LATEST NEWS
ಈ ಬಾರಿಯ ಚುನಾವಣೆಯಲ್ಲಿ ಹಿಂದುತ್ವದ ರಕ್ಷಣೆಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ-ಮುತಾಲಿಕ್
ರಾಮನಗರ: ಮುಂಬರುವ ಚುನಾವಣೆಗೆ ನಾನು ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇನೆ. ಹಿಂದೂ ಕಾರ್ಯಕರ್ತರ ರಕ್ಷಣೆಗಾಗಿ ಸ್ಪರ್ಧೆ ಮಾಡ್ತೇನೆ ಎಂದು ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ದೇಶದಲ್ಲಿ ಪ್ರಧಾನಿನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತ್ರ ಹಿಂದುತ್ವದ ರಕ್ಷಣೆ ಮಾಡುತ್ತಿದ್ದಾರೆ. ಬೇರೆ ಯಾರಿಗೂ ಹಿಂದುತ್ವದ ಕಾಳಜಿ ಇಲ್ಲ ಎಂದರು.
ನನ್ನ ಸ್ಪರ್ಧೆ ಬಗ್ಗೆ ಐದಾರು ಕ್ಷೇತ್ರದಲ್ಲಿ ಸರ್ವೆ ಮಾಡ್ತಾ ಇದ್ದೇನೆ. ಡಿಸೆಂಬರ್ ಎರಡನೇ ವಾರದಲ್ಲಿ ಯಾವ ಕ್ಷೇತ್ರ ಎಂದು ಫೈನಲ್ ಮಾಡ್ತೇನೆ. 25 ಹಿಂದೂ ಕಾರ್ಯಕರ್ತರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ. ಹಿಂದು ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ, ರೌಡಿ ಶೀಟರ್ ದಾಖಲಿಸಿದ್ದಾರೆ.
ಹಸುಗಳನ್ನು ರಕ್ಷಿಸಿದವರ ಮೇಲೆ, ಹಿಂದೂ ಯುವತಿಯರನ್ನು ರಕ್ಷಣೆ ಮಾಡಿದವರ ಮೇಲೆ ರೌಡಿ ಶೀಟರ್ ಓಪನ್ ಮಾಡಿದ್ದಾರೆ. ಬಿಜೆಪಿ ಸರ್ಕಾರ ಆ ಕೇಸ್ಗಳನ್ನು ವಾಪಸ್ ಪಡೆದುಕೊಂಡಿಲ್ಲ ಎಂದರು. ಮಂಗಳೂರು ಬಾಂಬ್ ಸ್ಫೋಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಬಾಂಬ್ ಸ್ಪೋಟದ ಆರೋಪಿಗಳಿಗೆ ಬೇರೆ ಬೇರೆ ರಾಜ್ಯಗಳಿಗೂ ಲಿಂಕ್ ಇರೋದು ಗೊತ್ತಾಗಿದೆ.
ಪ್ರತಿ ಸಲ ಘಟನೆ ಆದ ನಂತರ ಜಾಗೃತರಾಗುತ್ತಾರೆ, ಹೇಳಿಕೆ ನೀಡ್ತಾರೆ. ಇಸ್ಲಾಮಿಕ್, ಭಯೋತ್ಪಾದನೆ ಕೆಲಸಗಳು ನಡೆಯುತ್ತಿವೆ. ಶಾರೀಕ್ ಅನ್ನೋನು ಹಿಂದೆ ಕೇಸ್ ನಲ್ಲಿ ಇದ್ದು ಜಾಮೀನಿನ ಮೇಲೆ ಬರ್ತಾನೆ. ಸರ್ಕಾರ ಕೇವಲ ಅಧಿಕಾರ, ಚುನಾವಣೆ ಅಂದುಕೊಂಡ್ರೆ ಆಗೊಲ್ಲ. ವಿರೋಧ ಪಕ್ಷದಲ್ಲೂ ಭಯೋತ್ಪಾದಕರು ಇದ್ದಾರೆ ಎಂದು ಹರಿಹಾಯ್ದರು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಈ ಬಾರಿ ಷಷ್ಠಿ ಜಾತ್ರೆ ಸಂದರ್ಭದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ , ಅವಕಾಶ ನೀಡಬಾರದು ಎಂದು ಹಿಂದು ಸಂಗಟನೆಗಳು ತೆಗೆದುಕೊಂಡ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಮುಸ್ಲಿಮರಿಗೆ ಬೇರೆ ದೇವರ ಮೇಲೆ ನಂಬಿಕೆ, ವಿಶ್ವಾಸ ಇಲ್ಲ. ಅವರಿಗೆ ಹಿಂದುಗಳು ಬೇಡ. ಇಂತಹ ಮಾನಸಿಕತೆ ಅವರಲ್ಲಿ ಇರುವ ಸಂದರ್ಭದಲ್ಲಿ ಅವರಿಗೆ ನಮ್ಮ ದೇವಸ್ಥಾನದ ಬಳಿ ವ್ಯಾಪಾರ ಏಕೆ ಬೇಕು ಎಂದು ಪ್ರಶ್ನಿಸಿದರು.
