೋನ್​ 16 ಪ್ರಿ ಮ್ಯಾಕ್ಸ್​​ ಹಿಡಿದುಕೊಂಡು ಬಂದಿದ್ದರು. ತಪ್ಪಿಸಿಕೊಳ್ಳುವ ಸಲುವಾಗಿ ಟಿಶ್ಯೂ ಪೇಪರ್​ನಲ್ಲಿ ಸುತ್ತಿಕೊಂಡು ಬಂದಿದ್ದರು. ಈ ವೇಳೆ ಕಸ್ಟಮ್​ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಹಾಂಗ್​ಕಾಂಗ್​ನಿಂದ ಬಂದ ಮಹಿಳೆಯೊಬ್ಬಳು ತನ್ನ ಬ್ಯಾಗ್​ ಮೂಲಕ 26 ಐಫೋನನ್ನ ಕಳ್ಳಸಾಗಣಿಕೆ ಮಾಡಲು ಮುಂದಾಗಿದ್ದಾಳೆ. ಈ ವೇಳೆ ಸಿಕ್ಕಿಬಿದ್ದಿದ್ದಾಳೆ.

    Continue Reading

    LATEST NEWS

    Trending