ಮಂಗಳೂರಿನಲ್ಲಿ ಬಾಂಬ್ ಸ್ಪೋಟ ಮಾಡಿದ ಆರೋಪಿ ಬಗ್ಗೆ ಇಂದು ಯಾರೂ ಕೂಡಾ ಬಾಯಿ ಬಿಡುತ್ತಿಲ್ಲ. ಖಂಡನೆ ಮಾಡುತ್ತಿಲ್ಲ. ನಮಗೆ ಹಿಂದುಗಳ ಸುರಕ್ಷತೆ ಅಗತ್ಯವಾಗಿದ್ದು, ಭಜರಂಗದಳ, ವಿಶ್ವಹಿಂದು ಪರಿಷತ್ ಸರಿಯಾದ ನಿರ್ಣಯವನ್ನೇ ತೆಗೆದುಕೊಂಡಿವೆ ಎಂದರು.
kerala
5 ವರ್ಷದಲ್ಲಿ 20 ಕೋಟಿ ಲೂಟಿ..! ಮಹಾ ವಂಚಕಿ ಅರೆಸ್ಟ್..!
ಮಂಗಳೂರು ( ಕೇರಳ ) : ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರು ಐದು ವರ್ಷದಲ್ಲಿ ಸಂಸ್ಥೆಯ 20 ಕೋಟಿ ಹಣವನ್ನು ತನ್ನ ಸಂಬಂಧಿಕರ ಖಾತೆಗೆ ವರ್ಗಾಯಿಸಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಧನ್ಯ ಮೋಹನ್ ಎಂಬ ಮಹಿಳೆ ಈ ವಂಚನೆ ನಡೆಸಿದ್ದಾರೆ.
ಕಳೆದ ಐದು ವರ್ಷಗಳಿಂದ ಹಂತ ಹಂತವಾಗಿ ಹಣಕಾಸು ಸಂಸ್ಥೆಯ ಖಾತೆಯಿಂದ ತನ್ನ ಸಂಬಂಧಿಕರ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಹಣಕಾಸು ಸಂಸ್ಥೆಯ ಆಡಿಟಿಂಗ್ ಸಮಯದಲ್ಲಿ 20 ಕೋಟಿ ಹಣದ ಲೆಕ್ಕಾಚಾರ ಸಿಗದೇ ಇದ್ದಾಗ ಈ ವಿಚಾರ ಬೆಳಕಿಗೆ ಬಂದಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ವಂಚಕಿ ಧನ್ಯ ಮೋಹನ್ ತಲೆಮರೆಸಿಕೊಂಡಿದ್ದರು. ಧನ್ಯ ಮೋಹನ್ ಪತ್ತೆಗಾಗಿ ಪೊಲೀಸರು ಲುಕ್ಔಟ್ ನೋಟೀಸ್ ಕೂಡ ಜಾರಿ ಮಾಡಿದ್ದರು.
ಆನ್ ಲೈನ್ ಗೇಮಿಂಗ್ ಚಟಕ್ಕೆ ಬಲಿಯಾಗಿದ್ದ ಮಹಿಳೆ..!?
ಕುಟುಂಬಸ್ಥರ ತೀವ್ರ ವಿಚಾರಣೆಯ ಹೊರತಾಗಿಯೂ ಧನ್ಯ ಮೋಹನ್ ಎಲ್ಲಿ ಹೋಗಿದ್ದಾರೆ ಅನ್ನೋ ವಿಚಾರದ ಮಾಹಿತಿ ದೊರೆತಿರಲಿಲ್ಲ. ಆದ್ರೆ, ಇದೀಗ ಆರೋಪಿ ವಂಚಕಿ ಧನ್ಯ ಮೋಹನ್ ಕೊಲ್ಲಂ ಪೊಲೀಸ್ ಠಾಣೆಯಲ್ಲಿ ಶರಣಾಗತಳಾಗಿದ್ದಾಳೆ.
ಧನ್ಯ ಮನೆಯವರು ಆರ್ಥಿಕವಾಗಿ ಅಷ್ಟೊಂದು ಸದೃಢವಾಗಿಲ್ಲವಾಗಿದ್ದರೂ ಧನ್ಯ ಮೋಹನ್ ಈ ಹಣ ಎಲ್ಲಿ ಹೂಡಿಕೆ ಮಾಡಿದ್ದಾರೆ ಅನ್ನೋ ಕುತೂಹಲ ಮೂಡಿದೆ. ಮೂಲಗಳ ಪ್ರಕಾರ, ಆಕೆ ಹಣವನ್ನು ಆನ್ಲೈನ್ ಗೇಮಿಂಗ್ನಲ್ಲಿ ತೊಡಗಿಸಿಕೊಂಡು ಕಳೆದುಕೊಂಡಿದ್ದಾಳೆ ಎಂದು ಮಾಹಿತಿ ಲಭ್ಯವಾಗಿದೆ. ಅದೇನೆ ಇದ್ರೂ ಸದ್ಯ ಆಕೆಯ ವಿಚಾರಣೆಯ ಬಳಿಕ ಹಣ ಏನಾಯ್ತು ಅನ್ನೋ ವಿಚಾರ ಬಹಿರಂಗವಾಗಬೇಕಾಗಿದೆ.
DAKSHINA KANNADA
ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ
ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.
ಉತ್ತರದ ಬ್ರೇಕ್ ವಾಟರ್ 831 ಮೀಟರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.
ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.
LATEST NEWS
WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
ಮಂಗಳೂರು/ಮಹಾರಾಷ್ಟ್ರ : ಬಸ್ಸಿನಲ್ಲಿ ಸೀಟಿಗಾಗಿ ಹಂಬಲಿಸೋರು ಅನೇಕ ಮಂದಿ ಇದ್ದಾರೆ. ಅದೂ ಸಿಎಂ ಕುರ್ಚಿಗಾಗಿ ನಡೆಯೋ ರಾಜಕೀಯ ಗುದ್ದಾಟಕ್ಕಿಂತಲೂ ಮಿಗಿಲು. ಬಸ್ ಬಂದು ನಿಂತಾಗ ಪರಸ್ಪರ ತಳ್ಳಾಡಿ ಸೀಟು ಹಿಡಿಯುವ ದೃಶ್ಯ ಸಾಮಾನ್ಯ. ಕೆಲವೊಮ್ಮೆ ಬಸ್ ಹತ್ತಿದವರು ತಮ್ಮರಿಗಾಗಿ ಕರ್ಚೀಫ್ ಹಾಕಿಡೋದೂ ಇದೆ. ಇನ್ನೂ ಕೆಲವರು ಸೀಟ್ ಹಿಡಿಯಲು ಕಿಟಕಿಯಿಂದಲೂ ಕರ್ಚೀಫ್ ಹಾಕೋದು, ಬ್ಯಾಗ್ ಇಡುವ ದೃಶ್ಯ ಕಾಣಲು ಸಿಗುತ್ತದೆ.
ಆದರೆ, ಇಲ್ಲೊಬ್ಬ ಸೀಟಿಗಾಗಿ ಕಿಟಕಿಯಿಂದ ಬಸ್ ಏರಲು ಹೋಗಿ ಅವಾಂತರವಾಗಿದೆ. ಸದ್ಯ ಆ ವಿದ್ಯಾರ್ಥಿಯ ಎಡವಟ್ಟಿನ ವೀಡಿಯೋ ವೈರಲ್ ಆಗುತ್ತಿದೆ.
ಸೀಟ್ ಗಾಗಿ ಎಡವಟ್ಟು :
ಈ ವೈರಲ್ ದೃಶ್ಯ ನಡೆದಿರೋದು ಮಹಾರಾಷ್ಟ್ರದಲ್ಲಿ. ಅವನು ಮಾಮೂಲಿನಂತೆ ಬಾಗಿಲಿನಿಂದ ಬಸ್ ಏರಬಹುದಿತ್ತು. ಆದರೆ, ಸರ್ಕಸ್ ಮಾಡಲು ಹೋಗಿ ಎಡವಟ್ಟಾಗಿದೆ.
ಇದನ್ನೂ ಓದಿ : ವಿದ್ಯುತ್ ಇಲ್ಲದೆ ಪರದಾಡುತ್ತಿರುವ ಮಲೆನಾಡು: ಮೊಬೈಲ್ ಫುಲ್ ಚಾರ್ಜ್ಗೆ 60 ರೂ., ಹಾಲ್ಫ್ಗೆ 40 ರೂ.
ಆ ವಿದ್ಯಾರ್ಥಿ ಕಿಟಕಿಯ ಮೂಲಕ ಬಸ್ ಏರಿದ್ದಾನೆ. ಆದರೆ, ಕಿಟಕಿ ಸಮೇತ ಕೆಳಗೆ ಬಿದ್ದಿದ್ದಾನೆ.
ರೋಹಿತ್ (avaliyapravasi) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ವೀಡಿಯೋ ಹಂಚಿಕೊಂಡಿದ್ದಾರೆ. ಸೀಟ್ ಗಾಗಿ ವಿದ್ಯಾರ್ಥಿ ಕಿಟಕಿ ಏರುವ ಸರ್ಕಸ್ ಮಾಡಿದ್ದಾನೆ. ಕಿಟಕಿ ಗ್ಲಾಸ್ ಸರಿಸಿ ಒಳ ಹೋಗಲು ಪ್ರಯತ್ನಿಸುತ್ತಿದ್ದಂತೆ, ಕಿಟಕಿ ಸಹಿತ ಕೆಳಗೆ ಬಿದ್ದಿದ್ದಾನೆ. ಈ ವೀಡಿಯೋವನ್ನು ಅಲ್ಲೇ ಇದ್ದ ಇನ್ನೊಂದು ಬಸ್ ನಲ್ಲಿದ್ದ ವ್ಯಕ್ತಿ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಜುಲೈ 22 ರಂದು ಈ ವೀಡಿಯೋ ಹಂಚಿಕೊಳ್ಳಲಾಗಿದ್ದು, ವೈರಲ್ ಆಗಿದೆ. ನೆಟ್ಟಿಗರು ತರಹೇವಾರಿ ಕಮೆಂಟ್ಸ್ ಮಾಡುತ್ತಿದ್ದಾರೆ.
- LATEST NEWS5 days ago
ಗೀಸರ್ನಿಂದ ವಿಷಾನಿಲ ಸೋರಿಕೆ; ಇಹಲೋಕ ತ್ಯಜಿಸಿದ ತಾಯಿ, ಮಗ
- LATEST NEWS5 days ago
ಕಸದ ತೊಟ್ಟಿಯಲ್ಲಿ ಪತ್ತೆಯಾಯ್ತು ಲಕ್ಷಾಂತರ ರೂ. ಬೆಲೆ ಬಾಳುವ ವಜ್ರದ ನೆಕ್ಲೇಸ್
- LATEST NEWS7 days ago
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಕ್ರಿಕೆಟಿಗ
- DAKSHINA KANNADA2 days ago
ವಿಟ್ಲದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅನೈತಿಕ ಚಟುವಟಿಕೆ; ಸಾರ್ವಜನಿಕರನ್ನು ನೋಡಿ ಕಾಲ್ಕಿತ್ತ ಜೋಡಿ